ಮಂದಹಾಸ ಮೂಡಿಸಿದ ಪುನರ್ವಸು ಮಳೆ
Team Udayavani, Jul 10, 2020, 1:37 PM IST
ಸಾಂದರ್ಭಿಕ ಚಿತ್ರ
ಕಲಘಟಗಿ: ಇದೀಗ ಆರಂಭಗೊಂಡ ಪುನರ್ವಸು ಮಳೆಯು ತಾಲೂಕಿನ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಈಗಾಗಲೇ ಬಿತ್ತಿದ ಗೋವಿನಜೋಳ, ಸೋಯಾಬೀನ್, ಭತ್ತ ಮುಂತಾದ ಬೀಜಗಳು ಸಕಾಲಕ್ಕೆ ಸುರಿದ ಸಮರ್ಪಕ ಮಳೆಯಿಂದಾಗಿ ಬೆಳೆದು ನಿಂತಿವೆ. ರೈತರು ಮೇಲುಗೊಬ್ಬರ ಹಾಗೂ ಸಸ್ಯ ಸಂರಕ್ಷಣಾ ಔಷಧಿ ಸಿಂಪಡಣೆ ಪ್ರಾರಂಭಿಸಿದ್ದಾರೆ.
ಭತ್ತದ ಕಣಜವೆಂದೇ ಹೆಸರುವಾಸಿಯಾದ ತಾಲೂಕಿನಾದ್ಯಂತ ವರ್ಷಗಳು ಗತಿಸಿದಂತೆ ಭತ್ತದ ಬೀಜಗಳ ಬಿತ್ತನೆ ಪ್ರಮಾಣ ಕ್ಷೇತ್ರ ಗಣನೀಯವಾಗಿ ಕಡಿಮೆಯಾಗುತ್ತಿದೆ. ರೈತರು ವಾಣಿಜ್ಯ ಬೆಳೆಗೆ ಮಾರುಹೋಗುತ್ತಿದ್ದಾರೆ. ತಾಲೂಕಿನಾದ್ಯಂತ 18,345 ಹೆಕ್ಟೇರ್ ಜಮೀನಿನಲ್ಲಿ ಗೋವಿನಜೋಳ, 13,207 ಹೆಕ್ಟೇರ್ ಜಮೀನಿನಲ್ಲಿ ಸೋಯಾಬೀನ್, 5,311 ಹೆಕ್ಟೇರ್ ಜಮೀನಿನಲ್ಲಿ ಭತ್ತದ ಬಿತ್ತನೆಯಾಗಿದೆ. 4200 ಹೆಕ್ಟೇರ್ ಪ್ರದೇಶದಲ್ಲಿ ಕಬ್ಬಿನ ನಾಟಿಯಾಗಿದೆ.
ಈ ಬೆಳೆಗಳಿಗೆ ತೇವಾಂಶಕ್ಕೆ ಅನುಗುಣವಾಗಿ ಪ್ರತಿಶತ ನೀರಿನ ಪ್ರಮಾಣದಷ್ಟು ಮಳೆಯಾಗುತ್ತಿದ್ದು, ರೈತರಲ್ಲಿ ಉತ್ಸಾಹ ಮೂಡಿದೆ. ಕಳೆದ ಎರಡು ವಾರಗಳಿಂದ ಮಳೆರಾಯ ಬಾರದಿರುವುದನ್ನೇ ಉತ್ತಮ ಸಮಯವನ್ನಾಗಿಸಿಕೊಂಡ ರೈತರು ತಮ್ಮ ಜಮೀನಿನಲ್ಲಿನ ಬೆಳೆಗಳಿಗೆ ಮೇಲುಗೊಬ್ಬರ ಹಾಗೂ ಸಸ್ಯ ಸಂರಕ್ಷಣಾ ಔಷಧಿ ಸಿಂಪಡಣೆಗೆ ಮುಂದಾಗಿದ್ದಾರೆ.
