ಮೈ ರೋಮಾಂಚನಗೊಳಿಸಿದ ಹೋರಿ ಬೆದರಿಸುವ ಸ್ಪರ್ಧೆ
Team Udayavani, Jun 29, 2018, 5:46 PM IST
ಬಂಕಾಪುರ: ಪಟ್ಟಣದಲ್ಲಿ ಕಾರಹುಣ್ಣಿಮೆ ನಿಮಿತ್ತ ಶ್ರೀ ರೇವಣಶಿದ್ದೇಶ್ವರ ಯುವಕ ಸಂಘದ ಆಶ್ರಯದಲ್ಲಿ ನಡೆದ ಹೋರಿ ಬೆದರಿಸುವ ಸ್ಪರ್ಧೆಗೆ ಶ್ರೀ ಕೆಂಡದಮಠದ ಶಿದ್ದಯ್ಯಸ್ವಾಮೀಜಿ ಪೂಜೆಸಲ್ಲಿಸುವ ಮೂಲಕ ಚಾಲನೆ ನೀಡಿದರು. ರೈತರು ಕಾರಹುಣ್ಣಿಮೆ ಅಂಗವಾಗಿ ತಮ್ಮ ತಮ್ಮ ದನ ಕರುಗಳಿಗೆ ಮೈ ತೊಳೆದು ವಿವಿಧ ಬಣ್ಣಗಳಿಂದ ಅಲಂಕರಿಸಿ, ಬಣ್ಣ ಬಣ್ಣದ ರಿಬ್ಬನ್ನು ಬಲೂನುಗಳಿಂದ ಸಿಂಗರಿಸಿದ್ದರು. ಹೋರಿಗಳ ಕೊರಳಿಗೆ ಕೊಬ್ಬರಿ ಗಿಟಗ, ಕೊಡುಬಳೆ, ಚಕ್ಕುಲಿ ಸರವನ್ನು ಕಟ್ಟಿ ಸ್ಪರ್ಧೆಗಳಲ್ಲಿ ತೊಡಗಿಸಿ ಸಂಭ್ರಮಿಸಿದರು. ಯುವಕರು ಗುಂಪು ಸ್ಪರ್ಧೆಗಿಳಿದ ಹೋರಿಗಳ ಕೊರಳಲ್ಲಿರುವ ಕೊಬ್ಬರಿ ಸರವನ್ನು ಹರಿಯಲು ಹರಸಾಹಸ ಪಡುತ್ತಿರುವುದು ನೋಡುಗರನ್ನು ರೋಮಾಂಚನಗೊಳಿಸಿತು. ಸರ್ಧೆ ವೀಕ್ಷಿಸಲು ಬಂದ ಜನಸಮೂಹ ಕೇಕೆ, ಶಿಳ್ಳೆ, ಚಪ್ಪಾಳೆ ಹಾಕುವ ಮೂಲಕ ಸ್ಪರ್ಧೆಗಿಳಿದ ಹೋರಿಗಳನ್ನು ಹಾಗೂ ಕೊಬ್ಬರಿ ಹರಿಯುವ ಯುವಸಮೂಹವನ್ನು ಹುರುದುಂಬಿಸಿದರು.
ರೋಮಾಂಚನಕಾರಿಯಾದ ಈ ಸ್ಪರ್ಧೆಯಲ್ಲಿ ಸುತ್ತ ಮುತ್ತಲಿನ ಊರುಗಳ 100 ಕ್ಕಿಂತಲೂ ಹೆಚ್ಚು ಹೋರಿಗಳು ಸ್ಪರ್ಧೆಯಲ್ಲಿ ಭಾಗವಹಿಸಿ ನೋಡುಗರ ಕಣ್ಮನ ತಣಿಸಿದವು. ಉತ್ತಮ ದೇಹದಾರ್ಡ್ಯತೆ ಮತ್ತು ಕೊಬ್ಬರಿಗಿಟಗವನ್ನು ಕಾಯ್ದುಕೊಂಡ ಹಾನಗಲ್ ಕಾ ರಾಜಾ ಹೋರಿ ಪ್ರಥಮ ಬಹುಮಾನ ಪಡೆದರೆ, ಶಂಕ್ರಿಕೊಪ್ಪದ ಸುನಾಮಿ ಬುಲ್ ಹೋರಿ ದ್ವೀತಿಯ ಸ್ಥಾನ ಪಡೆಯಿತು. ತೃತೀಯ ಸ್ಥಾನವನ್ನು 225 ಸಂಖ್ಯೆಯ ಟಗರು ಹೋರಿಗೆ ಲಭಿಸಿತು. ಕಮಿಟಿಯವರು ಪ್ರಥಮ ಬಹುಮಾನವಾಗಿ ಅರ್ಧ ತೊಲಿ ಬಂಗಾರ, ದ್ವಿತೀಯ ಬಹುಮಾನವಾಗಿ 24” ಎಲ್‌ಇಡಿ ಟಿವ್ಹಿ, ತೃತೀಯ ಬಹುಮಾನ ರಾಜಾ ರಾಣಿ ತಿಜೋರಿ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಸಮಾದಾನಕರ ಬಹುಮಾನವನ್ನು ವಿತರಿಸಿದರು.
ಜೀವನದ ಹಂಗು ತೊರೆದು ಸಾಹಸ ಮೇರೆದು ಕೊಬ್ಬರಿ ಸರವನ್ನು ಹರಿದ ಯುವಕ ಹೇಮಂತ ಬ್ಯಾಡಗಿಯವರಿಗೆ ಬೆಳ್ಳಿ ಕಡೆ ನೀಡಿ ಸನ್ಮಾನಿಸಿದರೆ, ರಾಜಾ ಹುಲಿ ಬಾಯ್, ಹಿಂದೂ ಹುಲಿ ಬಾಯ್ ಗಳಿಗೆ ದ್ವೀತಿಯ, ತೃತೀಯ ಬಹುಮಾನ ನೀಡಿ ಕಮೀಟಿಯವರು ಸನ್ಮಾನಿಸಿದರು. ಕಮೀಟಿ ಸದಸ್ಯರಾದ ಮಂಜುನಾಥ ಈರಪ್ಪನವರ, ಬಿರೇಶ ಸವೂರ, ಶಿವಣ್ಣ ಈರಪ್ಪನವರ, ಲಿಂಗರಾಜ ಹಳವಳ್ಳಿ, ಯಲ್ಲಪ್ಪ ದ್ವಾಸಿ, ನಿಂಗಪ್ಪ ಮಾಯಣ್ಣವರ, ಮಲ್ಲಪ್ಪ ಕಟಗಿ, ಗುರುಶಾಂತಪ್ಪ ದ್ವಾಸಿ, ರಾಜು ಹುಲಗೂರ, ಯಲ್ಲಪ್ಪ ದ್ವಾಸಿ, ಶಿವಾನಂದ ಮಾಗಿ, ಶಂಕ್ರಪ್ಪ ಹಳವಳ್ಳಿ, ನಾಗರಾಜ ಹುಲಗೂರ, ಮೈಲಾರಿ ಗುರಮ್ಮನವರ, ಚನ್ನಪ್ಪ ಹಳವಳ್ಳಿ, ಬಸವರಾಜ ಮರಳಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.