ಪರ್ಯಾಯ ರಾಜಕೀಯ ಶಕ್ತಿಗೆ ಆಪ್ ಸಿದ್ಧ
Team Udayavani, Mar 29, 2021, 3:51 PM IST
ಹುಬ್ಬಳ್ಳಿ: “ಕೃಷಿ ಹಾಗೂ ರೈತರ ಹಿತ ಕುರಿತಾಗಿ ನಾವುಯಾವುದೇ ನೀತಿ ಹೊಂದಿಲ್ಲ ಎಂಬುದು ಕೇವಲರಾಜಕೀಯ ಆರೋಪವಷ್ಟೆ. ರೈತರ ಹಿತ ಕಾಯಲುನಾವೇನು ಕ್ರಮಗಳನ್ನು ಕೈಗೊಂಡಿದ್ದೇವೆಎಂದುದೆಹಲಿಗೆ ಬಂದು ನೋಡಿದರೆ ತಿಳಿಯುತ್ತದೆ.ನಮ್ಮ ಆದ್ಯತಾ ರಾಜ್ಯಗಳಲ್ಲಿ ಕರ್ನಾಟಕವೂಒಂದಾಗಿದೆ. ಇಲ್ಲಿರುವ ಸಂಪತ್ತುಸಮರ್ಪಕ ಬಳಕೆ ಮಾಡಿದರೆ ದೇಶಕ್ಕೆಶ್ರೀಮಂತ ರಾಜ್ಯವಾಗಿಸಬಹುದು.ಬರೆದಿಟ್ಟುಕೊಳ್ಳಿ ನಮಗೆ ಅಧಿಕಾರಸಿಕ್ಕರೆ ಇದನ್ನು ಮಾಡಿಯೇತೋರಿಸುತ್ತೇವೆ.’
-ಇದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ರಾಜಕೀಯ ಸಲಹೆಗಾರ ಹಾಗೂ ಆಮ್‌ಆದ್ಮಿ ಪಕ್ಷದ ಕರ್ನಾಟಕ-ಗುಜರಾತ ರಾಜ್ಯಗಳಉಸ್ತುವಾರಿ ರೋಮಿ ಭಾಟಿ ಅಭಿಪ್ರಾಯ. ಆಪ್‌ನಗರಗಳಿಗೆ ಸೀಮಿತವಲ್ಲ. ಗ್ರಾಮೀಣ ಭಾರತ,ಕೃಷಿ, ರೈತರ ಹಿತಕ್ಕೆ ಬದ್ಧವಾಗಿದೆ. ಕರ್ನಾಟಕದಲ್ಲಿಆಮ್‌ಆದ್ಮಿ ಪಕ್ಷದ ಸಂಘಟನೆ, ಪರ್ಯಾಯರಾಜಕೀಯ ಶಕ್ತಿಯಾಗುವ ವಿಶ್ವಾಸ ಇನ್ನಿತರವಿಷಯಗಳ ಕುರಿತಾಗಿ ರೋಮಿ ಭಾಟಿ ಅವರು”ಉದಯವಾಣಿ’ಯೊಂದಿಗೆ ತಮ್ಮ ಮನದಾಳದ ಅನಿಸಿಕೆಗಳನ್ನು ಹಂಚಿಕೊಂಡರು.
