ಮತ್ತೂಂದು ಲಾಕ್‌ಡೌನ್ ಬೇಡ
Team Udayavani, Apr 11, 2021, 5:45 PM IST
ಸಾಂದರ್ಭಿಕ ಚಿತ್ರ
ಧಾರವಾಡ: ಒಂದ ಸಲಾ ನಮ್ಮ ಹೊಲದಾನ ಬೆಳಿನ ರಸ್ತೆಕ ಹಾಕಿದ್ವಿ, ಕೈಗೆ ಬಂದಂಗ ಮಾರಿ ಬರಬಾದ ಆಗೇವಿ, ಮತ್ತೂಮ್ಮೆ ಇಂತದ್ದಾ ಬರೂದ ಬ್ಯಾಡವೇ ಬ್ಯಾಡ. ಈಗಷ್ಟೇ ಆರ್ಥಿಕತೆ ಸುಧಾರಣೆಯಾಗುತ್ತಿದ್ದು, ನಮ್ಮ ಕಂಪನಿಗಳಿಗೆ ಒಂದಿಷ್ಟು ಬೇಡಿಕೆ ಬರುತ್ತಿದ್ದು, ಯಾವುದೇ ಕಾರಣಕ್ಕೂಮತ್ತೂಮ್ಮೆ ಕಂಪನಿ ಬಾಗಿಲು ಹಾಕದಂತಾಗಲಿ, ಮೈತುಂಬಾ ಕವಚ ಧರಿಸಿಕೊಂಡು ಚಿಕಿತ್ಸೆ ನೀಡಿ ನೀಡಿ ಸುಸ್ತಾಗಿದ್ದೇವೆ,ಮತ್ತೆ ಇದು ಮರಕಳಿಸಲೇ ಬಾರದು. ಆರ್ಥಿಕತೆ ಎನ್ನುವುದುಅಣೆಕಟ್ಟಿನಲ್ಲಿ ನೀರು ಸಂಗ್ರಹವಾದಂತೆ, ಒಮ್ಮೆ ಖಾಲಿಯಾದಕೂಡಲೇ ತಕ್ಷಣ ತುಂಬಲಾರದು ಮತ್ತೆ ಉತ್ತಮ ಮಳೆಗಾಲಕ್ಕಾಗಿ ಕಾಯಬೇಕು.
ಏನಿದು, ಒಂದಲ್ಲ ಎರಡಲ್ಲ ವಿಭಿನ್ನವಾಗಿರುವ ಜನರು ವಿಭಿನ್ನವಾಗಿ ಮಾತನಾಡುತ್ತಿದ್ದಾರಲ್ಲ ಎನ್ನಬೇಡಿ, ಇದೆಲ್ಲವೂ ಕೋವಿಡ್ 2ನೇ ಅಲೆಯ ಲಾಕ್‌ಡೌನ್ ಬಗ್ಗೆ ಸಮಾಜದ ವಿಭಿನ್ನ ಸ್ತರದ ಜನರ ಅಭಿಪ್ರಾಯ ಮತ್ತು ಕಾಳಜಿ.
ಹೌದು, ಜಿಲ್ಲೆಯಲ್ಲಿ ಕಳೆದ ವರ್ಷ ಹೇರಿದ್ದ ಕೋವಿಡ್ ಲಾಕ್‌ಡೌನ್ ಆರ್ಥಿಕತೆ ಮೇಲೆ ಗದಾಪ್ರಹಾರವನ್ನೇ ನಡೆಸಿದ್ದು, ನಿರುದ್ಯೋಗ, ಆರ್ಥಿಕ ಸಮಸ್ಯೆಗಳು, ಆರೋಗ್ಯ ಭಯಸೇರಿದಂತೆ ಅನೇಕ ಅನಿಶ್ಚಿತತೆಗಳನ್ನು ತಂದೊಡ್ಡಿದೆ. ಕಳೆದವರ್ಷದ ಲಾಕ್‌ಡೌನ್ ನೀಡಿದ ಶಾಕ್ ನೆನಪಿರುವಾಗಲೇರಾಜ್ಯದ 8 ಜಿಲ್ಲೆಗಳಲ್ಲಿ ರಾತ್ರಿ ಕರ್ಫ್ಯೂ ಜಾರಿಯಾಗಿದ್ದು,ಇದರ ಕರಿನೆರಳು ಧಾರವಾಡ ಜಿಲ್ಲೆಯನ್ನೂ ಆವರಿಸಿದೆ. ಜನರೇ ಸ್ವಯಂ ಪ್ರೇರಣೆಯಿಂದ ಕೋವಿಡ್ ನಿಯಂತ್ರಣ ಕ್ರಮಗಳನ್ನು ಅನುಸರಿಸದೇ ಹೋದರೆ ಖಂಡಿತವಾಗಿಯೂ ಮತ್ತೂಮ್ಮೆ ಜಿಲ್ಲೆ ಸಂಕಷ್ಟಕ್ಕೆ ಸಿಲುಕುವುದು ನಿಶ್ಚಿತ.
