ಶೀಘ್ರವೇ ಕಿಮ್ಸ್ 1,800 ಹಾಸಿಗೆ ಆಸ್ಪತ್ರೆ
Team Udayavani, Dec 4, 2019, 11:09 AM IST
ಹುಬ್ಬಳ್ಳಿ: ಪ್ರತಿನಿತ್ಯ 60-70 ರೋಗಿಗಳು ತುರ್ತು ಚಿಕಿತ್ಸಾ ವಿಭಾಗಕ್ಕೆ ದಾಖಲಾಗುವ ಕಿಮ್ಸ್‌ನಲ್ಲಿ ವೈದ್ಯರು ಜೀವರಕ್ಷಣಾ ಕೌಶಲ್ಯಗಳ ತರಬೇತಿ ಪಡೆಯುವುದು ಅವಶ್ಯಕವಾಗಿದೆ ಎಂದು ಕಿಮ್ಸ್ ನಿರ್ದೇಶಕ ಡಾ| ರಾಮಲಿಂಗಪ್ಪ ಅಂತರತಾನಿ ಹೇಳಿದರು.
ಕಿಮ್ಸ್‌ನ ಗೋಲ್ಡನ್ ಜ್ಯುಬಿಲಿ ಸಭಾಂಗಣದಲ್ಲಿ ಮಂಗಳವಾರ ಸೊಸೈಟಿ ಆಫ್ ಕ್ರಿಟಿಕಲ್ ಕೇರ್‌ಮೆಡಿಸಿನ್ ಸಹಯೋಗದಲ್ಲಿ ಆಯೋಜಿಸಿದ ಎರಡು ದಿನಗಳ ಕ್ರಿಟಿಕಲ್ ಕೇರ್ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಜೀವನ್ಮರಣದ ಮಧ್ಯೆ ಹೋರಾಟ ನಡೆಸುತ್ತಿರುವವರು ಆಸ್ಪತ್ರೆಗೆ ಬಂದಾಗ ಅವರ ಆರೋಗ್ಯ ಸಮಸ್ಯೆಯನ್ನರಿತು ಸಮರ್ಪಕ ಚಿಕಿತ್ಸೆ ನೀಡುವುದು ಅವಶ್ಯಕವಾಗಿದೆ. ಈ ಕುರಿತು ವೈದ್ಯರ ಜ್ಞಾನ ಹೆಚ್ಚಿಸಲು ಕಾರ್ಯಾಗಾರ ಆಯೋಜಿಸಲಾಗಿದೆ. ವೈದ್ಯರು ಕೌಶಲ್ಯವನ್ನು ಸದ್ಬಳಕೆ ಮಾಡಿಕೊಂಡು ಅಪ್ ಗ್ರೇಡ್ ಆಗಿ ರೋಗಿಗಳ ಜೀವ ರಕ್ಷಣೆಗೆ ಮುಂದಾಗಬೇಕು ಎಂದರು.
ಪ್ರಸ್ತುತ 1200 ಬೆಡ್‌ಗಳ ಕಿಮ್ಸ್‌ನಲ್ಲಿ ಶೀಘ್ರದಲ್ಲಿಯೇ ಬೆಡ್‌ಗಳ ಸಂಖ್ಯೆ 1800ಕ್ಕೆ ಹೆಚ್ಚಲಿದ್ದು, ನಂತರ ರಾಜ್ಯದ ದೊಡ್ಡ ಆಸ್ಪತ್ರೆ ಎಂಬ ಖ್ಯಾತಿ ಗಳಿಸಲಿದೆ. ಆಸ್ಪತ್ರೆಯಲ್ಲಿ 2 ಎಕ್ಸೆಲ್ -1000 ಯಂತ್ರೋಪಕರಣಗಳು ಹಾರ್ಮೊನ್ ಆನಲೈಸರ್ ಸೇವೆ ಲಭ್ಯವಿದೆ. ಸದ್ಯ ಆಸ್ಪತ್ರೆಯಲ್ಲಿ 65 ವೆಂಟಿಲೇಟರ್‌ಗಳಿದ್ದು, ಇನ್ನೂ 30 ವೆಂಟಿಲೇಟರ್ ಗಳನ್ನು ಶೀಘ್ರದಲ್ಲೇ ಅಳವಡಿಸಲಾಗುವುದು. ಸದ್ಯ ಕಿಮ್ಸ್ ಐಸಿಯುನಲ್ಲಿ 120 ಬೆಡ್‌ಗಳಿದ್ದು, ಅವುಗಳ ಸಂಖ್ಯೆ ಹೆಚ್ಚಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.
