ಕಲಘಟಗಿ ಬಣ್ಣದ ತೊಟ್ಟಿಲಿಗೆ ಅಮೆರಿಕ ಭಾಗ್ಯ
Team Udayavani, Nov 19, 2018, 6:15 AM IST
ಧಾರವಾಡ: “ಅಪ್ಪಾ ಅದಾವ ಕೈಗಳಿಂದ ಇಂತಹ ಸುಂದರವಾದ ತೊಟ್ಟಿಲು ಮಾಡಿದ್ದಾನೆ ಆತ. ಅವರ ಕೈಗಳು ನಿಜಕ್ಕೂ ದೇವರು ಕೊಟ್ಟ ವರದಾನ. ಅವರಿಗೆ ನನ್ನದೊಂದು ಧನ್ಯವಾದ’.
-ಕನ್ನಡದ ವರನಟ ಡಾ.ರಾಜ್‌ಕುಮಾರ್ ಅವರು ಧಾರವಾಡ ಜಿಲ್ಲೆಯ ಕಲಘಟಗಿಯಲ್ಲಿ ಮಾಡುವ ಬಣ್ಣದ ಮತ್ತು ಚಿತ್ತಾರದ ತೊಟ್ಟಿಲನ್ನು ನೋಡಿ ಹೇಳಿದ ಮಾತಿದು.
20 ವರ್ಷಗಳ ಹಿಂದೆ ಧಾರವಾಡ ಜಿಲ್ಲೆಯಲ್ಲಿ ಸೇವೆಯಲ್ಲಿದ್ದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಕಲಘಟಗಿಯ ಸಿದ್ದಪ್ಪ ಚಿತ್ರಗಾರ ಅವರು ಮಾಡಿದ್ದ ಸುಂದರ ತೊಟ್ಟಿಲನ್ನು ಡಾ.ರಾಜ್ ಕುಟುಂಬಕ್ಕೆ ಕಾಣಿಕೆಯಾಗಿ ಕೊಟ್ಟಾಗ ಅವರು ತೊಟ್ಟಿಲನ್ನು ನೋಡಿ ಅದರಲ್ಲಿ ತಮ್ಮ ಮೊಮ್ಮಕ್ಕಳನ್ನು ಕೂಡಿಸಿ ತೂಗಿ ಆನಂದ ಪಟ್ಟಿದ್ದರು.
ಇದೀಗ ಮತ್ತೆ ಕಲಘಟಗಿಯ ತೊಟ್ಟಿಲು ಡಾ.ರಾಜಕುಮಾರ್ ಅವರ ಸಂಬಂಧಿಗಳ ಮನೆಗೆ ಹೋಗುತ್ತಿದೆ. ಪಾರ್ವತಮ್ಮ ರಾಜ್‌ಕುಮಾರ್ ಅವರ ತಂಗಿಯ ಮೊಮ್ಮಗಳ ನಾಮಕರಣ ನ.25ರಂದು ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯಲಿದ್ದು, ಅಲ್ಲಿಗೆ ಈ ತೊಟ್ಟಿಲು ತಲುಪಿಯಾಗಿದೆ. ಅಲ್ಲಿಂದ ಅಮೆರಿಕಾಕ್ಕೆ ಪಯಣ ಬೆಳೆಸಲಿದೆ. ನ.15ರಂದೇ ಈ ತೊಟ್ಟಿಲನ್ನು ಬೆಂಗಳೂರಿನಿಂದ ಬಂದ ಅವರ ಕುಟುಂಬಸ್ಥರು ಸುರಕ್ಷಿತವಾಗಿ ತೆಗೆದುಕೊಂಡು ಹೋಗಿದ್ದಾರೆ.
