ಐಟಿ ಈಗಲೂ ಉದ್ಯೋಗ ಭಾಗ್ಯದ ಬಾಗಿಲು: ಮೋಹನದಾಸ್ ಪೈ


Team Udayavani, Aug 28, 2022, 6:27 PM IST

ಐಟಿ ಈಗಲೂ ಉದ್ಯೋಗ ಭಾಗ್ಯದ ಬಾಗಿಲು: ಮೋಹನದಾಸ್ ಪೈ

ಧಾರವಾಡ: ಮಾಹಿತಿ ತಂತ್ರಜ್ಞಾನ ಕ್ಷೇತ್ರವು ಯುವ ಜನಾಂಗಕ್ಕೆ ಉದ್ಯೋಗ ನೀಡುವ ಭಾಗ್ಯದ ಬಾಗಿಲಾಗಿದ್ದು ಇದರ ಪರಿಪೂರ್ಣ ಬಳಕೆಗೆ ಪೂರಕ ಮಾನವ ಸಂಪನ್ಮೂಲವನ್ನು ದೇಶ ಸೃಜಿಸಿಕೊಡಬೇಕಿದೆ ಎಂದು ಐಟಿ ದಿಗ್ಗಜ ಹಾಗೂ ಮಣಿಪಾಲ ಗ್ಲೋಬಲ್ ಎಜ್ಯುಕೇಶನ ಸಂಸ್ಥೆ ಅಧ್ಯಕ್ಷ ಟಿ.ವಿ.ಮೋಹನದಾಸ್ ಪೈ ಅಭಿಪ್ರಾಯ ಪಟ್ಟರು.

ಇಲ್ಲಿನ ತಡಸಿನಕೊಪ್ಪ ಬಳಿಯ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯ 4ನೇ ವರ್ಷದ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

140 ಕೋಟಿ ಜನಸಂಖ್ಯೆ ಇರುವ ದೇಶದಲ್ಲಿ ಇಂದಿಗೂ ಐಐಟಿ ಮತ್ತು ಐಐಐಟಿಯಿಂದ ಪದವಿ ಪಡೆಯುವವರ ಸಂಖ್ಯೆ ಬರೀ ಸಾವಿರಗಳಲ್ಲಿದೆ. ಇದು ಇಲ್ಲಿನ ಶಿಕ್ಷಣ ವ್ಯವಸ್ಥೆ ಮತ್ತು ಪ್ರಾಧ್ಯಾಪಕರು ತಲೆತಗ್ಗಿಸುವಂತ ವಿಚಾರವಾಗಿದ್ದು, ಮುಂದಿನ ದಿನಗಳಲ್ಲಿ ಇದನ್ನು ಸರಿದೂಗಿಸಬೇಕು. ಅಮೆರಿಕಾ ದೇಶವನ್ನು ಹೊರತು ಪಡೆಸಿದರೆ ಅತ್ಯಂತ ಹೆಚ್ಚು ಐಟಿ ಕ್ಷೇತ್ರದ ಬೆಳವಣಿಗೆ ಭಾರತದಲ್ಲಿಯೇ ನಡೆಯುತ್ತಿದೆ. 2035ರ ವರೆಗೂ ಐಟಿ ಕ್ಷೇತ್ರದಲ್ಲಿ ಲಕ್ಷ ಲಕ್ಷ ಉದ್ಯೋಗಾವಕಾಶಗಳು ಸೃಷ್ಠಿಯಾಗಲಿದ್ದು, ಅದಕ್ಕೆ ತಕ್ಕಂತೆ ನಮ್ಮ ದೇಶ ಮತ್ತು ಕರ್ನಾಟಕ ರಾಜ್ಯದಲ್ಲಿ ಹೆಚ್ಚು ಹೆಚ್ಚು ಯುವಕರಿಗೆ ತಾಂತ್ರಿಕ ಅದರಲ್ಲೂ ಐಟಿ ಶಿಕ್ಷಣ ನೀಡಬಹುದಾಗಿದೆ ಎಂದರು.

