ಸಿದ್ದುಗೆ ಅರ್ಕಾವತಿ ಕೋಳ: ಶೆಟ್ಟರ
Team Udayavani, May 16, 2019, 1:07 PM IST
ಹುಬ್ಬಳ್ಳಿ: ಅರ್ಕಾವತಿ ಡಿನೋಟಿಫಿಕೇಶನ್ ಕುರಿತ ತನಿಖಾ ವರದಿ ಸದನದಲ್ಲಿ ಮಂಡನೆಯಾದರೆ ಸಿಎಲ್ಪಿಸಿ ಅಧ್ಯಕ್ಷ ಸಿದ್ದರಾಮಯ್ಯ ಜೈಲಿಗೆ ಹೋಗುವುದು ಖಚಿತ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಮೇಲೆ ಸುಮಾರು 900 ಎಕರೆ ಜಮೀನನ್ನು ಒಂದೇ ಫೈಲ್ನಲ್ಲಿ ಡಿನೋಟಿಫಿಕೇಶನ್ ಮಾಡಿ ಅಂದಾಜು 10 ಸಾವಿರ ಕೋಟಿ ರೂ. ಭ್ರಷ್ಟಾಚಾರ ಮಾಡಿದ ಆರೋಪವಿದೆ. ಈ ಕುರಿತು ನ್ಯಾ| ಕೆಂಪಣ್ಣ ಆಯೋಗ ವರದಿ ಬಂದು ಎರಡು ವರ್ಷವಾದರೂ ಸದನದಲ್ಲಿ ಮಂಡನೆ ಮಾಡಿಲ್ಲ. ಒಂದು ವೇಳೆ ಮಂಡನೆಯಾದರೆ ಅವರು ಜೈಲಿಗೆ ಹೋಗುವುದು ಸಿದ್ಧ. ಇಂಥವರು ಯಡಿಯೂರಪ್ಪ ಜೈಲಿಗೆ ಹೋಗಿ ಬಂದವರೆಂದು ಹಗುರವಾಗಿ ಮಾತನಾಡುತ್ತಿರುವುದು ಎಷ್ಟು ಸರಿ ಎಂದರು.
ಡಿ.ಕೆ. ಶಿವಕುಮಾರ ಕೆಲವು ಪ್ರಕರಣಗಳಲ್ಲಿ ಬೇಲ್ ಮೇಲೆ ಹೊರಗೆ ಬಂದಿದ್ದಾರೆ. ಅಲ್ಲದೆ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಸಹ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಬೇಲ್ ಮೇಲೆ ಹೊರಗೆ ಬಂದಿದ್ದಾರೆ. ಒಂದು ವೇಳೆ ಇವರಿಗೆಲ್ಲ ಬೇಲ್ ಸಿಗದಿದ್ದರೆ ಜೈಲಿಗೆ ಹೋಗುತ್ತಿದ್ದರು. ತಮ್ಮ ಪಕ್ಷದಲ್ಲಿ ಇಷ್ಟೆಲ್ಲ ಭ್ರಷ್ಟಾಚಾರ ಇಟ್ಟುಕೊಂಡು ಇನ್ನೊಬ್ಬರ ಬಗ್ಗೆ ಹಗುರವಾಗಿ ಮಾತನಾಡಲು ಸಿದ್ದರಾಮಯ್ಯಗೆ ಸಾಮಾನ್ಯ ಜ್ಞಾನವಿಲ್ಲವೆ. ಅವರ ಅಹಂಕಾರ, ದಬ್ಟಾಳಿಕೆ ಬಹಳ ದಿನ ಇರಲ್ಲ. ಕುಂದಗೋಳ ಕ್ಷೇತ್ರದ ಜನ ಎಸ್.ಐ. ಚಿಕ್ಕನಗೌಡರನ್ನು 25 ಸಾವಿರ ಮತಗಳ ಅಂತರದಿಂದ ಗೆಲ್ಲಿಸುವ ಮೂಲಕ ತಕ್ಕಪಾಠ ಕಲಿಸಲಿದ್ದಾರೆ ಎಂದರು.