ಕೊನೆಯ ಕೊಂಡಿ: ಕಲಘಟಗಿ ತೊಟ್ಟಿಲಿಗೆ ಸಾಮಾನ್ಯವಾಗಿ ರಾಜ್ಯ, ಹೊರರಾಜ್ಯಗಳಲ್ಲಿ ಹೆಚ್ಚಿನ ಬೇಡಿಕೆಯಿದೆ. ಬೆಂಗಳೂರು, ಮಂಗಳೂರು, ಮುಂಬೈ, ಪುಣೆ, ಸಾಂಗ್ಲಿ, ಮೀರಜ್, ಕೊಲ್ಹಾಪೂರ, ಸೊಲ್ಲಾಪೂರಕ್ಕೆ ಪ್ರತಿವರ್ಷ ಇಲ್ಲಿಂದ ತೊಟ್ಟಿಲುಗಳು ಹೋಗುತ್ತವೆ. ಆರಂಭದಲ್ಲಿ ಹತ್ತಕ್ಕೂ ಹೆಚ್ಚು ಕುಟುಂಬಗಳು ತೊಟ್ಟಿಲು ತಯಾರಿಕೆಯಲ್ಲಿ ತೊಡಗಿದ್ದವು. ಆದರೆ ವರ್ಷಗಳು ಕಳೆದಂತೆ ಗಟ್ಟಿ ತೇಗದ ಕಟ್ಟಿಗೆ ಸಿಗುವುದು ವಿರಳವಾಯಿತು. ಅಲ್ಲದೇ ಮಾಡುವ ಕೆಲಸಕ್ಕೆ ತಕ್ಕನಾದ ಆದಾಯ ಪಡೆಯಲಾಗದೆ ಕೆಲವು ಕುಟುಂಬಗಳು ತೊಟ್ಟಿಲು ತಯಾರಿಕೆಯಿಂದ ದೂರ ಸರಿದವು.
2 ದಶಕಗಳಿಂದ ಕಲಘಟಗಿಯ ಚಿತ್ರಗಾರ ಮತ್ತು ಬಡಿಗೇರ ಕುಟುಂಬಸ್ಥರು ಮಾತ್ರ ತೊಟ್ಟಿಲು ನಿರ್ಮಾಣ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಇದೀಗ ತಾವು ತಯಾರಿಸಿದ ಸುಂದರ ತೊಟ್ಟಿಲು ಅಮೆರಿಕ ಸೇರುತ್ತಿರುವುದು ಮಾರುತಿ ಬಡಿಗೇರ ಅವರಿಗೆ ಹೆಮ್ಮೆ ಮತ್ತು ಖುಷಿ ತಂದಿದೆ.
ನಾಗವಲ್ಲಿಗೂ ತೊಟ್ಟಿಲು: ಕಲಘಟಗಿಯ ಓಂಕಾರಪ್ಪ ಬಡಿಗೇರ ಅವರ ಮೊಮ್ಮಗ ಮಾರುತಿ ಬಡಿಗೇರ ತಮ್ಮ ಪೂರ್ವಜರ ತೊಟ್ಟಿಲು ನಿರ್ಮಾಣ ಕುಶಲತೆ ರೂಢಿಸಿಕೊಂಡಿದ್ದಾರೆ. ಸದ್ಯಕ್ಕೆ 15 ಸಾವಿರ ರೂ.ಗಳಿಂದ ಒಂದು ಲಕ್ಷ ರೂ.ವರೆಗಿನ ವಿಭಿನ್ನ ಬಗೆಯ 20ಕ್ಕೂ ಹೆಚ್ಚು ವಿಧದ ತೊಟ್ಟಿಲುಗಳನ್ನು ನಿರ್ಮಿಸಿ ಅದಕ್ಕೆ ಸುಂದರ ಬಣ್ಣ ಬಳೆಯುತ್ತಿದ್ದಾರೆ. ರಾಜ್ ಕುಟುಂಬಕ್ಕೆ 75 ಸಾವಿರ ರೂ.ಗೆ ತೊಟ್ಟಿಲು ಮಾಡಿಕೊಟ್ಟಿದ್ದಾರೆ.
