ಹವ್ಯಾಸಿ ರಂಗಭೂಮಿ ಗಟ್ಟಿಗೊಳಿಸಿ
Team Udayavani, Feb 22, 2017, 2:29 PM IST
ಧಾರವಾಡ: ಕರ್ನಾಟಕ ನಾಟಕ ಅಕಾಡೆಮಿ ಹಮ್ಮಿಕೊಂಡಿರುವ ರಾಜ್ಯಮಟ್ಟದ ಪ್ರಥಮ ಹವ್ಯಾಸಿ ರಂಗಭೂಮಿ ಸಮಾವೇಶದ 3ನೇ ದಿನವಾದ ಮಂಗಳವಾರ ನಗರದ ಆಲೂರು ವೆಂಕಟರಾವ್ ಭವನದಲ್ಲಿ ನಡೆದ ಹವ್ಯಾಸಿ ರಂಗಭೂಮಿ: ಹೆಜ್ಜೆ ಗುರುತು ಗೋಷ್ಠಿಯಲ್ಲಿ ರಂಗಭೂಮಿಯ ವಿವಿಧ ಆಯಾಮಗಳ ಕುರಿತಂತೆ ಚರ್ಚೆಗಳು ನಡೆದವು.
ಹವ್ಯಾಸಿ ರಂಗಭೂಮಿ ಗ್ರಾಮೀಣ ಮತ್ತು ನಗರದ ನಡೆಗಳು ಎಂಬ ವಿಷಯ ಕುರಿತಂತೆ ಮೈಸೂರು ರಂಗಾಯಣ ನಿರ್ದೇಶಕ ಎಚ್. ಜನಾರ್ದನ (ಜನ್ನಿ) ಮಾತನಾಡಿ, ಟಿವಿ, ಮೊಬೈಲ್, ಸಿನೆಮಾನಂತಹ ಮಾಯಾ ಸಂಸ್ಕೃತಿಯಿಂದ ನಾಟಕ ಸಂಸ್ಕೃತಿ ಅಪಾಯಕ್ಕೆ ಸಿಲುಕುವಂತಾಗಿದೆ. ನಗರ ಪ್ರದೇಶಗಳಲ್ಲಿ ಮಾತ್ರ ಕಾಣುತ್ತಿದ್ದ ಈ ಸಂಸ್ಕೃತಿ ಕ್ರಮೇಣ ಹಳ್ಳಿಗಳಿಗೂ ಲಗ್ಗೆ ಇಟ್ಟಿದೆ.
ಕಾರಣ ಈಗ ಹಳ್ಳಿಗಳಲ್ಲಿ ಹವ್ಯಾಸಿ ರಂಗಭೂಮಿ ಗಟ್ಟಿಗೊಳಿಸುವ ಕಾರ್ಯ ಆಗಬೇಕಿದೆ. ಈ ನಿಟ್ಟಿನಲ್ಲಿ ಯುವ ಪ್ರತಿಭೆಗಳನ್ನು ಗುರುತಿಸಿ ಸೂಕ್ತ ವೇದಿಕೆ ನೀಡುವ ಕೆಲಸ ಆಗಬೇಕಿದೆ ಎಂದರು. ಸಮಾಜದ ಅಂಕುಡೊಂಕು ತಿದ್ದುವಲ್ಲಿ ಹಾಗೂ ಜಾಗೃತಿ ಮೂಡಿಸುವಲ್ಲಿ ನಾಟಕಗಳ ಪಾತ್ರ ಮುಖ್ಯವಾಗಿದೆ.
ಈ ಮೂಲಕ ಹವ್ಯಾಸಿ ರಂಗಭೂಮಿಯನ್ನು ಗ್ರಾಮೀಣ ಮಟ್ಟದಲ್ಲಿ ಪ್ರಾಮಾಣಿಕವಾಗಿ ಕಟ್ಟುವ ಮೂಲಕ ಹಳ್ಳಿ-ಹಳ್ಳಿಗಳಿಗೆ ತೆರಳಿ ಜನಜಾಗೃತಿ ಮೂಡಿಸಿದ್ದರೆ, ಕಳೆದ ವರ್ಷದಲ್ಲಿ ಸಾಲ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತರ ಜೀವ ರಕ್ಷಿಸಲು ಸಾಧ್ಯವಾಗಬಹುದಿತ್ತು ಎಂದು ಅಭಿಪ್ರಾಯಪಟ್ಟರು.