ವಿಶ್ವದಲ್ಲಿಯೇ ಇಂದು ಬೆಂಗಳೂರು ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಕಣಿವೆ ಎಂಬಂತೆ ಗುರುತಿಸಿಕೊಂಡಿದೆ. ಒಂದು ಕೋಟಿ ಜನಸಂಖ್ಯೆಯ ಈ ನಗರದಲ್ಲಿ 21 ಲಕ್ಷ ಉದ್ಯೋಗಿಗಳು ಸಾಪ್ಟವೇರ್ ಇಂಜೀನಿಯರಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. 2032 ರ ವೇಳೆಗೆ ಇಡೀ ವಿಶ್ವದಲ್ಲಿಯೇ ಅತೀ ಹೆಚ್ಚು ಸಾಪ್ಟವೇರ್ ಉದ್ಯೋಗಿಗಳು ಭಾರತದಲ್ಲಿರಲಿದ್ದಾರೆ ಎಂದು ಪೈ ಅಭಿಪ್ರಾಯ ಪಟ್ಟರು.

ಮಾನವ ಸಂಪನ್ಮೂಲವೇ ಆಸ್ತಿ :

ಭಾರತ ಮತ್ತು ಕರ್ನಾಟಕಕ್ಕೆ ಐಟಿ, ಕೈಗಾರಿಕೆ ಮತ್ತು ಸೇವಾ ವಲಯದ ಕ್ಷೇತ್ರಗಳಿಗೆ ಬೇಕಾಗುವ ಅತ್ಯಂತ ಉತ್ಕೃಷ್ಠವಾದ ಮಾನವ ಸಂಪನ್ಮೂಲವನ್ನು ಸೃಜಿಸುವ ಶಕ್ತಿ ಇದೆ. ಇದೇ ನಮ್ಮ ದೊಡ್ಡ ಬಂಡವಾಳವಾಗಿದ್ದು, ಇಂದು ಅಮೇರಿಕಾ,ಚೀನಾ ಸೇರಿದಂತೆ ಎಲ್ಲಾ ರಾಷ್ಟ್ರಗಳಲ್ಲೂ ಸಿಂಹಪಾಲು ಭಾರತೀಯರೇ  ಉದ್ಯೋಗದಲ್ಲಿದ್ದಾರೆ.

ದೇಶದಲ್ಲಿನ 1100 ವಿಶ್ವವಿದ್ಯಾಲಯಗಳು,54 ಸಾವಿರ ಉನ್ನತ ಶಿಕ್ಷಣ ಸಂಸ್ಥೆಗಳು ದೇಶದಲ್ಲಿದ್ದರೂ ಅಂತರಾಷ್ಟ್ರೀಯ ಮಟ್ಟದ ಶಿಕ್ಷಣವನ್ನು ನೀಡಲಾಗುತ್ತಿಲ್ಲ. ಆದರೆ ಇದೀಗ ತಾಂತ್ರಿಕ ಶಿಕ್ಷಣದ ದೃಷ್ಠಿಯಿಂದ ಭಾರತೀಯ ಮಾನವ ಸಂಪನ್ಮೂಲಕ್ಕೆ ವಿಶ್ವದಲ್ಲಿಯೇ ಬೇಡಿಕೆ ಇದ್ದು, ಇದು ದೇಶದ ಅರ್ಥವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಲು ಸಹಾಯಕವಾಗಲಿದೆ ಎಂದು ಮೋಹನದಾಸ್ ಪೈ ಅಭಿಪ್ರಾಯ ಪಟ್ಟರು.