2020ರ ಲಾಕ್‌ಡೌನ್‌ನಿಂದ ಕೃಷಿ ಉತ್ಪಾದನೆ ಮಾರಾಟದಮೇಲೆ ಶೇ.70 ಹೊಡೆತ, ಕೈಗಾರಿಕಾ ಉತ್ಪಾದನೆಗಳ ಮಾರಾಟದಮೇಲೆ ಶೇ.76 ಹೊಡೆತ, ವಾಣಿಜ್ಯ ಚಟುವಟಿಕೆಗಳು ಶೇ.68ನಷ್ಟ ಉಂಟಾಗಿದೆ. ಲಾಕ್‌ಡೌನ್ ಮಾಡದೇ ಕೋವಿಡ್‌ಗೆಲ್ಲಬೇಕು ಎನ್ನುವ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿಕೇಳಿಬರುತ್ತಿದೆ. ಎಲ್ಲಾ ವರ್ಗದ ಜನರೂ ಲಾಕ್‌ಡೌನ್‌ಬೇಡವೇ ಬೇಡ, ಕೋವಿಡ್ ತಡೆ ಮುಂಜಾಗೃತಾ ಕ್ರಮಗಳ ಕಟ್ಟುನಿಟ್ಟಿನ ಪಾಲನೆಯೇ ಸೂಕ್ತ ಎನ್ನುತ್ತಿದ್ದಾರೆ.
600ರ ಗಡಿ ದಾಟಿದ ಸಕ್ರಿಯ ಪ್ರಕರಣಗಳ ಸಂಖ್ಯೆ! :
ಕಳೆದ ವರ್ಷ ಜಿಲ್ಲೆಯಲ್ಲಿ ಪ್ರತಿದಿನ ಸರಾಸರಿ 200 ಕೋವಿಡ್ ಪ್ರಕರಣಗಳು ವರದಿಯಾಗಿದ್ದು ಇದೆ. ಆದರೆ ವೈದ್ಯರು, ಜಿಲ್ಲಾಡಳಿತ ನಡೆಸಿದ ಸತತ ಪ್ರಯತ್ನ ಮತ್ತು ಕಟ್ಟೆಚ್ಚರಿಕೆ ಕ್ರಮಗಳಿಂದಾಗಿಕೋವಿಡ್ ನಿಯಂತ್ರಣದಲ್ಲಿತ್ತು. ಫೆ. 11ರಂದು ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಶೂನ್ಯತಲುಪಿದ್ದವು. ಜಿಲ್ಲೆಯಲ್ಲಿ ಏ.10ರ ಅಂತ್ಯಕ್ಕೆ 607 ಕೋವಿಡ್ ಸಕ್ರಿಯ ಪ್ರಕರಣಗಳಿದ್ದು, ಅರ್ಧಕ್ಕೂಹೆಚ್ಚು ಮಂದಿ ಸೋಂಕಿತರು ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರಿಗೆ ಜಿಲ್ಲಾಸ್ಪತ್ರೆಹಾಗೂ ಕಿಮ್ಸ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಪೈಕಿ 25 ಜನ ಐಸಿಯುನಲ್ಲಿದ್ದಾರೆ. ಜಿಲ್ಲೆಯ ಎಲ್ಲಾತಾಲೂಕಾಸ್ಪತ್ರೆಯಲ್ಲಿ ತಲಾ 4 ಹಾಗೂ ಜಿಲ್ಲಾಸ್ಪತ್ರೆಯಲ್ಲಿ 20, ಕಿಮ್ಸ್‌ನಲ್ಲಿ 40 ವೆಂಟಿಲೇಟರ್‌ಗಳಿವೆ. ಕಿಮ್ಸ್‌ನಲ್ಲಿ 270 ಹಾಗೂ ಜಿಲ್ಲಾಸ್ಪತ್ರೆಯಲ್ಲಿ 120 ಆಕ್ಸಿಜನ್‌ವುಳ್ಳ ಹಾಸಿಗೆಗಳಿವೆ.ತಾಲೂಕಾಸ್ಫತ್ರೆಯಲ್ಲಿ ತಲಾ 50 ಬೆಡ್, ರೈಲ್ವೆ ಆಸ್ಪತ್ರೆಯಲ್ಲಿ 50 ಬೆಡ್ ಕಾಯ್ದಿರಿಸಲಾಗಿದೆ.ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ತಕ್ಷಣವೇ 300 ಜನರ ವರೆಗೂ ಕೋವಿಡ್ ಚಿಕಿತ್ಸೆ ನೀಡಲು ಸಿದ್ಧತೆಗಳಿವೆ. ಅವುಗಳಲ್ಲಿ 270 ಹಾಸಿಗೆಗಳಿಗೆ ಆಮ್ಲಜನಕ ಪೂರೈಕೆ ವ್ಯವಸ್ಥೆ ಇದೆ.
