ಇಷ್ಟ ಲಿಂಗದಲ್ಲಿ ದೇವರ ಕಂಡಿದ್ದಾರೆ ಶರಣರು
Team Udayavani, Apr 18, 2018, 5:41 PM IST
ಬನಹಟ್ಟಿ: ಇಷ್ಟಲಿಂಗ ಪೂಜೆಯಿಂದ ನೆಮ್ಮದಿ ಜೊತೆಗೆ ಸುಗಮ ಹಾಗು ಸಂತೃಪ್ತಿ ಜೀವನ ನಡೆಯಲು ಕಾರಣವಾಗಲಿದೆ. ಇಷ್ಟಲಿಂಗದಲ್ಲಿಯೇ ದೇವರನ್ನು ಶರಣರು ಕಂಡಿದ್ದಾರೆ. ಇದರ ಪೂಜೆಯಿಂದ ಎಲ್ಲವೂ ಸಾಧ್ಯ ಎಂದು ಶಿರೂರ ಡಾ. ಬಸವಲಿಂಗ ಸ್ವಾಮಿಗಳು ಹೇಳಿದರು.
ಈಶ್ವರಲಿಂಗ ಮೈದಾನದ ಡಾ. ಎಂ.ಎಂ. ಕಲಬುರ್ಗಿ ವೇದಿಕೆಯಲ್ಲಿ ಸೋಮವಾರ ರಾತ್ರಿ ಬಸವ ಸಮಿತಿ ಆಶ್ರಯದಲ್ಲಿ ನಡೆದ ಬಸವ ಜಯಂತಿ ಉತ್ಸವ ನಿಮಿತ್ತ 41ನೇ ವಚನ ದರ್ಶನ ಪ್ರವಚನದ ಕಾರ್ಯಕ್ರಮ ಉದ್ಘಾಟನೆಯಲ್ಲಿ ಅವರು ಮಾತನಾಡಿದರು. ದೇವರು ಎಲ್ಲರ ಮನದಲ್ಲಿಯೂ ಇದ್ದಾನೆ. ಎಲ್ಲೆಲ್ಲೂ ಹುಡುಕುವ ಬದಲಾಗಿ ಮನದಲ್ಲಿಯೇ ದೇವರ ಸ್ಮರಣೆಯಿಂದ ಭಗವಂತನನ್ನು ಕಾಣಲು ಸಾಧ್ಯ ಎಂದರು. ಮುಮುಕ್ಷ ಮಠದ ಮಹಾದೇವ ಸರಸ್ವತಿ ಸ್ವಾಮೀಜಿ ಮಾತನಾಡಿ, ಬಸವ ತತ್ವ ಪ್ರಾಬಲ್ಯವಾದುದು. ಇದನ್ನು ಜಯಂತಿಗಷ್ಟೇ ಸೀಮಿತಗೊಳಿಸದೆ ನಿತ್ಯ ಕೃತಿಯ ಮೂಲಕ ಆಚರಣೆಗೆ ಪ್ರತಿಯೊಬ್ಬರು ತರಬೇಕು. ಜಾತ್ಯತೀತ ಲಿಂಗಾಯತ ಧರ್ಮ ಲಿಂಗ ಕಟ್ಟಿಕೊಂಡವರೆಲ್ಲರೂ ಲಿಂಗಾಯತರೇ ಎಂದರು.
