ಬೇಂದ್ರೆ ಸಾರಿಗೆ ರಹದಾರಿ ನವೀಕರಣ ತೀರ್ಪು ಇಂದು
Team Udayavani, Sep 25, 2019, 9:19 AM IST
ಧಾರವಾಡ: ಡಿಸಿ ಕಚೇರಿ ಸಭಾಂಗಣದಲ್ಲಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ದೀಪಾ ಚೋಳನ್ ಅಧ್ಯಕ್ಷತೆಯಲ್ಲಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆ ಮಂಗಳವಾರ ಜರುಗಿತು.
ಮೋಟಾರು ವಾಹನ ನಿಯಮಾವಳಿ 1989 ನಿಯಮ (55) ರ ಪ್ರಕಾರ ಮಜಲು, ಸರಕು ಸಾಗಣೆ, ಮೋಟಾರ್‌ಕ್ಯಾಬ್, ಶಾಲಾವಾಹನ, ಆಟೋರಿಕ್ಷಾಗಳಿಗೆ ರಹದಾರಿಗಳನ್ನು ಸಭೆಯಲ್ಲಿ ನವೀಕರಿಸಲಾಯಿತು. ಈ ವೇಳೆ ಖಾಸಗಿ ಮಜಲು ವಾಹನಗಳ ರಹದಾರಿಗಾಗಿ ಧಾರವಾಡ ನಗರದ ವಿವಿಧ ಎಂಟು ಮಾರ್ಗಗಳಲ್ಲಿ ನವೀಕರಣ ಕೋರಿ ಬೇಂದ್ರೆ ಸಾರಿಗೆ ಸಂಸ್ಥೆ ಸಲ್ಲಿಸಿರುವ ಅರ್ಜಿ ಕುರಿತು ವಿಚಾರಣೆ ಕೈಗೊಳ್ಳಲಾಯಿತು.
ನವನಗರದಿಂದ ಧಾರವಾಡ ಕವಿವಿ, ಧಾರವಾಡ ಸಿಬಿಟಿಯಿಂದ ಕಲ್ಯಾಣ ನಗರ, ಕೋಟೂರು, ಶಿವಳ್ಳಿ, ಸಾಧನಕೇರಿ, ಮಂಡಿಹಾಳ, ತೇಜಸ್ವಿನಗರ ಮಾರ್ಗಗಳಲ್ಲಿ ಎಂಟು ರಹದಾರಿಗಳನ್ನು ನವೀಕರಿಸಬೇಕು ಎಂದು ಬೇಂದ್ರೆ ಸಂಸ್ಥೆಯ ಪರ ವಕೀಲ ನಾಗೇಶ್ ಎಂ.ಇ. ಮನವಿ ಮಾಡಿದರು.
ಆಗ ಪ್ರತಿವಾದ ಮಂಡಿಸಿದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆಸಂಸ್ಥೆಯ ಕಾನೂನು ಅ ಧಿಕಾರಿ ನಾರಾಯಣಪ್ಪ, ಧಾರವಾಡ ಶಹರದ ಒಳಮಾರ್ಗಗಳಲ್ಲಿ ರಹದಾರಿ ಹೊಂದಿರುವ ಬೇಂದ್ರೆ ಸಾರಿಗೆ ಸಂಸ್ಥೆಯು ಆ ಮಾರ್ಗಗಳಲ್ಲಿ ನಿಯಮಿತವಾಗಿ ವಾಹನಗಳನ್ನು ಓಡಿಸುತ್ತಿಲ್ಲ. ಸಾರ್ವಜನಿಕರಿಗೆ ಸೇವೆ ನೀಡುತ್ತಿಲ್ಲ. ಈ ಕುರಿತು ದೂರು ಇರುವುದರಿಂದ ನವೀಕರಣ ಮಾಡಬಾರದು ಎಂದು ವಿನಂತಿಸಿದರು.
ಉಭಯ ಪಕ್ಷಗಾರರ ವಾದ ಆಲಿಸಿದ ಡಿಸಿ ದೀಪಾ ಚೋಳನ್ ಅವರು, ಈ ಕುರಿತ ಆದೇಶವನ್ನು ಸೆ. 25ರಂದು ಪ್ರಕಟಿಸುವುದಾಗಿ ತಿಳಿಸಿದರು. ಇದಲ್ಲದೇ ಬೇಂದ್ರೆ ಸಂಸ್ಥೆಯ ವಾಹನಗಳು ಬಿಆರ್‌ಟಿಎಸ್ ನಿಲ್ದಾಣಗಳಿಂದ ಒಳಮಾರ್ಗಗಳಿಗೆ ಸಂಪರ್ಕ ಸೇವೆಒದಗಿಸಲು ಮುಂದೆ ಬರಬೇಕು ಎಂದರು.
ಬಸ್‌ನಲ್ಲಿ ಗಾಲಿ ಖುರ್ಚಿ: ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಪ್ರಕಾರ ವಿಕಲಚೇತನರಿಗೆ ಸಾರ್ವಜನಿಕ ಮತ್ತು ಖಾಸಗಿ ಸಾರಿಗೆ ವಾಹನಗಳಲ್ಲಿ ಅನುಕೂಲ ಕಲ್ಪಿಸಲು ಗಾಲಿ ಖುರ್ಚಿ ಅಳವಡಿಸಬೇಕು. ಬಸ್‌ನಿಲ್ದಾಣಗಳಲ್ಲಿ ಕೂಡಾ ಈ ಸೌಲಭ್ಯಗಳು ಒದಗಿಸಬೇಕು ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿಗಳು ಹಾಗೂ ಬೇಂದ್ರೆ ಸಾರಿಗೆ ಸಂಸ್ಥೆಗಳ ಮಾಲೀಕರಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ರವೀಂದ್ರ ಕವಲಿ, ಅಪ್ಪಯ್ಯ ನಾಲತ್ವಾಡಮಠ, ಡಿವೈಎಸ್‌ಪಿ ಗುರು ಮತ್ತೂರ, ವಾಕರಸಾಸಂ ಅಧಿಕಾರಿಗಳಾದ ವಿವೇಕಾನಂದ ವಿಶ್ವಜ್ಞ, ಅಶೋಕ ಪಾಟೀಲ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CID Inquiry: ಪರಿಷತ್‌ನಲ್ಲಿ ನಡೆದ ಘಟನೆ ಎಂದು ಉಲ್ಲೇಖಿಸಿದ್ದು ತಪ್ಪು: ಬಸವರಾಜ ಹೊರಟ್ಟಿ
ಜೋಶಿ ಅವರಿಗೆ ನನ್ನ ಸಾಮರ್ಥ್ಯ ಗೊತ್ತಿಲ್ಲ… ಅಸಮರ್ಥ ಹೇಳಿಕೆಗೆ ತಿರುಗೇಟು ನೀಡಿದ ಪರಮೇಶ್ವರ್
Alnavar: ಟಿಟಿ- ಕ್ಯಾಂಟರ್ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.