ತೆನೆ ಕಟ್ಟಿದ ಬೆಳೆ ಇಲ್ಲದೆ ಕಳೆ ಕಟ್ಟದ ಮೇಳ
Team Udayavani, Jan 21, 2020, 10:07 AM IST
ಧಾರವಾಡ: ತೆನೆ ಕಟ್ಟಿದ ಜೋಳವಿರಲಿಲ್ಲ, ಗೊನೆ ಹೊತ್ತ ಬಾಳೆಹಣ್ಣಿನ ಗಿಡಗಳೂ ಇರಲಿಲ್ಲ, ಮೈದುಂಬಿಕೊಂಡ ಫಲಗಳು ಸಿಗಲಿಲ್ಲ, ಸುವಾಸನೆ ಬೀರುವ ಪುಷ್ಪಗಳು ಇರಲಿಲ್ಲ, ಒಟ್ಟಿನಲ್ಲಿ ಕೃಷಿ ಮೇಳದ ಖದರ್ ಹಿಂದಿನ ವರ್ಷಗಳಂತೆ ಇರಲಿಲ್ಲ. ಕೃಷಿ ಮೇಳ-2019ರಲ್ಲಿ ಪಾಲ್ಗೊಂಡ ರೈತರು ಮತ್ತು ರೈತ ಮಹಿಳೆಯರು ಈ ವರ್ಷದ ಧಾರವಾಡ ಕೃಷಿ ಮೇಳ ಸಪ್ಪೆಯಾಗಿತ್ತು ಎನ್ನುವುದನ್ನು ಖಡಾಖಂಡಿತವಾಗಿ ತಮ್ಮ ಮಾತುಗಳಲ್ಲಿ ಹೇಳಿದ ಪರಿಯಿದು.
ಧಾರವಾಡ ಕೃಷಿ ವಿವಿ ದೇಶದ ವಿವಿಗಳ ಪಟ್ಟಿಯಲ್ಲಿ 7ನೇ ಶ್ರೇಯಾಂಕದಲ್ಲಿದೆ. ಇಲ್ಲಿನ ಸಂಶೋಧನೆಗಳು, ತಳಿ ಸುಧಾರಣೆಗಳು, ಆಧುನಿಕ ಕೃಷಿ ತಂತ್ರಜ್ಞಾನಗಳ ಅನ್ವೇಷಣೆಗಳು ವಿಶ್ವದಾದ್ಯಂತ ಹೆಸರು ಮಾಡಿದ್ದು ಸುಳ್ಳಲ್ಲ. ಆದರೆ ಈ ವರ್ಷದ ಕೃಷಿ ಮೇಳ ವಿಳಂಬವಾಗಿ ಆಗಿದ್ದರಿಂದ ಕೃಷಿಗೆ ಸಂಬಂಧಿಸಿದ ತಾಕುಗಳು, ಪ್ರಾತ್ಯಕ್ಷಿಕೆಗಳು ಮತ್ತು ವಿನೂತನ ತಂತ್ರಜ್ಞಾನದಕೃಷಿ ವಿಚಾರಗಳನ್ನು ಪಸರಿಸುವ ಕಾರ್ಯ ಅಷ್ಟಾಗಿ ನಡೆಯಲಿಲ್ಲ.
ಕೃಷಿಮೇಳ ರೈತರಿಗೆ ಸುಧಾರಿತ ತಂತ್ರಜ್ಞಾನ ಮತ್ತು ಉತ್ತಮ ತಳಿಗಳನ್ನು ಹೇಗೆ ಬೆಳೆಸುವುದು, ಅವುಗಳಿಂದ ಆಗುವಲಾಭಗಳೇನು? ಎಂಬುದನ್ನು ಮನದಟ್ಟು ಮಾಡುವುದಕ್ಕೂ ವೇದಿಕೆಯಾಗಬೇಕಿತ್ತು. ಆದರೆ ವರ್ಷದಿಂದ ವರ್ಷಕ್ಕೆ ಅಂಗಡಿಗಳ ಸಾಲು ಹೆಚ್ಚಾಗುತ್ತಿವೆ. ಆದರೆ ಬಡ ರೈತರಿಗೆ ಉಚಿತವಾಗಿ ಮಳಿಗೆ ಸಿಕ್ಕುವುದು ಅಸಾಧ್ಯ. ಪ್ರತಿ ಮಳಿಗೆಗೂ ಸಾವಿರಗಟ್ಟಲೇ ಹಣ ನೀಡಿದವರಿಗೆ ಮಾತ್ರ ಅವಕಾಶ ಕಲ್ಪಿಸಲಾಗುತ್ತಿದೆ. ನಾಲ್ಕು ದಿನಕ್ಕೆ 35 ಸಾವಿರಗಟ್ಟಲೇ ಹಣಕೊಟ್ಟು ಮಳಿಗೆ ಕೊಳ್ಳಲಾಗದ ಎಷ್ಟೋ ಸಣ್ಣ ಗೃಹೋದ್ಯಮಗಳು, ಸಹಕಾರ ಸಂಘಗಳು ಈ ವರ್ಷ ಮೇಳದತ್ತ ಸುಳಿಯುವ ಸಾಹಸ ಕೈ ಬಿಟ್ಟಿವೆ.
