ಜಾಬಿನ್‌ಗೆ ಮತ್ತೆ ಎ ಗ್ರೇಡ್
Team Udayavani, Nov 4, 2017, 11:43 AM IST
ಹುಬ್ಬಳ್ಳಿ: ಕೆಎಲ್‌ಇ ಸಂಸ್ಥೆಯ ಪಿ.ಸಿ. ಜಾಬಿನ ವಿಜ್ಞಾನ ಪದವಿ ಮಹಾವಿದ್ಯಾಲಯಕ್ಕೆ ನ್ಯಾಕ್‌ನಿಂದ ನಾಲ್ಕನೇ ಬಾರಿಗೆ “ಎ’ ಮಾನ್ಯತೆ ದೊರೆತಿದೆ. ಸಿಜಿಪಿಎ 3.43 ಪಡೆಯುವ ಮೂಲಕ ಉತ್ತರ ಕರ್ನಾಟಕದ ಮೊದಲ ವಿಜ್ಞಾನ ಮಹಾವಿದ್ಯಾಲಯವಾಗಿದೆ.
ಕಳೆದ ತಿಂಗಳು ನ್ಯಾಕ್ ಪರಿಣಿತರಾದ ಆಂಧ್ರಪ್ರದೇಶ ನೆಲಗೊಂಡದ ಮಹಾತ್ಮ ಗಾಂಧಿ ವಿವಿಯ ವಿಶ್ರಾಂತ ಕುಲಪತಿ ಡಾ| ಕಟ್ಟಾ ನರಸಿಂಹರೆಡ್ಡಿ ಚೇರ್ಮನ್ ರಾಗಿ ಹಾಗೂ ಹೈದರಾಬಾದ್‌ನ ಆಂಧ್ರ ವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ| ಪ್ರಸಾದ ರಾವ್ ಸದಸ್ಯ ಕಾರ್ಯದರ್ಶಿಯಾಗಿ,
ಚೆನ್ನೈನ ಮದ್ರಾಸ ಕ್ರಿಶ್ಚಿಯನ್ ಕಾಲೇಜಿನ ಪ್ರಾಚಾರ್ಯ ಡಾ| ಜೇಸುದಾಸ ಅಲೆಕ್ಸಾಂಡರ್ ಸದಸ್ಯರ ತಂಡ ಮಹಾವಿದ್ಯಾಲಯಕ್ಕೆ ಭೇಟಿ ಕೊಟ್ಟು ಶೈಕ್ಷಣಿಕ, ಆಡಳಿತಾತ್ಮಕ, ಗ್ರಂಥಾಲಯ, ಕ್ರೀಡಾ ಮುಂತಾದ ವಿಭಾಗಗಳನ್ನು ಪರಿಶೀಲಿಸಿ, ಮಹಾವಿದ್ಯಾಲಯದ ಪ್ರಸ್ತುತ ಹಾಗೂ ಹಳೆ ವಿದ್ಯಾರ್ಥಿಗಳು, ಸಿಬ್ಬಂದಿ ಮತ್ತು ಪಾಲಕರೊಂದಿಗೆ ಸಂವಾದ ಮಾಡಿತ್ತು.
ಕಾಲೇಜಿಗೆ ಸತತ ನಾಲ್ಕನೇ ಬಾರಿಗೆ ನ್ಯಾಕ್‌ನಿಂದ “ಎ’ ದರ್ಜೆ ಮಾನ್ಯತೆ ದೊರಕಿರುವುದಕ್ಕೆ ಕೆಎಲ್‌ಇ ಚೇರನ್ ಡಾ| ಪ್ರಭಾಕರ ಕೋರೆ, ಆಡಳಿತ ಮಂಡಳಿ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಸ್ಥಾನಿಕ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಜೆ.ಪಿ. ಜಾಬಿನ, ಪ್ರಾಚಾರ್ಯ ಡಾ| ಎಸ್.ವಿ. ಹಿರೇಮಠ ಹರ್ಷ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.