ಪುಸ್ತಕ ಪ್ರಕಾಶನದಲ್ಲಿರಲಿ ಸಮತೋಲನ: ಅಕ್ಷರ
Team Udayavani, Sep 25, 2017, 1:42 PM IST
ಹುಬ್ಬಳ್ಳಿ: ಪುಸ್ತಕ ಪ್ರಕಾಶನ ಹಣ ಮಾಡುವ ವ್ಯವಹಾರವಾಗುತ್ತಿದ್ದು, ಪ್ರಕಾಶಕರು ಸ್ವಧರ್ಮ ಅರಿತುಕೊಳ್ಳುವುದು ಮುಖ್ಯ ಎಂದು ರಂಗ ನಿರ್ದೇಶಕ, ಪ್ರಕಾಶಕ ಕೆ.ವಿ. ಅಕ್ಷರ ಹೇಳಿದರು. ಡಾ| ಡಿ.ಎಸ್. ಕರ್ಕಿ ಸಾಹಿತ್ಯ ವೇದಿಕೆ ಹಾಗೂ ಸಾಹಿತ್ಯ ಪ್ರಕಾಶನದ ವತಿಯಿಂದ ಕನ್ನಡ ಭವನದಲ್ಲಿ ರವಿವಾರ ಹುಬ್ಬಳ್ಳಿ ಸಾಹಿತ್ಯ ಭಂಡಾರದ ಕೀರ್ತಿಶೇಷ ಮ. ಅನಂತಮೂರ್ತಿಯವರ 19ನೇ ಪುಣ್ಯತಿಥಿ ನಿಮಿತ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹೆಗ್ಗೊàಡು ಅಕ್ಷರ ಪ್ರಕಾಶನಕ್ಕೆ ಕೊಡಮಾಡಿದ ಗೌರವ ಸ್ವೀಕರಿಸಿ ಅವರು ಮಾತನಾಡಿದರು.
ಪ್ರಕಾಶನ ಪರಂಪರೆ ಮುಂದುವರಿಸಿಕೊಂಡು ಹೋಗುವ ದೊಡ್ಡ ಜವಾಬ್ದಾರಿ ಎರಡನೇ ತಲೆಮಾರಿನ ಪ್ರಕಾಶಕರ ಮೇಲಿದೆ. ಪುಸ್ತಕ ಪ್ರಕಾಶನ ಹಣ ಮಾಡಿಕೊಳ್ಳುವ ಉದ್ಯಮವಾಗಬಾರದು. ಹಾಗೆಂದು ಪ್ರಕಾಶನದಿಂದ ಹಣ ಕಳೆದುಕೊಳ್ಳುವುದೂ ಸರಿಯಲ್ಲ. ಸಮತೋಲನ ಕಾಯ್ದುಕೊಳ್ಳಬೇಕು. ಭರ್ಜರಿ ಬಿಕರಿಯಾಗುತ್ತದೆ ಎಂಬ ಕಾರಣಕ್ಕೆ ಒಂದು ಪುಸ್ತಕ ಪ್ರಕಟಿಸುವುದು ಸರಿಯಲ್ಲ.
ಅದೇ ರೀತಿ ಮಾರಾಟವಾಗುವುದಿಲ್ಲ ಎಂಬ ಕಾರಣಕ್ಕೆ ಒಳ್ಳೆ ಪುಸ್ತಕ ಪ್ರಕಟಿಸದಿರುವುದೂ ಸರಿಯಲ್ಲ ಎಂದು ಹೇಳಿದರು. 90ರ ದಶಕದ ನಂತರ ಲಾಭಕೋರತನ ಹೆಚ್ಚಾಗಿದೆ. ಎಲ್ಲ ಮೌಲ್ಯಗಳಿಗೂ ಬೆಲೆಯಿದೆ ಎಂಬುದು ನಿರೂಪಿತವಾಗಿದೆ. ಬೆಲೆಗೂ ಮೀರಿದ ಮೌಲ್ಯಗಳಿವೆ ಎಂಬುದನ್ನು ತಿಳಿಸಬೇಕು. ಸಂಪರ್ಕ ಕ್ರಾಂತಿ ಸಂಘರ್ಷಕ್ಕೂ ಕಾರಣವಾಗುತ್ತಿದೆ.
