ಶಿಥಿಲಾವಸ್ಥೆಯಲ್ಲಿ 822 ಶಾಲಾ ಕೊಠಡಿಗಳು
Team Udayavani, Jul 4, 2018, 4:49 PM IST
ಧಾರವಾಡ: ಮೂಲಸೌಕರ್ಯಗಳಿಲ್ಲದ ಖಾಸಗಿ ಶಾಲೆಗಳ ಮಾನ್ಯತೆ ರದ್ದುಗೊಳಿಸಲು ಮುಂದಾಗಿರುವ ಸಾರ್ವಜನಿಕ ಶಿಕ್ಷಣ ಇಲಾಖೆಗೆ ತನ್ನ ವ್ಯಾಪ್ತಿಯಲ್ಲೇ ಇರುವ ಸರಕಾರಿ ಶಾಲೆಗಳಿಗೆ ಪೂರ್ಣ ಪ್ರಮಾಣದಲ್ಲಿ ಮೂಲಸೌಕರ್ಯ ಒದಗಿಸಲು ಈವರೆಗೂ ಸಾಧ್ಯವಾಗಿಲ್ಲ! ಜಿಲ್ಲೆಯಲ್ಲಿ ಒಟ್ಟು 1251 ಪ್ರಾಥಮಿಕ ಶಾಲೆಗಳು ಹಾಗೂ 442 ಪ್ರೌಢಶಾಲೆಗಳಿವೆ. ಈ ಪೈಕಿ 763 ಸರಕಾರಿ ಶಾಲೆಗಳು, 108 ಸರಕಾರಿ ಪ್ರೌಢಶಾಲೆಗಳಿವೆ. ಇದರಲ್ಲಿ ಕೆಲವೊಂದಿಷ್ಟು ಶಾಲೆಗಳ ಕೊಠಡಿ ಶಿಥಿಲಾವಸ್ಥೆ ತಲುಪಿವೆ. ಇನ್ನೂ ಕೆಲ ಶಾಲೆಗಳಿಗೆ ಈವರೆಗೂ ಸ್ವಂತ ಕಟ್ಟಡಗಳೇ ಇಲ್ಲ. ಇನ್ನೂ ಕೆಲ ಶಾಲೆಗಳ ಮಕ್ಕಳು ಆಟದ ಮೈದಾನಗಳಿಂದ ವಂಚಿತರಾಗುವಂತಾಗಿದೆ.
ಶಾಲೆಗಳ ದುಸ್ಥಿತಿ: ಶಿಕ್ಷಣ ಇಲಾಖೆಯೇ ನೀಡಿರುವ ಅಂಕಿ-ಅಂಶಗಳ ಪ್ರಕಾರ ಜಿಲ್ಲೆಯ 763 ಸರಕಾರಿ ಶಾಲೆಗಳ ಪೈಕಿ 18 ಶಾಲೆಗಳಿಗೆ ಇಂದಿಗೂ ಸ್ವಂತ ಕಟ್ಟಡವಿಲ್ಲ. ಬಾಡಿಗೆ ಕಟ್ಟಡದಲ್ಲಿ ಶಾಲೆಗಳು ಕಾರ್ಯ ನಿರ್ವಹಣೆ ಮಾಡುತ್ತಿವೆ. ಇನ್ನೂ 13 ಶಾಲೆಗಳಿಗೂ ಸ್ವಂತ ಕಟ್ಟಡ ಇಲ್ಲದೆ ಬಾಡಿಗೆ ರಹಿತವಾಗಿ ಶಾಲೆಗಳು ನಡೆಯುತ್ತಾ ಸಾಗಿವೆ. 763 ಸರಕಾರಿ ಶಾಲೆಗಳಲ್ಲಿ ಒಟ್ಟು 5801 ಕೊಠಡಿಗಳಿದ್ದು, ಈ ಪೈಕಿ 4347 ಕೊಠಡಿಗಳು ಮಾತ್ರವೇ ಉತ್ತಮ ಸ್ಥಿತಿಯಲ್ಲಿವೆ. ಉಳಿದಂತೆ ಸಣ್ಣ ಪ್ರಮಾಣದ ದುರಸ್ತಿ ಇರುವ ಕೊಠಡಿಗಳು 680 ಇದ್ದರೆ, ದೊಡ್ಡ ಪ್ರಮಾಣದ ದುರಸ್ತಿ ಇರುವ ಕೊಠಡಿಗಳ ಸಂಖ್ಯೆ 774 ಇದೆ.
