ಇಂದಿನಿಂದ ಅಹ್ಮದಾಬಾದ್, ಚೆನ್ನೈ ವಿಮಾನ ಪುನಾರಂಭ
•ಬಹುದಿನದ ನಿರೀಕ್ಷೆಗೆ ಫಲ•ಹಬ್ಬದ ಹೊಸ್ತಿಲಲ್ಲಿ ಹು-ಧಾ ಜನತೆಗೆ ಸಿಹಿಸುದ್ದಿ
Team Udayavani, Sep 1, 2019, 9:30 AM IST
ಹುಬ್ಬಳ್ಳಿ: ಇಂದಿನಿಂದ ಅಹ್ಮದಾಬಾದ್ ಹಾಗೂ ಚೆನ್ನೈಗೆ ಇಂಡಿಯೋ ವಿಮಾನಯಾನ ಪುನರಾರಂಭಗೊಳ್ಳಲಿದೆ.
ಕೆಲ ತಾಂತ್ರಿಕ ಕಾರಣಗಳಿಂದ ಕಳೆದ ಒಂದು ತಿಂಗಳಿನಿಂದ ನಗರದಿಂದ ಅಹ್ಮದಾಬಾದ್, ಚೆನ್ನೈಗೆ ಸ್ಥಗಿತಗೊಂಡಿದ್ದ ಇಂಡಿಗೋ ವಿಮಾನಯಾನವು ವೇಳೆಯಲ್ಲಿ ಯಾವುದೇ ಬದಲಾವಣೆ ಇಲ್ಲದೆ ಮೊದಲಿನಂತೆ ಸೆ. 1 ರಿಂದ ಮತ್ತೆ ಕಾರ್ಯಾರಂಭಗೊಳ್ಳುತ್ತಿದೆ. ಆ ಮೂಲಕ ಬಹುದಿನಗಳಿಂದ ನಿರೀಕ್ಷೆಯಲ್ಲಿದ್ದ ಬೆಂಗಳೂರು, ಅಹ್ಮದಾಬಾದ್‌ಗೆ ಸಂಚರಿಸುವ ವಿಮಾನಯಾನಿಗಳಿಗೆ ಗಣೇಶೋತ್ಸವದ ಸಂದರ್ಭದಲ್ಲಿ ಸಂತಸದ ಸುದ್ದಿ ಹೊರಹೊಮ್ಮಿದೆ.
ಎ320 ವಿಮಾನಗಳು: ಪ್ರತಿದಿನ ಬೆಂಗಳೂರು-ಹುಬ್ಬಳ್ಳಿ (6ಇ 661) ವಿಮಾನವು ಬೆಳಗ್ಗೆ 8:15 ಗಂಟೆಗೆ ಬೆಂಗಳೂರಿನಿಂದ ಹೊರಟು 9:15 ಗಂಟೆಗೆ ಹುಬ್ಬಳ್ಳಿಗೆ ಆಗಮಿಸಲಿದೆ. ರವಿವಾರ ಹೊರತು ಪಡಿಸಿ ಇನ್ನುಳಿದ ದಿನ ಹುಬ್ಬಳ್ಳಿ-ಅಹ್ಮದಾಬಾದ್ (6ಇ 5994) ಬೆಳಗ್ಗೆ 9:45 ಗಂಟೆಗೆ ಹುಬ್ಬಳ್ಳಿಯಿಂದ ಹೊರಟು 11:20 ಗಂಟೆಗೆ ಅಹ್ಮದಾಬಾದ್ ತಲುಪಲಿದೆ. ಅಹ್ಮದಾಬಾದ್-ಹುಬ್ಬಳ್ಳಿ (6ಇ 5993) ಬೆಳಗ್ಗೆ 11:50 ಗಂಟೆಗೆ ಅಹ್ಮದಾಬಾದ್‌ನಿಂದ ಹೊರಟು ಮಧ್ಯಾಹ್ನ 1:30 ಗಂಟೆಗೆ ಹುಬ್ಬಳ್ಳಿಗೆ ಆಗಮಿಸಲಿದೆ. ಹುಬ್ಬಳ್ಳಿ-ಚೆನ್ನೈ (6ಇ 5992) ಮಧ್ಯಾಹ್ನ 2 ಗಂಟೆಗೆ ಹುಬ್ಬಳ್ಳಿಯಿಂದ ಹೊರಟು 3:20 ಗಂಟೆಗೆ ಚೆನ್ನೈ ತಲುಪಲಿದೆ. ಚೆನ್ನೈ-ಹುಬ್ಬಳ್ಳಿ (6ಇ 5991) 3:50 ಗಂಟೆಗೆ ಚೆನ್ನೈನಿಂದ ಹೊರಟು ಸಂಜೆ 5:15 ಗಂಟೆಗೆ ಹುಬ್ಬಳ್ಳಿಗೆ ಆಗಮಿಸಲಿದೆ. ಹುಬ್ಬಳ್ಳಿ-ಬೆಂಗಳೂರು (6ಇ 662) ಸಂಜೆ 6:00 ಗಂಟೆಗೆ ಹುಬ್ಬಳ್ಳಿಯಿಂದ ಹೊರಟು 7 ಗಂಟೆಗೆ ಬೆಂಗಳೂರು ತಲುಪಲಿದೆ.
ಪ್ರತಿ ರವಿವಾರ ಹುಬ್ಬಳ್ಳಿ-ಚೆನ್ನೈ(6ಎ 5992) ಬೆಳಗ್ಗೆ 9:45 ಗಂಟೆಗೆ ಹುಬ್ಬಳ್ಳಿಯಿಂದ ಹೊರಟು 11 ಗಂಟೆಗೆ ಚೆನ್ನೈಗೆ ತಲುಪಲಿದೆ. ಚೆನ್ನೈ-ಹುಬ್ಬಳ್ಳಿ (6ಇ 5991) ಬೆಳಗ್ಗೆ 11:40 ಗಂಟೆಗೆ ಚೆನ್ನೈನಿಂದ ಹೊರಟು ಮಧ್ಯಾಹ್ನ 1 ಗಂಟೆಗೆ ಹುಬ್ಬಳ್ಳಿಗೆ ಆಗಮಿಸಲಿದೆ. ಹುಬ್ಬಳ್ಳಿ-ಅಹ್ಮದಾಬಾದ್ (6ಇ 5994) ಮಧ್ಯಾಹ್ನ 1:45 ಗಂಟೆಗೆ ಹುಬ್ಬಳ್ಳಿಯಿಂದ ಹೊರಟು 3:25 ಗಂಟೆಗೆ ಅಹ್ಮದಾಬಾದ್ ತಲುಪಲಿದೆ. ಅಹ್ಮದಾಬಾದ್-ಹುಬ್ಬಳ್ಳಿ (6ಇ 5993) ಸಂಜೆ 4 ಗಂಟೆಗೆ ಅಹ್ಮದಾಬಾದ್‌ನಿಂದ ಹೊರಟು 5:45 ಗಂಟೆಗೆ ಹುಬ್ಬಳ್ಳಿಗೆ ಆಗಮಿಸಲಿದೆ. ಹುಬ್ಬಳ್ಳಿ-ಬೆಂಗಳೂರು (6ಇ 662) ಸಂಜೆ 6:15 ಗಂಟೆಗೆ ಹುಬ್ಬಳ್ಳಿಯಿಂದ ಹೊರಟು 7:15 ಗಂಟೆಗೆ ಬೆಂಗಳೂರು ತಲುಪಲಿದೆ.