ಅಧಿಕ ಪರಿಹಾರ: ದೆಹಲಿಯಲ್ಲಿ ಬೆಳೆ ನಷ್ಟಕ್ಕೆ ಸಿಲುಕಿದ ರೈತರ ನೆರವಿಗೆ ಧಾವಿಸುವ ನಿಟ್ಟಿನಲ್ಲಿ ಹೆಕ್ಟೇರ್‌ಗೆ 50ಸಾವಿರ ರೂ.ನಂತೆ ಪರಹಾರ ನೀಡಿದ್ದೇವೆ. ಇತರೆರಾಜ್ಯಗಳಲ್ಲಿ ಇಷ್ಟೊಂದು ಮೊತ್ತದ ಪರಿಹಾರನೀಡಿಲ್ಲ. ಅದೇ ರೀತಿ ಪ್ರತಿ ಎಕರೆಗೆ ಕೃಷಿ ವೆಚ್ಚದಬಗ್ಗೆ ಅಧ್ಯಯನ ನಡೆಸಿದ್ದೇವೆ. ಪ್ರತಿಎಕರೆಗೆ ಸರಿಸುಮಾರು 16,000 ರೂ. ವೆಚ್ಚವಾಗುತ್ತಿದೆ. ಪಂಜಾಬ್, ಹರ್ಯಾಣ, ದೆಹಲಿಗಡಿಯಲ್ಲಿ ಭತ್ತದ ಹುಲ್ಲಿನ ತ್ಯಾಜ್ಯಕ್ಕೆ ರೈತರು ಬೆಂಕಿಹಚ್ಚುತ್ತಿದ್ದು, ಇದರ ಹೊಗೆಯಿಂದ ಸಾಕಷ್ಟುಸಮಸ್ಯೆ ಸೃಷ್ಟಿಯಾಗುತ್ತಿದೆ. ಇದನ್ನು ತಪ್ಪಿಸುವನಿಟ್ಟಿನಲ್ಲಿ ಸಂಶೋಧನೆ ಕೈಗೊಂಡು, ಭತ್ತದ ತ್ಯಾಜ್ಯಕ್ಕೆ ಬೆಂಕಿ ಬದಲು ಅದರ ವಿಲೇವಾರಿ ತಂತ್ರಜ್ಞಾನರೂಪಿಸಿದ್ದು, ಪ್ರಾಯೋಗಿಕವಾಗಿ ಇದರ ಬಳಕೆನಂತರದಲ್ಲಿ, ದೆಹಲಿ ಸರ್ಕಾರದಿಂದ ರೈತರಿಗೆಉಚಿತವಾಗಿ ನೀಡಲಾಗುತ್ತಿದೆ. ಇದು ರೈತಪರ ಕಾಳಜಿ ಅಲ್ಲವೇ?
ಶ್ರೀಮಂತ ರಾಜ್ಯ ಮಾಡಿ ತೋರಿಸುತ್ತೇವೆ: ಸೌರಶಕ್ತಿ, ಪವನಶಕ್ತಿ, ಸಮೃದ್ಧ ನದಿಗಳು, ಫಲವತ್ತಾದ ಭೂಮಿ, ಪೂರಕ ವಾತಾವರಣ ಇದೆಲ್ಲಕರ್ನಾಟಕಕ್ಕೆ ನಿಸರ್ಗದ ಕೊಡುಗೆಯಾಗಿದೆ. ಇಲ್ಲಿ ಇರುವಷ್ಟು ವಿದ್ಯುತ್ ಉತ್ಪಾದನೆ ಅವಕಾಶ ಬೇರೆರಾಜ್ಯಗಳಲ್ಲಿ ಸಿಗುವುದು ಕಷ್ಟಸಾಧ್ಯ. ಆದರೆ,ಇಂದಿಗೂ ಇಲ್ಲಿನ ರೈತರು, ಸಾರ್ವಜನಿಕರು,ಉದ್ಯಮಿಗಳು ದುಬಾರಿ ದರಕ್ಕೆ ವಿದ್ಯುತ್‌ಪಡೆಯುವ, ಸಮರ್ಪಕ ವಿದ್ಯುತ್‌ಗೆ ಪರದಾಡುವ ಸ್ಥಿತಿ ಇದೆ.ಇಲ್ಲಿನ ಸೌರ ಹಾಗೂ ಪವನಶಕ್ತಿಯೊಂದಿಗೆ ವಿದ್ಯುತ್ ಉತ್ಪಾದಿಸಿಇಲ್ಲಿನ ರೈತರಿಗೆ ಉಚಿತ ಇಲ್ಲವೆ ಕಡಿಮೆ ದರದಲ್ಲಿ ನೀಡಬಹುದು. ನೆರೆಯ ರಾಜ್ಯಗಳಿಗೆ ವಿದ್ಯುತ್ ಮಾರಾಟ ಮಾಡ ಬಹುದು. ಇಲ್ಲಿವರೆಗೆ ಅಧಿಕಾರ ನಡೆಸಿದಪಕ್ಷಗಳು ಇದನ್ನು ಗಂಭೀರವಾಗಿ ಪರಿಗಣಿಸಿಯೇ ಇಲ್ಲ. ನಮಗೆ ಅಧಿಕಾರ ಸಿಕ್ಕರೆ ಕರ್ನಾಟಕವನ್ನುಶ್ರೀಮಂತ ರಾಜ್ಯವಾಗಿ ಮಾಡಿಯೇ ತೋರಿಸುತ್ತೇವೆ. ಇದು ನಮ್ಮ ಸ್ಪಷ್ಟ ವಾಗ್ಧಾನ.
