ಎಪಿಎಂಸಿಗಳಿಗೆ ಈಗ ನಿರ್ವಹಣೆಯೇ ಹೊರೆ


Team Udayavani, Mar 6, 2021, 6:08 PM IST

ಎಪಿಎಂಸಿಗಳಿಗೆ ಈಗ ನಿರ್ವಹಣೆಯೇ ಹೊರೆ

ಧಾರವಾಡ: ಎಪಿಎಂಸಿಗಳ (ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ) ಅಧಿಕಾರ ವ್ಯಾಪ್ತಿ ಹಾಗೂ ಮಾರುಕಟ್ಟೆ ಶುಲ್ಕ ಕಡಿತದಿಂದ ಎಪಿಎಂಸಿಗಳ ಆದಾಯಕ್ಕೆ ಹೊಡೆತ ಬಿದ್ದಿದೆ. ಇದರಿಂದ ದೈನಂದಿನ ಕಾರ್ಯ ಚಟುವಟಿಕೆಗಳ ನಿರ್ವಹಣೆಯೇ ಹೊರೆಯಾಗಿ ಎಪಿಎಂಸಿಗಳ ಸ್ಥಿತಿ ಅಧೋಗತಿಯತ್ತ ಸಾಗುತ್ತಿದೆ.

ಇದೇ ಪರಿಸ್ಥಿತಿ ಮುಂದುವರಿದರೆ ಎಪಿಎಂಸಿಗಳು ಬಾಗಿಲು ಮುಚ್ಚುವ ಕಾಲ ದೂರವಿಲ್ಲ. ಕೃಷಿ ಮಾರಾಟ ಇಲಾಖೆ ವ್ಯಾಪ್ತಿಯಲ್ಲಿ ಧಾರವಾಡ, ಹುಬ್ಬಳ್ಳಿ, ಅಣ್ಣಿಗೇರಿ, ಕಲಘಟಗಿ, ಕುಂದಗೋಳ ಸೇರಿ ಒಟ್ಟು ಐದುಎಪಿಎಂಸಿಗಳಿದ್ದು, ಇದರ ಅಡಿ ಉಪ ಮಾರುಕಟ್ಟೆ ಮತ್ತು ಉಪ ಮಾರುಕಟ್ಟೆ ಪ್ರಾಂಗಣಗಳಿವೆ. ಈ ಪೈಕಿ 1943ರಲ್ಲಿ ಸ್ಥಾಪನೆಯಾದ ಹುಬ್ಬಳ್ಳಿ ಎಪಿಎಂಸಿಯೇ ಜಿಲ್ಲೆಯ ಹಳೆಯ ಎಪಿಎಂಸಿ  1961ರಲ್ಲಿ ಕುಂದಗೋಳ ಹಾಗೂ 1996ರಲ್ಲಿ ಕಲಘಟಗಿ ಎಪಿಎಂಸಿ ಸ್ಥಾಪನೆಗೊಂಡಿವೆ. ಧಾರವಾಡ ಮತ್ತುಹುಬ್ಬಳ್ಳಿ ಎಪಿಎಂಸಿಗಳಲ್ಲಿ ಅಷ್ಟೇ ಆನ್‌ಲೈನ್‌ ಟೆಂಡರ್‌ ಅನುಷ್ಠಾನ ಆಗಿದ್ದು ಬಿಟ್ಟರೆ ಉಳಿದ ಎಪಿಎಂಸಿಯಲ್ಲಿ ನೇರ ಖರೀದಿ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಇದೀಗಮಾರುಕಟ್ಟೆ ಶುಲ್ಕ ಇಳಿಕೆ ಹಾಗೂ ವ್ಯಾಪ್ತಿ ಕಡಿತದಿಂದಬಹುತೇಕ 50 ವರ್ಷಕ್ಕಿಂತಲೂ ಹೆಚ್ಚಿನ ಇತಿಹಾಸ ಇರುವ ಈಐದು ಎಪಿಎಂಸಿಗಳು ಆದಾಯ ಕೊರತೆ ಎದುರಿಸುವಂತಾಗಿ,ಕಾರ್ಯ ನಿರ್ವಹಣೆಯೇ ಹೊರೆ ಆಗುವಂತಾಗಿದೆ.