ಎಟಿಆರ್ ವಿಮಾನಗಳು: ಪ್ರತಿದಿನ ಕನ್ನೂರ-ಹುಬ್ಬಳ್ಳಿ (6ಇ 7979) ಸಂಜೆ 5:15 ಗಂಟೆಗೆ ಕನ್ನೂರನಿಂದ ಹೊರಟು 6:30 ಗಂಟೆಗೆ ಹುಬ್ಬಳ್ಳಿಗೆ ಆಗಮಿಸಲಿದೆ. ಹುಬ್ಬಳ್ಳಿ-ಕನ್ನೂರ ಸಂಜೆ 6:50 ಗಂಟೆಗೆ ಹುಬ್ಬಳ್ಳಿಯಿಂದ ಹೊರಟು ರಾತ್ರಿ 8:10 ಗಂಟೆಗೆ ಕನ್ನೂರ ತಲುಪಲಿದೆ. ಗೋವಾ-ಹುಬ್ಬಳ್ಳಿ (6ಇ 7998) ಸಂಜೆ 6:55 ಗಂಟೆಗೆ ಗೋವಾದಿಂದ ಹೊರಟು 7:50 ಗಂಟೆಗೆ ಹುಬ್ಬಳ್ಳಿಗೆ ಆಗಮಿಸಲಿದೆ. ಹುಬ್ಬಳ್ಳಿ-ಕೊಚ್ಚಿನ್ (6ಎ 7996) ರಾತ್ರಿ 8:10 ಗಂಟೆಗೆ ಹುಬ್ಬಳ್ಳಿಯಿಂದ ಹೊರಟು 10:15 ಗಂಟೆಗೆ ಕೊಚ್ಚಿನ್ ತಲುಪಲಿದೆ.
ಮಂಗಳವಾರ ಹೊರತುಪಡಿಸಿ ಇನ್ನುಳಿದ ದಿನ ಕೊಚ್ಚಿನ್-ಹುಬ್ಬಳ್ಳಿ (6ಇ 7995) ವಿಮಾನವು ಮಧ್ಯಾಹ್ನ 2:55 ಗಂಟೆಗೆ ಕೊಚ್ಚಿನ್‌ದಿಂದ ಹೊರಟು ಸಂಜೆ 5:25 ಗಂಟೆಗೆ ಹುಬ್ಬಳ್ಳಿಗೆ ಆಗಮಿಸಲಿದೆ. ಹುಬ್ಬಳ್ಳಿ-ಗೋವಾ (6ಇ 7997) ಸಂಜೆ 5:45 ಗಂಟೆಗೆ ಹುಬ್ಬಳ್ಳಿಯಿಂದ ಹೊರಟು 6:30 ಗಂಟೆಗೆ ಗೋವಾ ತಲುಪಲಿದೆ.
ಪ್ರತಿ ಮಂಗಳವಾರ ಕೊಚ್ಚಿನ್-ಹುಬ್ಬಳ್ಳಿ (6ಇ 7995) ಮಧ್ಯಾಹ್ನ 1:40 ಗಂಟೆಗೆ ಕೊಚ್ಚಿನ್‌ದಿಂದ ಹೊರಟು ಸಂಜೆ 4:30 ಗಂಟೆಗೆ ಹುಬ್ಬಳ್ಳಿಗೆ ಆಗಮಿಸಲಿದೆ. ಹುಬ್ಬಳ್ಳಿ-ಗೋವಾ (6ಇ 7997) ಸಂಜೆ 5:30 ಗಂಟೆಗೆ ಹುಬ್ಬಳ್ಳಿಯಿಂದ ಹೊರಟು 6:35 ಗಂಟೆಗೆ ಗೋವಾ ತಲುಪಲಿದೆ. ಎ320 ಏರ್‌ಬಸ್ ವಿಮಾನವು 180 ಆಸನಗಳ ಸಾಮರ್ಥ್ಯದ್ದು ಹಾಗೂ ಎಟಿಆರ್ ವಿಮಾನವು 74 ಆಸನಗಳ ಸಾಮರ್ಥ್ಯದ್ದಾಗಿದೆ ಎಂದು ಕಂಪನಿಯ ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Rohit Sharma; ಮುಗಿಯಿತಾ ರೋಹಿತ್ ಕ್ರಿಕೆಟ್ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.