ವಿವಿಧ ಪ್ರದೇಶಗಳಲ್ಲಿ ಬಣ್ಣದೋಕುಳಿ
Team Udayavani, Mar 14, 2017, 2:52 PM IST
ಹುಬ್ಬಳ್ಳಿ: ಹೋಳಿ ಹಬ್ಬದ ಎರಡನೇ ದಿನವಾದ ಸೋಮವಾರ ನಗರದ ವಿವಿಧ ಪ್ರದೇಶಗಳಲ್ಲಿ ಜನರು ಬಣ್ಣದೋಕುಳಿಯಲ್ಲಿ ಮಿಂದೆದ್ದು ಸಂಭ್ರಮಿಸಿದರು.
ಇಲ್ಲಿನ ನವನಗರ, ಅಮರಗೋಳ, ಎಪಿಎಂಸಿ, ಈಶ್ವರನಗರ, ಗೋಕುಲ ರಸ್ತೆ, ಬಂಜಾರಾ ಕಾಲೋನಿ, ಗಾಂಧಿನಗರ, ನೆಹರೂನಗರ, ವಿದ್ಯಾನಗರ, ಲೋಕಪ್ಪನಹಕ್ಕಲ, ಸಿದ್ಧರಾಮೇಶ್ವರನಗರ, ಹಳೇಹುಬ್ಬಳ್ಳಿ, ಕೃಷ್ಣಾಪುರ,
ಅಯೋಧ್ಯಾನಗರ, ಗೋಪನಕೊಪ್ಪ, ನಾಗಶೆಟ್ಟಿಕೊಪ್ಪ, ಬೆಂಗೇರಿ, ಅಶೋಕನಗರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಮಕ್ಕಳು, ಯುವಕರು, ಯುವತಿಯರು ಸೇರಿದಂತೆ ಜನರು ಪರಸ್ಪರ ಬಣ್ಣ ಎರಚಿ ಓಕುಳಿಯಲ್ಲಿ ಮಿಂದೆದ್ದು, ರಂಗಪಂಚಮಿ ಆಚರಿಸಿದರು.
ವಿವಿಧೆಡೆ ಕಾಮದಹನ ಮಾಡಲಾಯಿತು. ಮಂಗಳವಾರಪೇಟೆ, ಕಲಾದಗಿ ಓಣಿ, ಬಮ್ಮಾಪುರ ಓಣಿ, ಪ್ರಥಮಶೆಟ್ಟಿ ಓಣಿ, ವೀರಾಪುರ ಓಣಿ, ಯಲ್ಲಾಪುರ ಓಣಿ, ಬ್ರಾಡವೇ ನಾರಾಯಣ ಚೌಕ್, ಬಂಕಾಪುರ ಚೌಕ್, ನೆಹರು ನಗರ ಸೇರಿದಂತೆ ಇನ್ನಿತರೆಡೆ ಪ್ರತಿಷ್ಠಾಪಿಸಲಾಗಿದ್ದ ಸರಕಾರಿ ಕಾಮಣ್ಣನನ್ನು ದಹನ ಮಾಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NABARD ನಿರ್ಧಾರದಿಂದ ಕೃಷಿಗೆ ಹಿನ್ನಡೆ; ಸಾಲದ ಮೊತ್ತ ಕಡಿತ ಮಾಡದಿರಲು ಸಚಿವ ಪಾಟೀಲ ಆಗ್ರಹ
ಸಿಎಂ ಆಗಿದ್ದವರು ಈ ರೀತಿ ಹೇಳಿಕೆ ನೀಡುವ ಬದಲು, ಸ್ಪಷ್ಟ ಹೇಳಿಕೆ ನೀಡಲಿ: ಸಚಿವ ಶಿವಾನಂದ
dharwad: ಪೊಲೀಸ್ ಪೇದೆ ಮೇಲೆ ಕೈ ಮುಖಂಡ ತಮಟಗಾರ ಸಹೋದರ ಬ್ಲೇಡ್ ನಿಂದ ಹಲ್ಲೆ
Covid Scam: ಸಚಿವ ಸಂಪುಟದಲ್ಲಿ ಚರ್ಚಿಸಿ ಮುಂದಿನ ಕ್ರಮ: ಸಿಎಂ ಸಿದ್ದರಾಮಯ್ಯ
By Election: ಹಣ ಕೊಟ್ಟರೂ ಸಿಎಂ ಕಾರ್ಯಕ್ರಮಕ್ಕೆ ಜನ ಬರುತ್ತಿಲ್ಲ: ಬಿಎಸ್ ವೈ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.