ಆನ್‌ಲೈನ್ ಪಾಸ್ ವಿತರಣೆಗೆ ಕ್ರಮ
Team Udayavani, May 1, 2020, 3:16 PM IST
ಧಾರವಾಡ: ಕೋವಿಡ್ 19 ನಿಯಂತ್ರಣದ ಲಾಕ್‌ಡೌನ್ ಅವಧಿಯಲ್ಲಿ ವಿವಿಧ 72 ಪ್ರಕಾರಗಳ ಸೇವೆಗಳು ಮತ್ತು ತುರ್ತು ಕಾರ್ಯಗಳಿಗೆ 12 ಇಲಾಖೆಗಳ ಮೂಲಕ ಆನ್‌ಲೈನ್‌ನಲ್ಲಿ ಪಾಸ್‌ಗಳನ್ನು ವಿತರಿಸಲು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ಅಗತ್ಯ ದಾಖಲೆಗಳೊಂದಿಗೆ http://www.supportdharwad.in ವೆಬ್‌ಸೈಟ್ ಮೂಲಕ ಸಾರ್ವಜನಿಕರು ಅರ್ಜಿ ಸಲ್ಲಿಸಬಹುದು.
ಜಿಲ್ಲಾ ಪಂಚಾಯತ್ : ನರೇಗಾ ಚಟುವಟಿಕೆಗಳು, ಆಯ್ದ ಸೇವೆಗಳ ಹೋಂ ಡೆಲಿವರಿ, ರಾಜ್ಯ-ಕೇಂದ್ರ ವಲಯದ ಯೋಜನೆಗಳಡಿ ಕುಡಿಯುವ ನೀರು, ನೀರಾವರಿ ಚಟುವಟಿಕೆಗಳು, ಗ್ರಾಪಂ ಮಟ್ಟದಲ್ಲಿ ಸಾಮಾನ್ಯ ಸೇವಾ ಕೇಂದ್ರಗಳು.
ಹು-ಧಾ ಮಹಾನಗರ ಪಾಲಿಕೆ : ಅಗತ್ಯ ವಸ್ತುಗಳ ಪೂರೈಕೆ ವ್ಯವಸ್ಥೆ, ಉತ್ಪಾದನೆ ಸಗಟು-ಚಿಲ್ಲರೆ ವಹಿವಾಟು, ಪ್ರತ್ಯೇಕವಾಗಿರುವ ಕಿರಾಣಿ, ಹಣ್ಣು, ತರಕಾರಿ, ಹಾಲಿನ ಡೈರಿ, ಮಾಂಸದ ಉತ್ಪನ್ನಗಳ ಅಂಗಡಿ, ಬೇಕರಿ ಹಾಗೂ ಮತ್ತಿತರ ಚಟುವಟಿಕೆಗಳು.
ಪಶು ಇಲಾಖೆ : ಪಶು ಆಸ್ಪತ್ರೆಗಳು, ಹಾಲು ಮತ್ತು ಹಾಲಿನ ಉತ್ಪನ್ನಗಳ ಸಂಗ್ರಹ, ಸಾಗಣೆ ಮತ್ತು ಮಾರಾಟ, ಪಶು ಸಂಗೋಪನೆ, ಕೋಳಿ ಫಾರಂಗಳು ಹಾಗೂ ಪಶು ಆಹಾರ ಪೂರೈಕೆ.
ಜಿಲ್ಲಾ ಕೈಗಾರಿಕಾ ಕೇಂದ್ರ : ಔಷಧಿ, ವೈದ್ಯಕೀಯ, ಅರೆವೈದ್ಯಕೀಯ, ಉಪಕರಣಗಳ ಉತ್ಪಾದನಾ ಘಟಕಗಳು, ವೈದ್ಯಕೀಯ ಆಮ್ಲಜನಕ, ಅದರ ಪ್ಯಾಕಿಂಗ್ ಮತ್ತು ಕಚ್ಚಾ ಸಾಮಗ್ರಿಗಳ ಪೂರೈಕೆ.
ಕೃಷಿ ಇಲಾಖೆ : ಕೃಷಿ ಚಟುವಟಿಕೆಗಳು, ಕೃಷಿ ಉತ್ಪನ್ನಗಳ ಖರೀದಿದಾರರು, ಎಪಿಎಂಸಿ, ರೈತ ಉತ್ಪಾದಕರ ಸಂಸ್ಥೆಗಳು ಮತ್ತು ಸಹಕಾರ ಸಂಘಗಳ ಚಟುವಟಿಕೆಗಳು, ಕೃಷಿ ಯಂತ್ರೋಪಕರಣ ಹಾಗೂ ಬಿಡಿಭಾಗಗಳ ವ್ಯಾಪಾರ, ರಸಗೊಬ್ಬರ-ಕೀಟನಾಶಕ-ಬೀಜ ಮಾರಾಟ.
ಮೀನುಗಾರಿಕೆ ಇಲಾಖೆ : ಒಳನಾಡು ಮೀನುಗಾರಿಕೆ, ಮತ್ಸ್ಯೋದ್ಯಮ, ಆಹಾರ ನಿರ್ವಹಣೆ, ಪ್ಯಾಕಿಂಗ್, ಕೋಲ್ಡ್‌ಚೈನ್, ವಾಣಿಜ್ಯ ಅಕ್ವೇರಿಯಂ ಮತ್ತು ಮಾರುಕಟ್ಟೆ ಚಟುವಟಿಕೆಗಳು, ಮೀನುಗಾರರ ಮತ್ತು ಸಹಾಯಕರ ಸಂಚಾರಕ್ಕೆ ಅನುಮತಿ.