ಅರ್ಧಕ್ಕರ್ಧ ಇಳಿದ ಆದಾಯ :

100 ರೂ.ಗೆ 1.50 ರೂ. ಇದ್ದ ಮಾರುಕಟ್ಟೆ ಶುಲ್ಕವನ್ನು ಐದಾರು ತಿಂಗಳಲ್ಲಿ ಗಣನೀಯವಾಗಿ ಬದಲಾವಣೆ ಮಾಡಲಾಗಿದೆ. 1.50 ರೂ.ನಿಂದ 35 ಪೈಸೆಗೆ, ಆ ಬಳಿಕ 1 ರೂ.ಗೆ ಇಳಿಕೆ ಮಾಡಿದ್ದು, ಸದ್ಯ 60 ಪೈಸೆಗೆ ಇಳಿಕೆ ಮಾಡಲಾಗಿದೆ. 60 ಪೈಸೆಯೊಳಗೆ 43 ಪೈಸೆಯಷ್ಟೇಎಪಿಎಂಸಿಗಳು ಬಳಕೆ ಮಾಡಿಕೊಳ್ಳಲು ಅವಕಾಶವಿದೆ. 2019ಏಪ್ರಿಲ್‌ನಿಂದ 2020 ಜನವರಿವರೆಗೆ ಮಾರುಕಟ್ಟೆ ಶುಲ್ಕದಿಂದ12,37,70,622 ರೂ. ಲಭಿಸಿತ್ತು. ಆದರೆ 2020 ಏಪ್ರಿಲ್‌ನಿಂದ2021 ಜನವರಿಗೆ 6,91,50,663 ರೂ.ಗಳಷ್ಟೇ ಬಂದಿದೆ. 2019 ಏಪ್ರಿಲ್‌ನಿಂದ 2021 ಮಾರ್ಚ್‌ವರೆಗೆ 3,44,48,819ರೂ. ಆದಾಯ ಹೊಂದಿದ್ದ ಧಾರವಾಡ ಎಪಿಎಂಸಿಗೆ 2020ಏಪ್ರಿಲ್‌ನಿಂದ 2021 ಫೆಬ್ರವರಿ ಅಂತ್ಯಕ್ಕೆ 2,06,10,593 ರೂ. ಗಳಷ್ಟೇ ಆದಾಯ ಬಂದಿದೆ. ಹುಬ್ಬಳ್ಳಿ ಮತ್ತು ಧಾರವಾಡಎಪಿಎಂಸಿಗಳಲ್ಲಿ ವ್ಯಾಪಾರಸ್ಥರು ಒಳಗಡೆ ಇರುವುದರಿಂದ ಹಾಗೂ ದಿನನಿತ್ಯ ಹೋಲ್‌ಸೇಲ್‌ ತರಕಾರಿ ಮಾರುಕಟ್ಟೆ ನಡೆದಿರುವಕಾರಣ ಇವುಗಳಿಗೆ ತಕ್ಕಮಟ್ಟಿಗೆ ಆದಾಯ ಬರುತ್ತಿದೆ. ಉಳಿದ ಎಪಿಎಂಸಿಗಳಲ್ಲಿ ನಿರ್ವಹಣೆ ದುಸ್ತರವಾಗಿದೆ.

ಹೊರೆಯಾದ ನಿರ್ವಹಣೆ ಹೊಣೆ ;

ದಿನನಿತ್ಯ ಹೋಲ್‌ಸೇಲ್‌ ಕಾಯಿಪಲ್ಲೆ ಮಾರುಕಟ್ಟೆ ಆಗುವ ಧಾರವಾಡ ಹಾಗೂ ಹುಬ್ಬಳ್ಳಿ ಎಪಿಎಂಸಿಗಳಿಗೆ ವಿದ್ಯುತ್‌ ಹಾಗೂ ಸ್ವತ್ಛತೆ ನಿರ್ವಹಣೆ ಸಮಸ್ಯೆಯಾಗಿ ಪರಿಣಮಿಸಿದೆ. ವಿದ್ಯುತ್‌ ನಿರ್ವಹಣೆಯನ್ನು ಹೆಸ್ಕಾಂ ಹಾಗೂ ಸ್ವಚ್ಛತೆ ಕಾರ್ಯ ನಿರ್ವಹಣೆಯನ್ನು ಹು-ಧಾ ಮಹಾನಗರ ಪಾಲಿಕೆಯೇ ಮಾಡುವಂತೆ ಇಲಾಖೆ ವತಿಯಿಂದ ಪತ್ರಗಳನ್ನು ಬರೆಯಲಾಗಿದೆ. ಆದರೆ ಈ ಬಗ್ಗೆ ಸೂಕ್ತ ಸ್ಪಂದನೆ ಈವರೆಗೂ ಸಿಕ್ಕಿಲ್ಲ.

ಹಿಂದಿನ ವ್ಯವಸ್ಥೆ :

ರೈತರಿಂದ ವ್ಯಾಪಾರಸ್ಥರು ಉತ್ಪನ್ನ ಖರೀದಿ ಮಾಡಿದರೆ 100 ರೂ.ಗೆ 1.5 ರೂ. ಮಾರುಕಟ್ಟೆ ಶುಲ್ಕವನ್ನು ಎಪಿಎಂಸಿಗೆ ಭರಿಸಬೇಕಿತ್ತು. ಇದರಲ್ಲಿ 50 ಪೈಸೆ ಆವರ್ತ ನಿಧಿಗೆ, 50 ಪೈಸೆ ಸರಕಾರಕ್ಕೆ ಸಲ್ಲಿಸಿ ಉಳಿದ 50 ಪೈಸೆಯಲ್ಲಿ ಎಪಿಎಂಸಿಗಳು ತಮ್ಮ ಕಾರ್ಯ ನಿರ್ವಹಣೆ ಮಾಡುತ್ತಿದ್ದವು. ಎಪಿಎಂಸಿ ಆವರಣಅಥವಾ ಅದರ ವ್ಯಾಪ್ತಿಯ ಹೊರಗಡೆ ಪ್ರದೇಶದಲ್ಲಿ ವ್ಯಾಪಾರ ವಹಿವಾಟು ಮಾಡಿದರೂ ವ್ಯಾಪಾರಸ್ಥರು ಎಪಿಎಂಸಿಗಳಿಗೆಮಾರುಕಟ್ಟೆ ಶುಲ್ಕ ಭರಿಸಬೇಕಿತ್ತು. ಈ ಶುಲ್ಕ ನೀಡದವರಿಂದ ಶುಲ್ಕ ಆಕರಣೆ ಮಾಡುವ ಅಧಿಕಾರವಿತ್ತು. ಇದಲ್ಲದೇ ಕೇಂದ್ರಸರಕಾರದ ಬೆಂಬಲ ಬೆಲೆ ಅಡಿ ಖರೀದಿ ಕೇಂದ್ರಗಳ ವ್ಯಾಪಾರ ವಹಿವಾಟಿನಿಂದಲೂ ಮಾರುಕಟ್ಟೆ ಶುಲ್ಕ ಆಕರಣೆಯಿಂದ ಎಪಿಎಂಸಿಗಳಿಗೆ ಆದಾಯ ಲಭಿಸುತ್ತಿತ್ತು.

 ಬದಲಾಗಿರುವ ಇಂದಿನ ವ್ಯವಸ್ಥೆ :

