Ayodhya; ಶ್ರೀರಾಮನ ಪೂಜೆಗೆ ಧಾರವಾಡದ ಕುರುಬರ ಕಂಬಳಿ ಉಡುಗೊರೆ
Team Udayavani, Jan 3, 2024, 11:10 PM IST
ಧಾರವಾಡ : ಜಗತ್ತೇ ಕುತೂಹಲದಿಂದ ಅಯೋಧ್ಯಾ ಶ್ರೀ ರಾಮಮಂದಿರ ಉದ್ಘಾಟನೆಯನ್ನ ಬೆರಗುಗಣ್ಣಿಂದ ನೋಡುತ್ತಿದೆ. ಮೈಸೂರಿನ ಶಿಲ್ಪಿ ರಾಮ ಲಲ್ಲಾನ ಮೂರ್ತಿಯನ್ನು ಕೆತ್ತನೆ ಮಾಡಿದ್ದು ಮಂದಿರದ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆ ಆಗುತ್ತಿದೆ.ಇದೀಗ ಧಾರವಾಡ ಜಿಲ್ಲೆಯಿಂದ ಪ್ರಭು ಶ್ರೀರಾಮನ ಪೂಜೆಗೆ ಕುರುಬರ ಕಂಬಳಿ ಹೋಗುತ್ತಿದೆ.
ಇಂತಹೊಂದು ಸಂತಸದ ವಿಷಯ ಧಾರವಾಡ ಜಿಲ್ಲೆಯ ಪಾಲಿಗೆ ಹೆಮ್ಮೆ ಹಾಗೂ ಕೀರ್ತಿಯನ್ನು ತರುವಂತಿದೆ. ಮಂದಿರದ ಉದ್ಘಾಟನೆಗಾಗಿ ಧಾರವಾಡದ ಕಮಲಾಪುರ ಭಾಗದ ಪ್ರಗತಿಪರರು ಹಿರಿಯರು ಆಗಿರುವ ಸುಭಾಷ ಬಸಪ್ಪ ರಾಯಪ್ಪನವರ ಅವರು ಎರಡು ಕಂಬಳಿಗಳನ್ನು ಕೊಟ್ಟಿದ್ದಾರೆ.
ವಿಶ್ವ ಹಿಂದೂ ಪರಿಷತ್ ನ ಹಿರಿಯರಾಗಿರುವ ಡಾ.ಎಸ್. ಆರ ರಾಮನಗೌಡರ ಹಾಗೂ ಮಾಜಿ ಮಹಾಪೌರರು ಆಗಿರುವ ಈರೇಶ ಅಂಚಟಗೇರಿ ಅವರಿಗೆ ಕಂಬಳಿಗಳನ್ನು ನೀಡಿದ್ದು, ಆ ಕಂಬಳಿಗಳನ್ನು ಕೇಂದ್ರ ಕಲ್ಲಿದ್ದಲು ಹಾಗೂ ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವರು ಪ್ರಹ್ಲಾದ್ ಜೋಶಿಯವರ ಮೂಲಕ ತೆಗೆದುಕೊಂಡು ಹೋಗುವ ವ್ಯವಸ್ಥೆ ಮಾಡಲಾಗಿದೆ.
ದೇವಸ್ಥಾನದ ಆಡಳಿತ ಮಂಡಳಿಗೆ ಶ್ರೀರಾಮನ ಉದ್ಘಾಟನೆ ಪೂಜೆಗೆ ಕಂಬಳಿಗಳನ್ನು ಬಳಸುವುದರಿಂದ ಉತ್ತರ ಕರ್ನಾಟಕದ ಕೊಡುಗೆ ಕೊಟ್ಟಂತೆ ಆಗಿದೆ. ರಾಮನ ಪೂಜೆಯಲ್ಲಿ ಕಂಬಳಿಗಳ ಮೂಲಕ ಅಳಿಲು ಸೇವೆ ಮಾಡಲು ಅವಕಾಶ ಸಿಕ್ಕಿದಂತಾಗಿದೆ ಎಂದು ವಿಶ್ವಹಿಂದೂಪರಿಷತ್ ನ ಹಿರಿಯರು ಕಂಬಳಿಗಳನ್ನ ಪಡೆದು ಶುಭ ಹಾರಿಸಿದರು.
ಈ ಸಂದರ್ಭದಲ್ಲಿ ಸೋಮಶೇಖರಗೌಡ ಪಾಟಿಲ, ಗುರುನಾಥ ಹೊನ್ನನ್ನವರ, ಈರಪ್ಪ ಗೌಡಪ್ಪನವರ, ಎಲ್ಲಪ್ಪ ಹೊಟ್ಟಿ , ಉಳವಪ್ಪ ಅನಾಡ, ಚಂದ್ರು ಗುಮಗೋಳಮಠ, ಮುರುಗೇಶ ಬಾಳಗಿ, ಈರಯ್ಯ ರಾಮಯ್ಯನವ, ಬಸು ಬಾಳಗಿ, ನಿರ್ಮಲ ಕನ್ನಿನಾಯ್ಕರ ಹಾಗೂ ಸ್ಥಳೀಯರು ಹಿರಿಯರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ
BJP ಡಬಲ್ ಗೇಮ್; ವಕ್ಫ್ ಆಸ್ತಿ ರಕ್ಷಣೆ ಬಗ್ಗೆ ಬಿಜೆಪಿ ಪ್ರಣಾಳಿಕೆಯಲ್ಲಿ ಉಲ್ಲೇಖ: ಸಿದ್ದು
Hubli: ಅಪ್ರಾಪ್ತೆಯೊಂದಿಗೆ ಅನುಚಿತ ವರ್ತನೆ: ಮುಖ್ಯ ಪೇದೆ ವಿರುದ್ದ ಪೋಕ್ಸೋ ಕೇಸ್
Hubli: ಹಣಕಾಸು ಆಯೋಗದ ಅನ್ಯಾಯದ ಬಗ್ಗೆ ಬಿಜೆಪಿಯರಿಂದ ಮೌನ: ಸಿದ್ದರಾಮಯ್ಯ ಕಿಡಿ
Hubli: ಜನರ ದಿಕ್ಕು ತಪ್ಪಿಸಲು ಬಿಜೆಪಿಯಿಂದ ವಕ್ಫ್ ಹೋರಾಟ: ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್
Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ
Mangaluru: ಪರಿಶಿಷ್ಟ ಜಾತಿ ಪಟ್ಟಿಗೆ ಮರುಸೇರ್ಪಡೆ ಆಗ್ರಹಿಸಿ ಕುಡುಬಿ ಸಮಾಜದವರಿಂದ ಜಾಥಾ
Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.