ಆಡಳಿತ ಪಕ್ಷದವರಿಂದಲೇ ಸಭಾತ್ಯಾಗ
Team Udayavani, Apr 4, 2017, 12:43 PM IST
ಹುಬ್ಬಳ್ಳಿ: ಬೀಗಮುದ್ರೆ ಹಾಕಿದ ಪಾಲಿಕೆ ಒಡೆತನದ ವಾಣಿಜ್ಯ ಮಳಿಗೆಗಳ ಬೀಗ ಒಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಲಿಕೆ ಆಯುಕ್ತರ ಹೇಳಿಕೆಯಿಂದ ಆಕ್ರೋಶಗೊಂಡ ಆಡಳಿತ ಪಕ್ಷದ ಸದಸ್ಯರೇ ಸಭಾತ್ಯಾಗ ಮಾಡಿದ ಅಪರೂಪದ ಘಟನೆ ಪಾಲಿಕೆ ಸಾಮಾನ್ಯ ಸಭೆಯಲ್ಲಿ ನಡೆಯಿತು.
ಬಾಕಿ ಹಿನ್ನೆಲೆಯಲ್ಲಿ ಅಧಿಕಾರಿಗಳು ಹಾಕಿದ ಬೀಗಮುದ್ರೆಯನ್ನು ಒಡೆದು ಕೆಲವರು ಅಂಗಡಿ ಪ್ರವೇಶ ಮಾಡಿದ್ದರೂ ಯಾವುದೇ ಕ್ರಮ ಆಗಿಲ್ಲ. ಆಯುಕ್ತರು ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಪಾಲಿಕೆಯಲ್ಲಿ ಆಡಳಿತರೂಢ ಬಿಜೆಪಿ ಸದಸ್ಯರು ಸದನದಿಂದ ಹೊರ ನಡೆದರು.
ಬಿಜೆಪಿ ಸದಸ್ಯರನ್ನು ಬೆಂಬಲಿಸಿ ಜೆಡಿಎಸ್ ಸದಸ್ಯರೂ ಸಹ ಸಭಾತ್ಯಾಗ ಕೈಗೊಂಡರು. ನಡೆದಿದ್ದೇನು?: ಕಾಂಗ್ರೆಸ್ ಸದಸ್ಯರ ಗಣೇಶ ಟಗರಗುಂಟಿ ಹಾಗೂಬಿಜೆಪಿಯ ಸುಧೀರ ಸರಾಫ್ ಅವರು ಪಾದಚಾರಿ ಮಾರ್ಗ, ವಾಹನ ನಿಲುಗಡೆ ಜಾಗ ಅತಿಕ್ರಮಣ, ಕರ ವಸೂಲಾತಿ ಕುರಿತು ಗಮನ ಸೆಳೆಯುವ ಸೂಚನೆ ಮಂಡಿಸಿದರು.
ಪಾಲಿಕೆ ಹೆಚ್ಚುವರಿ ಆಯುಕ್ತ ಅಜೀಜ್ ದೇಸಾಯಿ ಮಾತನಾಡಿ, ಆಸ್ತಿಕರ ವಿಭಾಗದಲ್ಲಿ ಕಳೆದ ಆರ್ಥಿಕ ವರ್ಷದಲ್ಲಿ 55.77 ಕೋಟಿ ರೂ. ಕರ ಸಂಗ್ರಹ ಗುರಿ ಇತ್ತು ಅದರಲ್ಲಿ 51.53 ಕೋಟಿ ರೂ. ವಸೂಲಿಯಾಗಿದೆ. ಇದರಲ್ಲಿ 10ಕೋಟಿ ರೂ. ದಂಡವೂ ಸೇರಿದೆ. ಜಾಹೀರಾತು ವಿಭಾಗದಲ್ಲಿ 3.3 ಕೋಟಿ ರೂ.ನಲ್ಲಿ 2.22 ಕೋಟಿ ರೂ. ಸಂಗ್ರಹವಾಗಿದ್ದು, ಪಾಲಿಕೆ ಒಡೆತನದ ಮಳಿಗೆಗಳ ಬಾಡಿಗೆಯಿಂದ 10.26 ಕೋಟಿ ರೂ.ನಲ್ಲಿ 7.65 ಕೋಟಿ ರೂ. ಸಂಗ್ರಹವಾಗಿದೆ ಎಂದರು.
