ಪ್ರೇರಣಾ-ವಿದ್ಯಾನಿಕೇತನ ಕಾಲೇಜಿನ ಅರುಣ-ಶ್ರುತಿ ಭಾರದ್ವಾಜ ಸಾಧನೆ
Team Udayavani, May 12, 2017, 3:33 PM IST
ಹುಬ್ಬಳ್ಳಿ: ನಗರದ ಕೆಎಲ್‌ಇ ಸಂಸ್ಥೆಯ ಪ್ರೇರಣಾ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಅರುಣ ಡಿ.ಕೆ 588 ಅಂಕಗಳನ್ನು ಗಳಿಸಿದ್ದರೆ, ಚೌಗಲಾ ಶಿಕ್ಷಣ ಸಂಸ್ಥೆಯ ವಿದ್ಯಾನಿಕೇತನ ಕಾಲೇಜಿನ ವಿದ್ಯಾರ್ಥಿನಿ ಶ್ರುತಿ ಭಾರದ್ವಾಜ್ 587 ಅಂಕ ಸಂಪಾದಿಸಿದ್ದಾರೆ.
ಟ್ಯೂಷನ್‌ಗೆ ಹೋಗದೇ ಕೇವಲ ಕಾಲೇಜು ತರಗತಿಗಳನ್ನಷ್ಟೇ ಅವಲಂಬಿಸಿ ಉಭಯ ವಿದ್ಯಾರ್ಥಿಗಳು ಸಾಧನೆ ಮಾಡಿದ್ದು ವಿಶೇಷ. ಅರುಣ ಡಿ.ಕೆ. ಗಣಿತದಲ್ಲಿ 100, ಕಂಪ್ಯೂಟರ್ ಸಾಯನ್ಸ್‌ನಲ್ಲಿ 100 ಅಂಕ ಪಡೆದಿದ್ದರೆ, ಭೌತಶಾಸ್ತ್ರದಲ್ಲಿ 98, ರಸಾಯನಶಾಸ್ತ್ರದಲ್ಲಿ 97, ಇಂಗ್ಲಿಷ್‌ನಲ್ಲಿ 94, ಸಂಸ್ಕೃತದಲ್ಲಿ 99 ಅಂಕ ಪಡೆದಿದ್ದಾರೆ.
ಅರುಣ ಅವರ ತಂದೆ ಕೆ.ಎಚ್. ದತ್ತಾತ್ರೇಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ, ತಾಯಿ ಗೃಹಿಣಿಯಾಗಿದ್ದಾರೆ. ಅರುಣ ಡಿ.ಕೆ. ಮಾಧ್ಯಮದವರೊಂದಿಗೆ ಮಾತನಾಡಿ, ನನಗೆ ಕಾಲೇಜಿನಲ್ಲಿ ಉತ್ತಮವಾಗಿ ಬೋಧಿಸುತ್ತಿದ್ದರಿಂದ ನಾನು ಟ್ಯೂಷನ್‌ಗೆ ಹೋಗುವ ಅವಶ್ಯಕತೆ ಬರಲಿಲ್ಲ. ಪ್ರತಿದಿನ ಅಭ್ಯಾಸ ಮಾಡುತ್ತಿದ್ದೆ.
ಪರೀಕ್ಷಾ ಸಂದರ್ಭದಲ್ಲಿ ದಿನಕ್ಕೆ 14 ಗಂಟೆ ಅಧ್ಯಯನ ಮಾಡಿದೆ. ಭೌತಶಾಸ್ತ್ರದಲ್ಲಿ ಇನ್ನೂ 2 ಅಂಕ, ಸಂಸ್ಕೃತದಲ್ಲಿ ಇನ್ನೊಂದು ಅಂಕ ಪಡೆಯುವ ನಂಬಿಕೆಯಿತ್ತು. ಮೊಬೈಲ್‌ನ ಆ್ಯಪ್‌ಗ್ಳಿಂದ ಸ್ವಲ್ಪ ನೆರವಾಗಿದೆ. ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಲು ಮೊಬೈಲ್ ನೆರವು ಪಡೆದಿದ್ದೇನೆ ಎಂದರು.