ಪರ್ಯಾಯ ರಾಜಕೀಯ ಶಕ್ತಿಗೆ ಸಿದ್ಧ:ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್-ಬಿಜೆಪಿಗೆ ಪರ್ಯಾಯರಾಜಕೀಯ ಶಕ್ತಿಯಾಗಿ ಹೊರಹೊಮ್ಮಲು ಆಮ್‌ಆದ್ಮಿ ಪಕ್ಷ ಸಿದ್ಧವಿದೆ. ನಮಗಿರುವ ಸೀಮಿತಶಕ್ತಿ-ಸಾಮರ್ಥ್ಯದ ಆಧಾರದಲ್ಲಿ ದೇಶಾದ್ಯಂತಸಂಘಟನೆ ವಿಸ್ತರಣೆಗೆ ಮುಂದಾಗಿದ್ದೇವೆ.ಕಾಂಗ್ರೆಸ್ ನಾಯಕತ್ವ ಕೊರತೆಯಿಂದನಲುಗುತ್ತಿದೆ. ಬಿಜೆಪಿ ಜನಹಿತಮರೆತು ತನ್ನದೇ ಹವಾದಲ್ಲಿ ತೇಲಾಡುತ್ತಿದೆ. ಭ್ರಷ್ಟಾಚಾರ ರೂಪದಲ್ಲಿಸರ್ಕಾರ ರಚನೆಗೆ ಮುಂದಾಗುತ್ತಿದೆ.ಪಂಜಾಬ್, ಉತ್ತರ ಪ್ರದೇಶ, ಜಮ್ಮುಮತ್ತು ಕಾಶ್ಮೀರ, ಉತ್ತರಾಖಂಡ, ಹರ್ಯಾಣ,ಗೋವಾ, ಗುಜರಾತ್ ಇನ್ನಿತರ ರಾಜ್ಯಗಳಲ್ಲಿನಮ್ಮ ಪ್ರಾತಿನಿಧ್ಯ ಹೊಂದಿದ್ದೇವೆ. ಕರ್ನಾಟಕಸೇರಿದಂತೆ ದೇಶದ ಎಲ್ಲ ರಾಜ್ಯಗಳಿಗೂ ಪಕ್ಷಸಂಘಟನೆ, ರಾಜಕೀಯ ಹೋರಾಟವನ್ನುವಿಸ್ತರಿಸುತ್ತೇವೆ. ಜನರ ಧ್ವನಿಯಾಗಿ ನಿಲ್ಲುತ್ತೇವೆ.ಕರ್ನಾಟಕದಲ್ಲಿ ಜೆಸಿಬಿ(ಜನತಾದಳ,ಕಾಂಗ್ರೆಸ್ ಹಾಗೂ ಬಿಜೆಪಿ) ಪರ್ಯಾಯರಾಜಕೀಯ ಶಕ್ತಿಯನ್ನು ಜನ ನಿರೀಕ್ಷಿಸುತ್ತಿದ್ದು, ಅವರ ನಿರೀಕ್ಷೆಗೆ ತಕ್ಕಂತೆ ಜವಾಬ್ದಾರಿ ನಿರ್ವಹಣೆಗೆ ಮುಂದಾಗುತ್ತೇವೆ.