ಕಿಮ್ಸ್‌ನಿಂದ 50 ಲಕ್ಷ ರೂ.ಬೇಡಿಕೆಯಲ್ಲಿ 23ಲಕ್ಷ ರೂ. ಪಾವತಿಸಿದ್ದು, ದಂಡ ಬೇರೆ ಇದೆ. ವಾಯವ್ಯ ಸಾರಿಗೆ ಸಂಸ್ಥೆಯಿಂದ 59ಲಕ್ಷ ರೂ. ಬಾಕಿ ಬರಬೇಕಿದೆ. ಎಪಿಎಂಸಿಯಿಂದ 1998-2008ರವರೆಗೆ ಸುಮಾರು 4ಕೋಟಿ ರೂ. ಬಾಕಿ ಹಾಗೂ ದಂಡ ಬರಬೇಕಿದೆ. ಎಸ್‌ಡಿಎಂಸಿ ಶಿಕ್ಷಣ ಸಂಸ್ಥೆಯಿಂದ 2.5ಕೋಟಿ ರೂ. ಬಾಕಿ ಬರಬೇಕಿದ್ದು, ಪ್ರಕರಣ ಕೋರ್ಟ್‌ನಲ್ಲಿದೆ ಎಂದರು.
ಕೆಎಲ್‌ಇ ಸಂಸ್ಥೆಯಿಂದ ಕರ ರೂಪದಲ್ಲಿ 60 ಲಕ್ಷ ರೂ. ಬಾಕಿ ಇದ್ದು, ಅದರಲ್ಲಿ 40ಲಕ್ಷ ರೂ. ಪಾವತಿ ಮಾಡಲಾಗಿದೆ. ಇದೇ ಸಂಸ್ಥೆಯ ಕಟ್ಟಡಗಳ ಪರವಾನಗಿ ಇನ್ನಿತರ ವಿಚಾರದಲ್ಲಿ ಒಟ್ಟಾರೆ8.80ಕೋಟಿ ರೂ. ಬರಬೇಕಿದ್ದು, ಪ್ರಕರಣ ಲೋಕ ಅದಾಲತ್‌ನಲ್ಲಿದೆ ಎಂದರು.
ನಗರ ಯೋಜನೆ ವಿಭಾಗ ಅಧಿಕಾರಿ ಮಾತನಾಡಿ, ಕಟ್ಟಡ ಪರವಾನಗಿಯಿಂದ ಧಾರವಾಡದಲ್ಲಿ 3.44ಕೋಟಿ ರೂ., ಹುಬ್ಬಳ್ಳಿಯಲ್ಲಿ 10.06 ಕೋಟಿ ರೂ, ವಿನ್ಯಾಸ, ನವೀಕರಣ, ಪೂರ್ಣಗೊಂಡ ಪ್ರಮಾಣ ಪತ್ರ ಇತ್ಯಾದಿ ರೂಪದಲ್ಲಿ 3.29 ಕೋಟಿ ರೂ.ಸಂಗ್ರಹವಾಗಿದೆ. ಕಳೆದ ಆರ್ಥಿಕ ವರ್ಷಕ್ಕೆ 24 ಕೋಟಿ ರೂ. ಬೇಡಿಕೆಗೆ 16.80 ಕೋಟಿ ರೂ. ಸಂಗ್ರಹವಾಗಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಅಪ್ಪ ಪಡೆದ 1 ಲಕ್ಷ ರೂ. ಸಾಲಕ್ಕೆ ಮಗನ ಕಾಲಿಗೆ ಸರಪಳಿ!
Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ
Hubli: ಸಮಾಜದಹಿತಕ್ಕಾಗಿ ಪಕ್ಷ ಮರೆತು ಹೋರಾಡಬೇಕು: ಕಾಶನ್ನಪ್ಪನವರ ವಿರುದ್ದ ಬೆಲ್ಲದ್ ಟೀಕೆ
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Dharwad: ಅಪ್ಪ ಪಡೆದ 1 ಲಕ್ಷ ರೂ. ಸಾಲಕ್ಕೆ ಮಗನ ಕಾಲಿಗೆ ಸರಪಳಿ!
Sabarimala: ಮಕ್ಕಳಿಗೆ ಪ್ರತ್ಯೇಕ ಗೇಟ್; ವೀಡಿಯೋ ಚಿತ್ರೀಕರಣಕ್ಕೆ ನಿಯಂತ್ರಣ
Karnataka Govt.,: ಕೇಂದ್ರ ಸ್ಥಾನದಲ್ಲಿ ವಾಸಿಸದಿದ್ದರೆ ಶಿಸ್ತು ಕ್ರಮ
Daily Horoscope: ವಸ್ತ್ರ, ಸಿದ್ಧ ಉಡುಪು, ಆಭರಣ ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ
Kundapura: ತ್ರಾಸಿ – ಮರವಂತೆ ಬೀಚ್‌ನಲ್ಲಿ ಗಗನದೂಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.