ತನ್ನ ಮನೆಯಲ್ಲೇ ಕಳ್ಳತನ ಮಾಡಿ ಸಿಕ್ಕಿ ಬಿದ್ದ ಭೂಪ!
Team Udayavani, Sep 2, 2018, 4:44 PM IST
ಹುಬ್ಬಳ್ಳಿ: ತನ್ನ ಮನೆಯಲ್ಲೇ ಅಂದಾಜು 5.50 ಲಕ್ಷ ರೂ. ಮೌಲ್ಯದ ನಗ-ನಾಣ್ಯ ಕಳುವು ಮಾಡಿದ್ದ ವ್ಯಕ್ತಿಯೊಬ್ಬನನ್ನು ಗ್ರಾಮೀಣ ಠಾಣೆ ಪೊಲೀಸರು ಕಳ್ಳತನ ಮಾಡಿದ್ದ ವಸ್ತುಗಳೊಂದಿಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಾಲೂಕಿನ ಭಂಡಿವಾಡ ಗ್ರಾಮದ ರೆಹಿಮಾನಸಾಬ ಸಿ. ದಂಡಿನ ಎಂಬಾತನೆ ಬಂಧನಕ್ಕೊಳಗಾಗಿದ್ದಾನೆ. ಈತ ತನ್ನ ಮನೆಯ ಬಾಗಿಲ ಬೀಗ ಮುರಿದು ಕಳುವು ಮಾಡಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಚಂದುಸಾಬ ದಂಡಿನ ಎಂಬುವರ ಮನೆಯ ಕಬ್ಬಿಣದ ಅಲ್ಮೇರಾದಲ್ಲಿಟ್ಟಿದ್ದ ನಗ-ನಾಣ್ಯ ಬುಧವಾರ ಕಳುವು ಆಗಿತ್ತು. ಈ ಕುರಿತು ಅವರು ತಮ್ಮ ಹಿರಿಯ ಮಗನ ಮೇಲೆ ಸಂಶಯವಿದೆ ಎಂದು ಗ್ರಾಮೀಣ ಠಾಣೆಯಲ್ಲಿ ದೂರು ಕೊಟ್ಟಿದ್ದರು. ದೂರಿನನ್ವಯ ಎಸ್ಪಿ ಸಂಗೀತಾ ಜಿ., ಡಿಎಸ್‌ಪಿ ಬಿ.ಪಿ. ಚಂದ್ರಶೇಖರ ಹಾಗೂ ಠಾಣಾಧಿಕಾರಿ ಎಂ.ಎಸ್. ಪಾಟೀಲ ಮಾರ್ಗದರ್ಶನದಲ್ಲಿ ಪಿಎಸ್‌ಐ ಮಂಜುಳಾ ಸದಾರಿ ಹಾಗೂ ಸಿಬ್ಬಂದಿಯುಳ್ಳ ತನಿಖಾ ತಂಡ ರಚಿಸಲಾಗಿತ್ತು. ತಂಡವು ಪ್ರಕರಣದ ಜಾಡು ಹಿಡಿದು ರೆಹಿಮಾನಸಾಬನನ್ನು ಅಣ್ಣಿಗೇರಿಯ ಅಂಬಿಗೇರ ಕ್ರಾಸ್ ಬಳಿ ವಶಕ್ಕೆ ಪಡೆದು ವಿಚಾರಿಸಿದಾಗ, ಮನೆಯಲ್ಲಿದ್ದ ಅಂದಾಜು 2.40 ಲಕ್ಷ ರೂ. ಮೌಲ್ಯದ 100 ಗ್ರಾಂ ಚಿನ್ನಾಭರಣ ಹಾಗೂ 3.10 ಲಕ್ಷ ನಗದು ಕಳುವು ಮಾಡಿಕೊಂಡು, ಅಣ್ಣಿಗೇರಿ ಸಮೀಪದ ಸೈದಾಪುರ ಗ್ರಾಮದ ಸದ್ದಾಂಹುಸೇನ ಖುದಾವಂದ ಅವರ ದನದ ಕೊಟ್ಟಿಗೆ ಹಿಂದೆ ಮುಚ್ಚಿಟ್ಟಿದ್ದಾಗಿ ಬಾಯಿಬಿಟ್ಟಿದ್ದ. ನಂತರ ಆತನನ್ನು ಕಳುವಿನ ವಸ್ತುಗಳೊಂದಿಗೆ ಬಂಧಿಸಿ, ತನಿಖೆ ಕೈಗೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ
KLE Technological University: ಮುರುಗೇಶ್ ನಿರಾಣಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ
NABARD ನಿರ್ಧಾರದಿಂದ ಕೃಷಿಗೆ ಹಿನ್ನಡೆ; ಸಾಲದ ಮೊತ್ತ ಕಡಿತ ಮಾಡದಿರಲು ಸಚಿವ ಪಾಟೀಲ ಆಗ್ರಹ
ಸಿಎಂ ಆಗಿದ್ದವರು ಈ ರೀತಿ ಹೇಳಿಕೆ ನೀಡುವ ಬದಲು, ಸ್ಪಷ್ಟ ಹೇಳಿಕೆ ನೀಡಲಿ: ಸಚಿವ ಶಿವಾನಂದ
dharwad: ಪೊಲೀಸ್ ಪೇದೆ ಮೇಲೆ ಕೈ ಮುಖಂಡ ತಮಟಗಾರ ಸಹೋದರ ಬ್ಲೇಡ್ ನಿಂದ ಹಲ್ಲೆ
MUST WATCH
ಹೊಸ ಸೇರ್ಪಡೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Kollywood: ಬಹಿರಂಗ ಪತ್ರ ಬರೆದು ಧನುಷ್ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.