ಅರುಣನ ತಾಯಿ ಸುಜಾತಾ ದತ್ತಾತ್ರೇಯ ಮಾತನಾಡಿ, ನಮ್ಮ ಹುಡುಗ ಹೆಚ್ಚಾಗಿ ಕಾದಂಬರಿಗಳನ್ನು ಓದುತ್ತಿದ್ದ. ಇಂಗ್ಲಿಷ್ ಕವಿತೆ ಬರೆಯುವುದು ಅವನ ಹವ್ಯಾಸ. ಮೊಬೈಲ್ ನೋಡುತ್ತ ಕಾಲಹರಣ ಮಾಡುತ್ತಿದ್ದ. 588 ಅಂಕ ಗಳಿಸುತ್ತಾನೆಂದು ಅಂದುಕೊಂಡಿರಲಿಲ್ಲ. ಅವನ ಸಾಧನೆ ಖುಷಿ ತಂದಿದೆ ಎಂದರು.
ಧಾರವಾಡದ ಜೆಎಸ್‌ಎಸ್ ಸಿಬಿಎಸ್‌ಇ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ (10/10) ಸಾಧನೆ ಮಾಡಿದ ಅರುಣ, ಜೆಇಇ ಪರೀಕ್ಷೆಯಲ್ಲೂ ಉತ್ತಮ ಸಾಧನೆ ಮಾಡಿದ್ದಾರೆ. ಜೆಇಇ ಅಡ್ವಾನ್ಸ್‌ನಲ್ಲಿ ಉತ್ತಮ ಫಲಿತಾಂಶದ ನಿರೀಕ್ಷೆ ಹೊಂದಿದ್ದಾರೆ. ಅರುಣ ಐಐಟಿ ಮಾಡುವಗುರಿ ಹೊಂದಿದ್ದಾರೆ.
ತಂದೆಗೆ ಸಾಧನೆ ಅರ್ಪಣೆ: ಕೆಲ ತಿಂಗಳ ಹಿಂದೆ ತಂದೆ ಕಳೆದುಕೊಂಡ ಶ್ರುತಿ ಭರದ್ವಾಜ್ 587 ಅಂಕ ಗಳಿಸಿದ್ದಾರೆ. ಚೌಗಲಾ ಶಿಕ್ಷಣ ಸಂಸ್ಥೆಯ ವಿದ್ಯಾನಿಕೇತನ ಕಾಲೇಜಿಗೆ ಪ್ರಥಮ ಸ್ಥಾನ ಗಳಿಸಿದ್ದು, ಅಂಕ ಸಾಧನೆಯನ್ನು ತಂದೆಗೆ ಸಮರ್ಪಿಸಿದ್ದಾರೆ.
ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಹಾಗೂ ಸಂಖ್ಯಾಶಾಸ್ತ್ರದಲ್ಲಿ ಶ್ರುತಿ 100ಕ್ಕೆ 100 ಅಂಕ ಗಳಿಸಿದ್ದು, ಹಿಂದಿಯಲ್ಲಿ 97, ಇಂಗ್ಲಿಷ್ ನಲ್ಲಿ 90 ಅಂಕ ಗಳಿಸಿದ್ದಾರೆ. ಏರ್‌ಫೋರ್ಸ್ ಎಂಜಿನಿಯರ್ ಆಗುವ ಗುರಿ ಹೊಂದಿದ ಶ್ರುತಿ, ಬಿಇ ಇಲೆಕ್ಟ್ರಾನಿಕ್ಸ್ ಹಾಗೂ ಕಮ್ಯುನಿಕೇಶನ್ ಆಯ್ಕೆ ಮಾಡಿಕೊಳ್ಳಲು ಬಯಸಿದ್ದಾರೆ.
