ಲಾಕ್‌ಡೌನ್ ನಡುವೆ ಪರ್ಯಾಯ ವ್ಯಾಪಾರ!
ಬದುಕಿನ ಬಂಡಿ ಸಾಗಿಸಲು ಅನಿವಾರ್ಯ, ಮನೆ ಬಾಗಿಲಿಗೇ ಸರಕು-ಸೇವೆ ಸೌಕರ್ಯ
Team Udayavani, Jun 14, 2021, 4:28 PM IST
ವರದಿ: ಶಶಿಧರ್ ಬುದ್ನಿ
ಧಾರವಾಡ: ಹೊಸ ಮೊಬೈಲ್, ಲ್ಯಾಪ್‌ಟಾಪ್ ಬೇಕೆ? ಅಥವಾ ರಿಪೇರಿ ಆಗಬೇಕೆ? ಇಲೆಕ್ಟ್ರಾನಿಕ್ ವಸ್ತುಗಳು ಬೇಕೆ? ಸೀರೆ, ಬಟ್ಟೆ ಬೇಕೆ? ಬಂಗಾರ ಆಭರಣ ಕೊಳ್ಳಬೇಕೆ? ನಮ್ಮನ್ನು ಸಂಪರ್ಕಿಸಿ ನಿಮಗೆ ತಲುಪಿಸುವ ವ್ಯವಸ್ಥೆ ಮಾಡುತ್ತೇವೆ!
ಕೋವಿಡ್ 2ನೇ ಅಲೆಯ ನಿಯಂತ್ರಣಕ್ಕೆ ಒಂದುವರೆ ತಿಂಗಳಿಂದ ಜಾರಿ ಮಾಡಿರುವ ಲಾಕ್ ಡೌನ್ ಹಿನ್ನೆಲೆಯಲ್ಲಿ ಮೊಬೈಲ್, ಇಲೆಕ್ಟ್ರಾನಿಕ್, ಬಟ್ಟೆ ಹಾಗೂ ಇತರ ಅಂಗಡಿಗಳ ವರ್ತಕರು ವ್ಯಾಪಾರಕ್ಕಾಗಿ ಕಂಡುಕೊಂಡ ಪರ್ಯಾಯ ಮಾರ್ಗವಿದು. ಲಾಕ್‌ಡೌನ್ ಕಾರಣ ಜಿಲ್ಲಾದ್ಯಂತ ಇರುವ ಚಿನ್ನ-ಬೆಳ್ಳಿ ಅಂಗಡಿ, ಸೀರೆ, ಬಟ್ಟೆ, ಮೊಬೈಲ್ ಅಂಗಡಿಗಳು ಬಾಗಿಲು ಮುಚ್ಚಿವೆ. ಆದರೂ ಗ್ರಾಹಕರನ್ನು ಸೆಳೆಯಲು ಮೊಬೈಲ್, ಆನ್‌ಲೈನ್ ಬಳಕೆಗೆ ವರ್ತಕರು ಮುಂದಾಗಿದ್ದಾರೆ.
ಅಂಗಡಿ, ಶೋರೂಂ ಶಟರ್ಸ್ ಬೀಗ ಹಾಕಿದ್ದರೂ ಅದರ ಮುಂದೆ ಎದ್ದುಕಾಣುವಂತೆ ಮೊಬೈಲ್ ನಂಬರ್ ಹಾಕಿ, ಗ್ರಾಹಕರೇ ಒಂದು ಕರೆಮಾಡಿ ನಿಮಗೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸಿ ಎಂದು ಬರೆದು ಅಂಟಿಸಿದ್ದಾರೆ. ಇದಲ್ಲದೇ ಹೊಸ ಖರೀದಿಯ ಜತೆಗೆ ಹಳೆಯ ಮೊಬೈಲ್, ಲ್ಯಾಪ್‌ಟಾಪ್ ರಿಪೇರಿ ಕಾರ್ಯ ಸಾಗಿದೆ. ಆದರೆ ರಿಪೇರಿಗಾಗಿ ನಿಗದಿಗಿಂತ ಅ ಧಿಕ ಹಣ ಆಕರಣೆ ಮಾಡಲಾಗುತ್ತಿದ್ದು, ತುರ್ತು ಇದ್ದವರು ದುಪ್ಪಟ್ಟು ನೀಡುವಂತಾಗಿದೆ.
ಮನೆಯಲಿಯೇ ಸಂಗ್ರಹ
ಬಹುತೇಕ ವ್ಯಾಪಾರಿಗಳು ಅಂಗಡಿಯಲ್ಲಿದ್ದ ವಸ್ತುಗಳನ್ನು ಮನೆಗೆ ಕೊಂಡೊಯ್ದು ಸಂಗ್ರಹ ಮಾಡಿಕೊಂಡಿದ್ದಾರೆ. ನಿತ್ಯ ಅಗತ್ಯ ಸಾಮಗ್ರಿ ಖರೀದಿಸಲು ಇರುವ ಸಮಯದಲ್ಲಿಯೇ ಬೇಡಿಕೆ ಸಲ್ಲಿಸುವ ಗ್ರಾಹಕರಿಗೆ ಮೊಬೈಲ್‌ನಲ್ಲೋ, ಸಾಮಾಜಿಕ ಜಾಲತಾಣದ ಮೂಲಕವೋ ವ್ಯಾಪಾರ ಕುದುರಿಸಿಕೊಂಡು ಅವರ ಮನೆಗೆ ಮನೆಗೆ ತಲುಪಿಸುವ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಇದಕ್ಕೆ ಉತ್ತಮ ಸ್ಪಂದನೆ ಲಭಿಸಿದೆ.
ಇನ್ನು ಕಳೆದ 2-3 ದಿನಗಳ ಹಿಂದೆ ಟಿಕಾರೆ ರಸ್ತೆಯ ಕೆಲ ಮೊಬೈಲ್ ಅಂಗಡಿಗಳ ಕಳ್ಳತನವೂ ಆಗಿದೆ. ಲಕ್ಷಾಂತರ ಮೌಲ್ಯದ ಮೊಬೈಲ್‌ಗಳನ್ನು ಕಳ್ಳರು ದೋಚಿದ್ದಾರೆ. ಇದರಿಂದ ಆತಂಕಕ್ಕೆ ಒಳಗಾಗಿರುವ ಮೊಬೈಲ್ ಅಂಗಡಿ ಮಾಲೀಕರು ಅಂಗಡಿಗಳಲ್ಲಿನ ಮೊಬೈಲ್‌ಗಳನ್ನು ಸುರಕ್ಷಿತ ಸ್ಥಳಕ್ಕೆ ಹಸ್ತಾಂತರ ಮಾಡಿದ್ದು, ಕೆಲವರು ಮನೆಗೆ ತಂದಿಟ್ಟುಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru; ಸದ್ಯ ಖಾಸಗಿ ಬಸ್ ಟಿಕೆಟ್ ದರ ಏರಿಕೆ ಇಲ್ಲ
Kasaragod:ಯೂತ್ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊ*ಲೆ; 10 ಮಂದಿಗೆ ಅವಳಿ ಜೀವಾವಧಿ ಸಜೆ
Bus ಪ್ರಯಾಣ ದರ ಏರಿಕೆ; ಮೊದಲು ಉದ್ದೇಶ ಅರಿಯಲಿ: ಖಾದರ್
Hunsur: ಹೊಸ ವರ್ಷಾಚರಣೆ: ಕೇಕ್ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ
“ನಿಮ್ಹಾನ್ಸ್ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.