ಶಿಕ್ಷಕರ ಅಲೆದಾಟ ತಪ್ಪಿಸಲು ಅದಾಲತ್
ಬೆಳಗಾವಿ ವಿಭಾಗ ಮಟ್ಟದ ಶಿಕ್ಷಣ ಸ್ಪಂದನ ಕಾರ್ಯಕ್ರಮ ಉದ್ಘಾಟನೆ
Team Udayavani, Mar 2, 2021, 12:35 PM IST
ಧಾರವಾಡ: ರಾಜ್ಯದ ಶಾಲಾ ಶಿಕ್ಷಕರ ಅನಗತ್ಯ ಅಲೆದಾಟ ತಪ್ಪಿಸುವ ನಿಟ್ಟಿನಲ್ಲಿ ಆಯಾ ಶೈಕ್ಷಣಿಕವಲಯ ವ್ಯಾಪ್ತಿಯಲ್ಲಿ ಶಿಕ್ಷಣ ಅದಾಲತ್‌ಯೋಜಿಸಲಾಗುತ್ತಿದೆ ಎಂದು ಶಿಕ್ಷಣ ಸಚಿವ ಎಸ್. ಸುರೇಶ ಕುಮಾರ್ ಹೇಳಿದರು.
ನಗರದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತರ ಆಯುಕ್ತಾಲಯವು ಡಯಟ್ ಆವರಣದಲ್ಲಿ ಆಯೋಜಿಸಿದ್ದ ಬೆಳಗಾವಿ ವಿಭಾಗಮಟ್ಟದ ಶಿಕ್ಷಣ ಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪಾಠ ಮಾಡಬೇಕಾದ ಶಿಕ್ಷಕರು ತಮ್ಮ ಕಚೇರಿ ಕೆಲಸಗಳಿಗೆ ಅನಗತ್ಯವಾಗಿ ಅಲೆದಾಡುತ್ತಿರುವಪರಿಸ್ಥಿತಿ ಇದೆ. ಇದಕ್ಕಾಗಿ ಬೆಂಗಳೂರು, ಮೈಸೂರು,ಕಲ್ಯಾಣ ಕರ್ನಾಟಕ ಭಾಗಗಳಲ್ಲಿ ಇಂಥ ಶಿಕ್ಷಣ ಅದಾಲತ್‌ಗಳನ್ನು ನಡೆಸಲಾಗುವುದು.ಇಂಥದ್ದೊಂದು ಅದಾಲತ್‌ಗೆ ಅರ್ಜಿ ಕರೆದಾಗ 71 ಸಾವಿರ ಅರ್ಜಿಗಳು ಮೊಬೈಲ್ ಆ್ಯಪ್ ಮೂಲಕವೇಬಂದಿದೆ ಎಂದರು.
ಶಿಕ್ಷಕರ, ಶಿಕ್ಷಣ ಸಂಸ್ಥೆಗಳ ಸಂಬಂ ಧಿತ ದೂರು, ಮನವಿಗಳ ಶೀಘ್ರ ವಿಲೇವಾರಿಗಾಗಿ ರಾಜ್ಯದ ಎಲ್ಲಕಂದಾಯ ವಿಭಾಗಗಳಲ್ಲಿ ಶಿಕ್ಷಣ ಸ್ಪಂದನ ಹಾಗೂ ಶಿಕ್ಷಣ ಸ್ಪಂದನದಡಿ ಕಡತ ವಿಲೇವಾರಿ ಅಭಿಯಾನ ಆಯೋಜಿಸಲಾಗುವುದು. ಶಿಕ್ಷಣ ಸ್ಪಂದನ ಒಂದು ಕಾರ್ಯಕ್ರಮವಾಗದೇ ಅದು ದಿನನಿತ್ಯದ ಕಾರ್ಯವಾಗಬೇಕು. ಶಿಕ್ಷಕರ ಸಮಸ್ಯೆ ದೂರುಗಳಿಗೆಸ್ಪಂದಿಸಲು ವಿಭಾಗಮಟ್ಟದಲ್ಲಿ ಶಿಕ್ಷಣ ಸ್ಪಂದನ ಕಾರ್ಯಕ್ರಮ ಮೂಲಕ ಪ್ರಯತ್ನಿಸಲಾಗುತ್ತಿದೆ ಎಂದರು.
