![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Aug 19, 2021, 4:31 PM IST
ಹುಬ್ಬಳ್ಳಿ: ಪತ್ನಿಯನ್ನು ತನ್ನೊಂದಿಗೆ ಕಳುಹಿಸದ್ದಕ್ಕೆ ಸಿಟ್ಟಾದ ಅಳಿಯ ಮಾವನಿಗೆ ಹರಿತವಾದ ಬ್ಲೇಡ್‌ನಿಂದ ಕುತ್ತಿಗೆ ಸೀಳಿ ಮಾರಣಾಂತಿಕ ಗಾಯಗೊಳಿಸಿದ ಘಟನೆ ಮಂಗಳವಾರ ರಾತ್ರಿ ಅಣ್ಣಿಗೇರಿ ತಾಲೂಕು ಹಳ್ಳಿಕೇರಿ ಗ್ರಾಮದಲ್ಲಿ ನಡೆದಿದೆ.
ಒಕ್ಕಲುತನ ಮಾಡಿಕೊಂಡಿರುವ ಶಿವಪ್ಪ ಹುಚ್ಚಪ್ಪ ದಳವಾಯಿ (55) ಮಾರಣಾಂತಿಕವಾಗಿ ಗಾಯಗೊಂಡಿದ್ದು, ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಅಳಿಯ ಚಾಲಕನಾಗಿರುವ ಶಿರಹಟ್ಟಿ ತಾಲೂಕು ಬನ್ನಿಕೊಪ್ಪ ಗ್ರಾಮದ ಜಗದೀಶ ಕಂಬಳಿ ಹಲ್ಲೆ ಮಾಡಿದ್ದಾನೆ.
ಜಗದೀಶ ತನ್ನ ಪತ್ನಿಯೊಂದಿಗೆ ಅನವಶ್ಯಕವಾಗಿ ಪದೇ ಪದೇ ಜಗಳ ಮಾಡುತ್ತಿದ್ದ. ಹೀಗಾಗಿ ಗಾಯಾಳು ಶಿವಪ್ಪ ತಿಂಗಳ ಹಿಂದಷ್ಟೆ ಮಗಳನ್ನು ಮನೆಗೆ ಕರೆದುಕೊಂಡು ಬಂದಿದ್ದ. ಅಲ್ಲದೆ ಒಳ್ಳೆಯ ರೀತಿಯಿಂದ ಜೀವನ ಸಾಗಿಸು, ಮಗಳನ್ನು ನಿನ್ನೊಂದಿಗೆ ಕಳುಹಿಸುತ್ತೇನೆಂದು ಬುದ್ಧಿವಾದ ಹೇಳಿದ್ದರು ಎನ್ನಲಾಗಿದೆ. ಆದರೂ ಜಗದೀಶ ಮಂಗಳವಾರ ಸಂಜೆ ಬೈಕ್‌ನಲ್ಲಿ ಹಳ್ಳಿಕೇರಿಗೆ ಬಂದು ಪತ್ನಿಯನ್ನು ಕಳುಹಿಸಿ ಕೊಡುವಂತೆ ಮಾವ ಶಿವಪ್ಪ, ಅವರ ಮಗ ಮತ್ತು ಇನ್ನೋರ್ವ ಮಗಳೊಂದಿಗೆ ಜಗಳವಾಡಿ, ಅವಾಚ್ಯವಾಗಿ ನಿಂದಿಸಿದ್ದಾನೆ.
ನಿನ್ನ ಪತ್ನಿ ಗದಗನಲ್ಲಿ ಸಂಬಂಧಿಕರ ಮನೆಯಲ್ಲಿದ್ದಾಳೆ. ಬುಧವಾರ ನಿನ್ನೆ ಜತೆ ಕಳುಹಿಸುತ್ತೇವೆಂದು ಹೇಳಿದರೂ ಕೇಳದೆ ಜಗಳವಾಡಿ, ತನ್ನೊಂದಿಗೆ ತಂದಿದ್ದ ಖಾರದಪುಡಿಯನ್ನು ಮಾವ ಶಿವಪ್ಪ ಮತ್ತು ಅವರ ಮಗ ಪ್ರವೀಣ ಮುಖಕ್ಕೆ ಎರಚಿ, ಸ್ಟೀಕರ್ ಕತ್ತರಿಸುವ ಬ್ಲೇಡ್‌ನಿಂದ ಕುತ್ತಿಗೆಗೆ ಇರಿದಿದ್ದಾನೆ. ಬಿಡಿಸಲು ಹೋದ ಅವರ ಇನ್ನೋರ್ವ ಮಗಳ ಮುಖಕ್ಕೆ ಖಾರದ ಪುಡಿ ಎರಚಿ ಹಲ್ಲೆ ಮಾಡಿ ಎಳೆದಾಡಿದ್ದಾನೆ. ಘಟನೆಗೆ ಸಂಬಂಧಿಸಿ ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಿಎಸ್‌ಐ ಎಲ್.ಕೆ. ಜೂಲಕಟ್ಟಿ ಘಟನಾ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲಿಸಿದ್ದು, ಜಗದೀಶನನ್ನು ಬಂಧಿಸಿದ್ದಾರೆ. ಬ್ಲೇಡ್‌ನಿಂದ ಕುತ್ತಿಗೆ ಸೀಳಿದ್ದರಿಂದ ಶಿವಪ್ಪ ಗಂಭೀರ ಗಾಯಗೊಂಡಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ. ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪ್ರವೀಣ ಚೇತರಿಸಿಕೊಳ್ಳುತ್ತಿದ್ದಾನೆಂದು ಪೊಲೀಸ್ ಮೂಲಗಳು ತಿಳಿಸಿವೆ.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.