ಮಹಿಳೆಯರು ದೇಶ ಕಟ್ಟುತ್ತಾರೆ : ಇನ್ನು ಐಟಿಬಿಟಿ ಕ್ಷೇತ್ರದಲ್ಲಿ ಯುವತಿಯರು ಅತ್ಯಂತ ಶ್ರದ್ಧೆಯಿಂದ ಕಲಿಕೆ ಆರಂಭಿಸಿದ್ದು, ಹೆಚ್ಚು ಉದ್ಯೋಗಗಳು ಅವರ ಪಾಲಾಗುತ್ತಿರುವುದು ಖುಷಿಯ ಸಂಗತಿ. ಎಂದಿದ್ದರೂ ಮಹಿಳೆಯಿಂದ ಆಗುವ ಕೆಲಸಗಳು ದಕ್ಷತೆಯಿಂದಲೇ ಕೂಡಿರುತ್ತವೆ. ಈ ನಿಟ್ಟಿನಲ್ಲಿ ಮುಂಬರುವ ದಶಕಗಳು ಮಹಿಳೆಯರದ್ದೇ ಆಗಿರಲಿದ್ದು, ಅವರು ದೇಶ ಕಟ್ಟಬಲ್ಲರು ಎಂದು ಐಟಿ ಕ್ಷೇತ್ರದಲ್ಲಿನ ಮಹಿಳಾ ಶಕ್ತಿಯನ್ನು ಮೋಹನದಾಸ್ ಪೈ ಶ್ಲಾಘಿಸಿದರು.

ಅತಿಥಿಯಾಗಿ ಪಾಲ್ಗೊಂಡಿದ್ದ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ| ಎಚ್.ಪಿ.ಕಿಂಚಾ ಮಾತನಾಡಿ, ಇಂದು ಪದವಿ ಮುಗಿಸಿದ ವಿದ್ಯಾರ್ಥಿಗಳು ನ್ಯಾನೋ ತಂತ್ರಜ್ಞಾನ, ಕಿರು ಉದ್ಯಮ, ದೊಡ್ಡ ಉದ್ಯಮ, ಕಾಗ್ನೇಟಿವ್ ವಿಜ್ಞಾನ ಮತ್ತು ಆರ್ಥಿಕತೆ ಈ ಐದು ವಿಷಯಗಳನ್ನು ಗಮನದಲ್ಲಿಡಬೇಕು. ತೈತ್ರೇಯ ಉಪನಿಷತ್ತಿನಲ್ಲಿ ಹೇಳಿದಂತೆ ಸತ್ಯದ ದಾರಿಯಲ್ಲೇ ನಡೆದು ಧರ್ಮ ಬಿಡದೇ ಬದುಕಬೇಕು ಎಂದು ಸಲಹೆ ನೀಡಿದರು.

ಐಐಐಟಿಯ ರೆಜಿಸ್ಟ್ರಾರ್ ಪ್ರೊ|ಚೆನ್ನಪ್ಪ ಅಕ್ಕಿ ಅವರು ಐಐಐಟಿಯ ಒಂದು ವರ್ಷದ ಸಾಧನೆ ಪಟ್ಟಿ ಓದಿ ವಿವರಿಸಿದರು. ಹಿರಿಯ ಪ್ರಾಧ್ಯಾಪಕರಾದ ಪ್ರೊ|ಎಚ್.ಎಸ್.ಜಮದಗ್ನಿ, ಧಾರವಾಡ ಐಐಟಿ ಮುಖ್ಯಸ್ಥ ಪ್ರೊ|ಪಿ.ಶೇಷು,ಡಾ|ರಾಜೇಂದ್ರ ಹೆಗಡಿ,ಪ್ರೊ|ಕೆ.ಎಂ.ಬಾಲಸುಬ್ರಮಣ್ಯಮೂರ್ತಿ, ಸುನೀತ ವರ್ಮಾ ಸೇರಿದಂತೆ ಗಣ್ಯರು ಹಾಜರಿದ್ದರು.

