ಕಲೆಗಳತ್ತ ಒಲವು ತೋರಿದರೆ ಏಕಾಗ್ರತೆ ವೃದ್ಧಿ
ದರ್ಬಾರ ಸಂಗೀತ ಕಲಾ ಸಂಸ್ಥೆ ವಾರ್ಷಿಕೋತ್ಸವ
Team Udayavani, May 3, 2022, 2:05 PM IST
ಧಾರವಾಡ: ಕಲೆ, ಸಾಹಿತ್ಯ, ರಂಗಭೂಮಿ, ಸಂಗೀತದ ಕಡೆ ಮಕ್ಕಳು ಹೆಚ್ಚು ಒಲವು ತೋರಿದರೆ ಏಕಾಗ್ರತೆಯೂ ಹೆಚ್ಚುತ್ತದೆ ಎಂದು ಪಂ| ಸೋಮನಾಥ ಮರಡೂರ ಹೇಳಿದರು.
ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ದರ್ಬಾರ ಸಂಗೀತ ಕಲಾ ಸಂಸ್ಥೆಯು ಪದ್ಮವಿಭೂಷಣ ಪಂ| ಪುಟ್ಟರಾಜ ಕವಿ ಗವಾಯಿಗಳ 109ನೇ ಜನ್ಮದಿನೋತ್ಸವ ಹಾಗೂ ಕಲಾ ಸಂಸ್ಥೆಯ 7ನೇ ವಾರ್ಷಿಕೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಸಂಗೀತೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಲೆಗಳು ತಲೆತಲಾಂತರಗಳಿಂದ ನಮಗೆ ಬಳುವಳಿಯಾಗಿ ಬಂದಿವೆ. ಅವುಗಳನ್ನು ಅಷ್ಟೇ ಪ್ರಾಮಾಣಿಕವಾಗಿ ಮುಂದುವರಿಸಿಕೊಂಡು ಹೋಗಲು ಶ್ರಮಿಸಬೇಕಾಗಿದೆ. ಅದರಲ್ಲೂ ಸಂಗೀತವನ್ನು ನಾವು ನಮ್ಮ ಸಂತೋಷಕ್ಕಾಗಿ ಶ್ರದ್ಧಾ ಭಕ್ತಿಯಿಂದ ಕಲಿಯಬೇಕು ಎಂದರು.
ಕವಿವಿ ಲಲಿತಕಲಾ ಮತ್ತು ಸಂಗೀತ ಮಹಾವಿದ್ಯಾಲಯದ ಪ್ರಾಚಾರ್ಯ ಡಾ| ಶಾಂತಾರಾಮ ಹೆಗಡೆ ಮಾತನಾಡಿ, ನಮ್ಮ ಸಂಗೀತ ಪರಂಪರೆಯ ಇತಿಹಾಸವನ್ನು ಅವಲೋಕಿಸಬೇಕು. ಸಂಗೀತ ಕ್ಷೇತ್ರದಲ್ಲಿ ಗುರು-ಶಿಷ್ಯ ಪರಂಪರೆ ಅವ್ಯಾಹತವಾಗಿ ನಡೆದು ಬಂದಿದ್ದು, ಆ ಪರಂಪರೆಯ ಭಾಗವಾಗಿಯೇ ಈಗ ಸಂಗೀತೋತ್ಸವ ಜರುಗುತ್ತಿರುವುದು ಅಭಿನಂದನೀಯ ಎಂದು ಹೇಳಿದರು.
ಪಂ| ಪುಟ್ಟರಾಜ ಕವಿ ಗವಾಯಿಗಳ ಹೆಸರನ್ನು ತೆಗೆದುಕೊಂಡಾಗ ಅವರ ಕೆಲವೊಂದು ಆದರ್ಶಗಳು ಮೂರ್ತ ಸ್ವರೂಪವಾಗಿ ನಮ್ಮ ಕಣ್ಣೆದುರು ಬರುತ್ತವೆ. ಗುರುವಂದನಾ ಪರಿಪಾಲನೆ, ಶಿವಭಕ್ತಿ ಅನುಷ್ಠಾನ, ದೈವಿಕ ಭೋಗಗಳ ತ್ಯಾಗ, ಜಾತ್ಯತೀತ ಸಮಾನತೆಯ ಭಾವ ಇವೆಲ್ಲವೂ ಮೂರ್ತ ರೂಪವಾಗಿ ಕಂಡುಬರುತ್ತವೆ. ಪಂ| ಪುಟ್ಟರಾಜ ಕವಿಗವಾಯಿಗಳು ಒಬ್ಬ ಶ್ರೇಷ್ಠ ಸಂಗೀತ ಸಂತರಾಗಿ, ಶ್ರೇಷ್ಠ ಗುರುಗಳಾಗಿ, ದೀನ-ದಲಿತರಿಗೆ ದಾರಿದೀಪವಾಗಿ ಬೆಳಕನ್ನು ಕೊಟ್ಟವರಾಗಿದ್ದಾರೆ ಎಂದರು.