ಎಗ್ಗಿಲ್ಲದೇ ಸಾಗಿವೆ ಜಾತ್ರೆ-ಮದುವೆ :
ಕೋವಿಡ್ ನಿಯಂತ್ರಣಕ್ಕಾಗಿ ಜಾತ್ರೆ, ಮದುವೆ, ದೊಡ್ಡ ಸಮಾರಂಭಗಳಿಗೆ ನಿರ್ಬಂಧ ಹೇರಲಾಗಿದೆ. ಆದರೂ ತೆರೆಮರೆಯಲ್ಲಿ ಎಲ್ಲಾ ಗ್ರಾಮಗಳಲ್ಲಿಜಾತ್ರೆಗಳು ಭರ್ಜರಿಯಾಗಿ ನಡೆಯುತ್ತಿವೆ.ಮದುವೆಗಳು, ಇತರೆ ಸಮಾರಂಭಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳ ಅನುಷ್ಠಾನ ಆಗುತ್ತಿಲ್ಲ. ಎಷ್ಟೇ ಮನವಿ ಮಾಡಿಕೊಂಡರೂ ಮಾಸ್ಕ್ಧರಿಸುವಿಕೆ, ಸ್ಯಾನಿಟೈಜರ್ ಬಳಕೆ, ಸಾಮಾಜಿಕಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಇತರೆ ನಿಯಮಗಳನ್ನು ಪಾಲನೆ ಮಾಡುತ್ತಿಲ್ಲ. ಇದುನಿಜಕ್ಕೂ ದೊಡ್ಡ ತಲೆನೋವಾಗಿದೆ.
ಕೋವಿಡ್ 2ನೇ ಅಲೆ ಆತಂಕ ಇದೀಗ ಎದುರಾಗಿದ್ದು, ಮತ್ತೂಮ್ಮೆ ಲಾಕ್‌ಡೌನ್‌ಬರುವ ಮುಂಚೆಯೇ ಎಲ್ಲರೂ ಎಚ್ಚೆತ್ತುಕೊಳ್ಳುವಅಗತ್ಯವಿದೆ. ಲಾಕ್‌ಡೌನ್‌ನಿಂದ ಆರ್ಥಿಕತೆ ಕುಸಿತ ನಿಶ್ಚಿತ. ಹೀಗಾಗಿ ಕೋವಿಡ್ ಮುಂಜಾಗೃತಾಕ್ರಮಗಳನ್ನು ಸ್ವಯಂ ಪ್ರೇರಣೆಯಿಂದ ಎಲ್ಲರೂಅಳವಡಿಸಿಕೊಳ್ಳಬೇಕು. ಲಸಿಕೆ, ಶುಚಿತ್ವ ಮತ್ತು ಸ್ವಯಂಪ್ರೇರಿತನಿರ್ಬಂಧಗಳಿಂದ ಮಾತ್ರ ಕೋವಿಡ್ ಮಹಾಮಾರಿ ಗೆಲ್ಲಬಹುದು.–ಡಾ| ನಿತೀನ್‌ಚಂದ್ರ ಹತ್ತಿಕಾಳ, ಹಿರಿಯ ವೈದ್ಯ, ಧಾರವಾಡ
ಕಳೆದ ವರ್ಷದ ಲಾಕ್‌ಡೌನ್‌ನಿಂದ ಈಗಾಗಲೇ ಆರ್ಥಿಕತೆ ಕುಸಿತ ಕಂಡಿದೆ. 3ನೇ ತ್ತೈಮಾಸಿಕದಲ್ಲಿಕೊಂಚ ಚೇತರಿಕೆಯಾಗಿದೆ. ಇಂತಹಸಮಯದಲ್ಲಿ ಮತ್ತೂಮ್ಮೆ ಲಾಕ್‌ಡೌನ್‌ಬರಬಾರದು ಎಂದರೆ ಎಲ್ಲರೂ ಕೋವಿಡ್‌ತಡೆ ಮುಂಜಾಗೃತಾ ಕ್ರಮಗಳನ್ನು ಕಟ್ಟುನಿಟ್ಟಾಗಿಪಾಲಿಸಬೇಕು. ವ್ಯಾಪಾರ-ವಹಿವಾಟು ಸ್ಥಗಿತಗೊಳ್ಳುವುದು ಬೇಡವೇ ಬೇಡ. –ಡಾ| ಆರ್.ಆರ್. ಬಿರಾದಾರ, ರಾಜ್ಯ ಯೋಜನಾ ಆಯೋಗದ ಸದಸ್ಯ, ಧಾರವಾಡ
