ಕೆವಿಜಿ ಬ್ಯಾಂಕ್‌ಗೆ 330 ಕೋಟಿ ನಿರ್ವಹಣಾ ಲಾಭ
31.90ಕೋಟಿ ರೂ. ನಿಕ್ಕಿ ಲಾಭ ; ಲಾಭ ಗಳಿಕೆಯಲ್ಲಿ ಹೊಸ ದಾಖಲೆ
Team Udayavani, Jun 2, 2022, 10:35 AM IST
ಧಾರವಾಡ: ಕೆನರಾ ಬ್ಯಾಂಕ್ ಪ್ರವರ್ತಿತ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕು 10.53 ಪ್ರತಿಶತ ಪ್ರಗತಿ ದರದಲ್ಲಿ 30,748 ಕೋಟಿ ರೂ. ವಹಿವಾಟು ದಾಖಲಿಸಿದ್ದು, ಬ್ಯಾಂಕಿನ ಕಾರ್ಯ ನಿರ್ವಹಣಾ ಲಾಭ 125 ಕೋಟಿ ರೂ.ಗಳಿಂದ 330 ಕೋಟಿ ರೂ.ಗಳಿಗೆ ವೃದ್ಧಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ಪಿ.ಗೋಪಿಕೃಷ್ಣ ಹೇಳಿದರು.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ಸಂದಿಗ್ಧ ಪರಿಸ್ಥಿತಿ ಹಾಗೂ ಪ್ರಕೃತಿ ವೈರುಧ್ಯದ ಕಾರಣ ಕುಂಠಿತಗೊಂಡ ಆರ್ಥಿಕ ವ್ಯವಸ್ಥೆ ಜತೆಯಲ್ಲಿ ಹಲವು ಉಪಬಂಧ ಹಾಗೂ ಆದಾಯ ತೆರಿಗೆಯನ್ನು ಪಾವತಿಸಿಯೂ ಬ್ಯಾಂಕು 31.90 ಕೋಟಿ ರೂ.ನಿಶ್ಚಿತ ಲಾಭ ಗಳಿಸುವಲ್ಲಿ ಶಕ್ತವಾಗಿದೆ. ಆ ಮೂಲಕ ಬ್ಯಾಂಕಿನ ನಿವ್ವಳ ಸಂಪತ್ತು 1224.42 ಕೋಟಿ ರೂ.ಗಳಿಗೆ ವೃದ್ಧಿಸಿದೆ ಎಂದರು.
ವೃದ್ಧಿಸಿದ ವಹಿವಾಟು: 2020-2021ರ ಸಾಲಿನ ಒಟ್ಟು ವ್ಯವಹಾರದ (ರೂ.27818 ಕೋಟಿ) ಮೇಲೆ 2930 ಕೋಟಿ ರೂ.ನಿವ್ವಳ ಹೆಚ್ಚಳ ಸಾ ಧಿಸಿರುವ ಬ್ಯಾಂಕು ವರದಿಯ ವರ್ಷದಲ್ಲಿ ಶೇ.10.53 ಪ್ರಗತಿ ದರದಲ್ಲಿ 30748 ಕೋಟಿ ರೂ. ವಹಿವಾಟು ದಾಖಲಿಸಿದೆ. ಠೇವಣಿ ಸಂಗ್ರಹಣೆಯಲ್ಲಿ ಶೇ.9.60ಪ್ರತಿಶತ ಪ್ರಗತಿ ದರದಲ್ಲಿ 17647 ಕೋಟಿ ರೂ. ಮಟ್ಟವನ್ನು ತಲುಪಿರುವ ಬ್ಯಾಂಕು ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದ್ದು, ಅದು 81ಲಕ್ಷ ಮೀರಿದೆ. ಪ್ರತಿ ಉದ್ಯೋಗಿಯ ಸರಾಸರಿ ವಹಿವಾಟು 8.29 ಕೋಟಿ ರೂ.ಗಳಿಂದ 9.48 ಕೋಟಿ ರೂ.ಗಳಿಗೆ ಏರಿದೆ ಎಂದರು.
