ವಿಜ್ಞಾನ-ತಂತ್ರಜ್ಞಾನ ಬೆಳೆದಂತೆ ಜ್ಞಾನ ಶಾಖೆ ಆಯಾಮ ಬದಲು
ಜ್ಞಾನ ಸದಾ ಹೊಸದನ್ನು ಸೃಷ್ಟಿಸುತ್ತಾ ಹೋಗುತ್ತದೆ
Team Udayavani, Dec 3, 2022, 5:50 PM IST
ಧಾರವಾಡ: ತಂತ್ರಜ್ಞಾನ ಕ್ಷೇತ್ರದ ಆವಿಷ್ಕಾರಗಳಲ್ಲೊಂದಾದ ಯಾಂತ್ರಿಕ ಬುದ್ಧಿಮತ್ತೆ ಗಣಕ ವಿಜ್ಞಾನದ ಭಾಗವಾಗಿ ಬೆಳೆದುಬಂದಿದೆ. ಇದನ್ನು ಶಿಕ್ಷಣದಲ್ಲಿ ಅಳವಡಿಸಿಕೊಂಡು ಜ್ಞಾನ ವಿಕಾಸದ ಹೊಸ ಆಯಾಮಗಳತ್ತ ಸಾಗಬೇಕಾಗಿದೆ ಎಂದು ಡಾ| ಸಿ.ಕೃಷ್ಣಮೂರ್ತಿ ಹೇಳಿದರು.
ಕವಿವಿ ಹಾಗೂ ಜೆಎಸ್ಸೆಸ್ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆ, ಕರ್ನಾಟಕ ಉನ್ನತ ಶಿಕ್ಷಣ ಪರಿಷತ್ತು ಸಹಯೋಗದಲ್ಲಿ ಜೆಎಸ್ಸೆಸ್ ಉತ್ಸವ ಸಭಾಭವನದಲ್ಲಿ ಆಯೋಜಿಸಿದ್ದ ಯಾಂತ್ರಿಕ ಬುದ್ಧಿಮತ್ತೆ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಗಣಕ ವಿಜ್ಞಾನದ ಬಳಕೆ- ಸದುಪಯೋಗ ಮಾಡಿಕೊಳ್ಳುವಲ್ಲಿ ಇಡೀ ಜಗತ್ತು ಮಾಹಿತಿ ತಂತ್ರಜ್ಞಾನದಲ್ಲಿ ತುಂಬಾ ಪ್ರಗತಿಯಲ್ಲಿದೆ. ಆರೋಗ್ಯ, ಶಿಕ್ಷಣ ಕೈಗಾರಿಕೆ, ಮಾಹಿತಿ ತಂತ್ರಜ್ಞಾನ ಹೀಗೆ ವಿವಿಧ ಕ್ಷೇತ್ರದಲ್ಲಿ ಮತ್ತು ನಿತ್ಯ ಜೀವನದೊಂದಿಗೆ ತಂತ್ರಜ್ಞಾನದ ಬಳಕೆ ಹಾಸುಹೊಕ್ಕಾಗಿದೆ. ಇದು ಇನ್ನಷ್ಟು ಅಭಿವೃದ್ಧಿ ಕಾಣಬೇಕಿದೆ ಎಂದರು.
ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಅಧಿಕಾರಿ ಡಾ| ಎಂ.ಜಯಪ್ಪ ಮಾತನಾಡಿ, ಭಾರತದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಮೊದಲು ಜಾರಿಗೆ ತಂದಿದ್ದು ಕರ್ನಾಟಕ. ಕರ್ನಾಟಕದಲ್ಲಿ ಎನ್‌ಇಪಿ ಅಡಿಯಲ್ಲಿ ಇಂತಹ ಕಾರ್ಯಾಗಾರವನ್ನು ಮೊಟ್ಟಮೊದಲ ಬಾರಿಗೆ ಆಯೋಜಿಸಿದ್ದು ಕವಿವಿ. ಕವಿವಿ ಅಡಿಯಲ್ಲಿ ಮೊಟ್ಟಮೊದಲು ಜೆಎಸ್ಸೆಸ್ ಸಂಸ್ಥೆಯಲ್ಲಿ ಯಶಸ್ವಿಯಾಗಿ ಇಂತಹ ಕಾರ್ಯಗಾರವನ್ನು ಆಯೋಜಿಸಿರುವುದು ಸ್ಮರಣಿಯ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಜನತಾ ಶಿಕ್ಷಣ ಸಮಿತಿ ಕಾರ್ಯದರ್ಶಿ ಡಾ| ಅಜಿತ ಪ್ರಸಾದ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಕಂಪ್ಯೂಟರ್ ಜ್ಞಾನ ಅತಿ ಅವಶ್ಯ. ವಿಜ್ಞಾನ-ತಂತ್ರಜ್ಞಾನ ಬೆಳೆದಂತೆ ಜ್ಞಾನ ಶಾಖೆಯ ಆಯಾಮಗಳು ಬದಲಾಗುತ್ತಾ ಹೋಗುತ್ತವೆ. ಜ್ಞಾನ ಸದಾ ಹೊಸದನ್ನು ಸೃಷ್ಟಿಸುತ್ತಾ ಹೋಗುತ್ತದೆ. ನಾವು ಅದನ್ನು ಕಲಿಯುತ್ತಾ ಹೋಗಬೇಕು.
ಅದರಲ್ಲೂ ಪ್ರಾಧ್ಯಾಪಕರು ನಿತ್ಯ ಅಧ್ಯಯನಶೀಲರಾಗಿ ಜ್ಞಾನ, ತಂತ್ರಜ್ಞಾನದ ಸಾಮಾನ್ಯ ತಿಳಿವಳಿಕೆ ಹೊಂದುವುದು ತುಂಬಾ ಮುಖ್ಯ ಎಂದರು. ಡಾ| ಸೂರಜ್ ಜೈನ್, ದಿನೇಶ ಕುಮಾರ ಪಾಣಿಗ್ರಾಹಿ, ಕರಣ ಠಾಕೂರ, ಡಾ| ರಶ್ಮಿ ಠಾಕೂರ ಉಪಸ್ಥಿತರಿದ್ದರು. ಚೈತ್ರಾ ಭಟ್ ಪ್ರಾರ್ಥಿಸಿದರು. ಡಾ| ಬಿ.ಬಿ. ಬಿರಾದಾರ ಸ್ವಾಗತಿಸಿದರು. ಡಾ| ವಿಷ್ಣುವರ್ಧನ ಪರಿಚಯಿಸಿದರು. ಪ್ರೊ| ವಿವೇಕ ಲಕ್ಷ್ಮೇಶ್ವರ ವಂದಿಸಿದರು. ಪ್ರೊ| ಪ್ರವೀಣ ಕೊರಳಹಳ್ಳಿ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ
Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ
Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್
Hubli: ಕ್ರಿಮಿನಲ್ ಜತೆಯೇ ಪೊಲೀಸ್ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್ ಕಾರ್ಯಾಚರಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.