ಕಳೆದ ವರ್ಷದ ಲಾಕ್‌ಡೌನ್‌ನಿಂದ ತತ್ತರಿಸಿರುವಸಣ್ಣ ಕೈಗಾರಿಕೆಗಳು ಇದೀಗ ಚೇತರಿಸಿಕೊಳ್ಳುತ್ತಿದೆ.ಆರ್ಥಿಕತೆ ತಳಹದಿಗೆ ಬರುವ ವೇಳೆಯಾವುದೇ ಕಾರಣಕ್ಕೂ ಮತ್ತೆ ಲಾಕ್‌ಡೌನ್‌ಗೆ ಹೋಗಲೇಬಾರದು. ಜಾಗೃತಿ ವಹಿಸುವಮೂಲಕವೇ ಕೋವಿಡ್ ಹಿಮ್ಮೆಟ್ಟಿಸಬೇಕು.ವ್ಯಾಕ್ಸಿನ್ ಬಂದಿದೆ, ಜೊತೆಗೆ ಜನರಲ್ಲಿ ಜಾಗೃತಿಯೂ ಇದೆ. ಎರಡನ್ನೂ ಬಳಸಿಕೊಂಡು ಉದ್ಯಮ ಕ್ಷೇತ್ರಕ್ಕೆ ತೊಂದರೆಯಾಗದಂತೆ ಮಾಡಬೇಕು. – ಪ್ರಹ್ಲಾದ ಮಿಟ್ಟಿ, ಸಣ್ಣ ಕೈಗಾರಿಕೋದ್ಯಮಿ, ಧಾರವಾಡ
ಹೊಲದಲ್ಲಿನ ಬೆಳೆಗಳು ಕಳೆದ ವರ್ಷ ಲಾಕ್‌ಡೌನ್ ಆಗಿದ್ದಕ್ಕೆ ಹಾಳಾಗಿ ಹೋದವು.ಮತ್ತೂಂದು ಲಾಕ್‌ಡೌನ್ ಬಂದರೆ ರೈತರಿಗೆಸಾಕಷ್ಟು ತೊಂದರೆಯಾಗುತ್ತದೆ. ಕೋವಿಡ್ ತಡೆನಿಯಮ ಪಾಲನೆ, ಜಾಗೃತಿ ಹೆಚ್ಚಿಸಬೇಕೆ ಹೊರತುಯಾವುದೇ ಕಾರಣಕ್ಕೂ ಆರ್ಥಿಕ ಚಟುವಟಿಕೆ,ವ್ಯಾಪಾರ-ವಹಿವಾಟು ನಿಲ್ಲಿಸಬಾರದು. –ಮಡಿವಾಳಪ್ಪ ಜೋಡಳ್ಳಿ, ಪ್ರಗತಿಪರ ರೈತ, ನಿಗದಿ
ಡಾ| ಬಸವರಾಜ ಹೊಂಗಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ
Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ
Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್
Hubli: ಕ್ರಿಮಿನಲ್ ಜತೆಯೇ ಪೊಲೀಸ್ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್ ಕಾರ್ಯಾಚರಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.