ಎಸ್ಡಿಎಂನಲ್ಲಿ ಕೃತಕ ಬುದ್ಧಿ ಮತ್ತೆ ಶಿಬಿರ
Team Udayavani, May 19, 2018, 4:57 PM IST
ಧಾರವಾಡ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಮತ್ತು ಅಭಿಯಾಂತ್ರಿಕ ಮಹಾವಿದ್ಯಾಲಯದ ಮಾಹಿತಿ ತಂತ್ರಜ್ಞಾನ ವಿಭಾಗದ ಆಶ್ರಯದಲ್ಲಿ ಇಂಟೆಲ್ ಪ್ರಾಯೋಜಿತ ಕೃತಕ ಬುದ್ಧಿಮತ್ತೆ, ಯಂತ್ರ ಕಲಿಕೆ ಮತ್ತು ಆಳವಾದ ಕಲಿಕೆ’ ಎಂಬ ವಿಷಯ ಕುರಿತ ಶಿಬಿರ ಶುಕ್ರವಾರ ನಡೆಯಿತು.
ಬೆಂಗಳೂರಿನ ಕ್ಯಾಲಿಗೋ ಟೆಕ್ನಾಲಜೀಸ್ ವ್ಯವಸ್ಥಾಪಕ ನಿರ್ದೇಶಕ ಡಾ| ರಾಜಾರಾಮನ್ ಸುಬ್ರಮಣ್ಯನ್ ಮಾತನಾಡಿ, ಇಂಟೆಲ್ ನರ್ವಾನಾ ಎಐ ಅಕಾಡೆಮಿ ಬಳಕೆದಾರರ ಅಭಿವೃದ್ಧಿ ಅನುಭವ ಹೆಚ್ಚಿಸುತ್ತದೆ ಎಂದರು. ಫೋಟೊಗಳನ್ನು ಪ್ರಕ್ರಿಯೆಗೊಳಿಸುವುದರ ಮೂಲಕ ಹೆಚ್ಚು ಮಾಹಿತಿ ಪಡೆದುಕೊಳ್ಳಲು ಗೂಗಲ್ ಕೃತಕ ಬುದ್ಧಿಮತ್ತೆಯನ್ನು ಹೇಗೆ ಉಪಯೋಗಿಸಿಕೊಳ್ಳುತ್ತದೆ ಎಂಬುದರ ಬಗ್ಗೆ ಅವರು ಮಾಹಿತಿ ನೀಡಿದರು.
ಎಂಜಿನಿಯರಿಂಗ್ ಮತ್ತು ಮಾಹಿತಿ ತಂತ್ರಜ್ಞಾನ ವಿಭಾಗದ ವಿವಿಧ ಕಾಲೇಜುಗಳ ಉಪನ್ಯಾಸಕರು ಪಾಲ್ಗೊಂಡಿದ್ದರು. ಶಿಬಿರದಲ್ಲಿ ಕೃತಕ ಬುದ್ಧಿಮತ್ತೆ, ಯಂತ್ರ ಕಲಿಕೆ ಮತ್ತು ಆಳವಾದ ಕಲಿಕೆ ಕ್ಷೇತ್ರಗಳಲ್ಲಿ ಇಂಟೆಲ್ ಏನು ಮಾಡುತ್ತಿದೆ ಎಂಬುದನ್ನು ತಿಳಿಸಿಕೊಡಲಾಯಿತು.
ಪ್ರಾಂಶುಪಾಲರಾದ ಡಾ| ವಣಕುದರೆ ಮಾತನಾಡಿದರು. ಪ್ರೊ| ವಿ.ಕೆ. ಪರ್ವತಿ ಸ್ವಾಗತಿಸಿದರು. ಐಎಸ್ಇ ವಿಭಾಗದ ಡಾ| ಎಸ್.ಬಿ. ಬಿರಾದಾರ, ಡಾ| ರಾಜಶೇಖರಪ್ಪ, ಪ್ರೊ| ತನ್ವೀರ್ ಅಹ್ಮದ್, ಪ್ರೊ| ಎಸ್. ಎಸ್. ಜೋಶಿ, ಪ್ರೊ| ಆರತಿ ನಾಯಕ, ಪ್ರೊ| ಲೀನಾ ಸಕ್ರಿ, ಡಾ| ಪುಷ್ಪಲತಾ ನಿಕ್ಕಮ್, ಪ್ರೊ| ವರ್ಷಾ ಜಾಧವ, ಪ್ರೊ| ದೀಪಾ ಬೆಂಡಿಗೇರಿ, ಪ್ರೊ| ಅನಿತಾ ದೀಕ್ಷಿತ್, ಡಾ| ವಂದನಾ ಭಟ್, ಡಾ| ಜಗದೀಶ ಡಿ. ಪೂಜಾರಿ ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.