ತ್ವರಿತಗತಿಯ ಯುಗದಲ್ಲಿ ಸಮರ್ಪಕವಾಗಿ ಯೋಚಿಸದೆ ಪ್ರತಿಕ್ರಿಯೆ ನೀಡುತ್ತಿರುವುದು ಗಲಭೆಗೆ ಕಾರಣವಾಗುತ್ತಿರುವುದನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡಬಹುದು. ಅರ್ಥವೇ ಇಲ್ಲದ ಮಾತು ಸಂವಾದ ಎನಿಸಿಕೊಳ್ಳುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಪುಸ್ತಕಗಳನ್ನು ಬಿಡುಗಡೆಗೊಳಿಸಿದ ಸಾಹಿತಿ ವೀಣಾ ಬನ್ನಂಜೆ “ಅಪ್ಪ ನನ್ನ ಮನೋಬಲ’ ವಿಷಯ ಕುರಿತು ಮಾತನಾಡಿ, ನನ್ನ ಅಪ್ಪ ನನಗೆ ಪುಸ್ತಕದ ಮೂಲಕ ಪರಿಚಿತವಾದರು.
ನನ್ನೊಳಗೆ ನನ್ನಜ್ಜನಿದ್ದನೇ ಹೊರತು ನನ್ನಪ್ಪ ಇರಲಿಲ್ಲ. ನನ್ನ ಅಜ್ಜನಂತೆ ಆಗಬೇಕೆಂಬ ಆಸೆ ನನ್ನದಾಗಿತ್ತು. ಅಪ್ಪ ವೈಯಕ್ತಿಕ ಸ್ವಾತಂತ್ರ್ಯ ನೀಡಿದರು. ನನ್ನ ಮೇಲೆ ಅವರಿಟ್ಟ ವಿಶ್ವಾಸವೇ ನನ್ನ ಸಾಧನೆಗೆ ಮುಖ್ಯ ಕಾರಣ ಎಂದು ತಿಳಿಸಿದರು. ಮನಗುಂಡಿಯ ಶ್ರೀ ಗುರು ಬಸವ ಮಹಾಮನೆಯ ಶ್ರೀ ಬಸವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ನಾಡೋಜ ಡಾ| ಪಾಟೀಲ ಪುಟ್ಟಪ್ಪ ಅಧ್ಯಕ್ಷತೆ ವಹಿಸಿದ್ದರು. ಸಾಹಿತ್ಯ ಪ್ರಕಾಶನದ ಎಂ.ಎ. ಸುಬ್ರಮಣ್ಯ ಪ್ರಾಸ್ತಾವಿಕ ಮಾತನಾಡಿದರು. ಗೋ. ಮಧುಸೂಧನ, ಆನಂದ ಝಂಜರವಾಡ, ಕೃತಿಕಾರರಾದ ಪ್ರೊ| ವಿಷ್ಣು ಜೋಶಿ, ಗುರುರಾಜ ಬೆಣಕಲ್, ಲಕ್ಷ್ಮಿಕಾಂತ ಇಟ್ನಾಳ, ಎಚ್.ಕೆ. ಭಾರ್ಗವ ಇದ್ದರು. ಎನ್.ಬಿ. ರಾಮಾಪುರ ಸ್ವಾಗತಿಸಿದರು. ಡಾ| ಶಶಿಧರ ನರೇಂದ್ರ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಅಮಿತ್ ಶಾ ಅಣಕು ಶವ ಸಂಸ್ಕಾರದ ಅಸ್ಥಿ ವಿಸರ್ಜಿಸಿ ಪ್ರತಿಭಟನೆ
Mangaluru Lit Fest: ಯಾವುದೇ ಉತ್ಸವ ಯಾಂತ್ರಿಕವಾದರೆ ಹೊಸತನ ಮೂಡಲ್ಲ: ಎಸ್.ಎಲ್ ಭೈರಪ್ಪ
Hubli: ರಾಜ್ಯದ ಕಾಂಗ್ರೆಸ್ ಸರ್ಕಾರ ಪತನಗೊಳ್ಳುವುದು ಖಚಿತ: ಜಗದೀಶ ಶೆಟ್ಟರ್
Alnavar: ಬೈಕ್- ಓಮಿನಿ ಅಪಘಾತ; ಬೈಕ್ ಸವಾರ ಸಾವು
Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.