ಶ್ರುತಿ ಮಾಧ್ಯಮದವರೊಂದಿಗೆ ಮಾತನಾಡಿ, ನನ್ನ ತಂದೆ ರವೀಂದ್ರ ಭಾರದ್ವಾಜ್ ಕಾರ್ಪೋರೇಶನ್ ಬ್ಯಾಂಕ್ ಹಾವೇರಿ ಶಾಖೆ ವ್ಯವಸ್ಥಾಪಕರಾಗಿದ್ದರು. 9 ತಿಂಗಳ ಹಿಂದೆ ಹೃದಯಾಘಾತದಿಂದ ತೀರಿಕೊಂಡರು. ಅವರು ಆಸ್ಪತ್ರೆಯಲ್ಲಿದ್ದಾಗ ನನ್ನ ಬಗ್ಗೆ ಕಾಳಜಿ ಮಾಡಬೇಡ. ನನ್ನ ಕಾಳಜಿಗೆ ವೈದ್ಯರಿದ್ದಾರೆ. ನೀನು ಉತ್ತಮ ಸಾಧನೆ ಮಾಡು ಎಂದು ಹೇಳಿದ್ದರು. ಅವರ ಮಾತಿನಿಂದ ಸ್ಫೂರ್ತಿ ಪಡೆದು ಅಧ್ಯಯನ ಮಾಡಿದೆ ಎಂದರು.
ದಿನಕ್ಕೆ 4-5 ಗಂಟೆ ಅಧ್ಯಯನ ಮಾಡುತ್ತಿದ್ದೆ. ಕಾಲೇಜಿನಲ್ಲೇ ಉತ್ತಮವಾಗಿ ವಿಷಯ ಬೋಧನೆ ಮಾಡುತ್ತಿದ್ದರಿಂದ ಟ್ಯೂಷನ್‌ಗೆ ಹೋಗಲಿಲ್ಲ ಎಂದರು. ಮಾಧ್ಯಮಿಕ ಶಿಕ್ಷಣವನ್ನು ನಿರ್ಮಲಾ ಠಕ್ಕರ್ ಮಾಧ್ಯಮಿಕ ಶಾಲೆಯಲ್ಲಿ ಪಡೆದ ಶ್ರುತಿ ಎಸ್‌ಎಸ್‌ಎಲ್‌ಸಿಯಲ್ಲಿ ರಾಜ್ಯಕ್ಕೆ 6ನೇ ರ್‍ಯಾಂಕ್ ಗಳಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NABARD ನಿರ್ಧಾರದಿಂದ ಕೃಷಿಗೆ ಹಿನ್ನಡೆ; ಸಾಲದ ಮೊತ್ತ ಕಡಿತ ಮಾಡದಿರಲು ಸಚಿವ ಪಾಟೀಲ ಆಗ್ರಹ
ಸಿಎಂ ಆಗಿದ್ದವರು ಈ ರೀತಿ ಹೇಳಿಕೆ ನೀಡುವ ಬದಲು, ಸ್ಪಷ್ಟ ಹೇಳಿಕೆ ನೀಡಲಿ: ಸಚಿವ ಶಿವಾನಂದ
dharwad: ಪೊಲೀಸ್ ಪೇದೆ ಮೇಲೆ ಕೈ ಮುಖಂಡ ತಮಟಗಾರ ಸಹೋದರ ಬ್ಲೇಡ್ ನಿಂದ ಹಲ್ಲೆ
Covid Scam: ಸಚಿವ ಸಂಪುಟದಲ್ಲಿ ಚರ್ಚಿಸಿ ಮುಂದಿನ ಕ್ರಮ: ಸಿಎಂ ಸಿದ್ದರಾಮಯ್ಯ
By Election: ಹಣ ಕೊಟ್ಟರೂ ಸಿಎಂ ಕಾರ್ಯಕ್ರಮಕ್ಕೆ ಜನ ಬರುತ್ತಿಲ್ಲ: ಬಿಎಸ್ ವೈ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.