ಅಖೀಲ ಭಾರತ ಜಾನಪದ ಸಮ್ಮೇಳನ 17ರಿಂದ
Team Udayavani, Mar 15, 2017, 2:35 PM IST
ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ಜಾನಪದ ಅಧ್ಯಯನ ವಿಭಾಗ ಹಾಗೂ ಕೆ.ಇ.ಬೋರ್ಡ್ ಕಾಲೇಜ್ ಸಹಯೋಗದಲ್ಲಿ ಮಾ.17 ಮತ್ತು 18ರಂದು ನಗರದಲ್ಲಿ ಅಖೀಲ ಭಾರತ ಜಾನಪದ ಸಮ್ಮೇಳನ ಆಯೋಜಿಸಲಾಗಿದೆ ಎಂದು ಕಾಲೇಜಿನ ಪ್ರಾಚಾರ್ಯಪ್ರೊ| ಮೋಹನ ಸಿದ್ದಾಂತಿ ಹೇಳಿದರು. ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಕರ್ನಾಟಕ ವಿಶ್ವವಿದ್ಯಾಲಯ 1973ರಿಂದ ರಾಜ್ಯಮಟ್ಟದ ಜಾನಪದ ಸಮ್ಮೇಳನ ನಡೆಸಿಕೊಂಡು ಬರುತ್ತಿದ್ದು, ಈವರೆಗೆ ಜನಪದದ ವಿವಿಧ ವಿಷಯಗಳ ಮೇಲೆ 42 ಸಮ್ಮೇಳನ ಮಾಡಲಾಗಿದೆ. ಇದೀಗ ಈ 43ನೇ ಸಮ್ಮೇಳನವನ್ನು “ಅಡ್ಡಹೆಸರು’ ಎಂಬ ವಿಷಯವನ್ನು ಆಧಾರ ವಾಗಿಟ್ಟುಕೊಂಡು ನಡೆಯಲಿದ್ದು, ಧಾರವಾಡದ ಜಾನಪದ ವಿದ್ವಾಂಸೆ ಡಾ|ಶಾಲಿನಿ ರಘುನಾಥ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದಾರೆ ಎಂದರು.
ಪ್ರತಿ ಸಮ್ಮೇಳದ ಸಂದರ್ಭದಲ್ಲಿ ಹೊಸ ಹಾಗೂ ಪ್ರಚಲಿತ ವಿಷಯವೊಂದನ್ನು ಇಟ್ಟುಕೊಂಡು ವಿಚಾರ ಸಂಕಿರಣ ನಡೆಸಲಾಗುತ್ತಿದ್ದು, ಇದುವರೆಗೆ ಜನಪದ ಸಾಹಿತ್ಯ, ಬಯಲಾಟ, ಕರ್ನಾಟಕ ಗ್ರಾಮ ದೇವತೆಗಳು, ಜಾನಪದ ಹಬ್ಬಗಳು, ಆಕಾಶ ಜಾನಪದ, ತೊಗಲು ಗೊಂಬೆಯಾಟ, ವಸತಿ ಜಾನಪದ, ಜನಪದ ಚಿತ್ರಕಲೆ, ಜನಪದ ವೈದ್ಯ, ಜಲ ಜಾನಪದ, ಪ್ರವಾಸೋದ್ಯಮ ಮತ್ತು ಜಾನಪದ, ಸಮುದ್ರ ಜಾನಪದ,
ಶರೀರ ಜಾನಪದ, ಜಾನಪದ ವಿನೋದ ಎಂಬ 42 ವಿಷಯಗಳ ಅಡಿಯಲ್ಲಿ ಜರುಗಿದ್ದು, ಈ ಬಾರಿ ಐತಿಹಾಸಿಕ ರಾಜ ಮನೆತನಗಳ ಅಡ್ಡಹೆಸರು(ಕುಟುಂಬ ನಾಮ) ವಿಷಯದ ಮೇಲೆ ಜರುಗಲಿದೆ ಎಂದರು. ಸಮ್ಮೇಳನದಲ್ಲಿ ಏನಿದೆ ?: ಮಾ.17ರಂದು ನಡೆಯುವ ಸಮ್ಮೇಳನವನ್ನು ಕವಿವಿ ಕುಲಪತಿ ಪ್ರೊ|ಪ್ರಮೋದ ಗಾಯಿ ಉದ್ಘಾಟಿಸುವರು.
