7353 ವಲಸಿಗರು ರೈಲಿನಲ್ಲಿ ತವರಿಗೆ
Team Udayavani, May 12, 2020, 4:35 AM IST
ಹುಬ್ಬಳ್ಳಿ: ಲಾಕ್‌ಡೌನ್‌ನಿಂದ ರಾಜ್ಯದಲ್ಲಿ ಸಿಲುಕಿಕೊಂಡಿದ್ದವರನ್ನು ನೈರುತ್ಯ ರೈಲ್ವೆ ವಲಯದ ಆರು ರೈಲುಗಳ ಮೂಲಕ 7,353 ಜನರನ್ನು ಅವರ ರಾಜ್ಯಕ್ಕೆ ತಲುಪಿಸಲು ಶ್ರಮಿಕ ರೈಲುಗಳನ್ನು ಕಾರ್ಯಾಚರಣೆಗೆ ಒಳಪಡಿಸಲಾಯಿತು.
ಮೊದಲ ರೈಲು ಬೆಂಗಳೂರಿನ ಚಿಕ್ಕಬಾಣಾವರದಿಂದ ಉದಾಮಪುರಕ್ಕೆ 985 ಪ್ರಯಾಣಿಕರನ್ನು ಹೊತ್ತು ಪ್ರಯಾಣ ಬೆಳೆಸಿತು. ಮಧ್ಯಾಹ್ನ 2:10 ಗಂಟೆಗೆ 1200 ಪ್ರಯಾಣಿಕರು ಹಾಗೂ 47 ಮಕ್ಕಳಿದ್ದ ರೈಲು ಮಾಳೂರಿನಿಂದ ಪಶ್ಚಿಮ ಬಂಗಾಳದ ಬಾಣಕುರಗೆ ತೆರಳಿತು. ಸಂಜೆ 4:06 ಗಂಟೆಗೆ ಚಿಕ್ಕಬಾಣವಾರದಿಂದ ಮಧ್ಯ ಪ್ರದೇಶದ ಗ್ವಾಲಿಯರ್‌ಗೆ ರತೆರಳಿದ್ದು, 1608 ಪ್ರಯಾಣಿಕರಿದ್ದರು. 4:55 ಗಂಟೆಗೆ ಮಾಳೂರುದಿಂದ ಬಿಹಾರದ ಢಾಣಾಪುರಕ್ಕೆ 1200 ಪ್ರಯಾಣಿಕರನ್ನು ಕಳುಹಿಸಲಾಯಿತು. ಸಂಜೆ 5:55 ಗಂಟೆಗೆ ಚಿಕ್ಕಬಾಣವಾರದಿಂದ ಉತ್ತರ ಪ್ರದೇಶದ ಗೋರಖಪುರಕ್ಕೆ 1200 ಪ್ರಯಾಣಿಕರು ತೆರಳಿದರು. ರಾತ್ರಿ 7:55 ಗಂಟೆಗೆ 1160 ಪ್ರಯಾಣಿಕರು ಚಿಕ್ಕಬಾಣವಾರದಿಂದ ತ್ರಿಪುರಾದ ಅಗರ್ತಲಾಕ್ಕೆ ತೆರಳಿದರು.
ಅಲ್ಲಲ್ಲಿ ತಂಗಿದ್ದ ವಲಸಿಗರನ್ನು ಬಿಎಂಟಿಸಿ ಬಸ್‌ಗಳ ಮೂಲಕ ರೈಲ್ವೆ ನಿಲ್ದಾಣಕ್ಕೆ ತಲುಪಿಸಲಾಯಿತು. ಪ್ರತಿಯೊಬ್ಬರ ಮಾಹಿತಿ ಪಡೆದು, ಅವರ ಆರೋಗ್ಯ ತಪಾಸಣೆ ಮಾಡಿಸಲಾಯಿತು. ರಾಜ್ಯ ಸರಕಾರದ ಬೇಡಿಕೆ ಮೇರೆಗೆ ಶ್ರಮಿಕ ರೈಲುಗಳ ಕಾರ್ಯಾಚರಣೆ ಮಾಡಲಾಗುತ್ತಿದೆ. ವಲಸಿಗರಲ್ಲಿ ಕಾರ್ಮಿಕರು, ಉದ್ಯೋಗಿಗಳು, ವಿದ್ಯಾರ್ಥಿಗಳು, ಪ್ರವಾಸಿಗರು ಇದ್ದಾರೆ. ಮಾರ್ಗ ಮಧ್ಯದಲ್ಲಿ ಪ್ರಯಾಣಿಕರಿಗೆ ಆಹಾರ, ನೀರು, ಮಜ್ಜಿಗೆ ವ್ಯವಸ್ಥೆ ಮಾಡಲಾಗಿದೆ. ಸಾಮಾಜಿಕ ಅಂತರಕ್ಕೆ ಮೊದಲ ಆದ್ಯತೆ ನೀಡಲಾಗಿದೆ ಎಂದು ನೈರುತ್ಯ ರೈಲ್ವೆ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್ ಲಾಡ್
Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ
KLE Technological University: ಮುರುಗೇಶ್ ನಿರಾಣಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ
NABARD ನಿರ್ಧಾರದಿಂದ ಕೃಷಿಗೆ ಹಿನ್ನಡೆ; ಸಾಲದ ಮೊತ್ತ ಕಡಿತ ಮಾಡದಿರಲು ಸಚಿವ ಪಾಟೀಲ ಆಗ್ರಹ
ಸಿಎಂ ಆಗಿದ್ದವರು ಈ ರೀತಿ ಹೇಳಿಕೆ ನೀಡುವ ಬದಲು, ಸ್ಪಷ್ಟ ಹೇಳಿಕೆ ನೀಡಲಿ: ಸಚಿವ ಶಿವಾನಂದ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.