9 ಜಿಲ್ಲೆಗಳಲ್ಲಿ 629 ಶಾಖೆಗಳನ್ನು ಹೊಂದಿರುವ ಬ್ಯಾಂಕು 2021-2022 ರ ಸಾಲಿನಲ್ಲಿ ವಿವಿಧ ರಂಗಗಳಿಗೆ ಸಂಬಂಧಿಸಿ 8825 ಕೋಟಿ ರೂ. ಸಾಲ ವಿತರಿಸಿದೆ. ಬ್ಯಾಂಕಿನ ಸಾಲ ಹಾಗೂ ಮುಂಗಡಗಳು ಶೇ.11.80 ಪ್ರಗತಿ ದರದಲ್ಲಿ 13101 ಕೋಟಿ ರೂ. ಮಟ್ಟ ತಲುಪಿದೆ. ಆದ್ಯತಾ ರಂಗಕ್ಕೆ ಮಹತ್ವ ನೀಡಿರುವ ಬ್ಯಾಂಕು ಈ ರಂಗದಡಿ 11577 ಕೋಟಿ ರೂ. ಸಾಲ ಹೊಂದಿದ್ದು, ಇದು ಒಟ್ಟು ಸಾಲದ 88.37ಪ್ರತಿಶತವಾಗಿದೆ. ಬ್ಯಾಂಕಿನ ಒಟ್ಟು ಸಾಲದಲ್ಲಿ ಕೃಷಿರಂಗದ ಸಾಲದ ಪ್ರಮಾಣ 8690 ಕೋಟಿ ರೂ.ಗಳಾಗಿದ್ದು, ಅದು ಒಟ್ಟಾರೆ ಸಾಲದ 66.33ಪ್ರತಿಶತವಾಗಿದೆ. ಕಳೆದ ಸಾಲಿನಲ್ಲಿ ಬ್ಯಾಂಕು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ 302317 ರೈತರಿಗೆ 5704ಕೋಟಿ ರೂ. ಸಾಲ ವಿತರಿಸಿದೆ. ಕೃಷಿ, ಉದ್ಯಮ ಮತ್ತು ರಿಟೇಲ್ ಸಾಲಗಳಿಗೆ ಆದ್ಯತೆ ನೀಡಿದ್ದ ಬ್ಯಾಂಕು ಈ ರಂಗದಲ್ಲಿ 8571 ಕೋಟಿ ರೂ.ವಿತರಿಸಿದೆ ಎಂದರು.
ಕೋವಿಡ್ ಮತ್ತು ಪ್ರಕೃತಿ ಅನಿಯತನದ ನಂತರದ ಸ್ಥಿತಿ ಬ್ಯಾಂಕಿನ ಸಾಲ ವಸೂಲಾತಿ ಮೇಲೆ ಪರಿಣಾಮ ಬೀರಿದ್ದರೂ ಅನುತ್ಪಾದಕ ಸಾಲದ ಮೇಲೆ ಬ್ಯಾಂಕು ಉತ್ತಮ ನಿಯಂತ್ರಣ ಸಾ ಧಿಸಿದೆ. ಬ್ಯಾಂಕು ತನ್ನದೇ ಆದ ಓಟಿಎಸ್ ಯೋಜನೆಗಳ ಮೂಲಕ ಸಾಲ ಪರಿಹರಿಸಿಕೊಳ್ಳಲು ಅನುವು ಮಾಡಿಕೊಟ್ಟಿದ್ದು, ನಿಕ್ಕಿ ಅನುತ್ಪಾದಕ ಸಾಲವನ್ನು ಶೇ.9.66 ಪ್ರತಿಶತದಿಂದ 5.90 ಪ್ರತಿಶತಕ್ಕೆ ತಗ್ಗಿಸಿದೆ ಎಂದರು.
ಲಾಭ ಗಳಿಕೆಯಲ್ಲಿ ಹೊಸ ದಾಖಲೆ: ಬ್ಯಾಂಕಿನ ಕಾರ್ಯ ನಿರ್ವಹಣಾ ಲಾಭ ಶೇ.164.40 ಪ್ರಗತಿ ದರದಲ್ಲಿ 124.90 ಕೋಟಿ ರೂ.ಗಳಿಂದ 330.19 ಕೋಟಿ ರೂ.ಗಳಿಗೆ ವೃದ್ಧಿಸಿದೆ. ಬ್ಯಾಂಕು ನಿಬಂಧನೆಗಳಿಗೆ ಸಂಬಂ ಧಿಸಿ 289.29 ಕೋಟಿ ಕಲ್ಪಿಸಿಯೂ ಬ್ಯಾಂಕು 31.90 ಕೋಟಿ ರೂ.ನಿಕ್ಕಿ ಲಾಭ ಗಳಿಸಿದೆ. ಬ್ಯಾಂಕಿನ ಒಟ್ಟು ಆದಾಯವು 1589.53 ಕೋಟಿ ರೂ.ಗಳಿಂದ 1991.16 ಕೋಟಿಗೆ ಏರಿಕೆಯಾಗಿದೆ ಎಂದರು.
