ಬೆಂಗಳೂರು ತಂಡಕ್ಕೆ ಪ್ರಥಮ ಸ್ಥಾನ
Team Udayavani, Oct 16, 2017, 2:14 PM IST
ಧಾರವಾಡ: ಕವಿವಿಯ ಸರ್ ಸಿದ್ದಪ್ಪ ಕಂಬಳಿ ಕಾನೂನು ಕಾಲೇಜು ಹಮ್ಮಿಕೊಂಡಿದ್ದ ಎರಡು ದಿನಗಳ ಸಿ.ಎಸ್. ಜವಳಿ ಸ್ಮಾರಕ ರಾಷ್ಟ್ರೀಯ ಅಣಕು ನ್ಯಾಯಾಲಯ ಸ್ಪರ್ಧೆಗೆ ತೆರೆ ಬಿದ್ದಿದ್ದು, ಆತಿಥೇಯ ಕರ್ನಾಟಕ ತಂಡ ಪ್ರಥಮ ಸ್ಥಾನ ಉಳಿಸಿಕೊಂಡಿದೆ.
ರಾಜ್ಯ ಪ್ರತಿನಿಧಿಸಿದ್ದ ಬೆಂಗಳೂರಿನ ಕಾನೂನು ವಿವಿ ಕಾಲೇಜು ತಂಡ ಪ್ರಥಮ ಸ್ಥಾನ ಗಳಿಸಿದರೆ, ಕೇರಳದ ಎರ್ನಾಕುಲಂ ಕಾನೂನು ಕಾಲೇಜು ತಂಡ ದ್ವಿತೀಯ ಹಾಗೂ ನೋಯ್ಡಾ ಶಾರದಾ ವಿವಿ ತಂಡ ತೃತೀಯ ಸ್ಥಾನ ಪಡೆಯಿತು. ಕೇರಳದ ಎರ್ನಾಕುಲಂನ ಸರಕಾರಿ ಕಾನೂನು ಮಹಾವಿದ್ಯಾಲಯದ ಜಿಯೋ ಎಸ್. ಆಧೀಕರನ್ ಅತ್ಯುತ್ತಮ ಪುರುಷ ನ್ಯಾಯವಾದಿ ಹಾಗೂ ಬೆಂಗಳೂರು ಕಾನೂನು ವಿವಿಯ ಪ್ರತೀಕಾ ಅವರು ಅತ್ಯುತ್ತಮ ಮಹಿಳಾ ನ್ಯಾಯವಾದಿಯಾಗಿ ಹೊರ ಹೊಮ್ಮಿದರು.
ಸಮಾರೋಪ ಭಾಷಣ ಮಾಡಿದ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಟಿ.ಎಸ್. ಠಾಕೂರ, ಯುವ ವಕೀಲರು ನಿರಂತರ ಅಧ್ಯಯನ ಹಾಗೂ ಅನುಭವದಿಂದ ವೃತ್ತಿಯಲ್ಲಿ ಯಶಸ್ಸು ಸಾ ಧಿಸಬಹುದು. ಕಾನೂನು ಜ್ಞಾನ ಹೆಚ್ಚಿದಂತೆ ವೃತ್ತಿಯಲ್ಲಿ ಗೌರವ ಹೆಚ್ಚುತ್ತದೆ.
ನ್ಯಾಯಾಂಗದಲ್ಲಿ ಕೆಲಸ ಮಾಡುವ ಹಿರಿಯ ವಕೀಲರು, ಯುವ ವಕೀಲರು ಯಾವುದೇ ಅವ್ಯವಹಾರ ಮಾಡದೆ ನ್ಯಾಯಾಂಗದ ಸ್ವಾಯತ್ತತೆ ಕಾಪಾಡಿಕೊಂಡು ಹೋಗಬೇಕು ಎಂದರು. ಕವಿವಿ ಕುಲಪತಿ ಪ್ರೊ| ಪ್ರಮೋದ ಗಾಯಿ ಅಧ್ಯಕ್ಷತೆ ವಹಿಸಿದ್ದರು. ನ್ಯಾ| ಸುಭಾಸ ಅಡಿಗ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾ| ರಾಮಚಂದ್ರ ಹುದ್ದಾರ, ಆರ್.ಎಲ್. ಹೈದರಾಬಾದ್, ಕೆ.ಬಿ. ನಾವಲಗಿಮಠ, ಡಾ| ವಿ.ಎ. ಅಮಿನಭಾವಿ, ಡಾ| ಎಂ. ವಿಶ್ವನಾಥ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
Waqf Issue: ಮೂರು ತಂಡ ರಚನೆಗೆ ಅವ್ವ-ಅಪ್ಪ ಏನೂ ಇಲ್ಲ: ಬಸನಗೌಡ ಪಾಟೀಲ್ ಯತ್ನಾಳ್ ಆಕ್ಷೇಪ
Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್ ಲಾಡ್
Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ
MUST WATCH
ಹೊಸ ಸೇರ್ಪಡೆ
Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.