ವೆಂಟಿಲೇಟರ್‌ನಲ್ಲಿದ್ದು ಕೋವಿಡ್ ವಿರುದ್ಧ ಗೆಲುವು ಕಂಡ 75ರ ಅಜ್ಜಿ
Team Udayavani, May 29, 2021, 4:40 PM IST
ಹುಬ್ಬಳ್ಳಿ: ಕೇಶ್ವಾಪುರದ ಬದಾಮಿನಗರ ನಿವಾಸಿ 75 ವರ್ಷದ ವೃದ್ಧೆಯೊಬ್ಬರು ಕೊರೊನಾ ಸೋಂಕಿನಿಂದ ಗುಣಮುಖರಾಗಿ ಶುಕ್ರವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಹೊನ್ನಮ್ಮ ಎಚ್.ಟಿ. ಕೊರೊನಾ ಗೆದ್ದು ಬಂದ ಅಜ್ಜಿಯಾಗಿದ್ದಾರೆ. ಒಂಭತ್ತು ದಿನಗಳ ಹಿಂದೆ ವಿದ್ಯಾನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ವೆಂಟಿಲೇಟರ್ ಮೇಲೆ ಚಿಕಿತ್ಸೆ ಪಡೆದು ಕೊರೊನಾ ವಿರುದ್ಧ ಹೋರಾಡಿ ಗುಣಮುಖರಾಗಿದ್ದಾರೆ.
ಆಸ್ಪತ್ರೆ ಸಿಬ್ಬಂದಿ ವೃದ್ಧೆಗೆ ಹೂಗುತ್ಛ ಕೊಟ್ಟು ಸಂತೋಷದಿಂದ ಬೀಳ್ಕೊಟ್ಟರು. ಕುಟುಂಬದ ಸದಸ್ಯರು ವೈದ್ಯರ ಚಿಕಿತ್ಸೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಮ್ಮು, ಕಫ ಇತ್ತು. ಇದರಿಂದ ಬಳಲಿದ್ದರು. ಕೋವಿಡ್ ತಪಾಸಣೆ ಮಾಡಿಸಿದಾಗ ಸೋಂಕು ಕಾಣಿಸಿಕೊಂಡಿತ್ತು. ಮೇ 16ರಂದು ಆಸ್ಪತ್ರೆಗೆ ದಾಖಲಿಸಿದಾಗ ವೈದ್ಯರು ಉತ್ತಮ ಚಿಕಿತ್ಸೆ ಕೊಟ್ಟರು. 2 ವಾರ ಆಸ್ಪತ್ರೆಯಲ್ಲಿದ್ದರು. ಅದರಲ್ಲಿ 9 ದಿನ ಮಾತ್ರ ವೆಂಟಿಲೇಟರ್, ಆಕ್ಸಿಜನ್ ಮೇಲೆ ಚಿಕಿತ್ಸೆ ಪಡೆದರು. ಈಗ ಸಂಪೂರ್ಣ ಗುಣಮುಖರಾಗಿದ್ದಾರೆ ಎಂದು ಇವರನ್ನು ಆರೈಕೆ ಮಾಡುತ್ತಿರುವ ಗುಡಗೇರಿಯ ನಾಗರಾಜ “ಉದಯವಾಣಿ’ಗೆ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್ ಕುಮಾರ್
Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ
Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ
Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್ ರೈ
Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.