ಕರ್ನಾಟಕದಲ್ಲಿ ಮುಂಬರುವ ತಾಲೂಕು, ಜಿಲ್ಲಾ ಪಂಚಾಯತ್ ಹಾಗೂ ನಗರ ಸ್ಥಳೀಯಸಂಸ್ಥೆ ಚುನಾವಣೆಗೆ ಸ್ಪಧಿ ìಸುತ್ತೇವೆ. ಪಕ್ಷಸಂಘಟನೆ ದೃಷ್ಟಿಯಿಂದ ಗ್ರಾಮೀಣ ಮಟ್ಟಕ್ಕೂಹೋಗಿದ್ದೇವೆ.ಆರೋಗ್ಯ ಮತ್ತು ಶಿಕ್ಷಣ ನಿಟ್ಟಿನಲ್ಲಿದೆಹಲಿಯಲ್ಲಿ ಕೈಗೊಂಡ ಕ್ರಾಂತಿಕಾರಿ ಸುಧಾರಣೆ,ಅಭಿವೃದ್ಧಿ ಮಾದರಿಯನ್ನು ಕರ್ನಾಟಕಸೇರಿದಂತೆ ದೇಶದ ಜನತೆ ಮುಂದಿಡುತ್ತೇವೆ. ನೀವು ಆಶೀರ್ವದಿಸಿದರೆ ಇಲ್ಲಿಯೂಇದೇ ಮಾದರಿ ಅನುಷ್ಠಾನಗೊಳಿಸುತ್ತೇವೆ.ಕರ್ನಾಟಕದಲ್ಲಿ ಈಗಾಗಲೇ ವಿವಿಧ ಜಿಲ್ಲೆಗಳಿಗೆಭೇಟಿ ನೀಡಿದ್ದೇವೆ. ಪಕ್ಷದ ಸಂಘಟನೆಗೆ ಪದಾಧಿಕಾರಿಗಳ ನೇಮಕ ಕೈಗೊಂಡಿದ್ದೇವೆ.
ಪಕ್ಷ ಸಂಘಟನೆಗೆ ಸಾಮಾಜಿಕ ಜಾಲತಾಣವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತೇವೆ.ಒಂದಂತೂ ಸ್ಪಷ್ಟ ಮಾತುಗಳಲ್ಲಿ ಹೇಳಬಲ್ಲೆ. ನೀಡಿದ ಭರವಸೆಯನ್ನು ಪ್ರಾಮಾಣಿಕವಾಗಿ ಈಡೇರಿಸಿ, ಸ್ವಚ್ಛ ಆಡಳಿತ ನೀಡುತ್ತೇವೆ.ಇದನ್ನು ದೆಹಲಿಯಲ್ಲಿ ಮಾಡಿ ತೋರಿಸಿದ್ದೇವೆ.ಅದಕ್ಕಾಗಿಯೇ ಏನೆಲ್ಲ ಅಪಪ್ರಚಾರ, ಆರೋಪಗಳು, ಇನ್ನೇನು ಆಮ್‌ಆದ್ಮಿ ಪಕ್ಷ ಅಧಿಕಾರಕಳೆದುಕೊಂಡೇ ಬಿಟ್ಟಿತು ಎಂಬ ಅಬ್ಬರದನಡುವೆಯೂ ದೆಹಲಿ ಜನತೆ ಮತ್ತೂಮ್ಮೆನಮಗೆ ಆಶೀರ್ವಾದ ಮಾಡುವ ಮೂಲಕ ವಿರೋಧಿ ಗಳ ಬಾಯಿ ಮುಚ್ಚಿಸಿದ್ದಾರೆ.
ನಾವು ಯಾರ ಬಿ, ಸಿ ಟೀಮ್ ಅಲ್ಲವೇ ಅಲ್ಲ :
ಆಮ್ ಆದ್ಮಿ ಪಕ್ಷ ಜನರ ಧ್ವನಿಯಾಗುತ್ತದೆಯೇ ವಿನಃ, ಬಿಜೆಪಿ ಸೇರಿದಂತೆ ಯಾವುದೇ ಪಕ್ಷದಬಿ ಅಥವಾ ಸಿ ಪಕ್ಷವಾಗಿಲ್ಲ, ಮುಂದೆಯೂ ಇರುವುದಿಲ್ಲ. ಬಿಜೆಪಿಯವರಿಗೆ ಅನುಕೂಲ ಮಾಡಿಕೊಡುವ ಕೆಲಸವಂತೂ ನಾವು ಮಾಡುತ್ತಿಲ್ಲ. ಬಿಜೆಪಿಗೆ ಗಟ್ಟಿ ತಾಣವೆಂದೇ ಬಿಂಬಿಸುವಗುಜರಾತ್‌ನಲ್ಲಿ ವಿಪಕ್ಷ ಸ್ಥಾನಕ್ಕೇರಿದ್ದೇವೆ. ಬಿಜೆಪಿ ನಾಯಕರಿಗೆ ಹೆಚ್ಚು ಭಯ ಇರುವುದು ಕಾಂಗ್ರೆಸ್‌ಬಗ್ಗೆ ಅಲ್ಲ, ಆಮ್ ಆದ್ಮ ಪಕ್ಷದ ಬಗ್ಗೆ. ಬಿಜೆಪಿ-ಕಾಂಗ್ರೆಸ್ ಜತೆ ಯಾವುದೇ ಹೊಂದಾಣಿಕೆ ಇಲ್ಲವೇ ಮೈತ್ರಿ ಇಲ್ಲ. ಅಗತ್ಯ ಬಿದ್ದರೆ ಪ್ರಾದೇಶಿಕ ಪಕ್ಷಗಳೊಂದಿಗೆ ಹೊಂದಾಣಿಕೆಗೆ ಚಿಂತಿಸುತ್ತೇವೆ.