ರೈತ ಪ್ರಾಧಾನ್ಯತೆ ಸಿಗಲಿಲ್ಲ: ಕೃಷಿ ಮೇಳದಲ್ಲಿ ಅದರಲ್ಲೂ ಅಲ್ಲಿನ ಪ್ರದರ್ಶನ ಮಳಿಗೆಗಳಲ್ಲಿ ರೈತರಿಗೆ ಶೇ.50 ಪ್ರಾಧ್ಯಾನ್ಯತೆ ಸಿಗಬೇಕು. ಅಲ್ಲಿ ರೈತರೇ ಸಂಶೋಧನೆ ಮಾಡಿದ ಹೊಸ ತಂತ್ರಜ್ಞಾನಗಳನ್ನು ಹುಡುಕಿ ಪ್ರದರ್ಶಿಸುವುದಕ್ಕೆ ಕೃಷಿ ವಿವಿ ವ್ಯವಸ್ಥೆ ಮಾಡಬೇಕು. ಬೀಜ ಸಂರಕ್ಷಣೆ, ಕೃಷಿಯಲ್ಲಿನ ಹೊಸ ಆವಿಷ್ಕಾರಗಳನ್ನು ನೇರವಾಗಿ ರೈತರಿಗೆ ತಲುಪಿಸುವುದಕ್ಕೆ ಇನ್ನಷ್ಟು ಹೊಸ ಆಯಾಮಗಳನ್ನು ಶೋಧಿಸಬೇಕು. ಬೀದರ್‌ನಿಂದ ಹಿಡಿದು ದಾವಣಗೆರೆ ವರೆಗೂ ಎಲ್ಲ ಜಿಲ್ಲೆಗಳ ರೈತರೂ ಮೇಳಕ್ಕೆ ಭೇಟಿ ಕೊಟ್ಟಿದ್ದರು. ಅವರಲ್ಲಿ ಅನೇಕರನ್ನು “ಉದಯವಾಣಿ’ ಮಾತನಾಡಿಸಿದಾಗ, ಕೃಷಿ ಮೇಳದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಈ ಕೃಷಿಮೇಳ ನಿಜವಾಗಿಯೂ ರೈತರಿಗೆ ಶ್ರದ್ಧಾ ಭಕ್ತಿಯ ಜಾತ್ರೆಯಾಗಬೇಕೆ ಹೊರತು, ಬರೀ ರಕು ಸಾಮಾನು ಮಾರಾಟ ಮಾಡುವ ಮಾರುಕಟ್ಟೆಯಾಗಬಾರದು. ಈ ಕುರಿತು ಕೃಷಿ ವಿವಿ ಮುಂದಿನ ವರ್ಷವಾದರೂ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ಕಳೆಗುಂದಿದ ವ್ಯಾಪಾರ: ನಾಲ್ಕು ದಿನಗಳಿಗೆ ಬದಲಾಗಿ ಮೂರು ದಿನ ಮಾತ್ರ ಮೇಳ ನಡೆಯಿತು. ಅಲ್ಲದೇ ಸಮಯ ಮೀರಿ ಕೃಷಿ ಮೇಳ ನಡೆಸಿದ್ದರಿಂದ ಶೇ.60 ಜನರು ಅಂದರೆ 10 ಲಕ್ಷ ದಷ್ಟು ಜನರ ಕೊರತೆ ಕೃಷಿ ಮೇಳಕ್ಕೆ ಆಯಿತು. ಹೀಗಾಗಿ ವ್ಯಾಪಾರ ವಹಿವಾಟು ನೆಚ್ಚಿಕೊಂಡು ಅಂಗಡಿ ಸಾಲು ಹಾಕಿದ್ದ ಮಳಿಗೆ ವ್ಯಾಪಾರಿಗಳಿಗೂ ಬರೋಬ್ಬರಿ ಹೊಡೆತ ಬಿದ್ದಿದೆ. ಟ್ರ್ಯಾಕ್ಟರ್, ಜೆಸಿಬಿ, ಟೈರ್ ಸೇರಿದಂತೆ ಕೃಷಿ ಯಂತ್ರೋಪಕರಣಗಳ ಖರೀದಿಯೂ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.60 ಕುಸಿತಗೊಂಡಿದೆ. ಪ್ರತಿದಿನ 4 ಟ್ರ್ಯಾಕ್ಟರ್‌ಗಳ ಪೂಜೆಗೆ ಪಟಾಕಿ ಹೊಡೆಯುತ್ತಿದ್ದ ರೈತರಿಂದ ಕಳೆಕಟ್ಟುತ್ತಿದ್ದ ಕೃಷಿ ಮೇಳದಲ್ಲಿ ಈ ವರ್ಷ ಕೊನೆಯ ದಿನ ಮಾತ್ರ ಎರಡು ಟ್ರ್ಯಾಕ್ಟರ್‌ಗಳು ಮಾರಾಟವಾಗಿದ್ದು ಕಂಡು ಬಂತು.