ನಂತರ “ಜನಪದ ಮಹಾಕಾವ್ಯಗಳಲ್ಲಿ ಸಾಂಸ್ಕೃತಿಕ ನಾಯಕತ್ವ’ ವಿಷಯದ 42ನೇ ಸಾಹಿತ್ಯ ದರ್ಶನ ಗ್ರಂಥವನ್ನು ಡಾ| ಸೋಮಶೇಖರ ಇಮ್ರಾಪುರ ಬಿಡುಗಡೆ ಮಾಡಲಿದ್ದು, ಡಾ|ಸಂಗಮೇಶ ಸವದತ್ತಿಮಠ ಆಶಯ ಭಾಷಣ ಮಾಡುವರು. ಯಶವಂತ ಸರದೇಶಪಾಂಡೆ, ನಾಗೇಶ ಶಾನಭಾಗ ಅತಿಥಿಗಳಾಗಿ ಆಗಮಿಸಲಿದ್ದು, ಪ್ರೊ|ಮೋಹನ ಸಿದ್ಧಾಂತಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಮಾ.18ರಂದು ಜರುಗುವ ಸಮ್ಮೇಳನದ ಸಮಾರೋಪದಲ್ಲಿ ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಪ್ರಭಾರಿ ಕುಲಪತಿ ಡಾ|ಡಿ.ಬಿ. ನಾಯಕ ಸಮಾರೋಪ ಭಾಷಣ ಮಾಡುವರು. ಸಂಸದ ಪ್ರಹ್ಲಾದ ಜೋಶಿ, ವಿಪ ಸದಸ್ಯ ಪ್ರೊ| ಎಸ್.ವಿ. ಸಂಕನೂರ, ಕೆ.ಇ. ಬೋರ್ಡ್ ಕಾಲೇಜಿನ ಕಾರ್ಯಾಧ್ಯಕ್ಷ ಶ್ರೀಕಾಂತ ಪಾಟೀಲ, ಕವಿವಿ ಕುಲಪತಿ ಪ್ರೊ|ಪ್ರಮೋದ ಗಾಯಿ,
ಡಾ|ಸಮ್ಮೇಳನದ ಸರ್ವಾಧ್ಯಕ್ಷೆ ಶಾಲಿನಿ ರಘುನಾಥ ಆಗಮಿಸಲಿದ್ದು, ಕವಿವಿ ಕುಲಸಚಿವ ಡಾ|ಎಂ.ಎನ್. ಜೋಶಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು. ಮಾ.17 ಮತ್ತು 18ರಂದು ಎರಡು ದಿನ ನಡೆಯುವ ನಡೆಯುವ ಗೋಷ್ಠಿಯಲ್ಲಿ ನಾಡಿನ ವಿವಿಧ ಹೆಸರಾಂತ ಪ್ರಾಧ್ಯಾಪಕರು, ವಿದ್ವಾಂಸರು ವಿಷಯ ಮಂಡಿಸಲಿದ್ದಾರೆ. ಅಂದು ಮಧ್ಯಾಹ್ನ 1:30 ಗಂಟೆಗೆ ಅಡ್ಡಹೆಸರು: ಪರಿಕಲ್ಪನೆ, ಶಾಸನೋಕ್ತ ವಿಷಯದ ಅಂಗವಾಗಿ ನಡೆಯುವ ಮೊದಲ ಗೋಷ್ಠಿಯ ಅಧ್ಯಕ್ಷತೆಯನ್ನು ಡಾ|ಬಿ.ಎಲ್. ನಡೋಣಿ ವಹಿಸಲಿದ್ದಾರೆ ಎಂದರು.
ಅಡ್ಡಹೆಸರಿನ ಅರ್ಥ, ಸ್ವರೂಪ ಕುರಿತು ಧಾರವಾಡದ ಡಾ|ರಾಜೇಂದ್ರ ನಾಯಕ, ಅಡ್ಡಹೆಸರಿನ ಚರಿತ್ರೆ ಮತ್ತು ರಾಚನಿಕ ಅಧ್ಯಯನ ಕುರಿತು ಹಂಪಿಯ ಡಾ|ವೀರೇಶ ಬಡಿಗೇರ, ಅಡ್ಡಹೆಸರಿನ ಬಳಕೆ ವಿಧಾನ ಕುರಿತು ಧಾರವಾಡದ ವಿ.ಎಲ್. ಪಾಟೀಲ, ಶಾಸನಗಳು ಮತ್ತು ಅಡ್ಡಹೆಸರು ಕುರಿತು ಡಾ| ಕಲವೀರ ಮನ್ವಾಚಾರಿ ಅವರು ವಿಷಯ ಮಂಡಿಸುವರು. ಡಾ|ಎಚ್.ಎಚ್. ನದಾಫ್, ಕೆ.ಬಿ.ದಂಡಗಿ ಗೋಷ್ಠಿ ನಿರ್ವಹಿಸುವರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NABARD ನಿರ್ಧಾರದಿಂದ ಕೃಷಿಗೆ ಹಿನ್ನಡೆ; ಸಾಲದ ಮೊತ್ತ ಕಡಿತ ಮಾಡದಿರಲು ಸಚಿವ ಪಾಟೀಲ ಆಗ್ರಹ
ಸಿಎಂ ಆಗಿದ್ದವರು ಈ ರೀತಿ ಹೇಳಿಕೆ ನೀಡುವ ಬದಲು, ಸ್ಪಷ್ಟ ಹೇಳಿಕೆ ನೀಡಲಿ: ಸಚಿವ ಶಿವಾನಂದ
dharwad: ಪೊಲೀಸ್ ಪೇದೆ ಮೇಲೆ ಕೈ ಮುಖಂಡ ತಮಟಗಾರ ಸಹೋದರ ಬ್ಲೇಡ್ ನಿಂದ ಹಲ್ಲೆ
Covid Scam: ಸಚಿವ ಸಂಪುಟದಲ್ಲಿ ಚರ್ಚಿಸಿ ಮುಂದಿನ ಕ್ರಮ: ಸಿಎಂ ಸಿದ್ದರಾಮಯ್ಯ
By Election: ಹಣ ಕೊಟ್ಟರೂ ಸಿಎಂ ಕಾರ್ಯಕ್ರಮಕ್ಕೆ ಜನ ಬರುತ್ತಿಲ್ಲ: ಬಿಎಸ್ ವೈ
MUST WATCH
ಹೊಸ ಸೇರ್ಪಡೆ
Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು
Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.