23 ವಲಸೆ ಕಾರ್ಮಿಕರು ರಾಜಸ್ಥಾನಕ್ಕೆ ಪ್ರಯಾಣ
Team Udayavani, May 11, 2020, 9:10 AM IST
ಹುಬ್ಬಳ್ಳಿ: ಲಾಕ್‌ಡೌನ್ ಹಿನ್ನೆಲೆಯಲ್ಲಿ ನಗರದಲ್ಲಿ ಉಳಿದುಕೊಂಡಿದ್ದ ರಾಜಸ್ಥಾನ ಮೂಲದ 23 ವಲಸಿಗರು ರವಿವಾರ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಮೂಲಕ ಇಲ್ಲಿನ ಗೋಕುಲ ರಸ್ತೆಯ ಹೊಸ ಬಸ್ ನಿಲ್ದಾಣದಿಂದ ತವರಿನತ್ತ ಪ್ರಯಾಣ ಬೆಳೆಸಿದರು.
ರಾಜಸ್ಥಾನದ ವಿವಿಧ ಜಿಲ್ಲೆಯವರಾಗಿದ್ದು, ಕಾರ್ಯ ನಿಮಿತ್ತ ಹಲವಾರು ವರ್ಷಗಳಿಂದ ನಗರದಲ್ಲಿ ವಾಸವಾಗಿದ್ದರು. ಇಲ್ಲಿಂದ ತಮ್ಮ ಮೂಲ ಸ್ಥಳಗಳಿಗೆ ತೆರಳಲು ಸೇವಾಸಿಂಧು ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಿ ಇ-ಪಾಸ್ ಪಡೆದಿದ್ದರು. ಇಂದು ಜಿಲ್ಲಾಡಳಿತದಿಂದ ಅನುಮತಿ ದೊರೆತ ಹಿನ್ನೆಲೆಯಲ್ಲಿ ವಾಕರಸಾ ಸಂಸ್ಥೆಯ ಕರಾರು ಒಪ್ಪಂದದ ಬಸ್ಸಿನಲ್ಲಿ ತವರು ರಾಜ್ಯಕ್ಕೆ ತೆರಳಿದರು.
ಎಲ್ಲಾ ಪ್ರಯಾಣಿಕರಿಗೆ ಮತ್ತು ಚಾಲಕರಿಗೆ ಮಾಸ್ಕ್, ಕೈ ಗವಸು, ಸ್ಯಾನಿಟೈಸರ್ ನೀಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಲಾಗಿದೆ. ಮಾರ್ಗ ಮಧ್ಯದ ಅವಶ್ಯಕತೆಗೆ ತಕ್ಕಂತೆ ಶುದ್ಧ ಕುಡಿಯುವ ನೀರು, ಆಹಾರ ಪೊಟ್ಟಣಗಳ ವ್ಯವಸ್ಥೆ ಮಾಡಲಾಗಿದೆ. ಹುಬ್ಬಳ್ಳಿಯಿಂದ ಇದುವರೆಗೆ 6 ಬಸ್ಸುಗಳ ಮೂಲಕ ಒಟ್ಟು 145 ಜನರು ನಗರದಿಂದ ರಾಜಸ್ಥಾನಕ್ಕೆ ತೆರಳಿದಂತಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ರಾಮನಗೌಡರ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಉಳಿದುಕೊಂಡಿದ್ದು, ಹೊರ ರಾಜ್ಯಗಳಿಗೆ ತೆರಳುವ ಪ್ರಯಾಣಿಕರು ಸರ್ಕಾರದ ನಿರ್ದೇಶನಗಳ ಪ್ರಕಾರ ಸೇವಾ ಸಿಂಧು ವೆಬ್‌ಸೈಟ್ ಮೂಲಕ ಅಧಿಕೃತ ಇ-ಪಾಸ್ ಪಡೆದುಕೊಳ್ಳಬೇಕಾಗಿರುತ್ತದೆ. ಅಗತ್ಯ ದಾಖಲಾತಿಗಳೊಂದಿಗೆ ಪ್ರಯಾಣದವೆಚ್ಚವನ್ನು ಭರಿಸುವ ಆಧಾರದಲ್ಲಿ ವಾಕರಸಾ ಸಂಸ್ಥೆಯ ಕರಾರು ಒಪ್ಪಂದದ ಬಸ್ಸಿನಲ್ಲಿ ಪ್ರಯಾಣಿಸಬಹುದಾಗಿದೆ.
ಪ್ರಯಾಣಿಕರ ಅಗತ್ಯಕ್ಕನುಗುಣವಾಗಿ ವೇಗದೂತ ವಾಯವ್ಯ ಸಾರಿಗೆ, ರಾಜಹಂಸ ಮತ್ತು ಹವಾನಿಯಂತ್ರಣರಹಿತ ಸ್ಲಿಪರ್ ಬಸ್ಸುಗಳನ್ನು ನೀಡಲಾಗುತ್ತದೆ. ಹುಬ್ಬಳ್ಳಿ ಹೊಸ ಬಸ್ ನಿಲ್ದಾಣದಲ್ಲಿ ವಿಶೇಷ ಕೌಂಟರ್ ತೆರೆಯಲಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಮೊ: 7760991663, 9448631581, 9686672236 ಸಹಾಯವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.
ನಗರದಲ್ಲಿ ನೆಲೆಸಿರುವ ರಾಜಸ್ಥಾನ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದು ತವರಿನತ್ತ ಪ್ರಯಾಣ ಬೆಳಸಿದ ಎಲ್ಲರಿಗೂ ಶುಭ ಕೋರಿ ಬೀಳ್ಕೊಟ್ಟರು. ಘಟಕ ವ್ಯವಸ್ಥಾಪಕ ವೈ.ಎಂ. ಶಿವರೆಡ್ಡಿ, ಸಹಾಯಕ ಸಂಚಾರ ಅಧೀಕ್ಷಕ ನಾಗರಾಜ, ನಿಲ್ದಾಣಾಧಿಕಾರಿಗಳಾದ ಕುರ್ತುಕೋಟಿ, ಕೋಟೂರ ಇನ್ನಿತರರಿದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಸರ್ಕಾರ ಮತ್ತು ವಿಜಯೇಂದ್ರ ನಡುವೆ ಉತ್ತಮ ಅಡ್ಜಸ್ಟ್‌ಮೆಂಟ್ ಇದೆ: ಯತ್ನಾಳ್ ಆರೋಪ
Hubli: ಕಸದ ವಾಹನಕ್ಕೆ ಸ್ಕೂಟಿ ಡಿಕ್ಕಿ: ಓರ್ವ ವಿದ್ಯಾರ್ಥಿ ಸಾವು, ಮತ್ತೋರ್ವ ಗಂಭೀರ
BJP ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ಗೊತ್ತಿಲ್ಲ: ಸಚಿವ ಜೋಶಿ
BJP ರಾಜ್ಯಾಧ್ಯಕ್ಷರ ನೇಮಕ ಹೈಕಮಾಂಡ್ ನಿರ್ಧಾರ: ಅರವಿಂದ ಬೆಲ್ಲದ
Hubli: ಮೀಟರ್ ಬಡ್ಡಿಗೆ ಮನನೊಂದು ಲಾರಿ ಚಕ್ರದಡಿ ಬಿದ್ದು ವ್ಯಕ್ತಿ ಆತ್ಮಹ*ತ್ಯೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.