ಜಿಲ್ಲೆಯ ಗ್ರಾಮೀಣದಲ್ಲಿ 499 ರೌಡಿಗಳು
Team Udayavani, Jan 18, 2020, 11:54 AM IST
ಧಾರವಾಡ: ಅಪರಾಧ ಪ್ರಕರಣಗಳಲ್ಲಿ ಭಾಗಿಯಾದ ಜಿಲ್ಲೆಯ ವಿವಿಧ ಠಾಣೆಗಳ ವ್ಯಾಪ್ತಿಯ 499 ಜನರ ವಿರುದ್ಧ ರೌಡಿಶೀಟ್ ತೆರೆಯಲಾಗಿದೆ ಎಂದು ಎಸ್ಪಿ ವರ್ತಿಕಾ ಕಟಿಯಾರ್ ಹೇಳಿದರು.
ನಗರದ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪರೇಡ್ ಮೈದಾನದಲ್ಲಿ ಜಿಲ್ಲಾಮಟ್ಟದ ರೌಡಿಶೀಟರ್ ಗಳ ಪರೇಡ್ ಪೂರ್ವದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯಕ್ಕೆ ಇಷ್ಟು ಜನರ ವಿರುದ್ಧ ರೌಡಿಶೀಟರ್ ತೆರೆಯಲಾಗಿದ್ದು, ಈ ಪಟ್ಟಿಯನ್ನು ಅವರು ತೋರಿದ ಸನ್ನಡತೆ ಹಾಗೂ ಯಾವುದೇ ಪ್ರಕರಣಗಳಲ್ಲಿ ಮತ್ತೆ ಭಾಗಿಯಾಗದ ಕುರಿತು ವರದಿ ಪಡೆದು ಪರಿಶೀಲಿಸುತ್ತೇವೆ. ಇದರಲ್ಲಿ ಸನ್ನಡತೆ ತೋರಿದವರನ್ನು ಮಾತ್ರ ರೌಡಿಶೀಟರ್ ಪಟ್ಟಿಯಿಂದ ಕೈ ಬಿಡಲಾಗುವುದು ಎಂದರು.
ಯಾವುದೇ ರೀತಿಯ ಅಪರಾಧಗಳಲ್ಲಿ ಭಾಗವಹಿಸದಂತೆ ರೌಡಿಗಳಿಗೆ ಎಚ್ಚರಿಕೆ ನೀಡುವುದು ಮತ್ತು ರೌಡಿಶೀಟರ್ ತೆರೆದ ಮೇಲೆ ಅಪರಾಧ ಕೃತ್ಯಗಳಿಂದ ದೂರವಿರುವ ಕುರಿತು ಪರಿಶೀಲಿಸುವುದು ಪರೇಡ್‌ನ ಮುಖ್ಯ ಆಶಯವಾಗಿದೆ. ಒಬ್ಬ ರೌಡಿ ವಿರುದ್ಧ ರೌಡಿಶೀಟ್ ತೆರೆದು, ಹತ್ತು ವರ್ಷಗಳಾಗಿದ್ದಲ್ಲಿ, ಅವನು ಕಳೆದ ಹತ್ತು ವರ್ಷಗಳಿಂದ ಯಾವುದೇ ಅಪರಾಧ ಚಟುವಟಿಕೆಯಲ್ಲಿ ಭಾಗವಹಿಸಿರದಿದ್ದರೆ ಮತ್ತು ಸನ್ನಡತೆ ಹೊಂದಿದ್ದರೆ ಠಾಣಾಧಿಕಾರಿಯಿಂದ ವರದಿ ಪಡೆದು ರೌಡಿಶೀಟರ್ ಪಟ್ಟಿಯಿಂದ ಅವನ ಹೆಸರು ತೆಗೆಯಲಾಗುತ್ತದೆ. ಆದರೆ ರೌಡಿಶೀಟರ್ ಪಟ್ಟಿಯಿಂದ ಅವನ ಹೆಸರು ತೆಗೆದ ಮೇಲೆ ಮತ್ತೆ ಅಪರಾಧ ಕೃತ್ಯಕ್ಕೆ ಮುಂದಾದರೆ ಅಥವಾ ಅಪರಾಧ ಪ್ರಕರಣಗಳಲ್ಲಿ ಭಾಗಿಯಾದರೆ ತಕ್ಷಣ ರೌಡಿ ಪಟ್ಟಿಗೆ ಅವನ ಹೆಸರು ಮರು ಸೇರಿಸಿ, ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು. ನ್ಯಾಯಾಲಯದಲ್ಲಿನ ಪ್ರಕರಣಗಳು
ಇತ್ಯರ್ಥವಾಗಿರುವ ಮತ್ತು 60 ವರ್ಷ ಮೇಲ್ಪಟ್ಟವರ, ಕಳೆದ ಹತ್ತು ವರ್ಷಗಳಲ್ಲಿ ಅಪರಾಧಗಳಿಂದ ದೂರವಿದ್ದು ಸನ್ನಡತೆ ತೋರಿರುವ ರೌಡಿಗಳ ಮೇಲಿರುವ ರೌಡಿಶೀಟರ್ ಪಟ್ಟಿ ತೆಗೆಯಲು ಶೀಘ್ರದಲ್ಲಿ ವರದಿ ಪಡೆದು, ಅಧಿಕಾರಿಗಳ ಸಭೆ ಜರುಗಿಸಿ ಕ್ರಮ ತೆಗೆದುಕೊಳ್ಳುವುದಾಗಿ ಸ್ಪಷ್ಟಪಡಿಸಿದರು.
ಉಪಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ನಾಯ್ಕ ಮಾತನಾಡಿ, ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಾದ ಅಳ್ನಾವರದಲ್ಲಿ 45, ಅಣ್ಣಿಗೇರಿಯಲ್ಲಿ 55, ಧಾರವಾಡ ಗ್ರಾಮೀಣ ಠಾಣೆಯಲ್ಲಿ 43, ಗರಗದಲ್ಲಿ 53, ಗುಡಗೇರಿಯಲ್ಲಿ 34, ಕಲಘಟಗಿಯಲ್ಲಿ 95, ಕುಂದಗೋಳದಲ್ಲಿ 40, ನವಲಗುಂದದಲ್ಲಿ 69, ಹುಬ್ಬಳ್ಳಿ ಗ್ರಾಮೀಣದಲ್ಲಿ 64 ಮತ್ತು ಮಹಿಳಾ ಪೊಲೀಸ್ ಠಾಣೆಯಲ್ಲಿ 1 ಹೀಗೆಒಟ್ಟು ಹತ್ತು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ 499 ಜನರ ವಿರುದ್ಧ ರೌಡಿಶೀಟ್ ತೆರೆಯಲಾಗಿದೆ ಎಂದು ತಿಳಿಸಿದರು.
ವಿವಿಧ ಠಾಣೆಗಳ ಇನ್ಸ್‌ಪೆಕ್ಟರ್‌ಗಳಾದ ಶಿವಾನಂದ ಕಮತಗಿ, ವಿಜಯ ಬಿರಾದರ, ಬಸವರಾಜ ಕಲ್ಲಮ್ಮನವರ, ರಂಗನಾಥ ನೀಲಮ್ಮನವರ, ಬಸವರಾಜ ಕಾಮನಬೈಲ್ ಹಾಗೂ ಠಾಣಾಧಿಕಾರಿಗಳಾದ ಪಿಎಸ್‌ಐ ಮಹೇಂದ್ರಕುಮಾರ ನಾಯಕ, ನವೀನ ಜಕ್ಕಲಿ, ಪ್ರಸಾದ ಫಣೆಕರ, ಎಸ್. ದೇವಾನಂದ, ಎಸ್.ಬಿ. ಚಲವಾದಿ, ಲಾಲಸಾಬ ಜುಲಕಟ್ಟಿ ಹಾಗೂ ಎಸ್.ಆರ್. ಕಣವಿ ಪರೇಡ್ ಮೈದಾನದಲ್ಲಿದ್ದು, ರೌಟಿಶೀಟರ್‌ಗಳ ಅಪರಾಧ ಕೃತ್ಯ ಹಾಗೂ ಅವರ ಹಿನ್ನೆಲೆಯನ್ನು ಎಸ್ಪಿಗೆ ವಿವರಿಸಿದರು. ಈ ವೇಳೆ ಅಪರಾಧ ಕೃತ್ಯಗಳಿಂದ ದೂರ ಇರುವ ಕೆಲವರು ತಮ್ಮ ಸನ್ನಡತೆ ಗಮನಿಸಿ, ರೌಡಿಶೀಟರ್ ಪಟ್ಟಿಯಿಂದ ಕೈ ಬಿಡುವಂತೆ ಎಸ್‌ಪಿಗೆ ಮನವಿ ಮಾಡಿದರು. ಜಿಲ್ಲಾ ವಿಶೇಷ ವಿಭಾಗದ ಇನ್ಸ್‌ಪೆಕ್ಟರ್ ಪುಲಕೇಶ ನೀಲಗಾರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
ಹೊಸ ವರ್ಷದ ಕೊಡುಗೆ: ಬೈಸಿಕಲ್ ಉತ್ತೇಜನಕ್ಕೆ ಉಚಿತ ರೈಡ್
Laxmi Hebbalkar ಮತ್ತೊಂದು ದೂರು ನೀಡಿದ ಅನಂತರವಷ್ಟೇ ಮುಂದಿನ ಕ್ರಮ: ಹೊರಟ್ಟಿ
Hubballi: ಹಳೇ ವೈಷಮ್ಯದಿಂದ ಸಹಚರರೊಂದಿಗೆ ಸೇರಿ ಹಲ್ಲೆ; ವ್ಯಕ್ತಿ ಮೃತ್ಯು
Hubli: ತುಂಬು ಗರ್ಭಿಣಿ ಸಾವು; ಪತಿಯೂ ಆತ್ಮಹತ್ಯೆ ಯತ್ನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ
Bidar; ಗುತ್ತಿಗೆದಾರ ಸಚಿನ್ ಕೇಸ್; ತನಿಖೆ ಆರಂಭಿಸಿದ ಸಿಐಡಿ ತಂಡ
Prajwal Devaraj; ಶಿವರಾತ್ರಿಗೆ ʼರಾಕ್ಷಸʼ ಅಬ್ಬರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.