ಕಳೆದ ವರ್ಷ ಅತಿವೃಷ್ಟಿಯಿಂದಾಗಿ ಶೇ.80 ಬೆಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಈಗಲೂ ಅಂದಿನ ಅತಿವೃಷ್ಟಿ ದೃಶ್ಯ ಕಣ್ಮುಂದೆ ಕಟ್ಟಿದಂತಿದೆ. ಹಿಂದಿನ ವ್ಯವಸಾಯಕ್ಕಾಗಿ ಮಾಡಿದ ಸಾಲವೇ ಭಾರವಾಗಿದ್ದು, ಸಮಯಕ್ಕೆ ಸರಿಯಾಗಿ ಸಮರ್ಪಕವಾದ ಮಳೆ ಮುಂದೆಯೂ ಆದಲ್ಲಿ ಉತ್ತಮ ಫಸಲು ಬಂದು ಬಾಳು ಹಸನಾಗಿಸಿಕೊಳ್ಳುವ ನಿರೀಕ್ಷೆಯಲ್ಲಿ ರೈತಕುಲವಿದೆ. ವಾಡಿಕೆ ಮಳೆ 336 ಮಿಲಿಮೀಟರ್ ಆಗಬೇಕಿದ್ದು, ವಾಸ್ತವವಾಗಿ 356 ಮಿಲಿಮೀಟರ್ ಮಳೆ ಸುರಿದಿರುವುದರಿಂದ ಪ್ರತಿಶತ ನೂರರಷ್ಟು ಮಳೆಯಾಗಿ ರೈತವರ್ಗ ಹರ್ಷಚಿತ್ತವಾಗಿದೆ. ಈಗಾಗಲೇ ತಾಲೂಕಿನಾದ್ಯಂತ ಅಧಿಕೃತ ಕೃಷಿ ಪರಿಕರ ಮಾರಾಟಗಾರರು ಹಾಗೂ ಕೃಷಿ ಪತ್ತಿನ ಸಹಕಾರಿ ಸಂಘಗಳಲ್ಲಿ ರೈತರೆಲ್ಲರಿಗೆ ಅವಶ್ಯಕ ರಸಗೊಬ್ಬರದ ದಾಸ್ತಾನನ್ನು ಮಾಡಿಸುವಲ್ಲಿ ಅಧಿ ಕಾರಿ ವರ್ಗ ಸಫಲವಾಗಿದೆ.
ಮೇ ತಿಂಗಳಲ್ಲಿ ಸರಕಾರ ರೈತ ಸಂಪರ್ಕ ಕೇಂದ್ರಗಳ ಮುಖಾಂತರ ತಾಲೂಕಿನಾದ್ಯಂತ ವಿತರಿಸಿದ ಸೋಯಾಬೀನ್ ಬೀಜವನ್ನು ರೈತರು ಮೇ 25ರಿಂದ 30ರ ಅವಧಿಯಲ್ಲಿ ಬಿತ್ತನೆ ಮಾಡಿದ್ದು, ಹೆಚ್ಚಿನದಾಗಿ ಮೊಳಕೆ ಒಡೆಯದೇ ಹುಸಿ ಹೋಗಿದೆ. ಕೆಲವೆಡೆ ಮಾತ್ರ ಅಲ್ಪ ಸ್ವಲ್ಪ ಮೊಳಕೆ ಒಡೆದಿದೆ. ಅದಕ್ಕೆ ಮಾಡಿದ ಖರ್ಚು ವೆಚ್ಚದ ಸಾಲವು ರೈತರಿಗಾಗಿದ್ದು ಸದ್ಯ ಸಂಕಷ್ಟುವನ್ನು ಎದುರಿಸುತ್ತಿದ್ದಾರೆ. ಶಾಸಕರು, ಅಧಿಕಾರಿಗಳು ಹಾಗೂ ವಿಜ್ಞಾನಿಗಳು ಸ್ಥಳ ಪರಿಶೀಲನೆ ನಡೆಸಿ ರೈತರಿಗೆ ಅನುಕೂಲಕರ ಆಗುವ ನಿಟ್ಟಿನಲ್ಲಿ ಸೂಕ್ತ ಕ್ರಮ ಜರುಗಿಸಿದ್ದಾರೆ.
