ಗಮನ ಸೆಳೆದ ಕವಿಗೋಷ್ಠಿ: 20 ಕವಿಗಳಿಂದ ಕವನ ವಾಚನ
Team Udayavani, Mar 27, 2017, 2:52 PM IST
ಧಾರವಾಡ: ಜಿಲ್ಲಾ 11ನೇ ಕನ್ನಡ ಸಾಹಿತ್ಯ ಸಮ್ಮೇಳನದ ದ್ವಿತೀಯ ದಿನ ನಡೆದ ಕವಿಗೋಷ್ಠಿ ಗಮನ ಸೆಳೆಯುವಲ್ಲಿ ಯಶಸ್ವಿಗೊಂಡಿತು. ಕವಿಗಳು ವೈಯಕ್ತಿಕ ಅನುಭವ, ಸಾಮಾಜಿಕ ಪಲ್ಲಟ, ವಾಸ್ತವ ಸ್ಥಿತಿಗತಿ, ಆದರ್ಶಗಳು, ಪ್ರೇಮ ಭಾವನೆಗಳು, ಮಾತೆ, ಮಾತೃಭೂಮಿ, ಹೆಣ್ಣು ಭ್ರೂಣ ಹತ್ಯೆ ಮೊದಲಾದ ಕವಿತೆಗಳನ್ನು ಪ್ರಸ್ತುತಪಡಿಸಿದರು.
ಕವಿಗೋಷ್ಠಿ ಏಕತಾನತೆಯಿಂದ ದೂರ ಉಳಿದಿದ್ದರಿಂದ ಶ್ರೋತೃಗಳಿಗೆ ಇಷ್ಟವಾಯಿತು. 6 ಮಹಿಳಾ ಕವಿಗಳು ಸೇರಿದಂತೆ ಒಟ್ಟು 20 ಕವಿಗಳು ಕವನ ವಾಚಿಸಿದರು. ಯುವ ಕವಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಕವನ ವಾಚಿಸಿದ್ದು ವಿಶೇಷ. ಎಸ್. ಎಸ್.ಚಿಕ್ಕಮಠ, ಜೋಸೆಫ್ ಮಲ್ಲಾಡಿ, ಐ.ಎನ್.ಜಾವೂರ, ಶಿವಕುಮಾರ ಹಿರೇಮಠ ಗ್ರಾಮೀಣ ಶೈಲಿಯಲ್ಲಿ ಬರೆದ ಕವನಗಳನ್ನು ಓದಿದರೆ, ಚಂದ್ರಶೇಖರ ಮಾಡಲಗೇರಿ, ಶಿಲ್ಪಾ ಸಿದ್ದರಾಮ ಶೆಟ್ಟರ ಪ್ರೇಮ ನಿವೇದನೆ ಕುರಿತ ಕವನ ವಾಚಿಸಿದರು.
ಜೋಸೆಫ್ ಮಲ್ಲಾಡಿಯ ಕವನ ಪ್ರೀತಿ, ಪ್ರೇಮದ ಪಥದಲ್ಲಿ ಸಾಗಿ ಕೊನೆಗೆ ಮಹತ್ವದ ಸಂದೇಶ ನೀಡಿತು. ಕುಮಾರ ಬೇಂದ್ರೆ “ಒಲವಧಾರೆ’ ಅರ್ಥಗರ್ಭಿತ ಕವನದ ಮೂಲಕ ಚಪ್ಪಾಳೆ ಗಿಟ್ಟಿಸಿಕೊಂಡರು. ಸುಧಾ ಮರಿಗೌಡರ “ತಾಯಿ ಭೂತಾಯಿ ಗರ್ಭ’, ರೂಪಾ ಜೋಶಿ “ಧರೆ ಹೊತ್ತಿ ಉರಿದರೆ’ ಡಾ|ಸಿದ್ದಲಿಂಗೇಶ ಹಂಡಗಿ “ಸೃಷ್ಟಿಸುವವಳು ಬದುಕಬೇಕು’ ಕವನದ ಮೂಲಕ ಹೆಣ್ಣು ಭ್ರೂಣ ಹತ್ಯೆ ವಿರುದ್ಧ ಧ್ವನಿ ಎತ್ತಿದರು.