ಅವರ ಕರಕುಶಲತೆಗೆ ಸಾಕ್ಷಿ ಎನ್ನುವಂತೆ ಇದೀಗ ಚಿತ್ರರಂಗದ ಜನರು ಅವರ ಬೆನ್ನು ಬಿದ್ದಿದ್ದಾರೆ. “ನಾಗವಲ್ಲಿ’ ಎನ್ನುವ ತಮಿಳು ಚಿತ್ರ ನಿರ್ಮಾಣವಾಗುತ್ತಿದ್ದು, ನಲ್ಲೂರು ಅರಮನೆಯಲ್ಲಿ ಚಿತ್ರದ ಶೂಟಿಂಗ್‌ಗಾಗಿ ಇದೀಗ ಅರಮನೆಯವರೇ ಕಲಘಟಗಿ ತೊಟ್ಟಿಲು ಮಾಡಿ ಕೊಡುವಂತೆ ಮನವಿ ಮಾಡಿಕೊಂಡಿದ್ದಾರೆ. ಅದು ಅತ್ಯಂತ ದೈತ್ಯ ಮತ್ತು ಕಲಾಕುಸುರಿಯಿಂದ ಕೂಡಿದ್ದು, ಅದರ ನಿರ್ಮಾಣ ಸದ್ಯಕ್ಕೆ ಆರಂಭಗೊಂಡಿದೆ. ಅಲ್ಲದೇ ನಾಡಿನ ಕೆಲವು ಹಿರಿಯ ರಾಜಕಾರಣಿಗಳು ಸಹ ಮಾರುತಿ ಅವರ ಬಳಿ ತೊಟ್ಟಿಲಿಗಾಗಿ ಸಾಲುಗಟ್ಟಿದ್ದಾರೆ.
ತಾಳಿಕೆ, ಬಾಳಿಕೆ, ಕುಶಲತೆಯೇ ಪ್ರಧಾನ
ದಾಂಡೇಲಿ ಅರಣ್ಯದಲ್ಲಿ ಬೆಳೆಯುವ ವಿಶ್ವದ ಉತ್ಕೃಷ್ಠ ಮಟ್ಟದ ತೇಗದಿಂದ ಈ ತೊಟ್ಟಿಲುಗಳು ಸಿದ್ಧಗೊಳ್ಳುವುದರಿಂದ ಗಟ್ಟಿಮುಟ್ಟಾಗಿರುತ್ತವೆ. ಇದೇ ಕಾರಣಕ್ಕಾಗಿಯೇ ಕಲಘಟಗಿ ತೊಟ್ಟಿಲಿಗೆ ಹೆಚ್ಚಿನ ಬೇಡಿಕೆ. ಅಲ್ಲದೇ ಅವುಗಳ ಮೇಲೆ ವಿಭಿನ್ನ ಬಗೆಯ ಚಿತ್ರ ಬಿಡಿಸುವ ದೇಶಿ ಕಲೆ ಕೂಡ ತೊಟ್ಟಿಲುಗಳ ಮೆರಗು ಹೆಚ್ಚಿಸುತ್ತದೆ. ತಾಳಿಕೆ, ಬಾಳಿಕೆ ಮತ್ತು ಕುಶಲತೆಯೇ ಪ್ರಧಾನವಾಗಿದ್ದರಿಂದ ಇಂದಿಗೂ ಕಲಘಟಗಿ ತೊಟ್ಟಿಲಿಗೆ ದೇಶ-ವಿದೇಶಗಳಿಗೆ ಹೋಗುವ ಭಾಗ್ಯ ಲಭಿಸುತ್ತಿರುವುದು ದೇಶಿ ಜ್ಞಾನ ಪರಂಪರೆಗೆ ಸಿಕ್ಕ ಮನ್ನಣೆ.
ಅಜ್ಜ,ಮುತ್ತಜ್ಜರ ಕಾಲದಿಂದಲೂ ನನಗೆ ಒಂದು ಹಠವಿತ್ತು. ಕಷ್ಟಪಟ್ಟು ಮಾಡಿದ ತೊಟ್ಟಿಲುಗಳು ಜನಮಾನಸದ ಮೆಚ್ಚುಗೆ ಪಡೆಯಬೇಕು ಎಂದು. ಇದೀಗ ನಾನು ಮಾಡಿದ ತೊಟ್ಟಿಲು ಡಾ.ರಾಜ್ ಸಂಬಂಧಿಗಳ ಮೂಲಕ ಅಮೆರಿಕಾಕ್ಕೂ ಹೋಗುತ್ತಿದ್ದು, ನನ್ನ ಶ್ರಮ ಸಾರ್ಥಕ ಎನಿಸುತ್ತಿದೆ.
– ಮಾರುತಿ ಬಡಿಗೇರ, ತೊಟ್ಟಿಲು ತಯಾರಕ.
– ಬಸವರಾಜ ಹೊಂಗಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ
Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.