ಹೆರಿಗೆ ಸಂದರ್ಭದಲ್ಲಾಗುತ್ತಿರುವ ಮೃತ್ಯುದರ ಕಡಿಮೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕಿದೆ.ದಕ್ಷಿಣ ಭಾರತದ ರಾಜ್ಯಗಳಲ್ಲಿ ಕರ್ನಾಟಕದಲ್ಲಿ ಹೆರಿಗೆ ಸಂದರ್ಭದಲ್ಲಿನ ಮೃತ್ಯು ದರ ಹೆಚ್ಚಾಗಿದೆ. ಸದ್ಯ ರಾಜ್ಯದಲ್ಲಿ 1 ಲಕ್ಷದಲ್ಲಿ 62 ಜನರು ಹೆರಿಗೆ ಸಂದರ್ಭದಲ್ಲಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಇದನ್ನು ಕಡಿಮೆ ಮಾಡಲು ಕ್ರಮ ಕೈಗೊಳ್ಳಬೇಕಿದೆ ಎಂದರು. ಅಮೆರಿಕ ಹಾಗೂ ಆಸ್ಟ್ರೇಲಿಯಾದಿಂದ ಸಂಪನ್ಮೂಲವ್ಯಕ್ತಿಗಳು ಕ್ರಿಟಿಕಲ್ ಕೇರ್ ಬಗ್ಗೆ ಉಪನ್ಯಾಸ ನೀಡಲು ಆಗಮಿಸಿದ್ದಾರೆ. ಇಲ್ಲಿನ ವೈದ್ಯರು ಅವರ ಅನುಭವವನ್ನು ಕೇಳಬೇಕು ಎಂದು ಹೇಳಿದರು. ಕಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ| ಅರುಣಕುಮಾರ ಮಾತನಾಡಿ, ಕಿಮ್ಸ್‌ನಲ್ಲಿಯೇ ಕಲಿತು ವಿದೇಶದಲ್ಲಿ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ವೈದ್ಯರು ಇಲ್ಲಿ ಜೀವರಕ್ಷಣಾ ಕೌಶಲ ಕಾರ್ಯಾಗಾರ ಆಯೋಜಿಸುತ್ತಿರುವುದು ಶ್ಲಾಘನೀಯ ಎಂದರು.
ಆಸ್ಟ್ರೇಲಿಯಾದ ಹಿರಿಯ ವೈದ್ಯ ಡಾ| ಭೀಮಸೇನಾಚಾರ್ಯ ಪ್ರಸಾದ ಏರ್‌ವೇ ಮ್ಯಾನೇಜ್‌ಮೆಂಟ್ ಕುರಿತು ಮಾತನಾಡಿ, ಜೀವನ್ಮರಣ ಸ್ಥಿತಿಯಲ್ಲಿರುವ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆತಂದಾಗ ಪ್ರಾಣವಾಯು ಬಗ್ಗೆ ವಿಶೇಷ ಗಮನಹರಿಸಬೇಕು. ಸಮರ್ಪಕವಾಗಿ ಆಮ್ಲಜನಕ ಪೂರೈಕೆ ಮಾಡಬೇಕು. ಇದರಿಂದ ಮಾತ್ರದೇಹದಲ್ಲಿರುವ 3 ಟ್ರಿಲಿಯನ್ ಜೀವಕೋಶಗಳನ್ನು ಕ್ರಿಯಾಶೀಲವಾಗಿಡಲು ಸಾಧ್ಯವಾಗುತ್ತದೆ. ಗಾಳಿ ದೇಹದ ಹೊರಗೆ ಹಾಗೂ ಒಳಗೆ, ರಕ್ತ ದೇಹದಾದ್ಯಂತ ಸಂಚರಿಸುತ್ತಿದೆ ಎಂಬುದನ್ನು ದೃಢಪಡಿಸಿಕೊಳ್ಳಬೇಕು. ಅತಿಯಾದ ಆಮ್ಲಜನಕ ಜೀವಕ್ಕೆ ಕುತ್ತು ತರಹುದಾಗಿದೆ ಎಂದರು.
ಅಮೆರಿಕದ ವೈದ್ಯ ಡಾ| ಕೃಷ್ಣ ಅಪರಂಜಿ “ಮಾನಿಟರಿಂಗ್ ಆಕ್ಸಿಜನ್ ಬ್ಯಾಲೆನ್ಸ್ ಆ್ಯಂಡ್ ಆಸಿಡ್ ಬೇಸ್ ಸ್ಟೇಟಸ್‘ ಕುರಿತು ಉಪನ್ಯಾಸ ನೀಡಿದರು. ಕಿಮ್ಸ್ ಪ್ರಾಚಾರ್ಯ ಡಾ| ಎಂ.ಸಿ. ಚಂದ್ರು, ಡಾ| ರಾಜೇಶ್ವರಿ ಜೈನಾಪುರ, ಡಾ| ಈಶ್ವರಹಸಬಿ, ಡಾ| ಎ.ಎಸ್. ಅಕ್ಕಮಹಾದೇವಿ, ಡಾ| ಬಿ.ಎಸ್. ಪಾಟೀಲ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ
ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.