ಒಂದೇ ತಿಂಗಳಲ್ಲಿ 51,000 ಜನ ವಿಮಾನಯಾನ
Team Udayavani, Dec 30, 2018, 10:32 AM IST
ಹುಬ್ಬಳ್ಳಿ: ನಗರದಲ್ಲಿ ವಿಮಾನ ಪ್ರಯಾಣಿಕರ ಸಂಖ್ಯೆ ತಿಂಗಳಿನಿಂದ ತಿಂಗಳಿಗೆ ವೃದ್ಧಿಯಾಗುತ್ತಿದ್ದು, ಇದೀಗ ತಿಂಗಳಿಗೆ ವಿಮಾನಯಾನ ಕೈಗೊಳ್ಳುವ ಪ್ರವಾಸಿಗರ ಸಂಖ್ಯೆ 50 ಸಾವಿರ ದಾಟಿದೆ. ನವೆಂಬರ್ ತಿಂಗಳವೊಂದರಲ್ಲೇ ಹುಬ್ಬಳ್ಳಿಯಿಂದ ಅಹ್ಮದಾಬಾದ್, ಬೆಂಗಳೂರು, ಚೆನೈ, ಗೋವಾ, ಹೈದರಾಬಾದ್, ಜಬಲಪುರ, ಕೊಚ್ಚಿ, ಮಂಗಳೂರು, ಮುಂಬಯಿಗೆ ಪ್ರಯಾಣಿಸಿದವರ ಸಂಖ್ಯೆ 51,699ರಷ್ಟಾಗಿದೆ. ಜುಲೈ ತಿಂಗಳಲ್ಲಿ ವಿಮಾನಯಾನಿಗಳ ಸಂಖ್ಯೆ 45,548ರಷ್ಟಿತ್ತು.
ನವೆಂಬರ್ ತಿಂಗಳಲ್ಲಿ ಹುಬ್ಬಳ್ಳಿಯಿಂದ ಅಹ್ಮದಾಬಾದ್‌ಗೆ 4,114 ಜನರು ವಿಮಾನಯಾನ ಮಾಡಿದರೆ, ಅಹ್ಮದಾಬಾದ್‌ನಿಂದ ಹುಬ್ಬಳ್ಳಿಗೆ 4,369 ಪ್ರಯಾಣಿಕರು ಆಗಮಿಸಿದ್ದಾರೆ. ಅದೇ ರೀತಿ ಹುಬ್ಬಳ್ಳಿಯಿಂದ ಬೆಂಗಳೂರಿಗೆ 10,102, ಬೆಂಗಳೂರಿನಿಂದ ಹುಬ್ಬಳ್ಳಿಗೆ 9,924, ಹುಬ್ಬಳ್ಳಿಯಿಂದ ಚೆನೈಗೆ 3,619, ಚೆನೈ ನಿಂದ ಹುಬ್ಬಳ್ಳಿಗೆ 3,638, ಹುಬ್ಬಳ್ಳಿಯಿಂದ ಗೋವಾಕ್ಕೆ 18,894, ಗೋವಾದಿಂದ ಹುಬ್ಬಳ್ಳಿಗೆ 1,397, ಹುಬ್ಬಳ್ಳಿಯಿಂದ ಹೈದರಾಬಾದ್‌ಗೆ 2,059, ಹೈದರಾಬಾದ್‌ನಿಂದ ಹುಬ್ಬಳ್ಳಿಗೆ 1,997, ಹುಬ್ಬಳ್ಳಿಯಿಂದ ಜಬಲಪುರಕ್ಕೆ 14, ಜಬಲಪುರದಿಂದ ಹುಬ್ಬಳ್ಳಿಗೆ 14, ಹುಬ್ಬಳ್ಳಿಯಿಂದ ಕೊಚ್ಚಿಗೆ 1,444, ಕೊಚ್ಚಿಯಿಂದ ಹುಬ್ಬಳ್ಳಿಗೆ 1,451, ಹುಬ್ಬಳ್ಳಿಯಿಂದ ಮಂಗಳೂರಿಗೆ 120, ಮಂಗಳೂರಿನಿಂದ ಹುಬ್ಬಳ್ಳಿಗೆ 80 ಹಾಗೂ ಹುಬ್ಬಳ್ಳಿಯಿಂದ ಮುಂಬಯಿಗೆ 2,703, ಮುಂಬಯಿಯಿಂದ ಹುಬ್ಬಳ್ಳಿಗೆ 2,765 ಪ್ರಯಾಣಿಕರು ವಿಮಾನಯಾನ ಮಾಡಿದ್ದಾರೆ.