ನಮ್ಮ ಪಕ್ಷಕ್ಕೆ ಬರಬೇಕಾದರೆ “ಸಿಸಿಸಿ’ ಅನುಸರಿಸಬೇಕಾಗುತ್ತದೆ. ಆ ವ್ಯಕ್ತಿ ಭ್ರಷ್ಟಾಚಾರ, ಕೋಮುವಾದ, ಕ್ರಿಮಿನಲ್ ಆಗಿರಬಾರದು. ವ್ಯಕಿತ್ವ ನೋಡಿಯೇ ಚುನಾವಣೆ ಸ್ಪರ್ಧೆಗೆಅವಕಾಶ ನೀಡುತ್ತೇವೆ. ರಿಕ್ಷಾ ನಡೆಸುವವರು ನಮ್ಮಿಂದ ಸ್ಪರ್ಧಿ ಸಬಹುದು. ಹಣ ಇಲ್ಲವಾದರೂ ದೇಣಿಗೆ ಸಂಗ್ರಹದೊಂದಿಗೆ ಚುನಾವಣೆ ನಡೆಸುತ್ತೇವೆ.
ಕಾಂಗ್ರೆಸ್ ನಾಯಕತ್ವಕೊರತೆಯಿಂದನಲುಗುತ್ತಿದೆ. ಬಿಜೆಪಿಜನಹಿತ ಮರೆತು ತನ್ನದೇಹವಾದಲ್ಲಿ ತೇಲಾಡುತ್ತಿದೆ.ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್-ಬಿಜೆಪಿಗೆ ಪರ್ಯಾಯ ರಾಜಕೀಯಶಕ್ತಿಯಾಗಿ ಹೊರ ಹೊಮ್ಮಲು ಆಪ್ ಸಿದ್ಧವಿದೆ.ನಮಗಿರುವ ಸೀಮಿತ ಶಕ್ತಿ, ಸಾಮರ್ಥ್ಯದಆಧಾರದಲ್ಲಿ ದೇಶಾದ್ಯಂತ ಸಂಘಟನೆ ವಿಸ್ತರಿಸುತ್ತೇವೆ. ಜನರ ಧ್ವನಿಯಾಗಿ ನಿಲ್ಲುತ್ತೇವೆ.– ರೋಮಿ ಭಾಟಿ
–ಅಮರೇಗೌಡ ಗೋನವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CID Inquiry: ಪರಿಷತ್‌ನಲ್ಲಿ ನಡೆದ ಘಟನೆ ಎಂದು ಉಲ್ಲೇಖಿಸಿದ್ದು ತಪ್ಪು: ಬಸವರಾಜ ಹೊರಟ್ಟಿ
ಜೋಶಿ ಅವರಿಗೆ ನನ್ನ ಸಾಮರ್ಥ್ಯ ಗೊತ್ತಿಲ್ಲ… ಅಸಮರ್ಥ ಹೇಳಿಕೆಗೆ ತಿರುಗೇಟು ನೀಡಿದ ಪರಮೇಶ್ವರ್
Alnavar: ಟಿಟಿ- ಕ್ಯಾಂಟರ್ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು
Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ
Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ
Road Mishap; ದ್ವಿಚಕ್ರ ವಾಹನ-ಲಾರಿ ನಡುವೆ ಅಪಘಾತ: ದಂಪತಿ ಸಾವು
ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.