ಜಿಲ್ಲೆಯಲ್ಲಿ ಇರುವ 108 ಸರಕಾರಿ ಪ್ರೌಢಶಾಲೆಗಳ ಪೈಕಿ 88 ಶಾಲೆಗಳಿಗಷ್ಟೇ ಸ್ವಂತ ಕಟ್ಟಡವಿದ್ದು, 21 ಶಾಲೆಗಳಿಗೆ ಈವರೆಗೂ ಸ್ವಂತ ಕಟ್ಟಡ ಲಭ್ಯವಾಗಿಲ್ಲ. 88 ಶಾಲೆಗಳ ಒಟ್ಟು 581 ಕೊಠಡಿಗಳಲ್ಲಿ 453 ಕೊಠಡಿಗಳಷ್ಟೇ ಉತ್ತಮ ಸ್ಥಿತಿಯಲ್ಲಿವೆ. ಉಳಿದಂತೆ ಸಣ್ಣ ಪ್ರಮಾಣದ ದುರಸ್ತಿ ಇರುವ ಕೊಠಡಿಗಳು 80 ಇದ್ದರೆ ದೊಡ್ಡ ಪ್ರಮಾಣದ ದುರಸ್ತಿ ಇರುವ ಕೊಠಡಿಗಳು 48 ಇವೆ. ಒಟ್ಟಿನಲ್ಲಿ ಜಿಲ್ಲೆಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಒಟ್ಟು 760 ಕೊಠಡಿಗಳ ಸಣ್ಣ ಪ್ರಮಾಣದಲ್ಲಿ ದುರಸ್ತಿ ಕಾರ್ಯ ಆಗಬೇಕಿದ್ದು, ದೊಡ್ಡ ಪ್ರಮಾಣದಲ್ಲಿ 822 ಕೊಠಡಿಗಳ ದುರಸ್ತಿ ಕಾರ್ಯ ಆಗಬೇಕಿದೆ.
ಇಷ್ಟೆಲ್ಲಾ ಶಾಲಾ ಕೊಠಡಿಗಳು ದುರಸ್ತಿಯಲ್ಲಿ ಇದ್ದರೂ 147 ಕೊಠಡಿಗಳ ದುರಸ್ತಿಗಾಗಿ ಅಷ್ಟೇ ಮಂಜೂರಾತಿ ಸಿಕ್ಕಿದೆ. ಅಲ್ಲದೆ 230 ಶಾಲಾ ಕೊಠಡಿಗಳಿಗೂ ಮಂಜೂರಾತಿ ಲಭಿಸಿದೆ. ಇನ್ನೂ 45 ಬಾಲಕರ ಶೌಚಾಲಯ ಹಾಗೂ 30 ಬಾಲಕಿಯರ ಶೌಚಾಲಯ ಕಾಮಗಾರಿ ಸಹ ಪ್ರಗತಿಯಲ್ಲಿವೆ. ಜಿಲ್ಲೆಯ 532 ಶಾಲೆಗಳಲ್ಲಿ ಆಟದ ಮೈದಾನ ಇಲ್ಲ.
ದುಸ್ಥಿತಿ ಹೇಳತೀರದು: ಜಿಲ್ಲೆಯ ಶಾಲೆಗಳ ದುಸ್ಥಿತಿ ಬಗ್ಗೆ ಧಾರವಾಡ ತಾಲೂಕಿನ ತಡಕೋಡ ಗ್ರಾಮದ ಪ್ರೌಢಶಾಲೆಯೊಂದರ ಈಗಿನ ಸ್ಥಿತಿ ಪುಷ್ಠಿಕರಿಸುವಂತಿದೆ. 1984ರಲ್ಲಿ ಸ್ಥಾಪನೆಗೊಂಡ ಈ ಸರ್ಕಾರಿ ಪ್ರೌಢಶಾಲೆ ಕಟ್ಟಡ ಈಗ ಅಲ್ಲಿಲ್ಲಿ ಬಿರುಕು ಬಿಟ್ಟಿದ್ದು, ಹೆಂಚುಗಳು ಒಡೆದು ಕಿಟಕಿಗಳು ಕಿತ್ತು ಹೋಗಿವೆ. ಕೆಲ ತಿಂಗಳ ಹಿಂದೆ ಇಲ್ಲಿನ ಕೊಠಡಿಯೊಂದರ ಗೋಡೆ ಕುಸಿದು ಬಿದ್ದು, ಅದೃಷ್ಟವಷಾತ್ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದರು. ಇದೀಗ ಇಡೀ ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆ ತಲುಪಿದ್ದು, ಐದು ಕೊಠಡಿಗಳಲ್ಲಿ ಪಾಠ ಮಾಡುವುದನ್ನು ನಿಲ್ಲಿಸಲಾಗಿತ್ತು. ಆದರೆ ತಾತ್ಕಾಲಿಕವಾಗಿ ದುರಸ್ತಿ ಕಾರ್ಯ ಮಾಡಿ ಅಲ್ಲಿಯೇ ಮತ್ತೆ ತರಗತಿ ಆರಂಭಿಸಿದ್ದು, ಆತಂಕ ಮಾತ್ರ ಹಾಗೇ ಇದೆ. ಇಂತಹ ಸಾಕಷ್ಟು ಉದಾಹರಣೆ ಜಿಲ್ಲೆಯಲ್ಲಿದೆ.