ನವೆಂಬರ್‌ನಲ್ಲಿ ವಿಮಾನಯಾನ ಮೂಲಕ ಹುಬ್ಬಳ್ಳಿಯಿಂದ ವಿವಿಧ ಪ್ರದೇಶಗಳಿಗೆ ತೆರಳುವ ವಿಮಾನ ಪ್ರಯಾಣಿಕರ ಸಂಖ್ಯೆಯು 26,064 ಆಗಿದ್ದರೆ, ವಿವಿಧ ಸ್ಥಳಗಳಿಂದ ಹುಬ್ಬಳ್ಳಿಗೆ ಆಗಮಿಸುವವರ ಸಂಖ್ಯೆಯು 25,635 ಆಗಿದೆ. ಜೊತೆಗೆ ಹುಬ್ಬಳ್ಳಿಯಿಂದ ವಿವಿಧ ಪ್ರದೇಶಗಳಿಗೆ ಸರಕು, ಕೊರಿಯರ್ ಸಾಗಾಟವು 10.3 ಟನ್ ಆಗಿದ್ದರೆ, ಇನ್ನಿತರೆ ಪ್ರದೇಶಗಳಿಂದ ಹುಬ್ಬಳ್ಳಿಗೆ 15.7 ಟನ್ ಬಂದಿದೆ. ಒಟ್ಟಾರೆ 25.9 ಟನ್‌ದಷ್ಟು ಸರಕು, ಕೊರಿಯರ್ ಸಾಗಾಟವಾಗಿದೆ ಎಂದು ತಿಳಿದು ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ವರೂರಿನ ನವಗ್ರಹ ತೀರ್ಥ ಕ್ಷೇತ್ರದಲ್ಲಿ ಜ. 15ರಿಂದ 26ರವರೆಗೆ ಮಹಾಮಸ್ತಕಾಭಿಷೇಕ
Hubli; ಅಯ್ಯಪ್ಪ ಶಿಬಿರದಲ್ಲಿ ಸಿಲಿಂಡರ್ ಸ್ಪೋಟ ಪ್ರಕರಣ; ನಾಲ್ಕಕ್ಕೇರಿದ ಮೃತರ ಸಂಖ್ಯೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
Negotiation: ಹೆಬ್ಬಾಳ್ಕರ್-ಸಿ.ಟಿ.ರವಿ ಪ್ರಕರಣ ಸಂಧಾನಕ್ಕೆ ಸಿದ್ಧ: ಬಸವರಾಜ ಹೊರಟ್ಟಿ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Security ನೀಡುವಂತೆ ಕೇಂದ್ರ ಸಚಿವರಿಗೆ ಸ್ನೇಹಮಯಿ ಪತ್ರ
Puttur: ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಕಾರು; ಮೂವರ ದುರ್ಮರಣ
INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್ ಪಂತ್ ವಿರುದ್ದ ಕಿಡಿಕಾರಿದ ಗಾವಸ್ಕರ್
Hathras: ಶಾಲೆಗೆ ರಜೆ ಸಿಗಬೇಕೆಂದು 2ನೇ ತರಗತಿ ಮಗುವನ್ನು ಕೊಂದ ವಿದ್ಯಾರ್ಥಿ!
Meghalaya: ಚರ್ಚ್‌ಗೆ ನುಗ್ಗಿ ಜೈ ಶ್ರೀರಾಮ್ ಘೋಷಣೆ: ಕೇಸು ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.