ಆರ್ಥಿಕ ನೆರವಿಗಾಗಿ ಸಚಿವರಿಗೆ ಮನವಿ
Team Udayavani, May 11, 2020, 1:29 PM IST
ಹುಬ್ಬಳ್ಳಿ: ವಕೀಲರ ಗುಮಾಸ್ತರಿಗೆ ಸರಕಾರದಿಂದ ಆರ್ಥಿಕ ನೆರವು ನೀಡುವಂತೆ ಒತ್ತಾಯಿಸಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಅವರಿಗೆ ಜಿ.ಆರ್. ಅಂದಾನಿಮಠ ಲಾ ಅಕಾಡೆಮಿಯಿಂದ ಮನವಿ ಸಲ್ಲಿಸಲಾಗಿದೆ.
ವಕೀಲರ ಗುಮಾಸ್ತರು ವಕೀಲರ ಕಾರ್ಯದಲ್ಲಿ ಅವಿಭಾಜ್ಯ ಅಂಗವಾಗಿದ್ದು, ಲಾಕ್‌ಡೌನ್‌ನಿಂದ ಅವರ ಸ್ಥಿತಿ ಹೇಳತೀರದಾಗಿದೆ. ವಕೀಲರ ಗುಮಾಸ್ತರಿಗೆ ಯಾವುದೇ ವೇತನ ಇರುವುದಿಲ್ಲ. ಬದಲಾಗಿ ಕಕ್ಷಿದಾರರು ನೀಡಿರುವ ಹಣವೇ ಅವರ ಜೀವನಕ್ಕೆ ಆಧಾರ. ಆದರೆ ಇತ್ತೀಚಿನ ತಂತ್ರಜ್ಞಾನ ಯುಗದಲ್ಲಿ ಎಲ್ಲವೂ ಗಣಕಯಂತ್ರ ದಾಖಲೆಯಾಗುತ್ತಿದ್ದು, ಇವರುಗಳಿಗೆ ಉದ್ಯೋಗವಿಲ್ಲದಂತಾಗಿದೆ.
ಆದ್ದರಿಂದ ವಕೀಲರ ಗುಮಾಸ್ತರಿಗೆ ಸರಕಾರದಿಂದ ಆರ್ಥಿಕ ನೆರವು ಕಲ್ಪಿಸಬೇಕೆಂದು ಮನವಿ ಸಲ್ಲಿಸಲಾಗಿದೆ. ಹುಬ್ಬಳ್ಳಿ ವಕೀಲರ ಕಾರಕೂನರ ಸಂಘದ ಅಧ್ಯಕ್ಷ ಬಸಯ್ಯ ಹಿರೇಮಠ, ಕಾರ್ಯದರ್ಶಿ ಪ್ರಕಾಶ ಅರಗಂಜಿ, ಪ್ರಕಾಶ ಅಂದಾನಿಮಠ, ಡಾ| ವಿನೋದ ಕುಲಕರ್ಣಿ ಇನ್ನಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಧಾರವಾಡ: ಅವಸಾನದತ್ತ ಶತಮಾನದ ಕೆಲಗೇರಿ ಕೆರೆ
MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ
BJP ಡಬಲ್ ಗೇಮ್; ವಕ್ಫ್ ಆಸ್ತಿ ರಕ್ಷಣೆ ಬಗ್ಗೆ ಬಿಜೆಪಿ ಪ್ರಣಾಳಿಕೆಯಲ್ಲಿ ಉಲ್ಲೇಖ: ಸಿದ್ದು
Hubli: ಅಪ್ರಾಪ್ತೆಯೊಂದಿಗೆ ಅನುಚಿತ ವರ್ತನೆ: ಮುಖ್ಯ ಪೇದೆ ವಿರುದ್ದ ಪೋಕ್ಸೋ ಕೇಸ್
Hubli: ಹಣಕಾಸು ಆಯೋಗದ ಅನ್ಯಾಯದ ಬಗ್ಗೆ ಬಿಜೆಪಿಯರಿಂದ ಮೌನ: ಸಿದ್ದರಾಮಯ್ಯ ಕಿಡಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.