2010ರ ಪೊಲೀಸರ ಮೇಲೆ ಹಲ್ಲೆ ಪ್ರಕರಣ : ಬಚ್ಚಾ ಖಾನ್ ಗೆ ಎರಡು ವರ್ಷ ಸಜೆ
Team Udayavani, Jul 30, 2020, 8:43 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಧಾರವಾಡ : ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ 2010ರ ಮೇ 23 ರಂದು ಪೊಲೀಸರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭೂಗತ ಪಾತಕಿ ಬಚ್ಚಾಖಾನ್ ಗೆ ಎರಡು ವರ್ಷ ಸಜೆ ವಿಧಿಸಿ ಧಾರವಾಡ ನ್ಯಾಯಾಲಯ ಮಹತ್ವದ ಆದೇಶ ಹೊರಡಿಸಿದೆ.
ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಧಾರವಾಡ 2ನೇ ಅಧಿಕ ಜಿಲ್ಲಾ ಮತ್ತು ವಿಶೇಷ ನ್ಯಾಯಾಲಯದ ಗೌ. ನ್ಯಾಯಾಧೀಶೆಯರಾದ ಶ್ರೀಮತಿ ಪಂಚಾಕ್ಷರಿ.ಎಮ್ ಅವರು ಈ ಮಹತ್ವದ ಆದೇಶ ಹೊರಡಿಸಿದ್ದಾರೆ.
ಆರೋಪಿ ಎ 1) ಬಚ್ಚಾಖಾನ @ಯೂಸೂಪ ತಂದೆ ಸುಲೇಮಾನ ಖಾದ್ರಿ ಗೆ ಎರಡು ವರ್ಷ ಸಜೆ ಹಾಗೂ ಒಂದು ಸಾವಿರ ರೂಪಾಯಿ ದಂಡ, ಎ 2) ಶಂಕರಗೌಡ @ ಬೆತ್ತನಗೇರಿ ಶಂಕ್ರಾ ತಂದೆ ಗೋಪಾಲಗೌಡಗೆ ಒಂದು ವರ್ಷ ಸಜೆ ಹಾಗೂ ಒಂದು ಸಾವಿರ ರೂಪಾಯಿ ದಂಡ, ಮತ್ತುಆರೋಪಿ ನಂ 3) ಮುನಿರಾಜು ತಂದೆ ಹನಮಂತರಾಯಪ್ಪ ಹಾಗೂ ಎ 5 ನೇ ಆರೋಪಿ ಜಾವೇದ ತಂದೆ ಶಮಶಾದಲಿ @ ಶಾಮೀದಅಲಿ ಡಲಾಯತಗೆ ತಲಾ ಆರು ತಿಂಗಳ ಸಜೆ ಹಾಗೂ ಒಂದು ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ.
ಈ ಪ್ರಕರಣದಲ್ಲಿ ಸರಕಾರದ ಪರವಾಗಿ ಸರಕಾರಿ ಅಭಿಯೋಜಕೀಯರಾದ ಗಿರಿಜಾ ತಮ್ಮಿನಾಳ ಹಾಗೂ ಸರೋಜಾ ಹೊಸಮನಿ ವಾದ ಮಂಡಿಸಿದ್ದರು.
ಪ್ರಕರಣದ ವಿವರ :
ಸಜಾ ಬಂಧಿಯಾದ 1 ನೇ ಆರೋಪಿ ಮುಂಬೈ ಮೂಲದ ಬಚ್ಚಾಖಾನ (38), ವಿಚಾರಣಾ ಬಂಧಿಗಳಾದ ಆರೋಪಿ ನಂ.2 ಬೆತ್ತನಗೇರಿ ಮೂಲದ ಶಂಕರಗೌಡ (28 ), ಆರೋಪಿ ನಂ 3 ಮುನಿರಾಜು (24 ) ಆರೋಪಿತರು ತಮ್ಮ ಕೊಠಡಿಗಳನ್ನು ಶೋಧನೆ ಮಾಡಲು ಹೋದ ಪೊಲೀಸರಿಗೆ ನೀವ್ಯಾರು ಅಂತ ಕೂಗಾಡಿದ್ದರು.
