ಯಾವಾಗಲೂ ಧನಾತ್ಮಕ ಚಿಂತನೆ ಮಾಡಿ
•ಸಾಧಿಸಬೇಕಾದರೆ ಮನ ಮಂಥನ, ಕಠಿಣ ಪರಿಶ್ರಮ ಅವಶ್ಯ: ಡಾ|ವಿಜಯಲಕ್ಷ್ಮೀ
Team Udayavani, May 3, 2019, 10:48 AM IST
ಧಾರವಾಡ: ನಗರದಲ್ಲಿ ಅಂಜುಮನ್ ಇನ್‌ಸ್ಟಿಟ್ಯೂಟ್ ಆಫ್ ಇನ್‌ಫಾರ್ಮೇಶನ್ ಸೈನ್ಸ್ ಆ್ಯಂಡ್ ಮ್ಯಾನೇಜ್‌ಮೆಂಟ್‌ನ 23ನೇ ವಾರ್ಷಿಕೋತ್ಸವ ಜರುಗಿತು.
ಧಾರವಾಡ: ನಾವು ಮಾಡುವ ವಿಚಾರಧಾರೆಯಿಂದ ಆರೋಗ್ಯ-ಅನಾರೋಗ್ಯ ಎರಡನ್ನೂ ಪಡೆಯಬಹುದಾಗಿದ್ದು, ಯಾವಾಗಲೂ ಧನಾತ್ಮಕ ಚಿಂತನೆ ಮಾಡಬೇಕು ಎಂದು ಕವಿವಿ ಮನೋವಿಜ್ಞಾನ ವಿಭಾಗದ ಮಾಜಿ ಡೀನ್ ಡಾ| ವಿಜಯಲಕ್ಷ್ಮೀ ಅಮ್ಮಿನಬಾವಿ ಹೇಳಿದರು.
ನಗರದ ಅಂಜುಮನ್ ಇಸ್ಲಾಂ ಸಂಸ್ಥೆ ಸಭಾಭವನದಲ್ಲಿ ಅಂಜುಮನ್ ಇನ್‌ಸ್ಟಿಟ್ಯೂಟ್ ಆಫ್ ಇನ್‌ಫಾರ್ಮೇಶನ್ ಸೈನ್ಸ್ ಆ್ಯಂಡ್ ಮ್ಯಾನೇಜ್‌ಮೆಂಟ್‌ನ 23ನೇ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಅವರು,
ಯಾವುದೂ ಅಸಾಧ್ಯವಿಲ್ಲ. ಏನಾದರೂ ಸಾಧಿಸಬೇಕಾದರೆ ಮನ ಮಂಥನ, ಕಠಿಣ ಪರಿಶ್ರಮ ಅವಶ್ಯ ಎಂದರು.
ನಿಮಗೆ ಯಾವುದೇ ಸಮಸ್ಯೆಗಳು ಇದ್ದಲ್ಲಿ ಮುಚ್ಚು ಮರೆ ಇಲ್ಲದೆ ಪಾಲಕರ-ಶಿಕ್ಷಕರ ಜತೆ ವಿಚಾರ ವಿಮರ್ಶೆ ಮಾಡಿ ಪರಿಹಾರ ಕಂಡುಕೊಳ್ಳಬೇಕು. ಮಾನವೀಯ ಮೌಲ್ಯಗಳಿಗೆ ಮಹತ್ವ ನೀಡಬೇಕು ಎಂದರು.
ಧಾರವಾಡ ಉಪ ವಿಭಾಗೀಯ ಅಧಿಕಾರಿ ಮೊಹಮದ್ ಜುಬೇರ್ ಮಾತನಾಡಿ, ಪದವಿ ಪಡೆದರೆ ಸಾಲದು. ಅದರೊಂದಿಗೆ ಜ್ಞಾನ ಭಂಡಾರ ಹೆಚ್ಚಿಸಲು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಲ್ಗೊಳ್ಳಬೇಕು. ಕಲಿಕೆ ನಿರಂತರವಾಗಿದ್ದು, ವಿದ್ಯೆ ಕಲಿಯಲು ಜಾತಿ, ಧರ್ಮ, ಬಡತನ ಅಡ್ಡಿ ಬರದು. ಸತತ ಪರಿಶ್ರಮದಿಂದ ಯಶಸ್ಸು ಕಾಣಬೇಕು. ಕಲಿತ ಸಂಸ್ಥೆ ತಂದೆ-ತಾಯಿಯರಿಗೆ ನಿಮ್ಮ ಮೇಲೆ ಹೆಮ್ಮೆ ಬರುವ ಹಾಗೆ ಕೆಲಸ ಕಾರ್ಯ ಮಾಡಬೇಕು ಎಂದರು.
ಇದೇ ಸಂದರ್ಭದಲ್ಲಿ 2018-19ರ ಕಾಲೇಜ್ ಪುಸ್ತಕ ಬಿಡುಗಡೆ ಮಾಡಲಾಯಿತು. ಇದಲ್ಲದೇ ಪ್ರೊ|ಅಬ್ದುಲ್ ಕಿತ್ತೂರ, ಮೊಹಮದ್ ಅಲ್ತಾಫ ಶೇಖ್, ಅಶ್ಪಾಕ ಬೆಟಗೇರಿ, ಜಮೀತ ಬೆಟಗೇರಿ ಅವರನ್ನು ಸನ್ಮಾನಿಸಲಾಯಿತು.
ರೆಡ್‌ಕ್ರಾಸ್ ವಿಂಗ್‌ದಿಂದ ಬಡ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪಠ್ಯ ಪುಸ್ತಕ ಉಚಿತವಾಗಿ ನೀಡಲಾಯಿತು. ಬಿಸಿಎ, ಬಿಬಿಎ ಸೆಮಿಸ್ಟರ್‌ನಲ್ಲಿ ಹೆಚ್ಚು ಅಂಕ ಪಡೆದ 15 ವಿದ್ಯಾಥಿಗಳಿಗೆ ನಗದು ಪುರಸ್ಕಾರ ಹಾಗೂ ಪಾರಿತೋಷಕ ನೀಡಲಾಯಿತು.
ಅಂಜುಮನ್ ಇಸ್ಲಾಂ ಸಂಸ್ಥೆಯ ಆಡಳಿತ ಅಧಿಕಾರಿ ನಿಸಾರ್ ಅಹ್ಮದ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಎಮ್.ಎಲ್ ಕಿಲ್ಲೆದಾರ, ಜಿಮ್‌ಖಾನಾ ಚಟುವಟಿಕೆಗಳ ಚೇರ್‌ಮನ್ ಪ್ರೊ| ಎನ್.ಎಚ್ ಪಾಟೀಲ, ಬುರಾನ್.ಎಮ್.ಬಗ್ಧಾದಿ, ಆಪ್ರೀನ್.ಎನ್.ಘೊಡೆವಾಲೆ, ಮಹ್ಮದರಫಿಕ ಎಮ್.ಜವಳಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ
Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ
Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್
Hubli: ಕ್ರಿಮಿನಲ್ ಜತೆಯೇ ಪೊಲೀಸ್ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್ ಕಾರ್ಯಾಚರಣೆ
ಭುಗಿಲೆದ್ದ ಮೀಸಲು ರೊಚ್ಚು; ಸದನದ ಒಳ-ಹೊರಗೆ ಪ್ರತಿಭಟನೆ; ಉತ್ತರ ಕರ್ನಾಟಕದಲ್ಲಿ ಆಕ್ರೋಶ
MUST WATCH
ಹೊಸ ಸೇರ್ಪಡೆ
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ
Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.