ರಾಜ್ಯ ಸರಕಾರ ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡಿದ ಪರಿಣಾಮ ಎಪಿಎಂಸಿಗಳ ಅಧಿಕಾರ ವ್ಯಾಪ್ತಿ ಹಾಗೂಮಾರುಕಟ್ಟೆ ಶುಲ್ಕ ಇಳಿಕೆಯಾಗಿದೆ. ಎಪಿಎಂಸಿ ಪ್ರಾಂಗಣದಲ್ಲಿನಡೆಯುವ ವ್ಯಾಪಾರ ವಹಿವಾಟುಗಳಿಗೆ ಅಷ್ಟೇ ಮಾರುಕಟ್ಟೆ ಶುಲ್ಕ ಆಕರಣೆ ಮಾಡುವ ಅಧಿಕಾರಕ್ಕೆ ಎಪಿಎಂಸಿಗಳನ್ನು ಸೀಮಿತಗೊಳಿಸಿದ್ದು, ಎಪಿಎಂಸಿ ಹೊರಗಡೆ ಮಾಡುವ ವ್ಯಾಪಾರ-ವಹಿವಾಟುಗಳಿಗೆ ಮಾರುಕಟ್ಟೆ ಶುಲ್ಕ ಆಕರಣೆಅಧಿಕಾರ ಮೊಟಕುಗೊಳಿಸಿದೆ. ಜತೆಗೆ ಮಾರುಕಟ್ಟೆ ಶುಲ್ಕವನ್ನೂ60 ಪೈಸೆಗೆ ಇಳಿಕೆ ಮಾಡಿದ್ದು, ಇದರಲ್ಲಿ 43 ಪೈಸೆ ಅಷ್ಟೇ ಬಳಕೆಮಾಡಿಕೊಳ್ಳಬಹುದು. ಮಾರುಕಟ್ಟೆ ಶುಲ್ಕದಿಂದ ಪಾರಾಗಲುವ್ಯಾಪಾರಸ್ಥರು ಎಪಿಎಂಸಿ ಹೊರಗಡೆಯೇ ವ್ಯಾಪಾರ ವಹಿವಾಟಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ.

ಕೊರತೆ ಮಧ್ಯೆಯೂ ಸಿಬ್ಬಂದಿ ಕಡಿತ  :  ಕೃಷಿ ಮಾರಾಟ ಇಲಾಖೆ ಉಪನಿರ್ದೇಶಕರಕಚೇರಿ, ಎಂಜಿನಿಯರಿಂಗ್‌ ಶಾಖೆ ಹಾಗೂ ಎಲ್ಲಐದು ಎಪಿಎಂಸಿಗಳಲ್ಲಿ ಒಟ್ಟು 135 ಹುದ್ದೆಗಳಮಂಜೂರಾತಿ ಇದೆ. ಆದರೆ 39 ಹುದ್ದೆಗಳಷ್ಟೇ ಕಾರ್ಯನಿರ್ವಹಣೆಯಲ್ಲಿವೆ. ಇನ್ನು ಹೊರಗುತ್ತಿಗೆ ಮೇಲೆ ತೆಗೆದುಕೊಂಡಿದ್ದ ಸಿಬ್ಬಂದಿಗೆ ವೇತನ ನೀಡಲಾಗದೇ ಶೇ.50ಸಿಬ್ಬಂದಿಯನ್ನು ಆಯಾ ಎಪಿಎಂಸಿಗಳು ಕಡಿತ ಮಾಡಿವೆ.ಅಣ್ಣಿಗೇರಿ ಎಪಿಎಂಸಿಯಲ್ಲಿ ಹೊರಗುತ್ತಿಗೆ ಆಧಾರದಲ್ಲಿತೆಗೆದುಕೊಂಡಿದ್ದ 13 ಜನರ ಪೈಕಿ ಆರು ಜನರಷ್ಟೇಉಳಿದುಕೊಂಡಿದ್ದು, ಅವರಿಗೂ ನಿಗದಿತ ವೇತನ ನೀಡಲು ಆಗದ ಸ್ಥಿತಿ ಉದ್ಭವಿಸಿದೆ. ಧಾರವಾಡ ಎಪಿಎಂಸಿಯಲ್ಲಿ ಹೊರಗುತ್ತಿಗೆ ಆಧಾರದಮೇಲೆ 32 ಜನರನ್ನು ತೆಗೆದುಕೊಳ್ಳಲಾಗಿತ್ತು. ಈ ಪೈಕಿ 15 ಜನರನ್ನಷ್ಟೇ ಉಳಿಸಿಕೊಳ್ಳಲಾಗಿದೆ. ಉಳಿದ ಎಪಿಎಂಸಿಗಳಲ್ಲೂ ಸಿಬ್ಬಂದಿ ಕಡಿತ ಮಾಡಲಾಗಿದೆ.

