662 ನಿರುದ್ಯೋಗಿಗಳಿಗೆ ಕೆಲಸ: ಶಿವಲೀಲಾ ಕುಲಕರ್ಣಿ
Team Udayavani, Feb 27, 2017, 1:32 PM IST
ಧಾರವಾಡ: ಜೆಎಸ್‌ಎಸ್ ಕಾಲೇಜಿನಲ್ಲಿ ರವಿವಾರ ನಡೆದ ಉದ್ಯೋಗ ಮೇಳದಲ್ಲಿ ಒಟ್ಟು 662 ಜನರಿಗೆ ಉದ್ಯೋಗ ಲಭಿಸಿದ್ದು, ಉದ್ಯೋಗ ಮೇಳ ಯಶಸ್ವಿಯಾಗಿದೆ ಎಂದು ವೈಶುದೀಪ ಫೌಂಡೇಶನ್ ಕಾರ್ಯದರ್ಶಿ ಶಿವಲೀಲಾ ಕುಲಕರ್ಣಿ ಹೇಳಿದರು. ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಈ ಉದ್ಯೋಗ ಮೇಳದಲ್ಲಿ ಒಟ್ಟು 3086 ಜನರು ನೋಂದಣಿ ಮಾಡಿಸಿಕೊಂಡಿದ್ದರು. ಒಟ್ಟು 91 ಕಂಪನಿಗಳು ಭಾಗಿಯಾಗಿದ್ದವು. ರವಿವಾರ ಸಂಜೆ ವರೆಗೂ ವಿವಿಧ ಕಂಪನಿಗಳು ತಮಗೆ ಅಗತ್ಯವಿರುವ ಅಭ್ಯರ್ಥಿಗಳನ್ನು ನೇರವಾಗಿ ನೇಮಕ ಮಾಡಿಕೊಂಡಿವೆ ಎಂದರು.
ಒಂದೇ ದಿನದಲ್ಲಿ 662 ಜನರಿಗೆ ಉದ್ಯೋಗ ಸಿಕ್ಕಿದ್ದು, 1088 ಜನರು ಅಂತಿಮ (ಶಾರ್ಟ್‌ಲಿಸ್ಟ್) ಪಟ್ಟಿಯಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದಾರೆ. ಧಾರವಾಡ, ಬೆಳಗಾವಿ, ಉತ್ತರ ಕನ್ನಡ, ಗದಗ ಮತ್ತು ಹಾವೇರಿ ಜಿಲ್ಲೆಗಳಿಂದ ಉದ್ಯೋಗ ಅರಸಿಕೊಂಡು ಬಂದಿದ್ದವರಿಗೆ ಈ ಉದ್ಯೋಗ ಮೇಳ ಸಹಾಯ ಮಾಡಿದೆ ಎಂದರು.
ಎಸ್ಸೆಸ್ಸೆಲ್ಸಿಗಿಂತ ಕಡಿಮೆ ವಿದ್ಯಾರ್ಹತೆ ಹೊಂದಿದ 112, ಎಸ್ಸೆಸ್ಸೆಲ್ಸಿ ಉತ್ತೀರ್ಣ 367, ಪಿಯುಸಿ ಉತ್ತೀರ್ಣ 281, ಐಟಿಐ ಹಾಗೂ ಜೆಒಸಿ ಉತ್ತೀರ್ಣ 589, ಡಿಪೊÉàಮಾ ಉತ್ತೀರ್ಣ 405, ಪದವೀಧರರು 739, ಸ್ನಾತಕೋತ್ತರ ಪದವೀಧರರು 270 ಹಾಗೂ ಬಿ.ಇ ಮತ್ತು ಬಿ ಟೆಕ್ 323 ಅಭ್ಯರ್ಥಿಗಳು ಒಟ್ಟು 91 ಕಂಪನಿಗಳ ಸಂದರ್ಶನಕ್ಕೆ ಹಾಜರಾಗಿದ್ದರು. ಸ್ಥಳದಲ್ಲಿಯೇ 662 ಆಕಾಂಕ್ಷಿಗಳಿಗೆ ನೇಮಕಾತಿ ಪತ್ರ ವಿತರಿಸಲಾಗಿದೆ ಎಂದು ಶಿವಲೀಲಾ ಅವರು ಹೇಳಿದರು.
ಮಾರ್ಚ್ 15ಕ್ಕೆ ಶಿಬಿರ: ಐಟಿಐ ಪಾಸು ಮಾಡಿದ ವಿದ್ಯಾರ್ಥಿಗಳಿಗೆ ಸಾಕಷ್ಟು ಅವಕಾಶಗಳಿದ್ದು, ಆನ್‌ಲೈನ್ ಅರ್ಜಿ ತುಂಬುವುದು ಸೇರಿದಂತೆ ವಿವಿಧ ವಿಚಾರಗಳ ಕುರಿತು ಅವರಿಗೆ ಮಾರ್ಚ್ 15ರಿಂದ ಒಟ್ಟು 15 ದಿನಗಳ ಕಾಲ ಅವರಿಗೆ ತರಬೇತಿ ನೀಡುತ್ತೇವೆ.
ಅದೇ ರೀತಿ ಮಾರ್ಚ್ 20ರಿಂದ ಸೈನಿಕ ನೇಮಕಾತಿಯ ಕುರಿತು ಉದ್ಯೋಗ ತರಬೇತಿ ಶಿಬಿರ ಆಯೋಜಿಸಲಾಗಿದೆ. ನೋಂದಣಿ ಮಾಡಬಯಸುವ ಆಕಾಂಕ್ಷಿಗಳು ವಿದ್ಯಾಸ್ನೇಹಿಯ ಟೋಲ್ ಫ್ರೀ ಸಂಖ್ಯೆ 18004255540ಗೆ ಕರೆ ಮಾಡಬಹುದು ಎಂದು ವೈಶುದೀಪ ಫೌಂಡೇಶನ್ ಕಾರ್ಯದರ್ಶಿ ಶಿವಲೀಲಾ ಕುಲಕರ್ಣಿ ತಿಳಿಸಿದರು.
ಈ ಸಂದರ್ಭದಲ್ಲಿ ವೈಶುದೀಪ ಫೌಂಡೇಶನ್ ಟ್ರಸ್ಟಿಗಳಾದ ಅಮೃತ ಬಳ್ಳೊಳ್ಳಿ, ರಾಜಶೇಖ ನಾಯ್ಕಲ್, ಮನೋಜ ಕರ್ಜಗಿ, ಶಶಿಕಲಾ ಬಸವರಡ್ಡಿ, ಮಹಾನಗರ ಪಾಲಿಕೆ ಸದಸ್ಯೆ ಮೀನಾಕ್ಷಿ ಸಂತಬಾ, ಉದ್ಯೋಗ ಮತ್ತು ತರಬೇತಿ ಇಲಾಖೆಯ ಜಂಟಿ ನಿರ್ದೇಶಕ ಪಿ. ರಮೇಶ ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.