ಮೂಲಸೌಕರ್ಯಗಳ ಕೊರತೆ ಹಿನ್ನೆಲೆಯಲ್ಲಿ ಪೋಷಕರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಂದ ಖಾಸಗಿ ಶಾಲೆಗಳಿಗೆ ಕಳುಹಿಸಲು ಮನಸ್ಸು ಮಾಡುತ್ತಿರುವ ಕಾರಣ ಜಿಲ್ಲೆಯಲ್ಲಿ 50ಕ್ಕಿಂತ ಕಡಿಮೆ ದಾಖಲಾತಿ ಇರುವ ಸರ್ಕಾರಿ ಶಾಲೆಗಳ ಸಂಖ್ಯೆ ಹೆಚ್ಚುತ್ತ ಸಾಗಿದೆ. ಸದ್ಯ ಜಿಲ್ಲೆಯಲ್ಲಿ 50ಕ್ಕಿಂತ ಕಡಿಮೆ ದಾಖಲಾತಿ ಇರುವ 150 ಶಾಲೆಗಳಿವೆ. ಈ ಪೈಕಿ 132 ಕಿರಿಯ ಪ್ರಾಥಮಿಕ ಶಾಲೆಗಳಾದರೆ, 18 ಹಿರಿಯ ಪ್ರಾಥಮಿಕ ಶಾಲೆಗಳಾಗಿವೆ. ಈ ಪೈಕಿ ಕನ್ನಡ ಮಾಧ್ಯಮದ 82 ಶಾಲೆಗಳಿದ್ದು, ಉರ್ದು ಮಾಧ್ಯಮದ 64 ಶಾಲೆಗಳು ಸೇರಿದಂತೆ ಮರಾಠಿ, ತಮಿಳು ಮಾಧ್ಯಮದ ತಲಾ ಒಂದು ಶಾಲೆಗಳಿವೆ. ಇದಲ್ಲದೇ 113 ಪ್ರಾಥಮಿಕ ಹಾಗೂ 33 ಪ್ರೌಢಶಾಲೆಗಳಲ್ಲಿ ಅತಿಥಿ ಶಿಕ್ಷಕರ ಹಾಗೂ 336 ಹೆಚ್ಚುವರಿ ಕೊಠಡಿಗಳ ಬೇಡಿಕೆ ಇದ್ದು, ಈ ಕೊರತೆಯೂ ನೀಗಬೇಕಿದೆ.
ಶಿಥಿಲಾವಸ್ಥೆಯಲ್ಲಿರುವ ಶಾಲಾ ಕೊಠಡಿಗಳ ದುರಸ್ತಿ ಕಾರ್ಯ ಕೈಗೊಳ್ಳಲು ಹಾಗೂ 336 ಹೆಚ್ಚುವರಿ ಕೊಠಡಿಗಳಿಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದು ಅನುಮೋದನೆಗೊಂಡು ಅನುದಾನ ಬಿಡುಗಡೆಯ ನಿರೀಕ್ಷೆಯಲ್ಲಿ ಇದ್ದೇವೆ. ಅನುದಾನ ಬಂದ ಕೂಡಲೇ ಶಾಲೆಗಳ ಕೊಠಡಿಗಳ ದುರಸ್ತಿ ಕಾರ್ಯಕೈಗೊಳ್ಳಲಾಗುವುದು.
ಎನ್.ಎಚ್.ನಾಗೂರ, ಡಿಡಿಪಿಐ, ಧಾರವಾಡ
ಶಶಿಧರ್ ಬುದ್ನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ
Hubli: ಸಮಾಜದಹಿತಕ್ಕಾಗಿ ಪಕ್ಷ ಮರೆತು ಹೋರಾಡಬೇಕು: ಕಾಶನ್ನಪ್ಪನವರ ವಿರುದ್ದ ಬೆಲ್ಲದ್ ಟೀಕೆ
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.