ಅಯೋಧ್ಯಾ ಹೋಟೆಲ್ ಕ್ವಾರಂಟೈನ್ ಕೇಂದ್ರ
Team Udayavani, Apr 2, 2020, 3:02 PM IST
ಹುಬ್ಬಳ್ಳಿ: ಸರಕಾರ ಹಾಗೂ ಜಿಲ್ಲಾಡಳಿತದ ನಿರ್ದೇಶನದಂತೆ ಇಲ್ಲಿನ ಹಳೆಯ ಕೇಂದ್ರ ಬಸ್ ನಿಲ್ದಾಣ ಎದುರಿನ ಅಯೋಧ್ಯಾ ಹೋಟೆಲ್ ಮತ್ತು ಲಾಡ್ಜ್ ಅನ್ನು ಕ್ವಾರಂಟೈನ್ ಕೇಂದ್ರವಾಗಿ ಮಾರ್ಪಡಿಸಲು ಜಿಲ್ಲಾಡಳಿತದ ಸುಪರ್ದಿಗೆ ಪಡೆಯಲಾಗಿದೆ.
ಬುಧವಾರ ಹುಬ್ಬಳ್ಳಿ ತಾಲೂಕು ಆಡಳಿತ, ಆರೋಗ್ಯ ಇಲಾಖೆ ಹಾಗೂ ಪಾಲಿಕೆ ವೈದ್ಯಾಧಿಕಾರಿಗಳ ತಂಡ ಅಯೋಧ್ಯಾ ಹೋಟೆಲ್‌ನ್ನು ಜಿಲ್ಲಾಡಳಿದ ಸುಪರ್ದಿಗೆ ಪಡೆದುಕೊಂಡಿತು. ನಂತರ ಹುಬ್ಬಳ್ಳಿ ಶಹರ ತಹಶೀಲದಾರ ಶಶಿಧರಮಾಡ್ಯಾಳ ಮಾಧ್ಯಮದವರಿಗೆ ಮಾಹಿತಿ ನೀಡಿದರು.
ಈ ಹೊಟೇಲ್‌ನಲ್ಲಿ 50 ರೂಮ್‌ಗಳನ್ನು ಪಡೆಯಲಾಗಿದೆ. ವೈದ್ಯಾಧಿಕಾರಿ ಹಾಗೂ ಪೊಲೀಸ್ ಇಲಾಖೆಯವರು ಮನೆಯಲ್ಲಿ ಕ್ವಾರಂಟೈನ್ (ದಿಗ್ಬಂಧನ)ಗಳಾಗಿ ಇರುವವರನ್ನು ಹೋಟೆಲ್ ಗೆ ಸ್ಥಳಾಂತರಿ ಸುವರು. ಇದಕ್ಕೂ ಮೊದಲು ಹೊಟೇಲ್‌ನ್ನು ಸ್ವತ್ಛಗೊಳಿಸಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದರು.
ಪಾಲಿಕೆ ವೈದ್ಯಾಧಿಕಾರಿ ಡಾ| ಪ್ರಭು ಎನ್. ಬಿರಾದಾರ ಮಾತನಾಡಿ, ಹೋಮ್ ಕ್ವಾರಂಟೈನ್‌ಲ್ಲಿ ಇರುವವರ ಆರೋಗ್ಯದ ಮೇಲೆ ನಿಗಾ ಇಡಲು ಹಾಗೂ ಆರೋಗ್ಯ ಸ್ಥಿತಿಗತಿ ತಿಳಿದುಕೊಳ್ಳಲು ಅನುಕೂಲವಾಗುವಂತೆ ಕ್ವಾರಂಟೈನ್‌ಗಳನ್ನು ಹೋಟೆಲ್ ಲಾಡ್ಜ್ಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಯಾರು ಕ್ವಾರಂಟೈನ್ ನಿಯಮಗಳನ್ನು ಸರಿಯಾಗಿ ಪಾಲಿಸುತ್ತಿಲ್ಲವೋ ಅವರನ್ನು ಸಹ ಈ ಮೂಲಕ ನಿರ್ಬಂಧಿಸಿದಂತೆ ಆಗುತ್ತದೆ. ಜಿಲ್ಲೆಯಲ್ಲಿ 350 ಜನ ಈಗಾಗಲೇ 14 ದಿನಗಳ ಕ್ವಾರಂಟೈನ್ ಅವಧಿ ಪೂರೈಸಿದ್ದಾರೆ. ಅವರನ್ನು ಹೊರತುಪಡಿಸಿ ಉಳಿದವರನ್ನು ಸ್ಥಳಾಂತರಿಸಲಾಗುವುದು. ಈ ಸೆಂಟರ್‌ಗಳಲ್ಲಿ ವೈದ್ಯರು ಸೇರಿದಂತೆ ಅಗತ್ಯ ಸಿಬ್ಬಂದಿ ನಿಯೋಜಿಸಲಾಗುವುದು. ಪ್ರತಿದಿನ ಕ್ವಾರಂಟೈನ್‌ಗಳ ಆರೋಗ್ಯ ಸ್ಥಿತಿಗತಿಗಳ ಮಾಹಿತಿ ಪಡೆದು ಕೋವಿಡ್-19 ಲಕ್ಷಣ ಕಂಡುಬಂದವರ ರಕ್ತ ಹಾಗೂ ಕಫದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿ ಕೊಡಲಾಗುವುದು. ಹೋಟೆಲ್ ತ್ಯಾಜ್ಯವನ್ನು ಬಯೋ ತ್ಯಾಜ್ಯ ಎಂದು ಪರಿಗಣಿಸಿ ವಿಲೇವಾರಿ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳು ಇದ್ದರು. ಹೋಟೆಲ್ ಸ್ವಚ್ಛತಾ ಕಾರ್ಯ, ಥರ್ಮಲ್ ಸ್ಕಾÂನರ್ ಸೇರಿದಂತೆ ಅಗತ್ಯ ವೈದ್ಯಕೀಯ ಸಲಕರಣೆಗಳನ್ನು ಅಧಿಕಾರಿಗಳು ಸಿದ್ಧಪಡಿಸಿಟ್ಟುಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಸರ್ಕಾರ ಮತ್ತು ವಿಜಯೇಂದ್ರ ನಡುವೆ ಉತ್ತಮ ಅಡ್ಜಸ್ಟ್‌ಮೆಂಟ್ ಇದೆ: ಯತ್ನಾಳ್ ಆರೋಪ
Hubli: ಕಸದ ವಾಹನಕ್ಕೆ ಸ್ಕೂಟಿ ಡಿಕ್ಕಿ: ಓರ್ವ ವಿದ್ಯಾರ್ಥಿ ಸಾವು, ಮತ್ತೋರ್ವ ಗಂಭೀರ
BJP ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ಗೊತ್ತಿಲ್ಲ: ಸಚಿವ ಜೋಶಿ
BJP ರಾಜ್ಯಾಧ್ಯಕ್ಷರ ನೇಮಕ ಹೈಕಮಾಂಡ್ ನಿರ್ಧಾರ: ಅರವಿಂದ ಬೆಲ್ಲದ
Hubli: ಮೀಟರ್ ಬಡ್ಡಿಗೆ ಮನನೊಂದು ಲಾರಿ ಚಕ್ರದಡಿ ಬಿದ್ದು ವ್ಯಕ್ತಿ ಆತ್ಮಹ*ತ್ಯೆ