ಬಂಗ್ಲೆಯಿಂದ ಹೊರದಬ್ಬಲಿ: ಸಿದ್ದರಾಮಯ್ಯ ಅನಧಿಕೃತವಾಗಿ ಕಾವೇರಿ ಬಂಗ್ಲೆಯಲ್ಲಿ ಉಳಿದು ಕೊಂಡಿದ್ದು, ಯಾವ ನೈತಿಕತೆ ಮೇಲೆ ಅಲ್ಲಿದ್ದಾರೆ. ಸಿಎಂ ಕುಮಾರಸ್ವಾಮಿಗೆ ಧಮ್ ಇದ್ದರೆ ಅವರನ್ನು ಅಲ್ಲಿಂದ ಹೊರಗೆ ಹಾಕಬೇಕಿತ್ತು ಎಂದರು.
ಯಾರದೋ ಮಂತ್ರಿ ಹೆಸರಿನಲ್ಲಿ ಬಂಗ್ಲೆ ಮಂಜೂರು ಮಾಡಿಸಿಕೊಂಡು ಅಲ್ಲಿ ಇರುತ್ತೇನೆಂದರೆ ಹೇಗೆ? ಆ ಅಧಿಕಾರ ಸಿದ್ದರಾಮಯ್ಯಗೆ ಇದೆಯಾ? ಜಾರ್ಜ್ ಗೆ ಮಂಜೂರಾಗಿದೆ. ಅದರಲ್ಲಿ ನಾನಿದ್ದೇನೆ ಎಂದು ಬೇಜವಾಬ್ದಾರಿಯಿಂದ ಹೇಳುತ್ತಿದ್ದಾರೆ. ಅಲ್ಲದೆ ಅವರ ವಿರುದ್ಧ ಲೋಕಾಯುಕ್ತದಲ್ಲಿ 71 ಪ್ರಕರಣಗಳಿವೆ. ಭ್ರಷ್ಟಾಚಾರ, ಅಧಿಕಾರ ದುರುಪಯೋಗ ಸೇರಿದಂತೆ ನೂರೆಂಟು ಪ್ರಕರಣಗಳಿವೆ. ತಾವೊಬ್ಬರೇ ಸತ್ಯಹರಿಶ್ಚಂದ್ರ, ಪ್ರಾಮಾಣಿಕ ಎಂದುಕೊಂಡಿದ್ದಾರೆ. ಇಂಥವರಿಗೆ ಯಡಿಯೂರಪ್ಪ ಅವರ ಬಗ್ಗೆ ಹಗುರವಾಗಿ ಮಾತನಾಡುವ ನೈತಿಕತೆಯಿಲ್ಲ. ಮೇ 23ರ ನಂತರ ಇವರಿಗೆ ಎಲ್ಲೂ ನೆಲೆಗಟ್ಟು ಇರುವುದಿಲ್ಲ ಎಂದು ಹೇಳಿದರು.
ಸಂಸದ ಪ್ರಹ್ಲಾದ ಜೋಶಿ ಮಾತನಾಡಿ, ದುರ್ಯೋಧನಗಿಂತ ಹೆಚ್ಚಿನ ಅಹಂಕಾರಿ ಸಿದ್ದರಾಮಯ್ಯ ಆಗಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದ ಜನ ಅವರಿಗೆ ತಕ್ಕಪಾಠ ಕಲಿಸಿದರೂ ಬುದ್ಧಿ ಬಂದಿಲ್ಲ. ಹೀಗಾಗಿ ಅಲ್ಲಿಂದ ಬಾದಾಮಿಗೆ ಬಂದಿದ್ದಾರೆ. ಇವರು ಪ್ರಧಾನಿ ಹಾಗೂ ಯಡಿಯೂರಪ್ಪ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಪಕ್ಷ ಖಂಡಿಸುತ್ತದೆ. ಸಿದ್ದರಾಮಯ್ಯ ಕಾವೇರಿ ಬಂಗ್ಲೆಯಲ್ಲಿ ಅನಧಿಕೃತವಾಗಿ ಇದ್ದ ಬಗ್ಗೆ ಪಕ್ಷವು ಚುನಾವಣೆ ಫಲಿತಾಂಶದ ನಂತರ ಕೋರ್ಟ್ ಮೊರೆ ಹೋಗಲು ಚಿಂತನೆ ನಡೆಸಿದೆ ಎಂದರು.
•ಜಗದೀಶ ಶೆಟ್ಟರ, ಮಾಜಿ ಮುಖ್ಯಮಂತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.