ಕೆಎಂಎಫ್ : ಪಶು ಆಹಾರ ಉತ್ಪಾದನೆ, ಮೆಕ್ಕೆಜೋಳ, ಸೋಯಾ ಸೇರಿದಂತೆ ಕಚ್ಚಾ ವಸ್ತುಗಳ ಪೂರೈಕೆ, ಗೋಶಾಲೆಗಳ ನಿರ್ವಹಣೆ.
ಲೀಡ್‌ಬ್ಯಾಂಕ್ ಮ್ಯಾನೇಜರ್ : ಭಾರತೀಯ ರಿಸರ್ವ್ ಬ್ಯಾಂಕ್ ನಿಂದ ನಿಯಂತ್ರಿಸಲ್ಪಟ್ಟ ಹಣಕಾಸು ಚಟುವಟಿಕೆಗಳು, ಬ್ಯಾಂಕ್ ಶಾಖೆಗಳು, ಎಟಿಎಂ ಮತ್ತು ಆನ್‌ಲೈನ್ ವಹಿವಾಟುಗಳ ನಿರ್ವಹಣೆ, ವಿಮಾ ಕಂಪನಿಗಳ ಚಟುವಟಿಕೆಗಳು.
ಮಹಿಳಾ-ಮಕ್ಕಳ ಇಲಾಖೆ : ಬಾಲಮಂದಿರಗಳು, ವಿಕಲಚೇತನರು, ಮಾನಸಿಕ ಅಸ್ವಸ್ಥರು, ಹಿರಿಯ ನಾಗರಿಕರು, ನಿರಾಶ್ರಿತರು, ಮಹಿಳೆಯರು ಹಾಗೂ ವಿಧವೆಯರ ವಸತಿಗೃಹಗಳು, ಅಂಗನವಾಡಿ ಕೇಂದ್ರಗಳು ಮತ್ತು ಮಕ್ಕಳು-ಗರ್ಭಿಣಿಯರಿಗೆ ಆಹಾರ ವಿತರಣೆ.
ಆಹಾರ ಇಲಾಖೆ : ಅಡುಗೆ ಅನಿಲ, ಅಡುಗೆ ಎಣ್ಣೆ ಹಾಗೂ ಇಂಧನ ಪೂರೈಕೆ, ಅಂಚೆ ಸೇವೆಗಳು ಹಾಗೂಕುಡಿಯುವ ನೀರು, ನೈರ್ಮಲ್ಯ, ಘನತ್ಯಾಜ್ಯ ವಿಲೇವಾರಿ ಸಂಬಂಧಿತ ಸಾರ್ವಜನಿಕ ಸೇವೆಗಳು.
ಜಿಲ್ಲಾಧಿಕಾರಿ ಕಚೇರಿ : ವೈದ್ಯಕೀಯ ತುರ್ತು, ಅಂತ್ಯಸಂಸ್ಕಾರ, ಔಷಧ ಪೂರೈಕೆ, ಸರ್ಕಾರಿ ಕರ್ತವ್ಯ, ವಾಹನ ಪಾಸ್, ಆರೋಗ್ಯ ಸೇವೆ, ಅಂತರ್ಜಿಲ್ಲೆ ಮತ್ತು ಅಂತಾರಾಜ್ಯ ಕೃಷಿ ಸಂಬಂಧಿತ ಚಟುವಟಿಕೆಗಳು, ಸಾಮಾಜಿಕ ಭದ್ರತಾ ಯೋಜನೆಗಳ ಮಾಸಾಶನ ವಿತರಣೆ, ಆನ್‌ಲೈನ್‌ಶಿಕ್ಷಣ-ತರಬೇತಿ, ವಾಣಿಜ್ಯ-ಖಾಸಗಿ ವ್ಯವಹಾರಗಳು, ಉದ್ಯಮಗಳು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗೋಡ್ಸೆ ವಿಚಾರಧಾರೆಗಳ ಹೊಂದಿರುವ ಬಿಜೆಪಿಗರು ಗಾಂಧಿ ವಿಚಾರಗಳ ಒಪ್ಪಲ್ಲ: ಸುರ್ಜೇವಾಲಾ
Hubballi: ED ಬಿಜೆಪಿಯ ಅಂಗ ಸಂಸ್ಥೆಯೇ…? ಸಚಿವ ಎಚ್.ಕೆ.ಪಾಟೀಲ್ ಗರಂ
Dharwad; 50 ಮಠಾಧೀಶರ ಸಭೆ: ಲಿಂಗಾಯತ ಧರ್ಮದ ಅಸ್ಮಿತೆ ಕಾಪಾಡುವ ಉದ್ದೇಶ
Dharwad: ಉಪನೋಂದಣಿ ಕಚೇರಿ ವಿದ್ಯುತ್ ಕಟ್ : ಸಾರ್ವಜನಿಕರ ಪರದಾಟ
Dharwad: ಉಪರಾಷ್ಟ್ರಪತಿ ಜಗದೀಪ್ ಧನಕರ್ ಭಾಷಣಕ್ಕೆ ಸಚಿವ ಲಾಡ್ ಆಕ್ಷೇಪ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.