![hdd](https://www.udayavani.com/wp-content/uploads/2024/12/hdd-1-415x258.jpg)
ಜಾತಿವಾರು ಸಂಘಟನೆಗಳು ಅಗತ್ಯ ಎನ್ನುವ ಸ್ಥಿತಿ ನಿರ್ಮಾಣ: ಹೊರಟ್ಟಿ
Team Udayavani, Feb 28, 2021, 3:38 PM IST
![ಜಾತಿವಾರು ಸಂಘಟನೆಗಳು ಅಗತ್ಯ ಎನ್ನುವ ಸ್ಥಿತಿ ನಿರ್ಮಾಣ: ಹೊರಟ್ಟಿ](https://www.udayavani.com/wp-content/uploads/2021/02/Untitled-1-478-620x372.jpg)
ಹುಬ್ಬಳ್ಳಿ: ಜಾತಿವಾರು ಸಂಘಟನೆಗಳು ಹುಟ್ಟಿಕೊಳ್ಳುತ್ತಿರುವುದು ನೋವಿನ ಸಂಗತಿಯಾದರೂ ಇಂದಿನ ಪರಿಸ್ಥಿತಿಯಲ್ಲಿ ಅಗತ್ಯ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿಧಾನ ಪರಿಷತ್ತು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಬಂಜಾರ ಭವನದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಬಂಜಾರ ಪ್ರಾಧ್ಯಾಪಕರ ಅಸೋಸಿಯೇಶನ್ 9ನೇ ಎನ್‌ಬಿಪಿ ಸಮ್ಮೇಳನದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸ್ಥಾಪಿಸಿರುವ ಸಂಘಟನೆ ಸಮಾಜದ ಅಭಿವೃದ್ಧಿಗೆ ಶ್ರಮಿಸುವ ಕೆಲಸ ಮಾಡಬೇಕು. ಆರ್ಥಿಕವಾಗಿ ಸದೃಢರಾದವರು ಸಮಾಜದ ಬಡ ಪ್ರತಿಭೆಗಳ ಶಿಕ್ಷಣಕ್ಕೆ ನೆರವಾಗಬೇಕು. ಉತ್ತಮ ಶಿಕ್ಷಣ ನೀಡಿ ಅವರ ಕುಟುಂಬಕ್ಕೆ ಆಧಾರಸ್ತಂಭವಾಗಬೇಕು ಎಂದರು.
ಬಂಜಾರ ಸಮುದಾಯ ನಂಬಿಕೆಯ ಪ್ರತೀಕ ಎಂದರೆ ತಪ್ಪಾಗಲಾರದು. ಇಂದು ಹೆರಿಗೆ ಭತ್ಯೆ ಪಡೆದುಕೊಳ್ಳುತ್ತಿರುವುದಕ್ಕೆ ಬಂಜಾರ ಸಮುದಾಯದ ಓರ್ವಕಾರ್ಮಿಕ ಮಹಿಳೆಯೆ ಕಾರಣ. ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು ಉತ್ತರ ಕರ್ನಾಟಕ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ರಸ್ತೆಯಲ್ಲಿ ಬರುವಾಗ ಬಂಜಾರು ಸಮುದಾಯದ ಕಾರ್ಮಿಕ ಮಹಿಳೆ ಕೆಲಸದ ಸಂದರ್ಭದಲ್ಲಿ ಹೆರಿಗೆ ಆಗಿದ್ದನ್ನು ಕಂಡು ಸಾಕಷ್ಟು ಬೇಸರಪಟ್ಟುಕೊಂಡಿದ್ದರು. ಮಾರನೇ ದಿನವೇ ಹೆರಿಗೆ ಭತ್ಯೆ ಘೋಷಣೆ ಮಾಡಿದರು. ಈ ಘಟನೆ ನನ್ನ ಕಣ್ಣೆದುರು ನಡೆದಿದೆ. ಅಧಿ ಕಾರದಲ್ಲಿ ಇದ್ದಾಗ ಎಷ್ಟು ಸಾಧ್ಯವೋ ಸಮಾಜ, ದುರ್ಬಲರಿಗೆ ನೆರವಾಗುವ ಕೆಲಸ ಮಾಡಬೇಕು ಎನ್ನುವುದನ್ನು ಅವರು ತೋರಿಸಿದರು ಎಂದರು.