ವಿತ್ತೀಯ ಸೇರ್ಪಡೆಯಡಿ ಬ್ಯಾಂಕಿನ ಪ್ರಯತ್ನ ನಿರಂತರ ಸಾಗಿದ್ದು, ಅಸಂಘಟಿತ ವರ್ಗ ಮತ್ತು ಹಳ್ಳಿಗಾಡಿನ ಜನರಿಗೆ ಸಾಮಾಜಿಕ ಭದ್ರತೆ ಕಲ್ಪಿಸುವ ನಿಟ್ಟಿನಲ್ಲಿ ಬ್ಯಾಂಕು ಮಹತ್ವದ ಪಾತ್ರ ವಹಿಸುತ್ತಲಿದೆ. ಬ್ಯಾಂಕು ಇಲ್ಲಿಯವರೆಗೆ ಸುಮಾರು 12.95 ಲಕ್ಷ ಜನರನ್ನು ಪ್ರಧಾನ ಮಂತ್ರಿ ಸುರûಾ ವಿಮಾ ಯೋಜನೆ ಮತ್ತು 6.06 ಲಕ್ಷ ಜನರನ್ನು ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ ವ್ಯಾಪ್ತಿಗೆ ತಂದಿದೆ. ಅಟಲ್ ಪೆನ್ಶನ್ ಯೋಜನೆಯಡಿ ಇಲ್ಲಿಯವರೆಗೆ 2.65 ಲಕ್ಷ ಜನರನ್ನು ತಂದ ಬ್ಯಾಂಕಿನ ಕಾರ್ಯ ಪರಿಗಣಿಸಿ ಭಾರತೀಯ ಪಿಂಚಣಿ ಪ್ರಾ ಧಿಕಾರ ಬ್ಯಾಂಕಿಗೆ ರಾಷ್ಟ್ರಮಟ್ಟದ 14 ಪ್ರಶಸ್ತಿಗಳನ್ನು ನೀಡಿದೆ ಎಂದರು. ಬ್ಯಾಂಕಿನ ಮಹಾ ಪ್ರಬಂಧಕರಾದ ಚಂದ್ರಶೇಖರ ಡಿ ಮೊರೋ, ಶ್ರೀನಿವಾಸ ರಾವ್, ಬಿ.ಸಿ.ರವಿಚಂದ್ರ, ಸತೀಶ ಆರ್, ಮಾಲಕಿ ಪುನೀತ, ಮುಖ್ಯ ಪ್ರಬಂಧಕರು (ಮಾರುಕಟ್ಟೆ) ಉಲ್ಲಾಸ ಗುನಗಾ ಸೇರಿದಂತೆ ಹಲವರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.
2022-2023 ರ ಸಾಲಿನ ಆರ್ಥಿಕ ವರ್ಷದ ಅಂತ್ಯಕ್ಕೆ ಬ್ಯಾಂಕು 18900 ಕೋಟಿ ರೂ. ಠೇವಣಿ ಮತ್ತು 14100 ಕೋಟಿ ರೂ. ಮುಂಗಡ ಮಟ್ಟ ತಲುಪುವ ಮೂಲಕ 33,000 ಕೋಟಿ ರೂ. ವಹಿವಾಟು ಸಾಧಿಸುವ ಮತ್ತು 9 ಜಿಲ್ಲೆಗಳ ಕಾರ್ಯ ಕ್ಷೇತ್ರದಲ್ಲಿ 9150 ಕೋಟಿ ರೂ. ಸಾಲ ವಿತರಿಸುವ ಮಹತ್ವಾಕಾಂಕ್ಷಿ ಗುರಿ ಹೊಂದಲಾಗಿದೆ.ಸಾಲದ ಬಡ್ಡಿಯನ್ನು ಸಾಕಷ್ಟು ತಗ್ಗಿಸಲಾಗಿದ್ದು, ಹೊಸ ಆರ್ಥಿಕ ವರ್ಷದ ಸಾಲಿನಲ್ಲೂ ಕೃಷಿ ,ಉದ್ಯಮ, ಗೃಹಸಾಲ ಒಳಗೊಂಡು ರಿಟೇಲ್ ಸಾಲಗಳಿಗೆ ಆದ್ಯತೆ ನೀಡಲಾಗುವುದು. ಜನಸಾಮಾನ್ಯರಿಗೆ ಆಸ್ಪತ್ರೆ ಖರ್ಚುಗಳನ್ನು ಸುಲಭವಾಗಿ ನಿಭಾಯಿಸಲು ಪೂರಕವಾಗಿ ಕಡಿಮೆ ಪ್ರೀಮಿಯಂನಲ್ಲಿ ಉತ್ತಮ ಆರೋಗ್ಯ ವಿಮೆ ಜಾರಿಗೆ ತರಲು ಉದ್ದೇಶಿಸಲಾಗಿದೆ. –ಪಿ. ಗೋಪಿಕೃಷ್ಣ, ಅಧ್ಯಕ್ಷರು, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್.
- ಶೇ.10.53 ಪ್ರಗತಿಯೊಂದಿಗೆ 30748 ಕೋಟಿ ರೂ.ದಾಟಿದ ವಹಿವಾಟು
- ಕಾರ್ಯ ನಿರ್ವಹಣಾ ಲಾಭ 330 ಕೋಟಿ ರೂ.
- 31.90ಕೋಟಿ ರೂ. ನಿಕ್ಕಿ ಲಾಭ
- 2.64 ಲಕ್ಷ ಜನ ಅಟಲ್ ಪೆನ್ ಶನ್ ಯೋಜನೆ ವ್ಯಾಪ್ತಿಗೆ 1224.42 ಕೋಟಿ ರೂ.ನಿವ್ವಳ ಸಂಪತ್ತು 2022-2023ರ ಅವ ಧಿಗೆ 33,000 ಕೋಟಿ ರೂ. ವಹಿವಾಟು ದಾಟಿ ಮುನ್ನಡೆಯುವ ಗುರಿ.
- ಸರಳ ಆರೋಗ್ಯ ವಿಮಾ ಜಾರಿಗೆ ಯೋಜನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ
Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Tollywood: ‘ಗೇಮ್ ಚೇಂಜರ್ʼಗೆ ರಾಮ್‌ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.