ಮಾರುಕಟ್ಟೆ ಶುಲ್ಕ ಇಳಿಕೆ ಹೊಡೆತದಿಂದ ಹುಬ್ಬಳ್ಳಿ ಮತ್ತು ಧಾರವಾಡ ಎಪಿಎಂಸಿಯಲ್ಲಿ ತ್ಯಾಜ್ಯ ವಿಲೇವಾರಿ ಕಷ್ಟ ಆಗುತ್ತಿದೆ. ಉಳಿದ ಎಪಿಎಂಸಿಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಉತ್ಪನ್ನ ಬರುತ್ತಿರುವ ಕಾರಣಮಾರುಕಟ್ಟೆ ಶುಲ್ಕದಿಂದ ಬರುವ ಹಣಕ್ಕೂ ಹೊಡೆತ ಬಿದ್ದಿದೆ. ಹೀಗಾಗಿ ಎಪಿಎಂಸಿ ಒಳಗಡೆ ಹಾಗೂ ಹೊರಗಡೆ ಮಾರುಕಟ್ಟೆ ಶುಲ್ಕ ಸಿಕ್ಕರಷ್ಟೇಎಪಿಎಂಸಿಗಳ ಅಸ್ತಿತ್ವ ಉಳಿಯಲು ಸಾಧ್ಯ. – ಪ್ರಭಾಕರ್‌ ಅಂಗಡಿ, ಉಪನಿರ್ದೇಶಕ, ಕೃಷಿ ಮಾರಾಟ ಇಲಾಖೆ, ಧಾರವಾಡ

ಅಣ್ಣಿಗೇರಿಯ ಎಪಿಎಂಸಿ ಮಾರುಕಟ್ಟೆ ಪ್ರಾಂಗಣದ ಹೊರಗಡೆಯೇ ವ್ಯಾಪಾರ-ವಹಿವಾಟು ಜಾಸ್ತಿ ಆಗಿರುವ ಕಾರಣ ಎಪಿಎಂಸಿಗೆ ಬರುತ್ತಿದ್ದ ಮಾರುಕಟ್ಟೆ ಶುಲ್ಕ ಗಣನೀಯವಾಗಿ ಇಳಿಕೆಯಾಗಿದೆ. ಇದರಿಂದ ಎಪಿಎಂಸಿ ನಿರ್ವಹಣೆ ಕಷ್ಟ ಪಡುವಂತಾಗಿದೆ.  -ರಾಘವೇಂದ್ರ ಸಜ್ಜನ, ಕಾರ್ಯದರ್ಶಿ, ಅಣ್ಣಿಗೇರಿ ಎಪಿಎಂಸಿ

ಹೊರಗುತ್ತಿಗೆ ಆಧಾರದ ಮೇಲಿದ್ದ 9 ಜನರ ಪೈಕಿ ಇಬ್ಬರನ್ನಷ್ಟೇ ಉಳಿಸಿಕೊಂಡಿದ್ದು, ಉಳಿದವರನ್ನು ಕಡಿತ ಮಾಡಿದ್ದೇವೆ. ಅಧ್ಯಕ್ಷರ ವಾಹನದ ಚಾಲಕ ಹಾಗೂ ಕಚೇರಿಗೆ ಸಿಬ್ಬಂದಿ ಸೇರಿ ಇಬ್ಬರನ್ನಷ್ಟೇ ಉಳಿಸಿಕೊಂಡಿದ್ದು, ಕಂಪ್ಯೂಟರ್‌ ಆಪರೇಟರ್‌ ಕೆಲಸವನ್ನೂ ನಾನೇ ಮಾಡಿಕೊಳ್ಳುತ್ತಿದ್ದೇನೆ. ಇದರ ಜತೆಗೆ ವಾಹನದ ಬಳಕೆ ನಿಲ್ಲಿಸಿ, ಕಚೇರಿಯಲ್ಲಿಯೇ ನಿಲ್ಲಿಸಿದ್ದೇನೆ.  -ಶ್ರೀಧರ್‌ ಮನ್ಸೂರ, ಕಾರ್ಯದರ್ಶಿ, ಕಲಘಟಗಿ ಎಪಿಎಂಸಿ

 

-ಶಶಿಧರ್‌ ಬುದ್ನಿ

ಟಾಪ್ ನ್ಯೂಸ್

indian-flag

Republic Day: ವಿವಿಧ ಕ್ಷೇತ್ರದ 10,000 ಸಾಧಕರಿಗೆ ಆಹ್ವಾನ

ISRO 2

ಉಪಗ್ರಹ ಜೋಡಣೆ: ತಾಂತ್ರಿಕ ಸಮಸ್ಯೆ ನಿವಾರಿಸಿದ ಇಸ್ರೋ

PM Mod

ಜ. 13ಕ್ಕೆ ಪ್ರಧಾನಿಯಿಂದ ಕಾಶ್ಮೀರದ ಜೆಡ್‌ ಮೋರ್‌ ಸುರಂಗ ಉದ್ಘಾಟನೆ?