ಗೋವಿನಜೋಳ ಬೆಳೆದ ರೈತರು ಅಂತರ ಬೇಸಾಯ (ಎಡೆಕುಂಟಿ) ಮಾಡದಿರುವುದು ಗಮನಕ್ಕೆ ಬಂದಿದೆ. ಪ್ರತಿಯೊಬ್ಬ ರೈತರು ಎಡೆಕುಂಟೆ ಮಾಡಿ ಗೋವಿನಜೋಳಕ್ಕೆ ಮಣ್ಣನ್ನು ಏರಿಸುವುದರಿಂದ ಬೆಳೆಗೆ ತೇವಾಂಶವು ಲಭಿಸುವುದರ ಜೊತೆಗೆ ಗಿಡಗಳಿಗೆ ಗಾಳಿಯಿಂದ ಭದ್ರತೆ ದೊರಕಲಿದೆ. 15ರಿಂದ 30 ದಿನಗಳ ಗೋವಿನಜೋಳದ ಬೆಳೆಗೆ ಪಾಲ್‌ಸೈನಿಕ ಹುಳದ ಬಾಧೆ ಕಂಡುಬಂದಲ್ಲಿ ಇಮಾಮೆಕ್ಟಿನ್ ಬೆಂಜೊಯೇಟ್ ಕೀಟನಾಶಕವನ್ನು ತಕ್ಷಣ ಸಿಂಪಡಿಸಿ ಹತೋಟಿ ಕ್ರಮಕ್ಕೆ ಮುಂದಾಗಬೇಕು. –ಎನ್.ಎಫ್. ಕಟ್ಟೆಗೌಡರ, ಸಹಾಯಕ ಕೃಷಿ ನಿರ್ದೇಶಕ
ಸರಕಾರ ನೀಡಿರುವ ಸೋಯಾಬೀಜವನ್ನು ಮೇ ತಿಂಗಳಲ್ಲಿ ಬಿತ್ತನೆ ಮಾಡಿದ್ದು ಮೊಳಕೆ ಒಡೆಯದೇ ಅದರ ಖರ್ಚು ವೆಚ್ಚದ ಸಂಕಷ್ಟವನ್ನು ಎದುರಿಸುತ್ತಿದ್ದೇವೆ. ಇದೀಗ ಸ್ಥಳೀಯವಾಗಿ ದೊರೆತ ಬೀಜಗಳನ್ನು ಮರು ಬಿತ್ತನೆ ಮಾಡಿ ಉಳಿದ ಜಮೀನಿನಲ್ಲಿ ಗೋವಿನ ಜೋಳ ಬಿತ್ತಲಾಗಿದೆ. ದನಕರುಗಳ ಮೇವು ಹಾಗೂ ಗೋವಿನಜೋಳದ ಫಸಲನ್ನು ಪಡೆಯುವ ವಿಶ್ವಾಸದಲ್ಲಿದ್ದೇವೆ. –ಪ್ರಭುಲಿಂಗ ಕಂಪ್ಲಿ, ಉಗ್ಗಿನಕೇರಿ ರೈತ
–ಪ್ರಭಾಕರ ನಾಯಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
ಹೊಸ ವರ್ಷದ ಕೊಡುಗೆ: ಬೈಸಿಕಲ್ ಉತ್ತೇಜನಕ್ಕೆ ಉಚಿತ ರೈಡ್
Laxmi Hebbalkar ಮತ್ತೊಂದು ದೂರು ನೀಡಿದ ಅನಂತರವಷ್ಟೇ ಮುಂದಿನ ಕ್ರಮ: ಹೊರಟ್ಟಿ
Hubballi: ಹಳೇ ವೈಷಮ್ಯದಿಂದ ಸಹಚರರೊಂದಿಗೆ ಸೇರಿ ಹಲ್ಲೆ; ವ್ಯಕ್ತಿ ಮೃತ್ಯು
Hubli: ತುಂಬು ಗರ್ಭಿಣಿ ಸಾವು; ಪತಿಯೂ ಆತ್ಮಹತ್ಯೆ ಯತ್ನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು
Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ
Kasaragod: ಬಟ್ಟಿಪದವು; ಪ್ಲೈವುಡ್ ಮಿಲ್ಲಿಗೆ ಬೆಂಕಿ
Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ
Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.