ಇಷ್ಟೊದೊಡ್ಡ ಮೇಳದಲ್ಲಿ ವಾಣಿಜ್ಯ ಮತ್ತು ವ್ಯಾಪಾರಕ್ಕೆ ಹೆಚ್ಚಿನ ಪ್ರಾಶಸ್ತÂ ಕಂಡು ಬಂದಿತು. ವರ್ಷದಿಂದ ವರ್ಷಕ್ಕೆ ವ್ಯಾಪಾರ ವಹಿವಾಟು ಹೆಚ್ಚಾಗುತ್ತಿದೆಯೇ ಹೊರತು ನೈಜ ಕೃಷಿಗೆ ಮತ್ತು ಸಣ್ಣ ರೈತನಿಗೆ ಬೇಕಾಗುವ ಕೃಷಿ ವಿಧಾನಗಳು, ಸಲಕರಣೆಗಳು ಮತ್ತು ತಂತ್ರಜ್ಞಾನ ಅಷ್ಟಾಗಿ ಸಿಕ್ಕುತ್ತಿಲ್ಲ. ಹೀಗಾಗಿ ಮುಂದಿನ ವರ್ಷವಾದರೂ ರೈತರಿಗೆ ಹೆಚ್ಚು ಅನುಕೂಲವಾಗುವ ರೀತಿಯಲ್ಲಿ ಮೇಳ ಸಂಘಟನೆಯಾಗಲಿ ಎಂದು ಕೆಲವು ರೈತರು ಸಂಘಟಕರಿಗೆ ಹೇಳಿದ್ದು ವಿಶೇಷವಾಗಿತ್ತು.
5 ಲಕ್ಷಕ್ಕಿಳಿದ ಜನರ ಭೇಟಿ : ಪ್ರತಿವರ್ಷ 12-16 ಲಕ್ಷ ಜನರು ಸೇರುತ್ತಿದ್ದ ಮೇಳಕ್ಕೆ ಈ ವರ್ಷ ಬರೀ 5 ಲಕ್ಷ ಜನರು ಸೇರಿದ್ದಾರೆ. ಹೀಗಾಗಿ ಕೃಷಿ ಮೇಳದ ಕಳೆಯೇ ಹೋಗಿತ್ತು. ಇನ್ನು ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆದಿಯಾಗಿ ರೈತ ಮುಖಂಡರು ಕೂಡ ಅಷ್ಟಾಗಿ ಕೃಷಿ ಮೇಳದತ್ತ ಸುಳಿಯಲ್ಲಿಲ್ಲ. ಉದ್ಘಾಟನೆ ಕಾರ್ಯಕ್ರಮವೇ ಕಳೆಗುಂದಿತ್ತು. ಮೊದಲ ದಿನ ಜನರ ಕೊರತೆ ಎದುರಿಸಿದ್ದ ಕೃಷಿ ಮೇಳ ರವಿವಾರ ಮಾತ್ರ ಕೊಂಚ ನಗರವಾಸಿಗಳ ಖರೀದಿ ಭರಾಟೆ ಮತ್ತುಕುಟುಂಬ ಸಮೇತ ಸುತ್ತಾಟದಿಂದ ಕಳೆಕಟ್ಟಿತ್ತು. ಕೊನೆಯ ದಿನ ರೈತರು ಕಡಿಮೆ ಸಂಖ್ಯೆಯಲ್ಲಿ ಬಂದಿದ್ದರಿಂದ ಕೃಷಿ ಮೇಳ ಕಳೆ ಕಟ್ಟಲಿಲ್ಲ
ಸಲಹೆ ಪಡೆದ ರೈತರು : ಕೃಷಿ ವಿವಿಯ ಪ್ರಾಧ್ಯಾಪಕರು ಮತ್ತು ಕೃಷಿ ವಿಜ್ಞಾನಿಗಳು ತಳಿ ಸಂರಕ್ಷಣೆ, ಮಳೆ ಕೊಯ್ಲು, ಬೀಜೋತ್ಪಾದನೆ, ಪೌಷ್ಟಿಕ ಧಾನ್ಯ ಬೆಳೆಯುವುದು, ಹನಿ ನೀರಾವರಿ, ಸಾವಯವ ಕೃಷಿ, ಸಾವಯವ ಕ್ರಿಮಿನಾಶಕಗಳು, ಗೊಬ್ಬರದ ಬಳಕೆ, ಕಡಿಮೆ ವೆಚ್ಚದ ಕೃಷಿ, ಯಂತ್ರೋಪಕರಣ ಬಳಕೆ, ಬೀಜ ವಿತರಣೆ ಸೇರಿದಂತೆ ಅನೇಕ ವಿಷಯಗಳ ಕುರಿತು ಸಲಹೆಗಳನ್ನು ರೈತರಿಗೆ ನೀಡಿದರು. ಸೈನಿಕ ಹುಳು ನಿಯಂತ್ರಣ, ಸಾವಯವ ಕೃಷಿ ಮತ್ತು ಬೀಜೋತ್ಪಾದನೆ ಕುರಿತು ಹೆಚ್ಚು ರೈತರು ಸಲಹೆ ಪಡೆದುಕೊಂಡಿದ್ದು ವಿಶೇಷ. ಇಸ್ರೇಲ್ ಮಾದರಿ ಕೃಷಿ, ನಗರ ಕೃಷಿಯ ಬಗ್ಗೆ ಇಟ್ಟಿದ್ದ ಪ್ರಾತ್ಯಕ್ಷಿಕೆಗಳು ಈ ವರ್ಷದ ಕೃಷಿ ಮೇಳದಲ್ಲಿ ನಗರವಾಸಿಗಳನ್ನು ಸೆಳೆದಿದ್ದು ಸತ್ಯ.
ಅರ್ಥಪೂರ್ಣ ಕೃಷಿ ಮೇಳಕ್ಕೆ ಆಗ್ರಹ : ರೈತರಿಂದ ರೈತರಿಗಾಗಿ ರೈತರಿಗೋಸ್ಕರ ನಡೆಯುವ ಧಾರವಾಡ ಕೃಷಿಮೇಳ ಇಂದು ದೇಶದ ಅಗ್ರಗಣ್ಯ ಮೇಳಗಳಲ್ಲಿ ಸ್ಥಾನ ಪಡೆದುಕೊಂಡಿದ್ದು ಹೆಮ್ಮೆಯ ವಿಚಾರ. ಆದರೆ ಕೃಷಿ ಮೇಳವೇ ವಾಣಿಜ್ಯೀಕರಣಗೊಂಡಿದ್ದು, ಇಡೀ ಕೃಷಿ ಮೇಳದಲ್ಲಿ ಬರೀ ವಸ್ತುಗಳ ಮಾರಾಟದ ಅಂಗಡಿಗಳುಸೇರಿಕೊಂಡಿವೆ. ಖರೀದಿ, ತಿರುಗಣಿಯಲ್ಲಿ ಕುಳಿತು ಖುಷಿ ಪಡುವುದು, ಮಕ್ಕಳಿಗೆ ಆಟಿಕೆ ಕೊಡಿಸುವುದನ್ನು ನೋಡಿದರೆ ಕೃಷಿಮೇಳ ಎಂದರೆ ದೊಡ್ಡ ಜಾತ್ರೆಯಂತೆ ಭಾಸವಾಗುತ್ತಿದೆ. ಕೃಷಿ ವಿವಿ ವ್ಯಾಪ್ತಿಗೆ ಬರುವ ಏಳು ಜಿಲ್ಲೆಯಲ್ಲೂ ವಿಭಿನ್ನ ಹವಾಗುಣ,ಬೆಳೆ ವೈವಿದ್ಯತೆಗಳಿದ್ದು, ಆಯಾ ಪ್ರದೇಶದಲ್ಲಿನ ವಿನೂತನ ಪ್ರಯೋಗ ಮಾಡಿ ಯಶಸ್ಸು ಸಾಧಿಸಿದ ರೈತರನ್ನು ಕೃಷಿ ವಿವಿ ಗುರುತಿಸಿ, ಅವರಿಗೆ ಕೃಷಿಮೇಳದಲ್ಲಿ ಭಾಗಿಯಾಗಲು ಅವಕಾಶ ನೀಡಬೇಕು. ಇದುಜಾರಿಯಾದರೆ ಕೃಷಿಮೇಳ ನಿಜಕ್ಕೂ ಅರ್ಥಪೂರ್ಣಗೊಳ್ಳುತ್ತದೆ ಎನ್ನುತ್ತಾರೆ ಪ್ರಗತಿಪರ ಕೃಷಿಕರು.
-ಬಸವರಾಜ ಹೊಂಗಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ
Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ
Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.