ವಿದೇಶಿ ನಾಯಿ ತರಿಸಿಕೊಡುವುದಾಗಿ ಧಾರವಾಡದ ಯುವತಿಗೆ 2.25 ಲಕ್ಷ ರೂ. ವಂಚನೆ
Team Udayavani, Jun 5, 2021, 6:36 PM IST
ಹುಬ್ಬಳ್ಳಿ: ಧಾರವಾಡದ ಓರ್ವರಿಗೆ ಅಪರಿಚಿತನು ಸೈಬೀರಿಯನ್ ಹಸ್ಕಿ ತಳಿಯ ನಾಯಿಯನ್ನು ವಿದೇಶದಿಂದ ಮನೆಗೆ ತಲುಪಿಸುವುದಾಗಿ ನಂಬಿಸಿ, ಆನ್ಲೈನ್ ಮೂಲಕ 2.25 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾನೆ.
ಧಾರವಾಡದ ಯುವತಿಯು ಸೈಬೀರಿಯನ್ ಹಸ್ಕಿ ತಳಿಯ ನಾಯಿ ಖರೀದಿಸಲು ಗೂಗಲ್ ಕ್ರೋಮ್ನಲ್ಲಿ ಹುಡುಕಾಟ ನಡೆಸಿದ್ದಾರೆ. ಅದರಲ್ಲಿ ಸಂಪರ್ಕಕ್ಕಾಗಿ ದೊರೆತ ಮೊಬೈಲ್ಗೆ ವಾಯ್ಸ ಕರೆ ಮಾಡಿ ವಿಚಾರಿಸಿದಾಗ, ಅಶಿಶ ಹಂಡಾ ಎಂಬಾತ ಸೈಬೀರಿಯನ್ ತಳಿಯ ನಾಯಿಯನ್ನು ಕಾರ್ಗೋ ಫ್ಲೈಟ್ ಕಳುಹಿಸಿ, ಕಾನ್ಪುರ ಏಜೆನ್ಸಿ ಮೂಲಕ ಮನೆಗೆ ತಲುಪಿಸುವುದಾಗಿ ನಂಬಿಸಿದ್ದಾನೆ.
ನಂತರ ವಿವಿಧ ಚಾರ್ಜ್ಗಳ ರೂಪದಲ್ಲಿ ಮೇ 28ರಿಂದ ಜೂ. 3ರ ವರೆಗೆ ಹಂತ ಹಂತವಾಗಿ ವಿವಿಧ ಬ್ಯಾಂಕ್ ಖಾತೆಗಳಿಂದ ಆನ್ಲೈನ್ ಮೂಲಕ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾನೆ. ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವೈದ್ಯಕೀಯ ತುರ್ತು ನೆಪದಲ್ಲಿ ವಂಚನೆ: ಅಪರಿಚಿತನೊಬ್ಬ ನಗರ ವೈದ್ಯರಿಗೆ ಅವರ ಗೆಳೆಯನ ಹ್ಯಾಕ್ ಮಾಡಿದ ಮೊಬೈಲ್ ಸಂಖ್ಯೆಯಿಂದ ವಾಟ್ಸ್ಆ್ಯಪ್ಗೆ ವೈದ್ಯಕೀಯ ತುರ್ತು ಸಲುವಾಗಿ ಹಣ ಬೇಕೆಂದು ಸಂದೇಶ ಕಳುಹಿಸಿ, ತನ್ನ ಎಸ್ಬಿಐ ಖಾತೆಗೆ 80 ಸಾವಿರ ರೂ. ವರ್ಗಾಯಿಸಿಕೊಂಡು ವಂಚಿಸಿದ ಘಟನೆ ನಡೆದಿದೆ. ಗೋಕುಲ ರಸ್ತೆ ಸಿಲ್ವರ್ ಟೌನ್ನ ವೈದ್ಯರೇ ಮೋಸಗೊಂಡಿದ್ದು, ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BSY: ಬಿಎಸ್ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್ಪಿಪಿ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Over Remarks: ʼಸಿದ್ದರಾಮೋತ್ಸವʼ ಮಾಡಿಸುವ ನೀವು ‘ಅಂಬೇಡ್ಕರ್ ಉತ್ಸವ’ ಮಾಡಲ್ಲ: ಬಿಜೆಪಿ
Internal Dissent: ಪ್ರಧಾನಿ ಮೋದಿ ಭೇಟಿಯಾದ ವಿಜಯೇಂದ್ರ ದೂರದಿದ್ದರೂ ‘ಸಂದೇಶ’ ರವಾನೆ
Bill Amendment: ರಾಜ್ಯಪಾಲರ ಕುಲಾಧಿಪತಿ ಅಧಿಕಾರಕ್ಕೆ ಕತ್ತರಿ: ಮೇಲ್ಮನೆಯಲ್ಲೂ ಅಂಗೀಕಾರ
MUST WATCH
ಹೊಸ ಸೇರ್ಪಡೆ
Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
Hunsur: ಬಸ್ ಡಿಕ್ಕಿಯಾಗಿ ಪಾದಾಚಾರಿ ಸಾವು
Upendra: ʼಯುಐʼಗೆ ಸ್ಯಾಂಡಲ್ವುಡ್ ಸಾಥ್; ಉಪೇಂದ್ರ ಚಿತ್ರ ನೋಡಲು ಕಾತುರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.