ಇದೇ ಸಂದರ್ಭ ಉನ್ನತ ಶಿಕ್ಷಣ ವಿಭಾಗದಲ್ಲಿ ಉಪವಿಭಾಗಾ ಧಿಕಾರಿಗಳಾದ ನಗರದ ಅಬಿದ್ ಇಸ್ಮಾಯಿಲ್ ಗದ್ಯಾಳ, ಪ್ರಶಾಂತ ಹಣಗಂಡಿ, ಮೋಹನ ಭಸ್ಮೆ, ಶಿಕ್ಷಣ ವಿಭಾಗದಲ್ಲಿ ಪಲ್ಲವಿ ಶಿರಹಟ್ಟಿ, ವೈದ್ಯಕೀಯ ವಿಭಾಗದಲ್ಲಿ ಡಾ. ಸಿದ್ಮಲ್ಲಪ್ಪ ಬಾವಲತ್ತಿ, ಕೃಷಿಯಲ್ಲಿ ಸದಾಶಿವ ಬಂಗಿ, ಪತ್ರಿಕಾ ಮಾಧ್ಯಮದಲ್ಲಿ ಮಲ್ಲಿಕಾರ್ಜುನ ತುಂಗಳ ಹಾಗೂ ಶೈಕ್ಷಣಿಕ ವಿಭಾಗದಲ್ಲಿ ಸತೀಶ ಹಜಾರೆಯವರನ್ನು ಸನ್ಮಾನಿಸಿ ಗೌರವಿಸಲಾಯಿತು. ಚನಪರಪ್ಪ ಚಿಂಚಖಂಡಿ ಬಸವಭಾವ ಪೂಜೆ ನೆರವೇರಿಸಿದರು. ಮಲ್ಲಪ್ಪ ಜಗದಾಳ ಅನುಭಾವ ನೀಡಿದರು. ಶಂಕರ ಜಾಲಿಗಿಡದ, ಹುಚ್ಚಪ್ಪ ಬಾಗೇವಾಡಿ, ರಮೇಶ ಮಹಿಷವಾಡಗಿ ಇದ್ದರು.
ಶಂಕರ ಹೋಳಗಿ, ಶೇಖರ ಮಂಟೂರ, ಮಹೇಶ ಬಂಡಿಗಣ, ಶೇಖರ ಮುನ್ನೊಳ್ಳಿ, ಅಶೋಕ ಜೇವರೆ, ಸದಾಶಿವ ಕೋಪರ್ಡೆ, ಸಿದ್ದರಾಮ ಖಾನಾಪುರ, ಶಶಿಕಾಂತ ಮಹಾ ಜನ, ಜಯವಂತ ಕುಲಗೋಡ, ಶ್ರೀಶೈಲ ಮಡಿವಾಳ ಸೇರಿದಂತೆ ಅನೇಕರಿದ್ದರು. ಮಹಾನಂದಾ ಕುಳ್ಳಿ ವಚನ ಗಾಯನ ಹಾಡಿದರು. ಸದಾಶಿವ ಗಾಯಕವಾಡ ಸ್ವಾಗತಿಸಿದರು. ಮಹಾದೇವ ಗುಟ್ಲಿ ಹಾಗೂ ಈರಣ್ಣ ಬಾಣಕಾರ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ
Hubli: ಪ್ರಿಯಾಂಕ್ ಖರ್ಗೆಗೆ ಎಫ್‌ಐಆರ್ ಹಾಕಿಸುವುದೇ ಕೆಲಸ: ತೇಜಸ್ವಿ ಸೂರ್ಯ
Waqf Property: ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ರಾಜ್ಯ ಭೇಟಿ: ಕಾಂಗ್ರೆಸ್ ಕೆಂಡ
Dharwad: ವಾಗ್ವಾದ ನಡೆದು ಎರಡು ಸುತ್ತು ಫೈರಿಂಗ್: ನಾಲ್ವರು ವಶಕ್ಕೆ
Waqf Land Issue: ಯಾವುದೇ ರೈತರನ್ನು ಒಕ್ಕಲೆಬ್ಬಿಸುವುದಿಲ್ಲ: ಡಿಕೆ ಶಿವಕುಮಾರ್
MUST WATCH
ಹೊಸ ಸೇರ್ಪಡೆ
TV Actor; 35 ನೇ ವಯಸ್ಸಿನಲ್ಲೆ ಜನಪ್ರಿಯ ಕಿರುತೆರೆ ನಟ ನಿತಿನ್ ಚೌಹಾಣ್ ನಿಧ*ನ
Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್‌ಬುಕ್ ಬಳಸುವಂತಿಲ್ಲ!
Deve Gowda; ನನಗೀಗ ವಯಸ್ಸು 92.. ಮೊಮ್ಮಗ ಗೆದ್ದ ನಂತರ ಮನೆಯಲ್ಲಿ ಮಲಗುವುದಿಲ್ಲ..
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್ – ಅಥಿಯಾ ಶೆಟ್ಟಿ
ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.