ಬಾಲಾಜಿ ಆಸ್ಪತ್ರೇಲಿ ಪ್ಯಾರಾ ಮೆಡಿಕಲ್ ಡಿಪ್ಲೊಮಾ ಕೋರ್ಸ್
Team Udayavani, Jul 23, 2017, 11:55 AM IST
ಹುಬ್ಬಳ್ಳಿ: ಇಲ್ಲಿನ ಬಾಲಾಜಿ ನರರೋಗ ಚಿಕಿತ್ಸಾ ಆಸ್ಪತ್ರೆಯಲ್ಲಿ ಪ್ಯಾರಾ ಮೆಡಿಕಲ್‌ನ ಮೂರು ವಿಷಯಗಳಲ್ಲಿ ಡಿಪ್ಲೊಮಾ ಹಾಗೂ ಉತ್ತರ ಕರ್ನಾಟಕದಲ್ಲೇ ಮೊದಲೆನ್ನುವ ಡಿಎನ್‌ಬಿ ಸ್ನಾತಕೋತ್ತರ ಕೋರ್ಸ್ ಆರಂಭವಾಗಿದೆ. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಸ್ಪತ್ರೆ ಮುಖ್ಯಸ್ಥ ಹಾಗೂ ನರರೋಗ ತಜ್ಞ ಡಾ| ಕ್ರಾಂತಿ ಕಿರಣ, ಡಿಪ್ಲೊಮೆಂಟಲ್ ಆಫ್ ನ್ಯಾಶನಲ್ ಬೋರ್ಡ್ಸ್(ಡಿಎನ್‌ಬಿ) ಆರು ವರ್ಷಗಳ ಕೋರ್ಸ್ ಆಗಿದೆ.
ಎಂಬಿಬಿಎಸ್ ನಂತರದಲ್ಲಿ ಎಂಡಿ, ಎಂಎಸ್‌ಗೆ ಸಮಾನವಾದ ಕೋರ್ಸ್ ಇದಾಗಿದೆ. ಇದು ಅಂತಾರಾಷ್ಟ್ರೀಯ ಮಟ್ಟದ ಪದವಿ ಮನ್ನಣೆ ಪಡೆದಿದೆ ಎಂದರು. ರಾಜ್ಯದಲ್ಲಿ ಬೆಂಗಳೂರಿನ ಫೋರ್ಟಿಸ್, ಅಪೋಲೊ ಹಾಗೂ ನಾರಾಯಣ ಹೃದಯಾಲಯ ಬಿಟ್ಟರೆ ಇಂತಹ ಸೌಲಭ್ಯದ ಉತ್ತರ ಕರ್ನಾಟಕದ ಮೊದಲ ಆಸ್ಪತ್ರೆ ನಮ್ಮದಾಗಿದೆ.
ಕೇಂದ್ರ ಸರಕಾರ ರಾಷ್ಟ್ರಮಟ್ಟದಲ್ಲಿ ನೀಟ್ ಮಾದರಿ ಪರೀಕ್ಷೆಯಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಿದ್ದು, ಒಂದು ಕೇಂದ್ರಕ್ಕೆ ಒಬ್ಬರು ಇಲ್ಲವೆ ಇಬ್ಬರು ಅಭ್ಯರ್ಥಿಗಳನ್ನು ನೀಡುತ್ತದೆ. ನಮ್ಮ ಆಸ್ಪತ್ರೆಗೆ ಒಬ್ಬರನ್ನು ನೀಡಲಾಗಿದೆ ಎಂದರು.
ಆಂಧ್ರಪ್ರದೇಶದ ಡಾ| ರಾಜಶೇಖರ ಎನ್ನುವವರು ನಮ್ಮಲ್ಲಿ ಪ್ರವೇಶ ಪಡೆದಿದ್ದು, ಕಳೆದ 15 ದಿನಗಳಿಂದ ವ್ಯಾಸಂಗಕ್ಕೆ ಆಗಮಿಸಿದ್ದಾರೆ. ಡಿಎನ್‌ಬಿ ಕೋರ್ಸ್‌ಗೆ ಒಬ್ಬರು ಪ್ರೊಫೆಸರ್ ಹಾಗೂ ಇಬ್ಬರು ಬೋಧಕರು ಅಗತ್ಯವಾಗಿದ್ದು, ಪ್ರೊಫೆಸರ್ ಆಗಿ ತಾವು ಮಾರ್ಗದರ್ಶನ ನೀಡುತ್ತಿದ್ದು, ಇನ್ನಿಬ್ಬರು ತಜ್ಞರು ವಾರಕ್ಕೆ ಇಂತಿಷ್ಟು ದಿನವೆಂದು ಬೋಧನೆ ಮಾಡಲಿದ್ದಾರೆ ಎಂದರು.
ಡಿಪ್ಲೊಮಾ ಕೋರ್ಸ್: ಬಾಲಾಜಿ ಇನ್‌ಸ್ಟಿಟ್ಯೂಟ್ ಆಫ್ ಪ್ಯಾರಾ ಮೆಡಿಕಲ್ ಸೈನ್ಸ್‌ಸ್ ಕಾಲೇಜು ಆರಂಭಿಸಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಶಸ್ತ್ರಚಿಕಿತ್ಸೆ, ಎಕ್ಸರೇ ಹಾಗೂ ಆರೋಗ್ಯ ಇನ್ಸ್‌ಪೆಕ್ಟರ್‌ಗಳ ವಿಷಯಗಳಲ್ಲಿ ಡಿಪ್ಲೊಮಾ ತರಗತಿ ಆರಂಭಕ್ಕೆ ಅನುಮೋದನೆ ಸಿಕ್ಕಿದೆ ಎಂದು ಕಾಲೇಜಿನ ಚೇರನ್‌ರೂ ಆಗಿರುವ ಡಾ| ಕ್ರಾಂತಿ ಕಿರಣ ತಿಳಿಸಿದರು.