ಲಕೀಕಾಂತ ಇಟ್ನಾಳ “ಕಾಡಿನ ಚಿತ್ರಣ’, ಸುಭಾಷ ಚವ್ಹಾಣ “ಕಾಡು’, ಪರಿಸರ ಕುರಿತ ಕವನ ವಾಚಿಸಿದರು. ನಿರ್ಮಲಾ ಶೆಟ್ಟರ ಕೋಮು ಸದ್ಭಾವನೆ ಬಿಂಬಿಸುವ ಗಜಲ್ ಮೂಲಕ ಗಮನ ಸೆಳೆದರೆ, ಗಂಗಾಧರ ಗಾಡದ, ಡಾ|ಎಂ. ಎಂ.ಕಲಬುರ್ಗಿ ಅವರ ಕುರಿತ “ತೆನೆ ಗೊನೆ ಮನ’ ಕವನ ಚುಟುಕೆನಿಸಿತು.
ಸಾಹಿತಿಯ ಅಂತ್ಯಕಾಲದಲ್ಲಿ ಪ್ರಶಸ್ತಿ, ಪುರಸ್ಕಾರ ನೀಡುವುದನ್ನು ಖಂಡಿಸಿ ಮಹಮ್ಮದ್ ಅಲಿ ಗೂಡುಭಾಯಿ ವಾಚನ ಮಾಡಿದ “ಪ್ರಶಸ್ತಿ ಬೇಕಾಗಿಲ್ಲ’ ಕವನ ಸಂದರ್ಭಕ್ಕೆ ತಕ್ಕದಾಗಿತ್ತು. ಮಹಾಂತಪ್ಪ ನಂದೂರ “ಮುಖಾಮುಖೀ’, ಅನುಸೂಯಾ ಹಿರೇಮಠ “ನಮ್ಮವರ ಪಯಣ’, ಪೊ|ಎಸ್.ಆರ್.ಆಶಿ “ದುಗುಡವಿದೆ’ ಕವನ ಓದಿದರು. ಕವಿಗೋಷ್ಠಿಯಲ್ಲಿ ಯುವ ಕವಿಗಳು, ಹಿರಿಯ ಕವಿಗಳು ಪಾಲ್ಗೊಂಡಿದ್ದರಿಂದ ವಿವಿಧ ಬಗೆಯ ಕವಿತೆಗಳನ್ನು ಆಲಿಸುವ ಅವಕಾಶ ಲಭಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಅಮಿತ್ ಶಾ ಅಣಕು ಶವ ಸಂಸ್ಕಾರದ ಅಸ್ಥಿ ವಿಸರ್ಜಿಸಿ ಪ್ರತಿಭಟನೆ
Mangaluru Lit Fest: ಯಾವುದೇ ಉತ್ಸವ ಯಾಂತ್ರಿಕವಾದರೆ ಹೊಸತನ ಮೂಡಲ್ಲ: ಎಸ್.ಎಲ್ ಭೈರಪ್ಪ
Hubli: ರಾಜ್ಯದ ಕಾಂಗ್ರೆಸ್ ಸರ್ಕಾರ ಪತನಗೊಳ್ಳುವುದು ಖಚಿತ: ಜಗದೀಶ ಶೆಟ್ಟರ್
Alnavar: ಬೈಕ್- ಓಮಿನಿ ಅಪಘಾತ; ಬೈಕ್ ಸವಾರ ಸಾವು
Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್
MUST WATCH
ಹೊಸ ಸೇರ್ಪಡೆ
ಹಿಂದೂ ಕಾರ್ಯಕರ್ತರ ಪರ ಕಾನೂನು ಪ್ರಕೋಷ್ಠ ಹೋರಾಟ: ಬಿ.ವೈ.ವಿಜಯೇಂದ್ರ
ಇಂದಿರಾ ಗಾಂಧಿ ಸಂವಿಧಾನ ತಿದ್ದುಪಡಿ ಮಾಡಿದ್ದರಿಂದ ದೇಶಕ್ಕೆ ಭಾರೀ ಹಿನ್ನಡೆ: ಕೆ.ಅಣ್ಣಾಮಲೈ
ಕೆಮ್ತೂರು ತುಳು ನಾಟಕ ಸ್ಪರ್ಧೆ: “ಈದಿ’ ಪ್ರಥಮ, “ದಿ ಫೈಯರ್’ ದ್ವಿತೀಯ
Dharmasthala: ಜನಜಾಗೃತಿ ವೇದಿಕೆ ನೂರಾರು ಕವಲಿರುವ ವೃಕ್ಷ: ಡಾ.ಹೇಮಾವತಿ ಹೆಗ್ಗಡೆ
ತುಳುವಿಗೆ ರಾಜ್ಯಭಾಷೆ ಗೌರವ ಪರಿಗಣನೆ; ನರಿಂಗಾನ ಕಂಬಳೋತ್ಸವದಲ್ಲಿ ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.