ಪ್ರಾಮಾಣಿಕತೆ ಎನ್ನುವುದು ಇಂದು ಅಪಹಾಸ್ಯದ ಮಾತಾಗಿದೆ. ಆದರೆ ಅದು ಗೌರವದಸಂಕೇತವಾಗಬೇಕು. ಪ್ರತಿಯೊಬ್ಬರು ಇಲಾಖೆಯಲ್ಲಿಹೆಮ್ಮೆ, ಅಭಿಮಾನ, ಆತ್ಮ ವಿಶ್ವಾಸದಿಂದ ಕೆಲಸ ಮಾಡಬೇಕು. ಕೋವಿಡ್ ಸಂದರ್ಭದಲ್ಲಿ ಆರ್ಥಿಕಸಂಕಷ್ಟವಿದ್ದರೂ ಸರಕಾರ ಸರಕಾರಿ ನೌಕರರಿಗೆಸಕಾಲದಲ್ಲಿ ಯಾವುದೇ ಕಡಿತವಿಲ್ಲದೆ ಸಂಪೂರ್ಣಸಂಬಳ ನೀಡಿದೆ. ಇದು ಸರಕಾರದ ಬದ್ಧತೆ. ಅದರಂತೆತಮ್ಮ ಪಾಲಿನ ಕರ್ತವ್ಯಗಳನ್ನು ಪ್ರಾಮಾಣಿಕತೆ, ಬದ್ಧತೆಯಿಂದ ಮಾಡಬೇಕು ಎಂದರು.
ಶಿಕ್ಷಣ ಇಲಾಖೆಯಿಂದ ಸಮಾಜದಲ್ಲಿ ಶಕ್ತಿ ತುಂಬುವ, ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವಕೆಲಸವಾಗಬೇಕು. ಮಕ್ಕಳು ಪರೀಕ್ಷೆಗಳನ್ನುಯಾವುದೇ ಭಯ, ಆತಂಕಗಳಿಲ್ಲದೆ ಖುಷಿಯಿಂದ ಆತ್ಮವಿಶ್ವಾಸದಿಂದ ಎದುರಿಸುವ ವಾತಾವರಣಬೆಳಸಬೇಕು. ಸಮಾಜದಲ್ಲಿ ಗೌರವ ಭಾವನೆಹೆಚ್ಚಿಸುವಂತಹ ಕಾರ್ಯ ಪ್ರತಿಯೊಬ್ಬರಿಂದ ಆಗಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಮಾತನಾಡಿ, ಶಿಕ್ಷಣ ಇಲಾಖೆ ಕಚೇರಿಗಳಲ್ಲಿಕೆಲಸಗಳು ವಿನಾಕಾರಣ ವಿಳಂಬವಾಗುತ್ತಿದೆ. ಆಭಾಗದ ಶಾಸಕರನ್ನು ಭೇಟಿಯಾಗದಿದ್ದರೆ ಕೆಲಸವೇಆಗಲ್ಲ ಎಂಬ ಸ್ಥಿತಿ ಇದೆ. ಇದು ಬೋಧನೆ ಮೇಲೆಪರಿಣಾಮ ಬೀರುತ್ತಿದೆ. ನಿಂತೇ ಹೋಗಿದ್ದ ಶಿಕ್ಷಣಅದಾಲತ್ ಮರಳಿ ಆರಂಭಿಸುವ ಒತ್ತಾಯವಿತ್ತು.ಕನಿಷ್ಠ ಎರಡು ವರ್ಷಗಳಿಗೆ ಒಮ್ಮೆಯಾದರೂ ಇಂತಹ ಅದಾಲತ್ ನಡೆಯಬೇಕು ಎಂದರು.
ವಿಧಾನ ಪರಿಷತ ಸದಸ್ಯ ಹನಮಂತ ನಿರಾಣಿ ಮಾತನಾಡಿದರು. ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಆರ್. ಸ್ನೇಹಲ್, ಸ್ಲಿಪ್ ಸಂಸ್ಥೆಯನಿರ್ದೇಶಕ ರಘುವೀರ, ಡಿಡಿಪಿಐಗಳಾದ ಎಂ.ಎಲ್.ಹಂಚಾಟೆ, ಆರ್.ಎಸ್. ಮುಳ್ಳೂರ ಸೇರಿದಂತೆ ಹಿರಿಯ ಅಧಿಕಾರಿಗಳು ಇದ್ದರು. ಅಪರ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಸ್ವಾಗತಿಸಿದರು. ವಿದ್ಯಾ ನಾಡಿಗೇರ ನಿರೂಪಿಸಿದರು. ನಿರ್ದೇಶಕಿ ಮಮತಾ ನಾಯಕ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ
Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ
Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್
Hubli: ಕ್ರಿಮಿನಲ್ ಜತೆಯೇ ಪೊಲೀಸ್ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್ ಕಾರ್ಯಾಚರಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.