ನಿವೃತ್ತ ನೌಕರರಿಗೆ 5.20ಲಕ್ಷ ರೂ. ವಂಚನೆ
Team Udayavani, May 16, 2021, 10:24 AM IST
ಹುಬ್ಬಳ್ಳಿ: ನಗರದ ಬಾಲಾಜಿನಗರದ ನಿವೃತ್ತ ನೌಕರರೊಬ್ಬರಿಗೆ ವಂಚಕರು ಸಿಮ್ ಕಾರ್ಡ್ ಡಾಕ್ಯೂಮೆಂಟ್ ವೇರಿಫಿಕೇಶನ್ ಮಾಡುತ್ತೇನೆಂದು ನಂಬಿಸಿ, ಮೊಬೈಲ್‌ನಲ್ಲಿ ಏನಿಡೆಸ್ಕ್ ಅಪ್ಲಿಕೇಶನ್ ಇನ್ ಸ್ಟಾಲ್ ಮಾಡಿಸಿ, ದಂಪತಿ ಖಾತೆಯಿಂದ ಹಂತ ಹಂತವಾಗಿ 5.20ಲಕ್ಷ ರೂ.ಗಳನ್ನು ಅಮೆಜಾನ್ ಆನ್ ಲೈನ್ ಪರ್ಚೇಜ್ ಬಳಸಿಕೊಂಡು ಮೋಸ ಮಾಡಿದ್ದಾರೆ.
ಬಿಕಾಶಚಂದ್ರ ಎಂಬುವರೆ ವಂಚನೆಗೊಂಡಿದ್ದಾರೆ. ಇವರ ಮೊಬೈಲ್ ಅಪರಿಚಿತರು ಕರೆ ಮಾಡಿ, ಸಿಮ್ ಕಾರ್ಡ್ ವೆರಿಫಿಕೇಶನ್ ಪೆಂಡಿಂಗ್ ಇದೆ. ಕಸ್ಟಮರ್ ಕೇರ್ ಸರ್ವಿಸ್ ಸಂಖ್ಯೆಗೆ ಕರೆ ಮಾಡಿ, ಇಲ್ಲವಾದರೆ 24ಗಂಟೆಯೊಳಗೆ ಬ್ಲಾಕ್ ಮಾಡುತ್ತೇವೆಂದು ನಂಬಿಸಿದ್ದಾರೆ.
ನಂತರ ಡಾಕ್ಯುಮೆಂಟ್ ವೆರಿಫಿಕೇಶನ್ ಮಾಡುತ್ತೇವೆಂದು ಹೇಳಿ, ದಂಪತಿಯ ಬ್ಯಾಂಕ್‌ನ ಖಾತೆಯ ಗೌಪ್ಯಮಾಹಿತಿಯನ್ನು ಏನಿಡೆಸ್ಕ್ ಅಪ್ಲಿಕೇಶನ್ ಮೂಲಕ ಪಡೆದಿದ್ದಾರೆ. ದಂಪತಿಯ ಜಂಟಿ ಖಾತೆಗೆ 5.17ಲಕ್ಷ ರೂ.ವರ್ಗಾಯಿಸಿಕೊಂಡು, ನಂತರ ಅದನ್ನು ಬಿಕಾಶಚಂದ್ರರ ಪತ್ನಿ ಖಾತೆಗೆ ವರ್ಗಾವಣೆ ಮಾಡಿ, ಆ ಖಾತೆಯಿಂದಹಂತ ಹಂತವಾಗಿ 50 ಸಾವಿರ ರೂ.ಗಳಂತೆ ಹತ್ತು ಬಾರಿ ಮತ್ತು 20ಸಾವಿರ ರೂ.ವನ್ನು ಅಮೆಜಾನ್ ಆನ್‌ಲೈನ್ ಪರ್ಚೇಜ್ ಉಪಯೋಗಿಸಿಕೊಂಡು ವಂಚಿಸಿದ್ದಾರೆ. ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಕಲಿ ಫೇಸ್‌ಬುಕ್ ಖಾತೆ ಸೃಷ್ಟಿಸಿ ಗೌರವಕ್ಕೆ ಧಕ್ಕೆ: ನಗರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಇಲ್ಲಿನ ಕೇಶ್ವಾಪುರ ಮಧುರಾ ಪ್ಲಾಟ್ಸ್‌ನ ಯುವತಿಯೊಬ್ಬರ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ ಸೃಷ್ಟಿಸಿ, ಅವರ ಸಂಬಂಧಿಕರು, ಸ್ನೇಹಿತರಿಗೆ ಮತ್ತು ಸಹೋದರನಿಗೆ ಅಶ್ಲೀಲ, ಲೈಂಗಿಕ ಸಂದೇಶ ಕಳುಹಿಸಿದ್ದಲ್ಲದೆ, ಇನ್ನೊಂದು ನಕಲಿ ಖಾತೆ ಸೃಷ್ಟಿಸಿ ಅನಾಮಧೇಯರಿಗೆ ಯುವತಿಯ ಫೋಟೋ, ನಿಂದನೆಯ ಸಂದೇಶಗಳನ್ನು ಕಳುಹಿಸಿ ಗೌರವ, ಘನತೆಗೆ ಧಕ್ಕೆ ತಂದಿದ್ದಾರೆ. ಈ ಕುರಿತು ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಅಪ್ರಾಪ್ತೆಯೊಂದಿಗೆ ಅನುಚಿತ ವರ್ತನೆ: ಮುಖ್ಯ ಪೇದೆ ವಿರುದ್ದ ಪೋಕ್ಸೋ ಕೇಸ್
Hubli: ಹಣಕಾಸು ಆಯೋಗದ ಅನ್ಯಾಯದ ಬಗ್ಗೆ ಬಿಜೆಪಿಯರಿಂದ ಮೌನ: ಸಿದ್ದರಾಮಯ್ಯ ಕಿಡಿ
Hubli: ಜನರ ದಿಕ್ಕು ತಪ್ಪಿಸಲು ಬಿಜೆಪಿಯಿಂದ ವಕ್ಫ್ ಹೋರಾಟ: ಸಿಎಂ ಸಿದ್ದರಾಮಯ್ಯ
By Election: ಶಿಗ್ಗಾವಿ ಸಮರ: ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಮುಖಂಡರ ಸಭೆ
Waqf ಗೆಜೆಟ್ ನೋಟಿಫಿಕೇಶನ್ ನಲ್ಲಿ ಬಿಜೆಪಿ ಪಾಲಿದೆ: ಎಚ್.ಕೆ. ಪಾಟೀಲ್ ಕಿಡಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.