Udupi: ಗೀತಾರ್ಥ ಚಿಂತನೆ-151: ದೇಶ, ಕಾಲವೂ ಅನಾದಿ, ಅನಂತ

Udupi: ಗೀತಾರ್ಥ ಚಿಂತನೆ-151: ದೇಶ, ಕಾಲವೂ ಅನಾದಿ, ಅನಂತ

ಜ.14: ಶಬರಿಮಲೆಯಲ್ಲಿ ಮಕರ ಸಂಕ್ರಮಣ ಪೂಜೆ

ಜ.14: ಶಬರಿಮಲೆಯಲ್ಲಿ ಮಕರ ಸಂಕ್ರಮಣ ಪೂಜೆ

kejriwal-2

Distribution of money ಆರೋಪ: ಬಿಜೆಪಿ ಅಭ್ಯರ್ಥಿ ಸ್ಪರ್ಧೆ ನಿರ್ಬಂಧಕ್ಕೆ ಕೇಜ್ರಿ ಮನವಿ

Vitla ಬೋಳಂತೂರು ಮನೆ ದರೋಡೆ ಪ್ರಕರಣ: ತನಿಖೆ ಚುರುಕು

Vitla ಬೋಳಂತೂರು ಮನೆ ದರೋಡೆ ಪ್ರಕರಣ: ತನಿಖೆ ಚುರುಕು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್

Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್

ತೀವ್ರತೆ ಪಡೆದ ಬಂದ್; ಬಸ್-ಆಟೋ ಇಲ್ಲದೆ ಪರದಾಡಿದ ಜನತೆ

Hubli: ತೀವ್ರತೆ ಪಡೆದ ಬಂದ್; ಬಸ್-ಆಟೋ ಇಲ್ಲದೆ ಪರದಾಡಿದ ಜನತೆ

Dharwad: ದಲಿತಪರ ಸಂಘಟನೆ ಕರೆ ನೀಡಿದ ಬಂದ್ ಗೆ ಮಿಶ್ರ ಪ್ರತಿಕ್ರಿಯೆ

Dharwad: ದಲಿತಪರ ಸಂಘಟನೆ ಕರೆ ನೀಡಿದ ಬಂದ್ ಗೆ ಮಿಶ್ರ ಪ್ರತಿಕ್ರಿಯೆ

Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ

Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ

Joshi-rader

Weather: ರಾಜ್ಯದ ಮೂರು ನಗರದಲ್ಲಿ ಹವಾಮಾನ ರಾಡಾರ್‌ ಸ್ಥಾಪನೆ: ಕೇಂದ್ರ ಸಚಿವ ಜೋಶಿ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

robbers

Pakistan; ಡಕಾಯಿತರಿಂದ 3 ಹಿಂದೂ ಯುವಕರ ಅಪಹರಣ

indian-flag

Republic Day: ವಿವಿಧ ಕ್ಷೇತ್ರದ 10,000 ಸಾಧಕರಿಗೆ ಆಹ್ವಾನ

naksal (2)

ಸುಕ್ಮಾ ಎನ್‌ಕೌಂಟರ್‌: ಮೂವರು ನಕ್ಸಲರ ಹ*ತ್ಯೆ

ISRO 2

ಉಪಗ್ರಹ ಜೋಡಣೆ: ತಾಂತ್ರಿಕ ಸಮಸ್ಯೆ ನಿವಾರಿಸಿದ ಇಸ್ರೋ

PM Mod

ಜ. 13ಕ್ಕೆ ಪ್ರಧಾನಿಯಿಂದ ಕಾಶ್ಮೀರದ ಜೆಡ್‌ ಮೋರ್‌ ಸುರಂಗ ಉದ್ಘಾಟನೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.