ಚಿನ್ನದ ಪದಕ ಪ್ರದಾನ :

ಐಐಐಟಿಯ ೪ನೇ ಘಟಿಕೋತ್ಸವದಲ್ಲಿ 2021ನೇ ಸಾಲಿನಲ್ಲಿ ಪದವಿ ಪಡೆದ ಒಟ್ಟು 161ವಿದ್ಯಾರ್ಥಿಗಳು ಕಂಪ್ಯೂಟರ್ ವಿಜ್ಞಾನ ಮತ್ತು ಇಂಜಿನೀಯರಿಂಗ್ ವಿಷಯದಲ್ಲಿ 47 ವಿದ್ಯಾರ್ಥಿಗಳು ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ ಇಂಜಿನೀಯರಿಂಗ್‌ನಲ್ಲಿ ಪದವಿ ಪಡೆದುಕೊಂಡರೆ ನಾಲ್ಕು ಜನ ವಿದ್ಯಾರ್ಥಿಗಳು ಚಿನ್ನದ ಪದ ಪಡೆದರು. ಪಾರ್ವತಿ ಜಯಕುಮಾರ್ ಅವರು ಹೆಚ್ಚು ಚಿನ್ನದ ಪದಕ ಪಡೆದು ಚಿನ್ನದ ಹುಡುಗಿಯಾಗಿ ಹೊರ ಹೊಮ್ಮಿದರು. ವೃಷಭ ದ್ವಿವೇದಿ, ಸ್ಮೀತಾ ಸಾಯಿ ಬುಡ್ಡೆ ಮತ್ತು ನೇಹಾ ದೇವಿದಾಸ್ ಮಹೇಂದ್ರಕರ್ ತಲಾ ಒಂದೊಂದು ಚಿನ್ನದ ಪದಕ ಪಡೆದುಕೊಂಡರು. ಮುಖ್ಯ ಅತಿಥಿಯಾಗಿದ್ದ ಟಿ.ವಿ.ಮೋಹನದಾಸ್ ಪೈ ಮತ್ತು ಪ್ರೊ|ಎಚ್.ಪಿ.ಕಿಂಚಾ ಅವರು ಚಿನ್ನದ ಪದಕ ಪ್ರದಾನ ಮಾಡಿದರು.

ಸಾಧನೆ ಎಂಬುದು ಸರಳ ಜೀವನ, ಧರ್ಮದ ದಾರಿಯಲ್ಲೇ ಆಗಬೇಕು.ದೊಡ್ಡ ಮತ್ತು ಸುಂದರ ಕನಸುಗಳು ಎಲ್ಲರಿಗೂ ಇರಬೇಕು. ಅವುಗಳನ್ನು ಸಾಕಾರ ಮಾಡುತ್ತಲೇ ಉತ್ತಮ ಬದುಕು ಬದುಕಬೇಕು. ಅಂದಾಗಲೇ ಬದುಕಿಗೆ ಸಾರ್ಥಕತೆ ಬರಲಿದೆ.ಟಿ.ಮೋಹನದಾಸ್ ಪೈ,ಐಟಿ ದಿಗ್ಗಜ.

 

ಟಾಪ್ ನ್ಯೂಸ್

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

owaisi (2)

Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು

farukh abdulla

Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

1-jmm

INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

19-cm

Waqf: ರೈತರಿಗೆ ನೀಡಿರುವ ನೋಟಿಸ್‌ ತಕ್ಷಣ ವಾಪಸ್: ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ

Waqf Issue: BJP protest against the Congress government across the state on November 4

Waqf Issue: ನ.4ರಂದು ರಾಜ್ಯಾದ್ಯಂತ ಕಾಂಗ್ರೆಸ್ ಸರ್ಕಾರದ ವಿರುದ್ದ ಬಿಜೆಪಿ ಪ್ರತಿಭಟನೆ

11-highcourt

High Court: ಕ್ರಿಮಿನಲ್‌ ಕೇಸ್‌ ಡೈರಿ ಪ್ರತೀ ಪುಟಕ್ಕೆ ಸಹಿ:ಅರ್ಜಿ ವಜಾಗೊಳಿಸಿದ ಹೈಕೋರ್ಟ್‌

10-

Bengaluru: ಸುವರ್ಣ ಸಂಭ್ರಮದಲ್ಲಿ ರಾಜ್ಯೋತ್ಸವ ವೈಭವ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

attack

Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ

1-reeee

Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.