ಅಲ್ಲದೆ, ಆರೋಪಿ ನಂ. 4 ಬೆಳಗಾವಿಯ ಇಕ್ಬಾಲಖಾನ ತಂದೆ ಅಮೀರಖಾನ ಪಠಾಣ (42), ಮತ್ತು ಧಾರವಾಡದ 5 ನೇ ಆರೋಪಿತನಾದ ಜಾವೇದ ತಂದೆ ಶಮಶಾದಲಿ (18) ಹಾಗೂ 10-15 ಜನ ಅಪರಿಚಿತ ಖೈದಿಗಳಿಗೆ ಕೂಗಿ ಕರೆದು, ಅವರಿಗೆ ಪ್ರೋತ್ಸಾಹಿಸಿ, ಪೊಲೀಸರ ಖಲಾಸ ಮಾಡಿರಿ, ಜೀವಸಹಿತ ಉಳಿಸಬೇಡರಿ ಎಂದುಇತರ ಖೈದಿಗಳಿಗೆ ಪ್ರಚೋದನೆ ನೀಡಿದ್ದರು.
ಸರಕಾರಿ ಕರ್ತವ್ಯಕ್ಕೆ ಅಡತಡೆ ಮಾಡಿ, ಹಲ್ಲೆ, ಕೊಲೆ ಮಾಡಲು ಪ್ರಯತ್ನಿಸಿದ ಅಪರಾಧಕ್ಕೆ ಸಂಬಂಧಿಸಿದಂತೆ ಕಲಂ 143, 147, 148, 114, 323, 324, 307, 353, 341, 506 ಸಹ ಕಲಂ 149 ಐಪಿಸಿ.ನೇದರ ಅಡಿಯಲ್ಲಿ ಧಾರವಾಡ ಉಪನಗರ ಪೊಲೀಸ್ ಠಾಣೆ ಪಿ ಎಸ್ ಐ ಮುರುಗೇಶ ಚನ್ನಣ್ಣವರ (ತನಿಖಾಧಿಕಾರಿ) ಹಾಗೂ ವಿಶ್ವನಾಥ ಹಿರೇಗೌಡರ ಪಿ.ಎಸ್.ಐ (ಭಾಗಶಃ ತನಿಖಾಧಿಕಾರಿ) ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NABARD ನಿರ್ಧಾರದಿಂದ ಕೃಷಿಗೆ ಹಿನ್ನಡೆ; ಸಾಲದ ಮೊತ್ತ ಕಡಿತ ಮಾಡದಿರಲು ಸಚಿವ ಪಾಟೀಲ ಆಗ್ರಹ
ಸಿಎಂ ಆಗಿದ್ದವರು ಈ ರೀತಿ ಹೇಳಿಕೆ ನೀಡುವ ಬದಲು, ಸ್ಪಷ್ಟ ಹೇಳಿಕೆ ನೀಡಲಿ: ಸಚಿವ ಶಿವಾನಂದ
dharwad: ಪೊಲೀಸ್ ಪೇದೆ ಮೇಲೆ ಕೈ ಮುಖಂಡ ತಮಟಗಾರ ಸಹೋದರ ಬ್ಲೇಡ್ ನಿಂದ ಹಲ್ಲೆ
Covid Scam: ಸಚಿವ ಸಂಪುಟದಲ್ಲಿ ಚರ್ಚಿಸಿ ಮುಂದಿನ ಕ್ರಮ: ಸಿಎಂ ಸಿದ್ದರಾಮಯ್ಯ
By Election: ಹಣ ಕೊಟ್ಟರೂ ಸಿಎಂ ಕಾರ್ಯಕ್ರಮಕ್ಕೆ ಜನ ಬರುತ್ತಿಲ್ಲ: ಬಿಎಸ್ ವೈ
MUST WATCH
ಹೊಸ ಸೇರ್ಪಡೆ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.