ಮೂರು ಕೋರ್ಸ್‌ಗಳಿಗೆ ತಲಾ 20 ವಿದ್ಯಾರ್ಥಿಗಳಂತೆ ಒಟು 60 ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಲು ಅನುಮತಿ ಸಿಕ್ಕಿದೆ. ಇದರಲ್ಲಿ ಶೇ. 20ರಷ್ಟು ಸ್ಥಾನಗಳು ಸರಕಾರಿ ಕೋಟಾದಡಿ ಭರ್ತಿ ಆಗುತ್ತಿದ್ದು, ಉಳಿದ ಸ್ಥಾನಗಳಿಗಾಗಿ ಈಗಾಗಲೇ ಅರ್ಜಿ ಆಹ್ವಾನಿಸಲಾಗಿದೆ. ಯಾವುದೇ ದೇಣಿಗೆ ಇರುವುದಿಲ್ಲ.
ಸರಕಾರ ನಿಗದಿಪಡಿಸುವ ಶುಲ್ಕ ಪಡೆಯಲಾಗುವುದು ಎಂದರು. ಎಸ್ಸೆಸ್ಸೆಲ್ಸಿ ಮುಗಿಸಿದ ವಿದ್ಯಾರ್ಥಿಗಳಿಗೆ ಮೂರು ವರ್ಷ, ದ್ವಿತೀಯ ಪಿಯು ಮುಗಿಸಿದ ವಿದ್ಯಾರ್ಥಿಗಳಿಗೆ ಎರಡು ವರ್ಷದ ಕೋರ್ಸ್ ಇದಾಗಿದೆ. ಪ್ರಸಕ್ತ ವರ್ಷ ಬಾಲಾಜಿ ಆಸ್ಪತ್ರೆಯಲ್ಲಿಯೇ ತರಗತಿ ಆರಂಭವಾಗುತ್ತಿದ್ದು, ಅಗತ್ಯ ತರಗತಿ ಕೋಣೆಗಳನ್ನು ರೂಪಿಸಲಾಗುವುದು.
ನವೆಂಬರ್‌ನಿಂದ ತರಗತಿಗಳು ಆರಂಭವಾಗಲಿವೆ ಎಂದರು. ಬಾಲಾಜಿ ಇನ್‌ಸ್ಟಿಟ್ಯೂಟ್ ಆಫ್ ನ್ಯೂರೋ ಸಾಯಿನ್ಸ್ ಆ್ಯಂಡ್ ಟ್ರಾಮಾ ಕೇಂದ್ರಕ್ಕೆ ಪ್ರಸಕ್ತ ವರ್ಷ ಪ್ರತಿಷ್ಠಿತ ಎನ್‌ಎಬಿಎಚ್ ಸೇಫ್ ಐ ಪ್ರಮಾಣಪತ್ರ ಲಭಿಸಿದೆ. ಸುಮಾರು 300 ಮಾನದಂಡಗಳಡಿ ಪರೀಕ್ಷಿಸಿ ಪರಿಶೀಲಿಸಿ ಇದನ್ನು ನೀಡಲಾಗುತ್ತದೆ ಎಂದರು.
ಬಾಲಾಜಿ ನರರೋಗ ಚಿಕಿತ್ಸೆ ಆಸ್ಪತ್ರೆಯಲ್ಲಿ ಬಾಲಾಜಿ ಹೃದಯಾಲಯಕ್ಕೆ ಸ್ಥಳಾವಕಾಶ ನೀಡಿದ್ದೇವೆ. ಅದರ ನಿರ್ವಹಣೆ ಡಾ| ಸುರೇಶ, ಡಾ| ನಿತಿನ್ ಅವರದ್ದಾಗಿದೆ. ಅಲ್ಲಿ ಯಾರಾದರು ರೋಗಿಗಳಿಗೆ ತೊಂದರೆ ಆಗಿದ್ದರೆ ಅಲ್ಲಿನ ವೈದ್ಯರೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.
ಬಾಲಾಜಿ ನರರೋಗ ಚಿಕಿತ್ಸಾ ಆಸ್ಪತ್ರೆಯಲ್ಲಿ ರೋಗಿಗಳಿಗೆ ಉತ್ತಮ ಚಿಕಿತ್ಸೆ ಹಾಗೂ ಪಾರದರ್ಶಕತೆಗೆ ಒತ್ತು ನೀಡಲಾಗುತ್ತದೆ. ಸಹಜವಾಗಿ ಶೇ. 90ರಷ್ಟು ರೋಗಿಗಳು ತುರ್ತು ಸ್ಥಿತಿಯಲ್ಲಿ ಚಿಕಿತ್ಸೆಗೆ ಬರುತ್ತಿರುವುದರಿಂದ ಚಿಕಿತ್ಸೆ ಫಲಿಸದೆ ಸಾವು ಸಂಭವಿಸುವುದರಿಂದ ಕೆಲವರಿಗೆ ಅಸಮಾಧಾನ ಉಂಟಾಗಿರಬಹುದು ಎಂದರು. ಡಾ| ದೀಪಕ್, ಡಾ| ವಿಜಯ ಯಲಿವಾಳ, ಆಸ್ಪತ್ರೆ ಆಡಳಿತಾಧಿಕಾರಿ ಕರ್ನಲ್ ನಾತು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
MUST WATCH
ಹೊಸ ಸೇರ್ಪಡೆ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!
Naxal Activity: ಮಲೆನಾಡಿನವರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ವಿಕ್ರಂ ಗೌಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.