ಪಂ| ರಾಜಶೇಖರ ಮನಸೂರ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಡಾ| ವಿಜಯಮಹಾಂತೇಶ ಪೂಜಾರ ಅವರನ್ನು ಸನ್ಮಾನಿಸಲಾಯಿತು.
ಶ್ರೀ ಕುಮಾರೇಶ್ವರ ಕಲ್ಚರಲ್ ಸೊಸೈಟಿ ಅಧ್ಯಕ್ಷ ಪ್ರಕಾಶ ಬಾಳಿಕಾಯಿ, ಸಣ್ಣ ನೀರಾವರಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ಸಿ.ವಿ. ಹಾವನೂರ, ಕಲಾವಿದರಾದ ಸಾತಲಿಂಗಪ್ಪ ಕಲ್ಲೂರ ದೇಸಾಯಿ, ಡಾ| ಶ್ರೀಧರ ಕುಲಕರ್ಣಿ, ಡಾ|ಎ.ಎಲ್. ದೇಸಾಯಿ, ಡಾ| ಗುರುಬಸವ ಮಹಾಮನೆ, ಅನಿಲ ಮೇತ್ರಿ, ಮಹಾದೇವ ಸರಶೆಟ್ಟಿ, ಡಾ| ವೆಂಕಟೇಶ ಮುತ್ತಣ್ಣವರ, ಸುರೇಶ ಶಿಂಗನಳ್ಳಿ, ವಿನಾಯಕ ಇನಾಂದಾರ, ಶರಣಪ್ಪ ಪೂಜಾರ, ಕಲ್ಮೇಶ ಹೂಗಾರ, ವಿನುತ ಆರ್., ಮಂಜುನಾಥ ಅಂಜೂಟಿ, ಬಸವರಾಜ ಶಿರೋಸಿ, ವಿ.ಆರ್. ಪಾಟೀಲ ಇದ್ದರು. ಎನ್.ಬಿ. ದ್ಯಾಪುರ ನಿರೂಪಿಸಿದರು. ಬಸವರಾಜ ಹೂಗಾರ ಸ್ವಾಗತಿಸಿದರು. ಮಲ್ಲೇಶ ಹೂಗಾರ ವಂದಿಸಿದರು.
ಸಂಗೀತೋತ್ಸವ: ನಂತರ ಜರುಗಿದ ಸಂಗೀತೋತ್ಸವದಲ್ಲಿ ಶ್ರೀಧರ ಭಜಂತ್ರಿಯವರ ಶಹನಾಯಿ ವಾದನಕ್ಕೆ ಕಲ್ಮೇಶ ಬಣ್ಣದನೂಲಮಠ ತಬಲಾ ಸಾಥ್ ನೀಡಿದರು. ಕಲಬುರಗಿಯ ಬದರಿನಾಥ ಮುಡಬಿಯವರ ವಯೋಲಿನ್ ವಾದನಕ್ಕೆ ತಬಲಾದಲ್ಲಿ ರಾಜಕುಮಾರ ಮುಡಬಿ ಸಾಥ್ ನೀಡಿದರು. ಕುಮಾರ ಮರಡೂರ ಅವರ ಗಾಯನಕ್ಕೆ ತಬಲಾದಲ್ಲಿ ಶ್ರೀಧರ ಮಾಂಡ್ರೆ ಮತ್ತು ಹಾರ್ಮೋನಿಯಂದಲ್ಲಿ ವಿನೋದ ಪಾಟೀಲ ಸಾಥ್ ನೀಡಿದರು. ತಾನಪೂರದಲ್ಲಿ ಕೃಷ್ಣಾ ಸುತಾರ ಮತ್ತು ಮಣಿಕಂಠ ನಿರ್ವಹಿಸಿದರು. ದರ್ಬಾರ ಸಂಗೀತ ಕಲಾ ಸಂಸ್ಥೆಯ ವಿದ್ಯಾರ್ಥಿಗಳು ಗಾಯನ ಪ್ರಸ್ತುತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
MUST WATCH
ಹೊಸ ಸೇರ್ಪಡೆ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Actor Darshan Bail Case: ಹತ್ಯೆ ಸ್ಥಳದಲ್ಲಿ ದರ್ಶನ್ ಇದ್ರು: ಫೋಟೋ ಸಾಕ್ಷ್ಯ ಲಭ್ಯ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.