ಎನ್‌ಬಿಪಿ ಸಂಸ್ಥಾಪಕ ಡಿ.ರಾಮಾ ನಾಯಕ ಮಾತನಾಡಿ, ಸ್ವಾಭಿಮಾನಿ ಬಂಜಾರ ಸಮುದಾಯದ ಎಂತಹ ಕಠಿಣ ಕೆಲಸ ಮಾಡಲು ಸಿದ್ಧ. ಆದರೆ ಬಿಕ್ಕಟ್ಟು ಎದುರಾದರೆ ಪ್ರತಿಭಟಿಸುವಸಾಮರ್ಥ್ಯ ಹೊಂದಿಲ್ಲ. ಸಮಾಜದಲ್ಲಿ ಕೆಲವರು ಉಳ್ಳವರ ಪರಿಸ್ಥಿತಿ ನೋಡಿ ಬಂಜಾರರು ಮುಂದುವರಿದಿದ್ದಾರೆ ಎನ್ನುವ ಕೂಗು ಎದ್ದಿದೆ. ಕೋವಿಡ್-19 ಹಿನ್ನೆಲೆಯಲ್ಲಿ ನಗರಗಳಿಂದ ಗ್ರಾಮಗಳಿಗೆ ಬಂದವರಲ್ಲಿ ಬಂಜಾರರೇ ಹೆಚ್ಚು. ದೇಶದಅಂಕಿ-ಸಂಖ್ಯೆಗಳನ್ನು ನೋಡಿದರೆ ಇದುವರೆಗೆ ಯುಪಿಎಸ್ಸಿ ಪರೀಕ್ಷೆಯಲ್ಲಿ ಪಾಸಾದವರು ಕೇವಲ 60, ವೈದ್ಯ, ಎಂಜಿನಿಯರು ಸೇರಿದಂತೆ ಅಧಿಕಾರಿಗಳು 5 ಸಾವಿರ, ಇತರೆ 1 ಲಕ್ಷ ಜನ ಉದ್ಯೋಗದಲ್ಲಿದ್ದಾರೆ. ದೇಶದಲ್ಲಿರುವ ಆರು ಕೋಟಿ ಜನಸಂಖ್ಯೆಗೆ ಶೇ.10ರಷ್ಟಾದರು ಇರಬೇಕಾಗಿತ್ತು. ಇತ್ತೀಚಿನ ದಿನಗಳಲ್ಲಿ ಸಮಾಜವನ್ನು ಹತ್ತಿಕ್ಕುವ ಕೆಲಸ ನಡೆಯುತ್ತಿದೆ ಎಂದು ಹೇಳಿದರು.
ಜಿಪಂ ಸಿಇಒ ಡಾ| ಬಿ. ಸುಶೀಲಾ ಮಾತನಾಡಿ, ಬಂಜಾರ ಸಮಾಜದಲ್ಲಿ ಹೆಣ್ಣುಮಕ್ಕಳನ್ನು ಓದಿಸಿದರೆ ಅವರಿಗೆ ತಕ್ಕ ಗಂಡು ಸಿಗುವುದಿಲ್ಲ ಎನ್ನುವ ಭಾವನೆಯಿದೆ. ಈ ಭಾವನೆ ಸರಿಯಲ್ಲ. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಸಮಾಜದ ಸಂಘಟನೆಗಳು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ ಜಾಗೃತಿ ಮೂಡಿಸುವ ಕೆಲಸ ಆಗಬೇಕು.ಬಂಜಾರ ಸಮುದಾಯದ ಭಾಷೆ, ಸಂಸ್ಕೃತಿ ಉಳಿಸಿ ಬೆಳೆಸುವ ಕೆಲಸ ಆಗಬೇಕಿದೆ ಎಂದರು.
ಸ್ಮರಣ ಸಂಚಿಕೆ ಹಾಗೂ ಬಂಜಾರ ಲೇಖಕರ ಪರಿಚಯ ಪುಸ್ತಕ ಬಿಡುಗಡೆ ಮಾಡಲಾಯಿತು. ಮಾಜಿ ಸಚಿವ ರುದ್ರಪ್ಪಲಮಾಣಿ, ಜಾನಪದ ವಿವಿ ಕುಲಪತಿ ಪ್ರೊ| ಡಿ.ಬಿ. ನಾಯಕ, ಜಾನಪದ ವಿವಿ ಕುಲಸಚಿವ ಕೆ.ಎನ್.ಗಂಗ ನಾಯಕ,ಪಾಂಡುರಂಗ ಪಮ್ಮಾರ, ಬಿ. ಹೀರಾ ನಾಯಕ, ಪಿ.ಕೆ. ಖಂಡೋಬಾ, ಶಿವಾನಂದ ಚವ್ಹಾಣ, ಕೃಷ್ಣ ಚವ್ಹಾಣ, ಭೋಜಾ ನಾಯಕ, ಗೋವರ್ಧನ ಬಂಜಾರ ಇನ್ನಿತರರಿದ್ದರು.
ಟಾಪ್ ನ್ಯೂಸ್
![hdd](https://www.udayavani.com/wp-content/uploads/2024/12/hdd-1-415x258.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ](https://www.udayavani.com/wp-content/uploads/2024/12/eshwarappa-150x78.jpg)
ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ
![13-](https://www.udayavani.com/wp-content/uploads/2024/12/13-1-3-150x90.jpg)
Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ
![AV-Bellad](https://www.udayavani.com/wp-content/uploads/2024/12/AV-Bellad-150x90.jpg)
Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್
![Hubli: ಕ್ರಿಮಿನಲ್ ಜತೆಯೇ ಪೊಲೀಸ್ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್ ಕಾರ್ಯಾಚರಣೆ](https://www.udayavani.com/wp-content/uploads/2024/12/hub-150x86.jpg)
Hubli: ಕ್ರಿಮಿನಲ್ ಜತೆಯೇ ಪೊಲೀಸ್ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್ ಕಾರ್ಯಾಚರಣೆ
![ಭುಗಿಲೆದ್ದ ಮೀಸಲು ರೊಚ್ಚು; ಸದನದ ಒಳ-ಹೊರಗೆ ಪ್ರತಿಭಟನೆ; ಉತ್ತರ ಕರ್ನಾಟಕದಲ್ಲಿ ಆಕ್ರೋಶ](https://www.udayavani.com/wp-content/uploads/2024/12/aas-1-150x96.jpg)
ಭುಗಿಲೆದ್ದ ಮೀಸಲು ರೊಚ್ಚು; ಸದನದ ಒಳ-ಹೊರಗೆ ಪ್ರತಿಭಟನೆ; ಉತ್ತರ ಕರ್ನಾಟಕದಲ್ಲಿ ಆಕ್ರೋಶ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.