ಕಿರಾಣಿ ವರ್ತಕರ ಸಂಘದ 2 ಲಕ್ಷರೂ.ಚೆಕ್ ವಿತರಣೆ
Team Udayavani, Apr 20, 2020, 2:37 PM IST
ಧಾರವಾಡ: ಕೋವಿಡ್ 19 ವೈರಾಣು ನಿಯಂತ್ರಣ ಕಾರ್ಯಾಚರಣೆಯ ಹಿನ್ನೆಲೆಯಲ್ಲಿ ಅಗತ್ಯ ತುರ್ತು ಕ್ರಮಗಳ ನಿರ್ವಹಣೆಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಧಾರವಾಡ ಕಿರಾಣಿ ವರ್ತಕರ ಸಂಘದಿಂದ 2 ಲಕ್ಷ ರೂ.ಗಳ ದೇಣಿಗೆ ಸಲ್ಲಿಸಲಾಯಿತು.
ಶಾಸಕರಾದ ಅರವಿಂದ ಬೆಲ್ಲದ ಹಾಗೂ ಅಮೃತ ದೇಸಾಯಿ ನೇತೃತ್ವದಲ್ಲಿ ಧಾರವಾಡ ಕಿರಾಣಿ ವರ್ತಕರ ಸಂಘದ ಅಧ್ಯಕ್ಷ ಅಶೋಕ ದೊಡಮನಿ ಅವರು 2 ಲಕ್ಷ ರೂ.ಗಳ ದೇಣಿಗೆ ಚೆಕ್‌ನ್ನು ಡಿಸಿ ದೀಪಾ ಚೋಳನ್ ಅವರಿಗೆ ಸಲ್ಲಿಸಿದರು. ಕಿರಾಣಿ ವರ್ತಕರ ಸಂಘದ ರವೀಂದ್ರ ವಸ್ತ್ರದ, ಮಹಾಂತೇಶ ಪಟ್ಟಣಶೆಟ್ಟಿ, ವಿಶ್ವನಾಥ ವಸ್ತ್ರದ, ಹಾಲಯ್ಯ ಹಂಗರಗಿ, ಜಗದೀಶ ಶಹಾ, ಶಿವಮೂರ್ತಿ ಕೋಟೂರ, ಎಂ.ವಿ. ಹರಿಹರ, ಅಶೋಕ ಕಲಾಲ, ಸುಬ್ರಹ್ಮಣ್ಯ ಶೆಟ್ಟಿ, ಅನಿಲ ಕಲಾಲ ಇದ್ದರು. ಇದೇ ಸಂದರ್ಭದಲ್ಲಿ ಅರವಿಂದ ಬೆಲ್ಲದ ಅವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಡಜನತೆಗೆ ವಿತರಿಸಲು ಕಿರಾಣಿ ವರ್ತಕರ ಸಂಘದಿಂದ 1 ಲಕ್ಷ ರೂ.ಗಳ ಆಹಾರ ಪದಾರ್ಥ ನೀಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.