ಸಾಮಾಜಿಕ ಉದ್ಯಮ ಪ್ರತಿನಿಧಿಗಳಿಂದ 38 ಯೋಜನೆ ಮಂಡನೆ
Team Udayavani, Oct 8, 2017, 11:42 AM IST
ಹುಬ್ಬಳ್ಳಿ: ದೇಶಪಾಂಡೆ ಫೌಂಡೇಶನ್ ಸಭಾಂಗಣದಲ್ಲಿ ಸ್ಯಾಂಡ್‌ಬಾಕ್ಸ್ ಸಂವಿಧಾ ಉಪಾಂತ್ಯ ಶನಿವಾರ ಜರುಗಿತು. ಸ್ಪರ್ಧೆಯಲ್ಲಿ 38 ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಸಾಮಾಜಿಕ ಉದ್ಯಮಗಳ ಪ್ರತಿನಿಧಿಗಳು ತಮ್ಮ ನೂತನ ಸಾಮಾಜಿಕ ಉದ್ಯಮಶೀಲತೆ ವಿಚಾರಗಳನ್ನು ಮಂಡಿಸಿದರು.
4ಆರ್ ರಿಸೈಕಲ್ ಸಂಸ್ಥೆಯ ಸಂಸ್ಥಾಪಕ ರಾಮನಾಥನ್, ನೆಕ್ಸ್‌ಟಿನ್ ಸಂಸ್ಥೆ ಸಂಸ್ಥಾಪಕ ರಾಜೀವ ಪ್ರಕಾಶ, ಅರವಿಂದ ಚಿಂಚೋರೆ, ಸಂಕಲ್ಪ್ ಸೆಮಿಕಂಡಕ್ಟರ್ ಸಂಸ್ಥೆಯ ವಿವೇಕ ಪವಾರ, ಅಂಕುರ ಕ್ಯಾಪಿಟಲ್‌ನ ಯಶವಂತ, ಅಕ್ವಾಸಾμಯ ಪವಿನ್ ಪಂಕಜನ್, ಅಗಸ್ತ್ಯ ಫೌಂಡೇಶನ್‌ನ ನಿತೀನ್ ದೇಸಾಯಿ ನಿರ್ಣಾಯಕರಾಗಿ ಆಗಮಿದ್ದರು.
ಇನೋವೇಶನ್ ವಿಭಾಗದಲ್ಲಿ ಮಿಟ್ಟಿ, ಇಂಡಿಯಾ ಶೇರ್, ಥಾಟ್‌ಮಟೆ, ಐಡಿಯಾ, ಶಾಶ್ವತ ಇಕೊ ಸೊಲ್ಯುಷನ್ಸ್, ರೊವನೊಸ್ಟ್ ಹೆಲ್ತ್ ಕೇರ್, ಟಮಾಕು ಹಾಗೂ ಬೋಫೊ ಸಂಸ್ಥೆಗಳು ಪ್ರಶಸ್ತಿಗೆ ಭಾಜನವಾದವು. ವಿಜೇತರು ದೇಶಪಾಂಡೆ ಫೌಂಡೇಶನ್ ಕಾರ್ಯನಿರ್ವಹಿಸುವ ವಲಯದಲ್ಲಿ ತಮ್ಮ ಐಡಿಯಾ ಅನುಷ್ಠಾನಗೊಳಿಸುವ ಅವಕಾಶ ಪಡೆಯಲಿದ್ದಾರೆ.
ಕರ್ನಾಟಕ ಅಲ್ಲದೇ ಅಸ್ಸಾಂ, ದೆಹಲಿ, ಉತ್ತರ ಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶದ ಪ್ರತಿನಿಧಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ದೇಶಪಾಂಡೆ ಫೌಂಡೇಶನ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಝಾ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್
Hubli: ತೀವ್ರತೆ ಪಡೆದ ಬಂದ್; ಬಸ್-ಆಟೋ ಇಲ್ಲದೆ ಪರದಾಡಿದ ಜನತೆ
Dharwad: ದಲಿತಪರ ಸಂಘಟನೆ ಕರೆ ನೀಡಿದ ಬಂದ್ ಗೆ ಮಿಶ್ರ ಪ್ರತಿಕ್ರಿಯೆ
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
Weather: ರಾಜ್ಯದ ಮೂರು ನಗರದಲ್ಲಿ ಹವಾಮಾನ ರಾಡಾರ್ ಸ್ಥಾಪನೆ: ಕೇಂದ್ರ ಸಚಿವ ಜೋಶಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.