ಲಾರಿ-ಆಟೋ ರಿಕ್ಷಾ ಚಾಲಕರ ಸಂಘದಿಂದ ಪ್ರತಿಭಟನೆ
Team Udayavani, Feb 9, 2021, 5:17 PM IST
ಧಾರವಾಡ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಧಾರವಾಡ ಲಾರಿ ಮಾಲೀಕರ ಹಾಗೂ ಸಾಗಾಣಿಕೆದಾರರ ಸಂಘ, ಜಿಲ್ಲಾ ಆಟೋರಿಕ್ಷಾ ಚಾಲಕರ ಸಂಘದ ವತಿಯಿಂದ ನಗರದ ಡಿಸಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಏರಿಕೆ ಆಗಿರುವ ಡೀಸೆಲ್, ಪೆಟ್ರೋಲ್ ಬೆಲೆ ಲೀಟರ್‌ಗೆ 50 ರೂ. ಒಳಗೆ ಇಳಿಸಬೇಕು. ಸರಕು ಸಾಗಾಣಿಕೆಗೆ ಕಿಲೋ ಮೀಟರ್ ಪ್ರಕಾರ ಸೂಕ್ತ ಬಾಡಿಗೆ ನಿಗದಿ ಮಾಡಬೇಕು. ಹು-ಧಾ ಬೈಪಾಸ್‌ನಲ್ಲಿ ಸ್ಥಳೀಯ ವಾಹನಗಳಿಗೆ ಶುಲ್ಕ ರಹಿತ ಸಂಚರಿಸಲು ಮುಕ್ತ ಅವಕಾಶ ಕಲ್ಪಿಸಬೇಕು. 4 ವರ್ಷಗಳಿಂದ ಆಟೋಗಳ ಪ್ರಯಾಣ ದರ ಪುನರ್ ವಿಮರ್ಶಿಸಿಲ್ಲ. ಹೀಗಾಗಿ ಸಭೆ ಕರೆದು ದರ ನಿಗದಿ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿ ವರ್ಷ ವಾಹನ ವಿಮೆ ಏರಿಕೆ ನಿಲ್ಲಿಸಬೇಕು. ಸರ್ಕಾರ ಟ್ರಕ್ ಟರ್ಮಿನಲ್‌ಗೆ ಮೀಸಲಿಟ್ಟ ಜಾಗದಲ್ಲಿ ಟರ್ಮಿನಲ್ ನಿರ್ಮಿಸಿ ಟ್ರಾನ್ಸ್‌ಪೊàರ್ಟ್‌ಗಳಿಗೆ ಜಾಗ ಒದಗಿಸಬೇಕು. ಕೋವಿಡ್ ಹಿನ್ನೆಲೆಯಲ್ಲಿ ನವೀಕರಣ (ಪಾಸಿಂಗ್) ಮಾಡಿಸದ ಆಟೋಗಳಿಗೆ ಯಾವುದೇ ದಂಡ ವಿ ಧಿಸದೆ ನವೀಕರಣಕ್ಕೆ 3 ತಿಂಗಳ ಅವಕಾಶ ನೀಡಬೇಕು. ಆಟೋ ಮೀಟರ್ ಗಳಿಗೆ ಹೆಚ್ಚಿನ ದಂಡ ವಿ ಧಿಸುವುದನ್ನು ಕೈಬಿಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಬೇಕು. ಪ್ರಸ್ತುತ ದಿನಗಳಲ್ಲಿ ಸಾಗಣೆ ವಾಹನದ ಮೂಲಕ ಜೀವನ ಸಾಗಿಸುವುದೇ ದುಸ್ತರವಾಗಿದ್ದು, ಇಂತಹ ಸಮಯದಲ್ಲಿ ದುಬಾರಿ ದಂಡ ವಿಧಿಸುವುದನ್ನು ನಿಲ್ಲಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಇದನ್ನೂ ಓದಿ :ಮಕ್ಕಳ ಕಲಿಕಾ ಫಲ ಸಂವರ್ಧನೆಗೆ ಶ್ರಮಿಸಿ