ಹೂಲಿ ಶೇಖರ್ ಅಧ್ಯಕ್ಷತೆಯ ಈ ಗೋಷ್ಠಿಯಲ್ಲಿ ಹವ್ಯಾಸ ಮತ್ತು ಚಳವಳಿ ಇಂದಿನ ಸ್ಥಿತಿ ಕುರಿತಂತೆ ಎಚ್.ಎಸ್. ಉಮೇಶ ಹಾಗೂ ರೆಪರ್ಟರಿಗಳು ಕುರಿತಂತೆ ಪ್ರಕಾಶ ಬೆಳವಾಡಿ ಅವರು ತಮ್ಮ ವಿಚಾರ ಮಂಡಿಸಿದರು. ರಂಗಾಯಣದ ರೆಪರ್ಟರಿ ಕುರಿತು ರಂಗನಿರ್ದೇಶಕಿ ಎಸ್. ಮಾಲತಿ ಮಾತನಾಡಿ, ರಾಷ್ಟ್ರೀಯ ರಂಗ ಶಾಲೆ ಭಾರತದಲ್ಲೇ ಮೊದಲ ರೆಪರ್ಟರಿ ಎಂಬ ಹೆಗ್ಗಳಿಕೆ ಪಡೆದಿದೆ.
ಈ ರೆಪರ್ಟರಿ ತಂಡದ ಕಲಾವಿದರು ಉತ್ತರ ಕರ್ನಾಟಕದಿಂದ ಹಿಡಿದು ದಕ್ಷಿಣ ಕರ್ನಾಟಕದ ಹಳ್ಳಿ-ಹಳ್ಳಿಗಳಿಗೂ ಸಂಚರಿಸಿ ಉತ್ತಮ ನಾಟಕಗಳನ್ನು ಪ್ರದರ್ಶಿಸಿದ್ದಾರೆ. ಈ ಕೆಲಸ ನಿರ್ವಹಿಸಿದ ಬಹುತೇಕ ಕಲಾವಿದರು ಸಾಧನೆಯ ಶಿಖರ ಏರಿದ್ದಾರೆ. ಆದರೆ ರೆಪರ್ಟರಿ ಮುಚ್ಚಿದರೆ ಆ ಕಲಾವಿದರು ಬದುಕು ಕಷ್ಟಕರವಾಗಲಿದೆ ಎಂದರು. ರಂಗನಿರ್ದೇಶಕ ಗಣೇಶ ಅಮಿನಗಡ, ನಾಟಕ ಅಕಾಡೆಮಿ ಸದಸ್ಯ ಜಗುಚಂದ್ರ ಕೂಡ್ಲ ಸೇರಿದಂತೆ ಇತರರು ಇದ್ದರು.
ಮಧ್ಯಾಹ್ನ ಸಮುದಾಯದಿಂದ ರಂಗಗೀತೆಗಳು ಪ್ರಸ್ತುತಗೊಂಡರೇ ಬೆಂಗಳೂರಿನ ರಂಗಾಭರಣ ತಂಡದಿಂದ ಗಂಡುಗಲಿ ಎಚ್ಚಮ ನಾಟಕ ಪ್ರದರ್ಶನಗೊಂಡಿತು. ಆ ಬಳಿಕ ಬೆಂಗಳೂರು ವಿಭಾಗದ ಹಿರಿಯ ಕಲಾವಿದರಾದ ಸಿ.ಕೆ. ಗುಂಡಣ್ಣ, ಟಿ.ಎಂ. ಬಾಲಕೃಷ್ಣ, ಕೆ.ಪಿ. ಪ್ರಕಾಶ್, ಅಚ್ಯುತ್, ಎಚ್.ಎಂ. ರಂಗಯ್ಯ ಅವರಿಗೆ ರಂಗ ಗೌರವ ನೀಡಿ ಸನ್ಮಾನಿಸಲಾಯಿತು. ಆ ಬಳಿಕ ಶಿವಮೊಗ್ಗದ ಸಹ್ಯಾದ್ರಿ ರಂಗ ತರಂಗ ತಂಡದಿಂದ ಸಿಂಗಾರೆವ್ವ ಮತ್ತು ಅರಮನೆ ನಾಟಕ ಪ್ರದರ್ಶನಗೊಂಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CID Inquiry: ಪರಿಷತ್‌ನಲ್ಲಿ ನಡೆದ ಘಟನೆ ಎಂದು ಉಲ್ಲೇಖಿಸಿದ್ದು ತಪ್ಪು: ಬಸವರಾಜ ಹೊರಟ್ಟಿ
ಜೋಶಿ ಅವರಿಗೆ ನನ್ನ ಸಾಮರ್ಥ್ಯ ಗೊತ್ತಿಲ್ಲ… ಅಸಮರ್ಥ ಹೇಳಿಕೆಗೆ ತಿರುಗೇಟು ನೀಡಿದ ಪರಮೇಶ್ವರ್
Alnavar: ಟಿಟಿ- ಕ್ಯಾಂಟರ್ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.