ಮಾಜಿ ಸಚಿವ ಆಲ್ಕೋಡ ಹನುಮಂತಪ್ಪ,ಪಿ.ಎಚ್. ನೀರಲಕೇರಿ, ಗೈಬುಸಾಬ ಹೊನ್ಯಾಳ, ಗಂಗಾಧರ ಹೊಸಮನಿ, ಶಂಬುಕುಮಾರ ಸುಂಕದ, ಆರ್.ಎಸ್. ಪಠಾಣ, ಸುನೀಲ ಕಲಾಲ, ಐ.ಎಂ. ಜವಳಿ, ಬಿ.ಎ. ಮುಧೋಳ, ದೇವಾನಂದ ಜಗಾಪುರ, ಬಾಬಾಜಾನ ಮುಧೋಳ, ರಮೇಶ ಬೋಸ್ಲೆ, ಎ.ಎಸ್. ಪೀರಜಾದೆ, ಬಶೀರಹ್ಮದ ಮುಲ್ಲಾ, ಸುನೀಲ ಆಗಲಾವಿ, ಅಜೀಮ ಮೊಮೀನ, ಎಂ.ಎಂ. ಬೇಪಾರಿ, ಸುಲೇಮಾನ ಶೇಖ, ಚಂದ್ರಶೇಖರ ಬೆಟಗೇರಿ, ಲಕ್ಷ್ಮಣ ಬಕ್ಕಾಯಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
New Year: ಡಿ.31, ಜ. 1ರಂದು ಬಂಡೀಪುರದಲ್ಲಿ ಪ್ರವಾಸಿಗರ ವಾಸ್ತವ್ಯ ನಿರ್ಬಂಧ
Bengaluru; ನಿದ್ರೆಗೆ ಜಾರಿದ ಕ್ಯಾಬ್ ಡ್ರೈವರ್: ಪ್ರಯಾಣಿಕನಿಂದಲೇ ವಾಹನ ಚಾಲನೆ!| Video
Data Theft: ಕಂಪನಿಯ ಡೇಟಾ ಕದ್ದು 12.5 ಕೋಟಿ ವಂಚನೆ ಮಾಡಿದ ಬ್ಯಾಂಕ್ ಮ್ಯಾನೇಜರ್!
Aranthodu: ಉಡುಪಿಗೆ ಭತ್ತದ ಲೋಡ್ ಸಾಗಿಸುತ್ತಿದ್ದ ವೇಳೆ ಲಾರಿಗೆ ಆಕಸ್ಮಿಕ ಬೆಂಕಿ
Anandapura: ಬಸ್ ಹಾಗೂ ಕಾರು ಮುಖಾಮುಖಿ ಡಿಕ್ಕಿ; ಇಬ್ಬರು ಸ್ಥಳದಲ್ಲೇ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
New Year: ಡಿ.31, ಜ. 1ರಂದು ಬಂಡೀಪುರದಲ್ಲಿ ಪ್ರವಾಸಿಗರ ವಾಸ್ತವ್ಯ ನಿರ್ಬಂಧ
Bengaluru; ನಿದ್ರೆಗೆ ಜಾರಿದ ಕ್ಯಾಬ್ ಡ್ರೈವರ್: ಪ್ರಯಾಣಿಕನಿಂದಲೇ ವಾಹನ ಚಾಲನೆ!| Video
Data Theft: ಕಂಪನಿಯ ಡೇಟಾ ಕದ್ದು 12.5 ಕೋಟಿ ವಂಚನೆ ಮಾಡಿದ ಬ್ಯಾಂಕ್ ಮ್ಯಾನೇಜರ್!
Out of Syllabus Review; ಪ್ರೇಮಿಗಳಿಗೆ ಹೊಸ ಸಿಲೆಬಸ್
INDvAUS; ಇತಿಹಾಸದಲ್ಲೇ ಮೊದಲ ಬಾರಿಗೆ…: 200 ವಿಕೆಟ್ ನೊಂದಿಗೆ ಹೊಸ ದಾಖಲೆ ಬರೆದ ಬುಮ್ರಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.